ಪ್ರೀಜಾ ಶ್ರೀಧರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೀಜಾ ಶ್ರೀಧರನ್
೨೦೧೧ ರಲ್ಲಿ ಶ್ರೀಧರನ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ (1982-03-13) ೧೩ ಮಾರ್ಚ್ ೧೯೮೨ (ವಯಸ್ಸು ೪೨)
ಇಡುಕ್ಕಿ, ಕೇರಳ, ಭಾರತ
ಪತ್ನಿ(ಯರು)ದೀಪಕ್ ಗೋಪಿನಾತ್
Sport
ಕ್ರೀಡೆಓಟ
ಸ್ಪರ್ಧೆಗಳು(ಗಳು)೧೦,೦೦೦ ಮೀಟರ್, ೫೦೦೦ ಮೀಟರ್

ಪ್ರೀಜಾ ಶ್ರೀಧರನ್ (ಜನನ ೧೩ ಮಾರ್ಚ್ ೧೯೮೨, ಕೇರಳದ ಇಡುಕ್ಕಿಯ ಮುಲ್ಲಕ್ಕನಂನಲ್ಲಿ) ಒಬ್ಬ ಭಾರತೀಯ ಮೂಲದ ಓಟಗಾರ್ತಿ. ಅವರು ೧೦೦೦೦ ಮೀಟರ್ ಮತ್ತು ೫೦೦೦ ಮೀಟರ್ ವಿಭಾಗಗಳಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ಅವರು ೨೦೧೦ ರ ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು. ಶ್ರೀಧರನ್ ಅವರಿಗೆ ೨೦೧೧ ರಲ್ಲಿ ಕೇಂದ್ರ ಸರ್ಕಾರದಿಂದ ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

೨೦೦೭ ರಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡೂ ವಿಭಾಗಗಳಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಶ್ರೀಧರನ್ ಅವರು ಗೆಲುವುಗಳ ಸಾಧನೆಗೆ ಮುನ್ನುಡಿ ಬರೆದರು. ಅವರು ೨೦೧೦ರ ಏಷ್ಯನ್ ಗೇಮ್ಸ್‌ನಲ್ಲಿ ೧೦೦೦೦ ಮತ್ತು ೫೦೦೦ ಮೀಟರ್‌ಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಮತ್ತು ಭಾರತೀಯ ರಾಷ್ಟ್ರೀಯ ದಾಖಲೆಗಳನ್ನು ಉತ್ತಮಗೊಳಿಸಿದರು. ಅವರು ೧೦೦೦೦ ಮೀಟರ್‌ಗಳಲ್ಲಿ ಚಿನ್ನ ಮತ್ತು ೫೦೦೦ ಮೀಟರ್‌ಗಳಲ್ಲಿ ಬೆಳ್ಳಿ ಗೆದ್ದರು. ಫೆಬ್ರವರಿ ೨೦೧೫ ರಲ್ಲಿ ಅವರು ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರೀಜಾ ಕೇರಳದ ಇಡುಕ್ಕಿಯಲ್ಲಿ ಶ್ರೀಧರನ್ ಮತ್ತು ರೆಮಾನಿ ದಂಪತಿಗೆ ಜನಿಸಿದರು. ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಕೂಲಿ ಕಾರ್ಮಿಕರಾಗಿದ್ದರು ಮತ್ತು ಅವರು ಪ್ರೀಜಾ ಅವರು ೮ ವರ್ಷದವಳಿದ್ದಾಗ ನಿಧನರಾದರು. ಅವರಿಗೆ ಹಿರಿಯ ಸಹೋದರ ಪ್ರದೀಪ್ ಮತ್ತು ಅಕ್ಕ ಪ್ರೀತಿ ಇದ್ದಾರೆ. ಅವರ ತಂದೆಯ ಮರಣದ ನಂತರ ಅವರ ಸಹೋದರನು ೬ ನೇ ತರಗತಿಯಲ್ಲಿ ಶಾಲೆಯನ್ನು ತೊರೆದು ಮನೆಯ ಖರ್ಚುಗಳನ್ನು ಪೂರೈಸಲು ಕೆಲಸ ಮಾಡಬೇಕಾಯಿತು. ಅವರು ಪಾಲಾದ ಅಲ್ಫೋನ್ಸಾ ಕಾಲೇಜಿನಲ್ಲಿ ಪದವಿ ಪಡೆದರು. ಅವರು ಡಾ.ದೀಪಕ್ ಗೋಪಿನಾಥ್ ಅವರನ್ನು ೧೧ ನವೆಂಬರ್ ೨೦೧೨ ರಂದು ಕೇರಳದ ಪಾಲಕ್ಕಾಡ್‌ನಲ್ಲಿ ವಿವಾಹವಾದರು. ಪ್ರೀಜಾ ಶ್ರೀಧರನ್ ಅವರು ದಕ್ಷಿಣ ರೈಲ್ವೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ದಂಪತಿಗೆ ದರ್ಶನ್ (ಜನನ ೨೦೧೬) ಮತ್ತು ಧ್ಯಾನ್ (೨೦೧೮ ರಂದು ಜನನ) ಎಂಬ ಇಬ್ಬರು ಮಕ್ಕಳಿದ್ದಾರೆ. [೧]

