ವಿಷಯಕ್ಕೆ ಹೋಗು

ಪೆಂಡ್ಯಾಲ ಹರಿಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೆಂಡ್ಯಾಲ ಹರಿಕೃಷ್ಣ
Full namePendyala Harikrishna
Country ಭಾರತ
Born (1986-05-10) ೧೦ ಮೇ ೧೯೮೬ (ವಯಸ್ಸು ೩೮)
Guntur, ಆಂಧ್ರ ಪ್ರದೇಶ, India
TitleGrandmaster
FIDE rating೨೬೪೫
(No. ೯೭ on the September ೨೦೧೦ FIDE ratings list)
Peak rating೨೬೮೬ (April ೨೦೦೯)

ಪೆಂಡ್ಯಾಲಾ ಹರಿಕೃಷ್ಣ (ತೆಲುಗು:పెండ్యాల హరికృష్ణ; ೧೯೮೬ಮೇ ೧೦ರಂದು ಜನನ) ಭಾರತಆಂಧ್ರಪ್ರದೇಶದ ಗುಂಟೂರಿಗೆ ಸೇರಿದ ಚೆಸ್(ಚದುರಂಗ) ಆಟಗಾರ. ಹರಿಕೃಷ್ಣ ೨೦೦೧ರಲ್ಲಿ ಭಾರತದ ಅತೀ ಕಿರಿಯ ಗ್ರಾಂಡ್‌ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ೨೦೦೪ರ ನವೆಂಬರ್‌ನಲ್ಲಿ ಅವರು, ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾದರು. ೨೦೦೬ರ ಆಗಸ್ಟ್‌ನಲ್ಲಿ ಅವರು ಚೆಸ್ ೯೬೦ (ಫಿಷರ್ ರಾಂಡಮ್)ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಅರ್ಕಾಡಿಜ್ ನಾಯ್‌ಡಿಸ್ಚ್ ಅವರನ್ನು ೪ .೫ -೩.೫ರಿಂದ ಸೋಲಿಸಿ ವಿಜೇತರಾದರು.[]

