ಪಿ.ಎಚ್.ಅಬೇಲ್ಸನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಿ.ಎಚ್.ಅಬೇಲ್ಸನ್

ಪಿ.ಎಚ್.ಅಬೇಲ್ಸನ್(ಎಪ್ರಿಲ್ 27, 1913 – ಆಗಸ್ಟ್ 1,2004)ಅಮೆರಿಕದ ವಿಜ್ಞಾನಿ.ಇವರು ಎಡ್ವಿನ್ ಎಮ್.ಮೆಕ್‌ಮಿಲನ್ ರವರೊಂದಿಗೆ ನೆಪ್ಚೂನಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರು ಅಣು ರಿಯಾಕ್ಟರ್‍ಗಳ ವಿನ್ಯಾಸದಲ್ಲಿ ಹೆಚ್ಚಿನ ಕೆಲಸ ಮಾಡಿರುವರು.

ಅವರು ವಾಷಿಂಗ್ಟನ್ ಡಿಸಿಯಲ್ಲಿ ಕಾರ್ನೆಗೀ ವಿಶ್ವವಿದ್ಯಾಲಯದಲ್ಲಿ ಸಹಾಯಕ ಭೌತಶಾಸ್ತ್ರಜ್ಞನ ಕೆಲಸ ಮಾಡುತ್ತಿದ್ದರು. ಒಂದು ಪದಾರ್ಥದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನ್ಯೂಟ್ರಾನ್‍ಗಳು ಯುರೇನಿಯಂಗೆ ಹೊಡೆದಾಗ ಬೀಟಾ ಕಿರಣಗಳು ಹೊಮ್ಮುತ್ತದೆ ಎಂದು ಅವರು ಗಮನಿಸಿದರು. ಅವರು ನೋಬೆಲ್ ಪ್ರಶಸ್ತಿ ವಿಜೇತ ಲೂಯಿಸ್ ಅಲ್ವಾರೆಝ್ ಸಹಭಾಗಿತ್ವದಲ್ಲಿ ಅವರು ಆ ವಿಷೇಶ ವಸ್ತುವನ್ನು ಬೇರ್ಪಡಿಸಿದ್ದರು. ನಂತರ ಅವರು ಎಡ್ವಿನ್ ಮೆಕ್ಮಿಲನ್‍ರ ಜೊತೆ ನೆಪ್ಚೂನಿಯಮ್‍ ಲೋಹವನ್ನು ಜೂನ್ ೧೯೪೦ ರಲ್ಲಿ ಕಂಡುಹಿಡಿದರು. ಮೆಕ್ಮಿಲನ್‍ರವರು ಇತರ ಅಂಶಗಳನ್ನು ಕಂಡುಹಿಡಿದಿದ್ದಕ್ಕೆ ನೊಬೆಲ್ ಪ್ರಶಸ್ತಿ ಪಡೆದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]