ವಿಷಯಕ್ಕೆ ಹೋಗು

ಪೈರೊ ಸಲ್ಫ್ಯೂರಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೈರೊ ಸಲ್ಫ್ಯೂರಿಕ್ ಆಮ್ಲದ ರಚನೆ

ಪೈರೊ ಸಲ್ಫ್ಯೂರಿಕ್ ಆಮ್ಲ (H2S2O7) ಗಂಧಕದ ಒಂದು ಆಕ್ಸಿಆಸಿಡ್.[] ಇದಕ್ಕೆ ಓಲಿಯಂ (oleum) ಅಥವಾ ಹೊಗೆಯಾಡುವ ಸಲ್ಫ್ಯೂರಿಕ್ ಆಮ್ಲ (fuming sulfuric acid) ಎಂದೂ ಹೆಸರು.

ತಯಾರಿಕೆ

[ಬದಲಾಯಿಸಿ]
  1. ಸಾರಯುತ ಸಲ್ಫ್ಯೂರಿಕ್ ಆಮ್ಲದಲ್ಲಿ (concentrated sulfuric acid) ಗಂಧಕದ ಟ್ರೈಆಕ್ಸೈಡು ವಿಲೀನವಾದಾಗ ಈ ಆಮ್ಲ ಮೈದಳೆಯುವುದು.
  2. ಆಂಶಿಕವಾಗಿ ನಿರ್ಜಲಗೊಂಡಿರುವ ಫೆರಸ್ ಸಲ್ಫೇಟಿನ ಹರಳುಗಳನ್ನು (FeSO4.H2O) ಆಸವಿಸಿ ಬಂದುದನ್ನು ಕೊಂಚ ಸಲ್ಫ್ಯೂರಿಕ್ ಆಮ್ಲವಿರುವ ಸಂಗ್ರಾಹಕದಲ್ಲಿ ಶೇಖರಿಸಿದಾಗ ಈ ಆಮ್ಲ ಉಂಟಾಗುವುದು. ಫೆರಸ್ ಸಲ್ಫೈಟಿನ ವಿಭಜನೆಯಿಂದ ಫೆರಿಕ್ ಸಲ್ಫೈಟ್ [Fe2(SO4)3] ಬರುತ್ತದೆ. ಇದು ಅನಂತರ ವಿಭಜಿಸಿ ಗಂಧಕದ ಟ್ರೈಆಕ್ಸೈಡನ್ನು ಬಿಡುಗಡೆ ಮಾಡುವುದು. ಗಂಧಕದ ಟ್ರೈಆಕ್ಸೈಡು ಸಂಗ್ರಾಹಕದಲ್ಲಿಟ್ಟಿರುವ ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನವಾಗಿ ಪೈರೂಸಲ್ಫ್ಯೂರಿಕ್ ಆಮ್ಲವನ್ನು ರೂಪಿಸುವುದು.
  3. ಈ ಆಮ್ಲವನ್ನು ತಯಾರಿಸುವ ಇನ್ನೊಂದು ವಿಧಾನವೆಂದರೆ ಸೋಡಿಯಂ ಬೈಸಲ್ಫೇಟನ್ನು 4000 ಸೆಂ. ಉಷ್ಣತೆಗೆ ಕಾಯಿಸುವುದು. ದೊರೆತ ಸೋಡಿಯಂ ಪೈರೊ ಸಲ್ಫೇಟನ್ನು[][] ಸಾರಯುತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಕಾಯಿಸಿ ಪೈರೋಸಲ್ಫ್ಯೂರಿಕ್ ಆಮ್ಲವನ್ನು ಪಡೆಯಬಹುದು.

2NaHSO4 → Na2S2O7 + H2O

Na2S2O7 + H2SO4 → Na2SO4 + H2S2O7

ಗ್ರೀಕ್ ಭಾಷೆಯಲ್ಲಿ ಪೈರ್ ಎಂದರೆ ಬೆಂಕಿ ಎಂದರ್ಥ. ಬೈಸಲ್ಫೇಟನ್ನು ಕಾಯಿಸಿ ಪೈರೊ ಸಲ್ಪೇಟನ್ನು ಪಡೆಯಬಹುದಾದ್ದರಿಂದ ಆಮ್ಲಕ್ಕೆ ಈ ಹೆಸರು.

ಗುಣಗಳು

[ಬದಲಾಯಿಸಿ]

ಇದು ಸ್ನಿಗ್ಧವಾದ ಎಣ್ಣೆಯಂಥ ದ್ರವ. ಸಾರಯುತ ಸಲ್ಫ್ಯೂರಿಕ್ ಆಮ್ಲದಲ್ಲಿ ಗಂಧಕದ ಟ್ರೈಆಕ್ಸೈಡ್ ವಿವಿಧ ಪ್ರಮಾಣದಲ್ಲಿ ವಿಲೀನವಾಗಿ ಪೈರೊ ಸಲ್ಫ್ಯೂರಿಕ್ ಆಮ್ಲವಾಗಿದೆಯಷ್ಟೆ. ಇದು ಹೊಗೆಯಾಡಲು ಅದರಿಂದ ಗಂಧಕದ ಟ್ರೈಆಕ್ಸೈಡ್ ಎಲ್ಲ ಪಾರಾಗಿ ಸಲ್ಫ್ಯೂರಿಕ್ ಆಮ್ಲ ಮಾತ್ರ ಉಳಿಯುವುದು ಈ ಭಾವನೆಗೆ ಸಾಕ್ಷಿ.

ಉಪಯೋಗಗಳು

[ಬದಲಾಯಿಸಿ]

ಪೆಟ್ರೋಲಿಯಮಿನ ಸಂಸ್ಕರಣ, ವರ್ಣದ್ರವ್ಯಗಳ ಉತ್ಪಾದನೆ, ಸ್ಫೋಟಕಗಳು ಮತ್ತು ಕಪ್ಪು ಬೂಟ್‌ಪಾಲಿಷುಗಳ ತಯಾರಿಕೆಯಲ್ಲಿ ಈ ಆಮ್ಲದ ಪಾತ್ರ ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. Greenwood, Norman N.; Earnshaw, Alan (1997). Chemistry of the Elements (2nd ed.). Butterworth-Heinemann. ISBN 978-0-08-037941-8.
  2. Noyes, William (1913). A Textbook of Chemistry. New York: Henry Holt and Company. p. 186. Retrieved 13 January 2016.
  3. von Plessen, Helmold (2000). "Sodium Sulfates". Ullmann's Encyclopedia of Industrial Chemistry. doi:10.1002/14356007.a24_355. ISBN 9783527303854.