ಚಾಂಪಿಯನ್‌ಶಿಪ್‌ಗಳು

[ಬದಲಾಯಿಸಿ]
  • ೧೯೯೬ರಲ್ಲಿ ವಿಶ್ವ ಅಂಡರ್-೧೦ (೧೦ ವರ್ಷಕ್ಕಿಂತ ಒಳಗಿನವರು)ಚಾಂಪಿಯನ್‌ಷಿಪ್‌ ಮೆನೋರ್ಕಾ (ಸ್ಪೇನ್), ಚಿನ್ನ.
  • ವಿಶ್ವ ಅಂಡರ್-೧೨ (೧೨ ವರ್ಷದೊಳಗಿನವರ) ವೇಗದ ಚೆಸ್ ಚಾಂಪಿಯನ್‌ಷಿಪ್, ೧೯೯೬, ಪ್ಯಾರಿಸ್, ಬೆಳ್ಳಿ
  • ಮಕ್ಕಳ ಒಲಿಂಪಿಯಾಡ್,೧೯೯೮ ಇಸ್ತಾನ್‌ಬುಲ್, ಚಿನ್ನ
  • ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್, ೨೦೦೦, ಸಾಂಗ್ಲಿ, ಚಿನ್ನ (ಅಂಡರ್-೧೮).
  • ಭಾರತದ ಅತೀ ಕಿರಿಯ ಇಂಟರ್‌ನ್ಯಾಷನಲ್ ಮಾಸ್ಟರ್, ೨೦೦೦.
  • ಏಷ್ಯನ್ ಅಂಡರ್-೧೪ ಚಾಂಪಿಯನ್‌ಷಿಪ್, ೨೦೦೦, ಟೆಹ್ರಾನ್, ೨೦೦೦–೦೧, ಚಿನ್ನ.
  • ರಾಷ್ಟ್ರೀಯ 'A' ಚಾಂಪಿಯನ್‌ಷಿಪ್, ೨೦೦೦, ಮುಂಬಯಿ, ಐದನೇ ಸ್ಥಾನ.
  • ಏಷ್ಯನ್ ಕಿರಿಯರ ಚಾಂಪಿಯನ್‌ಷಿಪ್, ೨೦೦೦,ಮುಂಬಯಿ, ಬೆಳ್ಳಿ.
  • ಚೆಸ್ ಒಲಿಂಪಿಯಾಡ್,೨೦೦೦ ಇಸ್ತಾನ್‌ಬುಲ್, ಪ್ರಥಮ ಗ್ರಾಂಡ್‌ಮಾಸ್ಟರ್(GM)ಗೌರವ.
  • ಕೋರಸ್ ಪಂದ್ಯಾವಳಿ, ೨೦೦೧, ವಿಜ್ಕ್ ಆನ್ ಜೀ, ಎರಡನೇ GM ಗೌರವ[]
  • ರಾಷ್ಟ್ರೀ.ಯ 'A' ಚಾಂಪಿಯನ್‌ಷಿಪ್, ೨೦೦೦, ನವದೆಹಲಿ, ಐದನೇ ಸ್ಥಾನ.
  • ಏಷ್ಯನ್ ಕಿರಿಯರ ಚಾಂಪಿಯನ್‌ಷಿಪ್,೨೦೦೧ ,ಟೆಹ್ರಾನ್, ಬೆಳ್ಳಿ.
  • ಏಷ್ಯನ್ ಚಾಂಪಿಯನ್‌ಷಿಪ್,೨೦೦೧ ,ಕೋಲ್ಕತಾ, ೧೦ನೇ ಸ್ಥಾನ, ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ, ಅಂತಿಮ GM ಗೌರವ.
  • ಭಾರತದ ಅತೀ ಕಿರಿಯ GM, ೨೦೦೧.
  • ರಾನ್ ಬಾನ್ವೆಲ್ MSO ಮಾಸ್ಟರ್ಸ್ ಪಂದ್ಯಾವಳಿ,೨೦೦೧ ,ಲಂಡನ್, ಚಿನ್ನ.
  • ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್, ೨೦೦೧,ಲಂಡನ್, ಚಿನ್ನ.
  • ಹೇಸ್ಟಿಂಗ್ಸ್ ಇಂಟರ್‌ನ್ಯಾಷನಲ್ ಚೆಸ್ ಕಾಂಗ್ರೆಸ್, ೨೦೦೧/೦೨, ೧ರಿಂದ-೩ರವರೆಗಿನ ಸ್ಥಾನಗಳಲ್ಲಿ ಸಮ.[]
  • ವಿಶ್ವ ಕಿರಿಯರ ಚಾಂಪಿಯನ್, ೨೦೦೪.
  • ಟಿಯಾಯುವಾನ್ ಚೆಸ್ ಪಂದ್ಯಾವಳಿ (FIDE ವಿಭಾಗ ೧೫) ಚೀನಾದಲ್ಲಿ ೨೦೦೫ ಜುಲೈ೨೦ರಂದು, ಪ್ರಥಮ ಸ್ಥಾನ.[]
  • ೯ನೇ ಎಸ್ಸೆಂಟ್ ಪಂದ್ಯಾವಳಿ ಹೂಗೆವೀನ್, ೨೦೦೫,ಪ್ರಥಮ ಸ್ಥಾನ.[]
  • ಬರ್ಮ್ಯುಡಾ ಆಹ್ವಾನಿತ ಪಂದ್ಯಾವಳಿ, ೨೦೦೫, ಬೋರಿಸ್ ಗೆಲ್‌ಫ್ಯಾಂಡ್‌ಜತೆ ಮೊದಲನೇ ಸ್ಥಾನ ಹಂಚಿಕೆ.
  • ಪ್ಯಾಂಪ್‌ಲೋನಾ ಅಂತಾರಾಷ್ಟ್ರೀಯ ಪಂದ್ಯಾವಳಿ, ೨೦೦೫, ಐವಾನ್ ಚೆಪಾರಿನೋವ್‌ಜತೆ ಎರಡನೇ ಸ್ಥಾನ ಹಂಚಿಕೆ.[]
  • ರೈಕ್‌ಜಾವಿಕ್ ಓಪನ್, ೨೦೦೬,ಪ್ರಥಮ ಸ್ಥಾನ ಹಂಚಿಕೆ[]
  • ೪ನೇ ಮಾರ್ಕ್ಸ್ ಗ್ಯೋರ್ಗಿ ಸ್ಮಾರಕ ಪಂದ್ಯಾವಳಿ,ಹಂಗರಿ ೨೦೦೬, ಪ್ರಥಮ ಸ್ಥಾನ[]
  • ಆರ್ಡಿಕ್ಸ್ ಓಪನ್ (ವೇಗದ ಚೆಸ್) - ಮೂರನೇ ಸ್ಥಾನ ಹಂಚಿಕೆ
  • ೨೦೦೬ರಲ್ಲಿ ಮೇನ್ಜ್‌ನಲ್ಲಿ ಆರ್ಕಾಡಿ ನಾಯ್‌ಡಿಸ್ಚ್ ಅವರನ್ನು ಸೋಲಿಸಿ, ಚೆಸ್೯೬೦ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟವನ್ನು ಗಳಿಸಿದರು.[]