೨೦೦೬ ರ ಏಷ್ಯನ್ ಗೇಮ್ಸ್‌ನಲ್ಲಿ, ಶ್ರೀಧರನ್ ೫೦೦೦ ಮತ್ತು ೧೦,೦೦೦ ಮೀಟರ್‌ಗಳಲ್ಲಿ ಐದನೇ ಸ್ಥಾನ ಪಡೆದರು. ೨೦೦೭ ರ ಅಮ್ಮನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಎರಡು ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದರು. ಅವರು ಜೂನ್ ೨೦೦೮ ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು ಮತ್ತು ಕ್ರೀಡಾಕೂಟಕ್ಕೆ ಬಿ ಅರ್ಹತಾ ಅಂಕವನ್ನು ಸಾಧಿಸಿದ ನಂತರ ಒಲಿಂಪಿಕ್ ೧೦,೦೦೦ ಮೀಟರ್‌ಗಳಲ್ಲಿ ಇಪ್ಪತ್ತೈದನೇ ಸ್ಥಾನ ಪಡೆದರು. [೨]

ಶ್ರೀಧರನ್ ೨೦೧೦ ರ ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆಯುವ ನಿಟ್ಟಿನಲ್ಲಿ ೧೦,೦೦೦ ಮೀಟರ್‌ಗಳನ್ನು ೩೧:೫೦:೨೮ ನಿಮಿಷಗಳಲ್ಲಿ ಓಡಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದರು. ಅವರು ತಮ್ಮ ಈ ಪ್ರದರ್ಶನದೊಂದಿಗೆ ಭಾರತೀಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. [೩] ಶ್ರೀಧರನ್ ಅವರು ೫೦೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ೧೫:೧೫.೮೯ ನಿಮಿಷಗಳ ಸಮಯದೊಂದಿಗೆ, ಅವರು ೫೦೦೦ ಮೀಟರ್‌ಗಳಲ್ಲಿ ರಾಷ್ಟ್ರೀಯ ದಾಖಲೆಯನ್ನು ಸಹ ಉತ್ತಮಗೊಳಿಸಿದರು.

ಶ್ರೀಧರನ್ ೨೦೧೦ ರ ಮನೋರಮಾ ನ್ಯೂಸ್ ಮೇಕರ್ ಆಗಿ ಆಯ್ಕೆಯಾದರು. ಇದನ್ನು ಸಾರ್ವಜನಿಕರಿಂದ ಆನ್‌ಲೈನ್ ಎಸ್‌ಎಂಎಸ್ ಮತದಾನದ ಮೂಲಕ ಆಯ್ಕೆಯನ್ನು ಮಾಡಲಾಗಿದೆ. ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್, ಜ್ಞಾಪೀಡಂ ವಿಜೇತ ಮತ್ತು ಪ್ರಸಿದ್ಧ ಮಲಯಾಳಂ ಕವಿ ಒಎನ್‌ವಿ ಕುರುಪ್ ಮತ್ತು ಖ್ಯಾತ ರಾಜಕಾರಣಿ ಮತ್ತು ಹಣಕಾಸು ಸಚಿವ ಕೆಎಂ ಮಣಿ ಪ್ರೀಜಾ ಅವರೊಂದಿಗೆ ಇದ್ದ ಅಂತಿಮ ಸ್ಪರ್ಧಿಗಳು. [೪]

