ವಿಷಯಕ್ಕೆ ಹೋಗು

ಪ್ರತಾಪ ಚಂದ್ರ ಸಾರಂಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಾಪ ಚಂದ್ರ ಸಾರಂಗಿ

ಪ್ರತಾಪ ಚಂದ್ರ ಸಾರಂಗಿರವರು ಜನವರಿ ೪,೧೯೫೫ರಂದು ಒಡಿಶಾದಲ್ಲಿ ಜನಿಸಿದರು. ಅವರು ಭಾರತ ಸರ್ಕಾರದಲ್ಲಿ ಪಶುಪಾಲನೆ, ಮೀನುಗಾರಿಕೆ[] ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಾಜ್ಯ ಸಚಿವರಾಗಿದ್ದಾರೆ. ಅವರು ಒಡಿಶಾದ ಬಾಲಸೋರ್ ನ ರಾಜಕಾರಣಿಯಾಗಿದ್ದಾರೆ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಒಡಿಶಾ ಶಾಸನಸಭೆಯ ಸದಸ್ಯರಾಗಿ ನೀಲಗಿರಿ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾಗಿದ್ದರು (೨೦೦೪ ರಿಂದ ೨೦೦೯ ರವರೆಗೆ ಮತ್ತು ೨೦೦೯ ರಿಂದ ೨೦೧೪ ರವರೆಗೆ).[]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಪ್ರತಾಪ್ ಚಂದ್ರ ಸಾರಂಗಿ ಅವರು ೧೯೫೫ ರ ಜನವರಿ ೪ ರಂದು ಗೋಪಿನಾಥ್ ಪುರ, ನೀಲಗಿರಿ, ಬಾಲಸೋರ್ ನಲ್ಲಿ ಜನಿಸಿದರು. ಅವರು ೧೯೭೫ರಲ್ಲಿ ಉತ್ಕಲ್ ವಿಶ್ವವಿದ್ಯಾಲಯದಲ್ಲಿ ಬಾಲಸೋರ್ ನ ಫಕೀರ್ ಮೋಹನ್ ಕಾಲೇಜ್ ನಿಂದ ಪದವಿಯನ್ನು ಪೂರ್ಣಗೊಳಿಸಿದರು. ಬಾಲ್ಯದಿಂದಲೂ ಸಾರಂಗಿಯವರು ಆಧ್ಯಾತ್ಮಿಕ ಅನ್ವೇಷಕರಾಗಿದ್ದರು.[] ಅವರು ರಾಮಕೃಷ್ಣ ಮಠದ ಸನ್ಯಾಸಿಯಾಗಲು ಬಯಸಿದ್ದರು. ಅವರು ಪಶ್ಚಿಮ ಬಂಗಾಳದ ಹೌರಾದಲ್ಲಿರುವ ರಾಮಕೃಷ್ಣ ಆಶ್ರಮದ ಪ್ರಧಾನ ಕಛೇರಿಯಾದ ಬೇಲೂರು ಮಠಕ್ಕೆ ಹಲವಾರು ಬಾರಿ ಭೇಟಿ ಮಾಡಿದ್ದರು. ಮಠದ ಸನ್ಯಾಸಿಗಳು ಅವರ ಬಯಕೆಯ ಬಗ್ಗೆ ಸಾರಂಗಿ ಅವರೊಂದಿಗೆ ಚರ್ಚಿಸಿದರು ಮತ್ತು ಅವರ ಜೀವಮಾನವನ್ನು ಪರೀಕ್ಷಿಸಿದರು. ಸಾರಂಗಿಯವರ ವಿಧವೆ ತಾಯಿ ಜೀವಂತವಾಗಿರುವುದನ್ನು ಅವರು ತಿಳಿದುಕೊಂಡರು. ಅವರು ಹಿಂತಿರುಗಬೇಕೆಂದೂ ಮತ್ತು ಅವಳ ಸೇವೆಯನ್ನು ಮಾಡಬೇಕೆಂದೂ ಅವರು ಒತ್ತಾಯಿಸಿದರು. ತಮ್ಮ ಹಳ್ಳಿಗೆ ಮರಳಿದ ನಂತರ, ಅವರು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.[]

ವೃತ್ತಿಜೀವನ

[ಬದಲಾಯಿಸಿ]

ಬಾರಾಸೋರ್ ಮತ್ತು ಮಯೂರ್ಭಂಜ್ ಜಿಲ್ಲೆಯ ಬುಡಕಟ್ಟು ಗ್ರಾಮಗಳಲ್ಲಿ, ಗಾನಾ ಶಿಖಾ ಮಂದಿರ ಯೋಜನೆಯ ಅಡಿಯಲ್ಲಿ, ಸಮರ್ ಕಾರಾ ಕೇಂದ್ರ ಎಂಬ ಹೆಸರಿನ ಶಾಲೆಯನ್ನು ಪ್ರಾರಂಭಿಸಿದರು.[] []

ಅಪರಾಧ ಪ್ರಕರಣಗಳು

[ಬದಲಾಯಿಸಿ]

