ವಿಷಯಕ್ಕೆ ಹೋಗು

ಪೀಟರ್ ಬೆನೆನ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೀಟರ್ ಬೆನೆನ್ಸನ್
ಜನನ
ಪೀಟರ್ ಜೇಮ್ಸ್ ಹೆನ್ರಿ ಸೊಲೊಮನ್

೩೧ ಜುಲೈ ೧೯೨೧
ಲಂಡನ್,ಇಂಗ್ಲ್ಯಾಂಡ್
ಮರಣ೨೫ ಫೆಬ್ರವರಿ ೨೦೦೫
ಆಕ್ಸ್ಫರ್ಡ್, ಇಂಗ್ಲ್ಯಾಂಡ್
ರಾಷ್ಟ್ರೀಯತೆಬ್ರಿಟೀಷ್
Known forಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥಾಪಕ
ಪೋಷಕಫ್ಲೋರಾ ಬೆನೆನ್ಸನ್ ಮತ್ತು ಹೆರಾಲ್ಡ್ ಸೊಲೊಮನ್

ಪೀಟರ್ ಬೆನೆನ್ಸನ್ ರವರು ಬ್ರೀಟಿಷ್ ವಕೀಲರಾಗಿದ್ದರು. ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದ ಇವರು ಅಮ್ನೆಸ್ಟಿ ಇಂಟರ್ನ್ಯಾಷನಲ್(ಎಐ) ಎಂಬ ಸರ್ಕಾರೇತರ ಸಂಸ್ಥೆಯ ಸ್ಥಾಪಕರಾಗಿದ್ದರು. ಬೆನೆನ್ಸನ್ ಅವರು ೨೦೦೧ರಲ್ಲಿ ತನ್ನ ಜೀವಮಾನದ ಸಾಧನೆಗಾಗಿ ಪ್ರೈಡ್ ಆಫ್ ಬ್ರಿಟನ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಆರಂಭಿಕ ಜೀವನ[ಬದಲಾಯಿಸಿ]

ಪೀಟರ್ ಬೆನೆನ್ಸನ್ ಅವರು ೩೧ ಜುಲೈ ೧೯೨೧ರಲ್ಲಿ ಲಂಡನ್ ನಲ್ಲಿ ಜನಿಸಿದರು. ಅವರ ಮೂಲ ಹೆಸರು ಪೀಟರ್ ಜೇಮ್ಸ್ ಹೆನ್ರಿ ಸೊಲೊಮನ್. ಹೆರಾಲ್ಡ್ ಸೊಲೊಮನ್ ಮತ್ತು ಫ್ಲೋರಾ ಬೆನೆನ್ಸನ್ ಅವರ ಏಕೈಕ ಪುತ್ರರಾದ ಇವರು ಯಹೂದಿ ಕುಟುಂಬಕ್ಕೆ ಸೇರಿದವರು. ತನ್ನ ಹದಿನಾರನೇ ವಯಸ್ಸಿನಲ್ಲಿ ಸ್ಪಾನಿಷ್ ಅಂತರ್ಯುದ್ಧದಿಂದ ಅನಾಥರಾದ ಮಕ್ಕಳಿಗೆ ಪರಿಹಾರ ನಿಧಿ ಸ್ಥಾಪಿಸಲು ಸಹಾಯ ಮಾಡಿದರು. ಅವರು ಆಕ್ಸ್ಫರ್ಡ್ ನ ಬಲ್ಲಿಯೊಲ್ ಕಾಲೇಜಿನಲ್ಲಿ ಅಧ್ಯಯನಕ್ಕಾಗಿ ಸೇರಿಕೊಂಡರು ಆದರೆ, ಎರಡನೇ ಮಹಾಯುದ್ಧ ಅವರ ಶಿಕ್ಷಣವನ್ನು ಅಡ್ಡಿಪಡಿಸಿತು. ಅವರು ಮಾಹಿತಿ ಸಚಿವಾಲಯದ ಇಂಟೆಲಿಜೆನ್ಸ್ ಕಾರ್ಪ್ಸ್ ಅಲ್ಲಿ ಸೇವೆ ಸಲ್ಲಿಸಿದರು.[೧]

ವೃತ್ತಿಜೀವನ[ಬದಲಾಯಿಸಿ]