೨೦೧೪ ರ ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಶ್ರೀಧರನ್ ಅತ್ಯಂತ ವೇಗದ ಭಾರತೀಯ ಮಹಿಳೆಯಾಗಿದ್ದರು. ಅವರು ೨೦೧೪ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು, ಆದರೆ ಯಾವುದೇ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಶ್ರೀಧರನ್ ಫೆಬ್ರವರಿ ೨೦೧೫ ರಲ್ಲಿ ಅಂತರಾಷ್ಟ್ರೀಯ ಸ್ಪರ್ಧೆಗಳಿಂದ ನಿವೃತ್ತಿ ಘೋಷಿಸಿದರು. ೨೦೧೫ ರ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಕೊನೆಯ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಹೇಳುತ್ತಾ ಅವರು: "ಮುಂದಿನ ರಾಷ್ಟ್ರೀಯ ಆಟಗಳೊಂದಿಗೆ, ನಾನು ಟ್ರ್ಯಾಕ್ ಅನ್ನು ಶಾಶ್ವತವಾಗಿ ತೊರೆಯುತ್ತೇನೆ. ಕುಟುಂಬ ಜೀವನದ ಮೇಲೆ ಕೇಂದ್ರೀಕರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ನಾನು ಅಥ್ಲೆಟಿಕ್ಸ್ ಅನ್ನು ಉತ್ತೇಜಿಸಲು ಪ್ರಯತ್ನಿಸುವುದನ್ನು ಮುಂದುವರಿಸುತ್ತೇನೆ" ಎಂದು ಹೇಳಿದರು.[೨]

ವೃತ್ತಿಜೀವನದ ಪ್ರಮುಖ ಹೆಗ್ಗುರುತುಗಳು[ಬದಲಾಯಿಸಿ]

• ಅವರು ಒಲಿಂಪಿಕ್ಸ್‌ನಲ್ಲಿ ೧೦೦೦೦ ಮೀ ಓಟದಲ್ಲಿ ಭಾರತವನ್ನು ಪ್ರತಿನಿಧಿಸುವ ಭಾರತೀಯ ಅಥ್ಲೀಟ್ ಆಗಿದ್ದಾರೆ. ಅವರು ಜೂನ್ ೨೦೦೮ ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು ಮತ್ತು ಕ್ರೀಡಾಕೂಟಕ್ಕೆ ಬಿ ಅರ್ಹತಾ ಅಂಕವನ್ನು ಸಾಧಿಸಿದ ನಂತರ ಒಲಿಂಪಿಕ್ ೧೦,೦೦೦ ಮೀಟರ್‌ಗಳಲ್ಲಿ ಇಪ್ಪತ್ತೈದನೇ ಸ್ಥಾನ ಪಡೆದರು.

• ಅವರು ೨೦೧೦ರ ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ೧೦,೦೦೦ ಮೀಟರ್ಸ್ ಈವೆಂಟ್‌ನಲ್ಲಿ ಚಿನ್ನದ ಪದಕ ಮತ್ತು ೫೦೦೦ ಮೀಟರ್‌ಗಳಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

• ಅವರು ೧೮.೧೦.೨೦೨೦ ರಂತೆ ೫೦೦೦ ಮತ್ತು ೧೦,೦೦೦ ಮೀಟರ್‌ಗಳಲ್ಲಿ ಭಾರತೀಯ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

• ೨೦೦೭ ರ ಅಮ್ಮನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ, ಅವರು ೧೦,೦೦೦ ಮೀಟರ್‌ಗಳು ಮತ್ತು ೫೦೦೦ ಮೀಟರ್‌ಗಳಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

• ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ೧೦,೦೦೦ ಮೀಟರ್‌ಗಳಿಗಾಗಿ ಅವರ ವೈಯಕ್ತಿಕ ಅತ್ಯುತ್ತಮ ೩೧:೫೦:೨೮ ನಿಮಿಷಗಳು. ಇದು ಪ್ರಸ್ತುತ ಭಾರತದ ರಾಷ್ಟ್ರೀಯ ದಾಖಲೆಯಾಗಿದೆ.

• ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ೫೦೦೦ ಮೀಟರ್‌ಗಳಿಗಾಗಿ ಅವರ ವೈಯಕ್ತಿಕ ಅತ್ಯುತ್ತಮ ೧೫:೧೫ ನಿಮಿಷಗಳು. ಇದು ಪ್ರಸ್ತುತ ಭಾರತದ ರಾಷ್ಟ್ರೀಯ ದಾಖಲೆಯಾಗಿದೆ.