೧೯೯೯ ರಲ್ಲಿ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಒಡಿಶಾದ ಮನೋಹರ್ಪುರ್-ಕಯೊಂಜ್ಹಾರ ಗ್ರಾಮದಲ್ಲಿ ತಮ್ಮ ನಿಲ್ದಾಣದ ವ್ಯಾಗನ್ ನಲ್ಲಿ ನಿದ್ದೆ ಮಾಡುವಾಗ ಜೀವಂತವಾಗಿ ಸುಟ್ಟು ಹೋಗಿದ್ದರು. ಇದು ಭಜರಂಗ ದಳದ ಕಾರ್ಯಕರ್ತರು ಮಾಡಿರುವುದೆಂದು ಹೇಳಲ್ಪಟ್ಟಿದೆ. ೧೯೯೯ ರಲ್ಲಿ ಪ್ರತಾಪ್ ಸಾರಂಗಿ ಅವರು ಭಜರಂಗದಳದ ಮುಖ್ಯಸ್ಥರಾಗಿದ್ದರು. ವಿಚಾರಣೆಯ ನಂತರ, ಆ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ದಾರಾ ಸಿಂಗ್ ಎಂಬ ವ್ಯಕ್ತಿ ಮತ್ತು ೧೨ ಇತರ ಮಂದಿಯನ್ನು ೨೦೦೩ ರಲ್ಲಿ ಈ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಿದ್ದರು. ಆಗ ಪ್ರತಾಪ್ ಚಂದ್ರ ಸಾರಂಗಿಯವರು, ಪಕ್ಷಪಾತವಿಲ್ಲದ ಮತ್ತು ಸರಿಯಾದ ರೀತಿಯಲ್ಲಿ ವಿಚಾರಣೆಯನ್ನು ಮಾಡಲಿಲ್ಲ ಎಂದು ಹೇಳಿದರು. ಒಡಿಶಾದ ಹೈಕೋರ್ಟ್ ಎರಡು ವರ್ಷಗಳ ನಂತರ ಸಿಂಗ್ ಗೆ ಮರಣದಂಡನೆ ವಿಧಿಸಿತು ಮತ್ತು ಪ್ರತಾಪ ಸಾರಂಗಿ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು, ಜೀವಾವಧಿ ಜೈಲು ಶಿಕ್ಷೆಗೆ ಒಳಗಾದ ೧೧ ಇತರರನ್ನು ಬಿಡುಗಡೆ ಮಾಡಿತು. ೨೦೦೨ ರಲ್ಲಿ ಒರಿಸ್ಸಾ ರಾಜ್ಯ ವಿಧಾನಸಭೆಯ ಮೇಲೆ ಹಿಂದೂ ಬಲಪಂಥೀಯ ಗುಂಪುಗಳು, ಭಜರಂಗದಳದವರು ನಡೆಸಿದ ದಾಳಿಯನ್ನು ಸೇರಿದಂತೆ, ೨೦೦೨ ರ ದಾಳಿಯ ನಂತರ ಗಲಭೆ, ಅಗ್ನಿಸ್ಪರ್ಶ, ಆಕ್ರಮಣ ಮತ್ತು ಸರ್ಕಾರಿ ಆಸ್ತಿಗಳನ್ನು ಹಾನಿಗೊಳಿಸಿದ ಆರೋಪಗಳ ಮೇಲೆ ಸಾರಂಗಿಯವರು ಬಂಧಿಸಲ್ಪಟ್ಟಿದ್ದರು. ದಳವು ಶಾಂತಿಯುತ ಮತ್ತು ಕಾನೂನು ಸಂಘಟನೆಯಾಗಿದ್ದು, ಭಜರಂಗ ದಳದ ಪಾತ್ರವನ್ನು ಪರೀಕ್ಷಿಸದೆ ಅಂದು ವರದಿಯನ್ನು ನೀಡಿದ್ದು, ಸ್ಟೈನ್ಸ್ನ ಹತ್ಯೆಯಲ್ಲಿ ಭಜರಂಗದಳವು ಭಾಗಿಯಾಗಿರುವುದಿಲ್ಲ ಎಂದು ವಾಧ್ವಾ ಕಮಿಷನ್ ಹೇಳಿದೆ.

ಉಲ್ಲೇಖಗಳು

[ಬದಲಾಯಿಸಿ]
  1. http://dahd.nic.in/
  2. https://www.prajavani.net/stories/national/pratap-singh-sarangi-640276.html
  3. http://myneta.info/LokSabha2019/candidate.php?candidate_id=9918
  4. "ಆರ್ಕೈವ್ ನಕಲು". Archived from the original on 2019-05-25. Retrieved 2019-06-10.
  5. https://economictimes.indiatimes.com/news/elections/lok-sabha/india/pratap-chandra-sarangi-an-unlikely-politician-who-lives-in-a-mud-house/political-career/slideshow/69598806.cms
  6. https://timesofindia.indiatimes.com/city/bhubaneswar/No-clash-between-Modi-wave-and-my-image-Pratap-Sarangi/articleshow/33648105.cms