ಪೃಥ್ವಿರಾಜ್ (ಕನ್ನಡ ನಟ)
Prithviraj | |
---|---|
ಜನನ | ನುಗ್ಗೆಹಳ್ಳಿ ರಂಗರಾಜ್ ಪೃಥ್ವಿರಾಜ್ Nuggehalli Rangaraj Prithviraj ೫ ಆಗಸ್ಟ್ ೧೯೪೮ |
ಇತರೆ ಹೆಸರು | ಶೇಷಾದ್ರಿ |
ವೃತ್ತಿ | Actor |
ಸಕ್ರಿಯ ವರ್ಷಗಳು | 1983-ಪ್ರಸ್ತುತ |
ಸಂಗಾತಿ | ಶ್ರೀದೇವಿ |
ಮಕ್ಕಳು | 2 |
ನುಗ್ಗೆಹಳ್ಳಿ ರಂಗರಾಜ್ ಪೃಥ್ವಿರಾಜ್ ಕನ್ನಡ ಚಲನಚಿತ್ರ ಮತ್ತು ಟೆಲಿವಿಷನ್ ಧಾರಾವಾಹಿಯ ಭಾರತೀಯ ನಟ.ಅವರು ನಾಲ್ಕು ದಶಕಗಳ ಅವಧಿಯ ವೃತ್ತಿಜೀವನದಲ್ಲಿ ೧೧೬ ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ಮತ್ತು ೬೪ ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.[೧]
ಚಲನಚಿತ್ರ ವೃತ್ತಿಜೀವನ
[ಬದಲಾಯಿಸಿ]ಪೃಥ್ವಿರಾಜ್ ಅವರು ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದರು.ನಟನೆ ಮತ್ತು ಹವ್ಯಾಸಿ ಥಿಯೇಟರ್ನಲ್ಲಿ ಅವರ ಆಸಕ್ತಿಯು ಅವರನ್ನು ಚಲನಚಿತ್ರದೆಡೆಗೆ ಆಕರ್ಷಿಸಿತು ಮತ್ತು ಮಲ್ಗುಡಿ ಡೇಸ್ ಖ್ಯಾತಿಯ ನಿರ್ದೇಶಕ ಮತ್ತು ಕನ್ನಡ ನಟ ಶಂಕರ್ ನಾಗ್ ಅವರ ಆಕ್ಸಿಡೆಂಟ್ ಚಲನಚಿತ್ರದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು
ಪೃಥ್ವಿ ಪೋಷಕ ನಟ ಪಾತ್ರದಲ್ಲಿ ಸುಮಾರು 116 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅದರಲ್ಲಿ ಅವರ ಸ್ಮರಣೀಯ ಪಾತ್ರಗಳು ಚಲನಚಿತ್ರಗಳು ಜೀವನ ಚೈತ್ರ, ಪರಶುರಾಮ, ಒಡಹುಟ್ಟಿದವರು, ಡಾ. ರಾಜ್ ಕುಮಾರ್ ಮತ್ತು ಡಾಕ್ಟರ್ ಕೃಷ್ಣ ಮತ್ತು ವಿಷ್ಣುವರ್ಧನ್ ಅವರೊಂದಿಗೆ ಇವರು ಅಭಿನಯಿಸಿದ್ದಾರೆ
ಸಪ್ತಪದಿ, ಗಂಡ ಸಿಡಿಗುಂಡು, ಮತ್ತು ಅನಂತ್ ನಾಗ್ನ ಗಣೇಶನ ಮದುವೆ , ಒಂದು ಸಿನೆಮಾ ಕತೆ, ಗೌರಿ ಗಣೇಶ, ರವಿಚಂದ್ರನ್ ಅವರೊಂದಿಗೆ ಮಲ್ಲ ಕನ್ನಡ ಸಿನೆಮಾದ ಇತರ ಪ್ರಸಿದ್ಧ ತಾರೆಯರಾದ ಅಂಬರೀಷ್ ರ ಜೊತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ .
ಉಲ್ಲೇಖಗಳು
[ಬದಲಾಯಿಸಿ]- ↑ "Prithviraj : Kannada Actor, Movies". chiloka.com.