• ಅವರು ೨೦೧೦ ರ ಮನೋರಮಾ ನ್ಯೂಸ್ ಮೇಕರ್ ಆಗಿ ಆಯ್ಕೆಯಾದರು (ಕೇರಳ ರಾಜ್ಯ ).

ಅಂತರರಾಷ್ಟ್ರೀಯ ಸಾಧನೆಗಳು

ಬೀಜಿಂಗ್ ಒಲಿಂಪಿಕ್ಸ್ ೨೦೦೮-> ೧೦೦೦೦ಮೀ-> ಭಾಗವಹಿಸುವಿಕೆ

ಏಷ್ಯನ್ ಗೇಮ್ಸ್ - ಗುವಾಂಗ್ಝೌ ೨೦೧೦-> ೧೦೦೦೦ಮೀ-> ಚಿನ್ನದ ಪದಕ (ಪ್ರಸ್ತುತ ರಾಷ್ಟ್ರೀಯ ದಾಖಲೆ)

ಏಷ್ಯನ್ ಗೇಮ್ಸ್ - ಗುವಾಂಗ್ಝೌ ೨೦೧೦-> ೫೦೦೦ಮೀ ->ಬೆಳ್ಳಿ ಪದಕ (ಪ್ರಸ್ತುತ ರಾಷ್ಟ್ರೀಯ ದಾಖಲೆ)

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೦೭-> ೧೦೦೦ಮೀ ->ಬೆಳ್ಳಿ ಪದಕ

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ೨೦೦೭-> ೫೦೦೦ಮೀ-> ಬೆಳ್ಳಿ ಪದಕ

೨ನೇ ಏಷ್ಯನ್ ಇಂಡೋರ್ ಗೇಮ್ಸ್ ಮಕಾವೊ – ೨೦೦೭-> ೩೦೦೦ಮೀ-> ಬೆಳ್ಳಿ ಪದಕ

೩ನೇ ಏಷ್ಯನ್ ಇಂಡೋರ್ ಚಾಂಪಿಯನ್‌ಶಿಪ್ – ದೋಹಾ ೨೦೦೮-> ೩೦೦೦ಮೀ ಚಿನ್ನದ ಪದಕ

೧೦ ನೇ ದಕ್ಷಿಣ ಏಷ್ಯನ್ ಗೇಮ್ಸ್ ಕೊಲಂಬೊ ೨೦೦೬ ೧೦೦೦೦ಮೀ ಚಿನ್ನದ ಪದಕ

೧೯ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕೊಬೈ ೨೦೧೧-> ೧೦೦೦೦ಮೀ-> ಕಂಚಿನ ಪದಕ

೬ನೇ ಏಷ್ಯನ್ ಕ್ರಾಸ್ ಕಂಟ್ರಿ ಕಡ್ಮಂಡು ೨೦೦೧-> ೪ ಕೀ.ಮೀ-> ಬೆಳ್ಳಿ ಪದಕ

ರಾಷ್ಟ್ರೀಯ ಮಟ್ಟ

೯ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ತ್ರಿಶೂರ್-೨೦೦೧-> ೧೦೦೦೦ಮೀ ಚಿನ್ನದ ಪದಕ

೯ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ತ್ರಿಶೂರ್ ೨೦೦೧-> ೫೦೦೦ಮೀ ಚಿನ್ನದ ಪದಕ

೧೦ ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ಚಂಡೀಗಢ ೨೦೦೨-> ೧೫೦೦ಮೀ-> ಚಿನ್ನದ ಪದಕ

೧೦ ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ಚಂಡೀಗಢ ೨೦೦೨-> ೫೦೦೦ಮೀ-> ಬೆಳ್ಳಿ ಪದಕ

೩೭ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ಗೋವಾ ೪ ಕೀ ಮೀ ಚಿನ್ನದ ಪದಕ

೭ನೇ ಫೆಡರೇಶನ್ ಕಪ್ ಕ್ರಾಸ್ ಕಂಟ್ರಿ ೨೦೦೨-> ೮ ಕಿಮೀ ಕಂಚಿನ ಪದಕ

೪೪ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ – ಮುಂಬೈ ೨೦೦೪-> ೫೦೦೦ಮೀ-> ಚಿನ್ನದ ಪದಕ