೧೯೪೬ರಲ್ಲಿ ಬೆನೆನ್ಸನ್ ಲೇಬರ್ ಪಾರ್ಟಿ ಸೇರುವ ಮೊದಲು ವಕೀಲರಾಗಿ ಅಭ್ಯಾಸ ಆರಂಭಿಸಿದರು. ೧೯೫೦ರಲ್ಲಿ ಸ್ಟ್ರಿಟ್ಹ್ಯಾಮ್ ಮತ್ತು ೧೯೫೯ರವರೆಗೆ ಉತ್ತರ ಹೆರ್ಟ್ಸ್ ಕ್ಷೇತ್ರದ ಚುನಾವಣೆಯಲ್ಲಿ ವಿಫಲರಾದರು. ೧೯೫೭ರಲ್ಲಿ ಯುಕೆ ಮೂಲದ ಮಾನವ ಹಕ್ಕುಗಳು ಮತ್ತು ಕಾನೂನು ಸುಧಾರಣಾ ಸಂಘಟನೆಯ ನ್ಯಾಯ ಸ್ಥಾಪಿಸಿದ ಬ್ರೀಟಿಷ್ ವಕೀಲರಲ್ಲಿ ಒಬ್ಬರಾಗಿದ್ದರು. ೧೯೬೧ರಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಲು ವಿಶ್ವದಾದ್ಯಂತ ಸಂಘಟನೆಯಾದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು.[೨]

ಸಕ್ರಿಯತೆ[ಬದಲಾಯಿಸಿ]

ಬೆನೆನ್ಸನ್ ಅವರು "ಎರಡು ಪೋರ್ಚುಗೀಸ್ ವಿದ್ಯಾರ್ಥಿಗಳು ಕುಡಿದು ಅಸಭ್ಯವಾಗಿ ವರ್ತಿಸಿದ ಕಾರಣ ೭ ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರು" ಎಂಬ ವರದಿಯನ್ನು ಪತ್ರಿಕೆವೊಂದರಲ್ಲಿ ಓದಿ ಆಘಾತಗೊಂಡರು. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತಿಳಿದರು. ೨೮ ಮೇ ೧೯೬೧ರಲ್ಲಿ ಬೆನೆನ್ಸನ್ ಅವರ 'ದಿ ಫಾರ್ಗಾಟನ್ ಪ್ರಿಸನರ್ಸ್'ಎಂಬ ಶೀರ್ಷಿಕೆಯ ಲೇಖನವು 'ದ ಅಬ್ಸರ್ವರ್' ಎಂಬ ಬ್ರೀಟಿಷ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಲೇಖನವು ವಿದ್ಯಾರ್ಥಿಗಳಿಗೆ ಬೆಂಬಲವನ್ನು ತೋರಿಸುವ ಪತ್ರಗಳನ್ನು ಬರೆಯಲು ಓದುಗರಿಗೆ ಕೇಳಿತು. ಅಂತಹ ಪತ್ರ-ಬರವಣಿಗೆಯ ಕಾರ್ಯಾಚರಣೆಗಳನ್ನು ಸಹಕರಿಸುವ ಸಲುವಾಗಿ,ಅಮ್ನೆಸ್ಟಿ ಇಂಟರ್ನ್ಯಾಷನಲ್ ಎಂಬ ಸಂಸ್ಥೆಯನ್ನು ಲಂಡನ್ ನಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯು ಹಲವಾರು ಕೈದಿಗಳನ್ನು ಸಾವು ಮತ್ತು ಚಿತ್ರಹಿಂಸೆಗಳಿಂದ ಉಳಿಸಿದೆ.[೩][೪]

ಮರಣ[ಬದಲಾಯಿಸಿ]

ಪೀಟರ್ ಬೆನೆನ್ಸನ್ ಅವರು ೨೫ ಫೆಬ್ರವರಿ ೨೦೦೫ರಲ್ಲಿ ನ್ಯೂಮೋನಿಯಾ ಕಾಯಿಲೆಯಿಂದಾಗಿ ಮರಣ ಹೊಂದಿದರು.[೫]

ಉಲ್ಲೇಖಗಳು[ಬದಲಾಯಿಸಿ]

  1. https://www.independent.co.uk/news/obituaries/peter-benenson-13233.html
  2. https://www.thetimes.co.uk/article/peter-benenson-0wrzscdn0ww
  3. https://www.prideofbritain.com/history/2001/peter-benenson-founder-of-amnesty-international
  4. https://www.readthespirit.com/interfaith-peacemakers/
  5. https://www.britannica.com/biography/Peter-Benenson