ಗಮನಾರ್ಹ ಚೆಸ್ ಪಂದ್ಯಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ChessBase.com - ಚೆಸ್ ನ್ಯೂಸ್ - ಚೆಸ್ ಕ್ಲಾಸಿಕ್ ಚೆಸ್960 ರಿಸಲ್ಟ್ಸ್, ಆನಂದ್ ಮತ್ತು ಆರೋನಿಯನ್ ಸಿಮಲ್ಸ್
  2. "ಸ್ಟನಿಂಗ್ ಪರ್‌ಪಾರ್ಮೇನ್ಸ್ ಬೈ ರಾಡ್ಜಾಬೋವ್ - 2001 ಕೋರಸ್ ಚೆಸ್ ಟೂರ್ನ್‌ಮೆಂಟ್- ದಿ ರಿಯಾಲ್ಮ್ ಆಫಿ ದಿ ಸಿಟಾಡೆಲ್". Archived from the original on 2009-10-25. Retrieved 2009-10-25.
  3. "77th Hastings Chess Congress 2001-2 Premier Results". HastingsChess.org.uk. Archived from the original on 21 ಜುಲೈ 2011. Retrieved 6 January 2010.
  4. ಹರಿಕೃಷ್ಣ ವಿನ್ಸ್ ಟೈಟಲ್ ಇನ್ ಚೈನಾ
  5. ChessBase.com - ಚೆಸ್ ನ್ಯೂಸ್ - ಹರಿಕೃಷ್ಣ ವಿನ್ಸ್ ಎಸ್ಸೆಂಟ್ ಕ್ರೌನ್ ಗ್ರೂಪ್
  6. "ದಿ ವೀಕ್ ಇನ್ ಚೆಸ್ 582". Archived from the original on 2009-01-04. Retrieved 2010-12-13.
  7. ಹರಿಕೃಷ್ಣ ಜಾಯಿಂಟ್ ವಿನ್ನರ್ ಇನ್ ರೇಯ್‌ಕ್‌ಜಾವಿಕ್
  8. ChessBase.com - ಚೆಸ್ ನ್ಯೂಸ್ -ಹರಿಕೃಷ್ಣ ವಿನ್ಸ್ ಗ್ಯೋರ್ಗಿ ಮಾರ್ಕ್ಸ್ ಮೆಮೋರಿಯಲ್
  9. "Chess Classic: Chess960 results, Anand and Aronian simuls". ChessBase. Retrieved 2009-11-12.

ಬಾಹ್ಯ ಕೊಂಡಿಗಳು

[ಬದಲಾಯಿಸಿ]