೪೪ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ೨೦೦೪->೫೦೦೦ಮೀ-> ಬೆಳ್ಳಿ ಪದಕ

೪೪ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ೨೦೦೪->೧೫೦೦->ಮೀ ಕಂಚಿನ ಪದಕ

೩೮ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ಶಿಮ್ಲಾ ೨೦೦೪->೪ ಕಿಮೀ ಓಟದ-> ಚಿನ್ನದ ಪದಕ

೪೫ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ – ಬೆಂಗಳೂರು ೨೦೦೫-> ೫೦೦೦ಮೀ ಕಂಚಿನ ಪದಕ

೧೧ ನೇ ಫೆಡರೇಶನ್ ಕಪ್ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ದೆಹಲಿ ೫೦೦೦ ಮೀ ಬೆಳ್ಳಿ ಪದಕ

೪೫ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಹೈದರಾಬಾದ್ ೨೦೦೫-> ೫೦೦೦ಮೀ ->ಬೆಳ್ಳಿ ಪದಕ

೪೫ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಹೈದರಾಬಾದ್ ೨೦೦೫-> ೧೫೦೦ಮೀ-> ಕಂಚಿನ ಪದಕ

೪೬ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ದೆಹಲಿ ೨೦೦೬-> ೧೦೦೦೦ಮೀ ಚಿನ್ನದ ಪದಕ

೪೬ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಚೆನ್ನೈ ೨೦೦೬-> ೧೦೦೦೦ಮೀ-> ಚಿನ್ನದ ಪದಕ

೪೬ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಚೆನ್ನೈ ೨೦೦೬-> ೫೦೦೦ಮೀ ->ಚಿನ್ನದ ಪದಕ

೧ ನೇ ರಾಷ್ಟ್ರೀಯ ಸಹಿಷ್ಣುತೆ ಅಥ್ಲೆಟಿಕ್ ಸ್ಪರ್ಧೆ ದೆಹಲಿ ೨೦೦೬->೧೫೦೦ಮೀ-> ಬೆಳ್ಳಿ ಪದಕ

೩೩ನೇ ರಾಷ್ಟ್ರೀಯ ಕ್ರೀಡಾಕೂಟ ಗುವಾಹಟಿ ೨೦೦೭-> ೧೦೦೦೦ ಚಿನ್ನದ ಪದಕ

೩೩ನೇ ರಾಷ್ಟ್ರೀಯ ಕ್ರೀಡಾಕೂಟ ಗುವಾಹಟಿ ೨೦೦೭-> ೫೦೦೦ಮೀ-> ಚಿನ್ನದ ಪದಕ

೩೩ನೇ ರಾಷ್ಟ್ರೀಯ ಕ್ರೀಡಾಕೂಟ ಗುವಾಹಟಿ ೨೦೦೭-> ೧೫೦೦ ಮೀ-> ಚಿನ್ನದ ಪದಕ

೪೭ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಜಮ್ಶೆಡ್‌ಪುರ ೨೦೦೭ ೧೦೦೦೦ಮೀ ಚಿನ್ನದ ಪದಕ

೪೭ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಜಮ್ಶೆಡ್‌ಪುರ ೨೦೦೭-> ೫೦೦೦ಮೀ-> ಚಿನ್ನದ ಪದಕ

೪೭ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಭೋಪಾಲ್ ೨೦೦೭-> ೧೦೦೦೦ಮೀ ->ಬೆಳ್ಳಿ ಪದಕ

೪೭ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಭೋಪಾಲ್ ೫೦೦೦ಮೀ ಬೆಳ್ಳಿ ಪದಕ

೪೮ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕೊಚ್ಚಿ ೨೦೦೮-> ೧೦೦೦೦ಮೀ-> ಚಿನ್ನದ ಪದಕ

೪೮ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕೊಚ್ಚಿ ೨೦೦೮-> ೫೦೦೦ಮೀ ಚಿನ್ನದ ಪದಕ

೧೪ನೇ ಫೆಡರೇಶನ್ ಕಪ್ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ೨೦೦೮ ಭೋಪಾಲ್-> ೫೦೦೦ಮೀ-> ಬೆಳ್ಳಿ ಪದಕ

೫೦ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಪಟಿಯಾಲ ೨೦೧೦-> ೧೦೦೦೦ಮೀ-> ಚಿನ್ನದ ಪದಕ

೧೫ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ರಾಂಚಿ ೨೦೧೦-> ೧೦೦೦೦ಮೀ-> ಚಿನ್ನದ ಪದಕ

೫೦ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ಕೊಚ್ಚಿ ೨೦೧೦-> ೧೦೦೦೦ಮೀ ಬೆಳ್ಳಿ ಪದಕ

೧೫ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ರಾಂಚಿ ೨೦೧೦-> ೫೦೦೦ಮೀ-> ಬೆಳ್ಳಿ ಪದಕ

೫೧ ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ಕೋಲ್ಕತ್ತಾ ೨೦೧೧->೧೦೦೦೦ಮೀ-> ಚಿನ್ನದ ಪದಕ

೩೪ನೇ ರಾಷ್ಟ್ರೀಯ ಕ್ರೀಡಾಕೂಟ, ಜಾರ್ಖಂಡ್ ೨೦೧೧-> ೧೦೦೦೦ಮೀ ಬೆಳ್ಳಿ ಪದಕ

೩೪ನೇ ರಾಷ್ಟ್ರೀಯ ಕ್ರೀಡಾಕೂಟ, ಜಾರ್ಖಂಡ್ ೨೦೧೧-> ೫೦೦೦ಮೀ ->ಬೆಳ್ಳಿ ಪದಕ

೫೩ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ರಾಂಚಿ ೨೦೧೩-> ೧೦೦೦೦ಮೀ ಕಂಚಿನ ಪದಕ

೫೩ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ರಾಂಚಿ ೨೦೧೩-> ೫೦೦೦ಮೀ-> ಬೆಳ್ಳಿ ಪದಕ

೫೩ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಚೆನ್ನೈ ೨೦೧೩-> ೧೦೦೦೦ಮೀ-> ಚಿನ್ನದ ಪದಕ

೫೩ನೇ ರಾಷ್ಟ್ರೀಯ ಅಂತರರಾಜ್ಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಚೆನ್ನೈ ೨೦೧೩-> ೫೦೦೦ಮೀ ->ಬೆಳ್ಳಿ ಪದಕ

೪೮ ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ಗಳು ಜಲ್ಪೈಗುರಿ ೨೦೧೩-> ೮ಕಿಮೀ ಚಿನ್ನದ ಪದಕ

೫೪ ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಶಿಪ್ - ದೆಹಲಿ ೨೦೧೪-> ೧೦೦೦ಮೀ-> ಬೆಳ್ಳಿ ಪದಕ

ಪ್ರಶಸ್ತಿಗಳು[ಬದಲಾಯಿಸಿ]

೨೦೧೦ ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರ ಪ್ರದರ್ಶನದ ನಂತರ, ಶ್ರೀಧರನ್ ಅವರಿಗೆ ಭಾರತ ಸರ್ಕಾರವು ೨೦೧೧ ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. [೫]

ಜಿವಿ ರಾಜಾ ಪ್ರಶಸ್ತಿ (ಕೇರಳ ರಾಜ್ಯ) – ೨೦೦೧

ಮನೋರಮಾ ವರ್ಷದ ನ್ಯೂಸ್ ಮೇಕರ್ (ಕೇರಳ ರಾಜ್ಯ) – ೨೦೧೧

ಜಿಮ್ಮಿ ಗಾರ್ಜ್ ಪ್ರಶಸ್ತಿ- ೨೦೧೨

ಉಲ್ಲೇಖಗಳು[ಬದಲಾಯಿಸಿ]

  1. Philip, Shaju (5 October 2014). "Indian long distance runner to retire from international events". The Indian Express. Retrieved 27 August 2018.
  2. ೨.೦ ೨.೧ Philip, Shaju (5 October 2014). "Indian long distance runner to retire from international events". The Indian Express. Retrieved 27 August 2018.Philip, Shaju (5 October 2014). "Indian long distance runner to retire from international events". The Indian Express. Retrieved 27 August 2018.
  3. "Asian Games: Double gold for India on the opening day of athletics". The Times of India. 21 November 2010. Retrieved 21 November 2010.
  4. "Preeja Sreedharan is 'Manorama Newsmaker-2010". The Financial Express. 11 January 2011. Retrieved 18 January 2011.
  5. "Preeja Sreedharan calls time on her international career". The Times of India. 6 October 2014. Retrieved 27 August 2018.

ಬಾಹ್ಯ ಕೊಂಡಿಗಳು[ಬದಲಾಯಿಸಿ]