ವಿಷಯಕ್ಕೆ ಹೋಗು

ಪಿಕಳಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಕಳಾರ
ಕೆಂಪು ಕಪೋಲದ ಪಿಕಳಾರ
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
Pycnonotidae
Genera

See text.

ಪಿಕಳಾರ (Bulbul) : ಮೈನಾಕ್ಕಿಂತ ಕೊಂಚ ಚಿಕ್ಕದಾದ ಗುಬ್ಬಿಗಿಂತ ದೊಡ್ಡದಾದ ಈ ಹಕ್ಕಿ ಭಾರತದಾದ್ಯಂತ ಕಂಡುಬರುವ ಒಂದು ಸಾರ್ವತ್ರಿಕ ಹಕ್ಕಿ. ಇವುಗಳನ್ನು ದಟ್ಟ ಕಾಡುಗಳಲ್ಲಿ, ಪೇಟೆಯ ಉದ್ಯಾನಗಳಲ್ಲಿ, ಮನೆಯ ಹೂದೋಟ ಹೀಗೆ ಎಲ್ಲೆಡೆ ನೋಡಬಹುದು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಡಿನಲ್ಲಿ ಗುಬ್ಬಚ್ಚಿಗಳು ಹೇಗೊ ಹಾಗೆ ವಿಪುಲವಾಗಿವೆ. ಕರ್ನಾಟಕದಲ್ಲಿ ಇವುಗಳ ಅನೇಕ ಪ್ರಭೇದಗಳನ್ನು ನೋಡಬಹುದು : ಕೆಂಪು ಕಪೋಲದ ಪಿಕಳಾರ ಅಥವಾ ಕೆಮ್ಮೀಸೆ ಪಿಕಳಾರ(Red-whiskered Bulbul), ಕೆಂಪು ಬಾಲದ ಪಿಕಳಾರ(Red-vented Bulbul), ಕರಿ ಪಿಕಳಾರ(Black Bulbul), ಹಳದಿ ಕತ್ತಿನ ಪಿಕಳಾರ (Yellow-throated Bulbul), ಬಿಳಿ ಹುಬ್ಬಿನ ಪಿಕಳಾರ (White-browed Bulbul). ಕೆಂಪು ಕಪೋಲದ ಪಿಕಳಾರ ಅಥವಾ ಕೆಮ್ಮೀಸೆ ಪಿಕಳಾರದ ತಲೆಯ ಮೇಲೆ ಜುಟ್ಟಿನಂತಹ ಚೊಟ್ಟಿ ಇದ್ದು, ಕಪೋಲದ ಭಾಗ ಕೆಂಪಾಗಿರುತ್ತದೆ. ಇವನ್ನು ಸಾಮಾನ್ಯವಾಗಿ ನಗರದ ಹೂದೋಟಗಳಿಂದ ಹಿಡಿದು ಮಲೆನಾಡಿನ ಕಾಡುಗಳಲ್ಲಿ ಎಲ್ಲೆಡೆ ನೋಡಬಹುದು. ಕೆಂಪು ಬಾಲದ ಪಿಕಳಾರಗಳ ಬಾಲದ ಬುಡದಲ್ಲಿ ಕೆಂಪು ಬಣ್ಣವಿದ್ದು, ಇವು ಹೆಚ್ಚಾಗಿ ತೋಟ,ಉದ್ಯಾನದಲ್ಲಿ ಕಾಣಿಸಿಕೊಳ್ಳುತ್ತವೆ.ಬೆಳಗಿನ ಸಮಯದಲ್ಲ್ಲಿ ಸಿಳ್ಳು ಹಾಕುತ್ತಾ ಸುಶ್ರಾವ್ಯವಾಗಿ ಹಾಡುತ್ತವೆ.ಇವು ಗುಂಪಿನಲ್ಲಿರುವುದು ಅಪರೂಪ, ಬದಲಾಗಿ ಒಂಟಿ ಅಥವಾ ಜೋಡಿ ಹಕ್ಕಿಗಳಾಗಿ ಕಾಣಿಸಿಕೊಳ್ಳುವುದು ಹೆಚ್ಚು.

ಆಹಾರ[ಬದಲಾಯಿಸಿ]

ಪಿಕಳಾರಗಳ ಆಹಾರ ಕೀಟಗಳು,ಸಣ್ಣ ಹಣ್ಣುಗಳು ಮತ್ತು ಹೂವಿನ ಮಕರಂದ.ಇವು ಪೊದೆಗಳ ಕವಲುಗಳಲ್ಲಿ ನಾರು, ಹುಲ್ಲು, ಜೇಡರ ಬಲೆಗಳಿಂದ ಬಟ್ಟಲಾಕಾರದ ಗೂಡು ಕಟ್ಟುತ್ತವೆ. ಗೂಡು ಜನವಸತಿಯ ಹತ್ತಿರವೂ ಇರಬಹುದು.ಉದಾಹರಣೆಗೆ ಮನೆಯ ಹೂದೋಟದಲ್ಲಿ ಹಬ್ಬಿಸಿದ ಮಲ್ಲಿಗೆ ಬಳ್ಳಿಯ ಚಪ್ಪರದಲ್ಲಿ ಪಿಕಳಾರಗಳು ಗೂಡು ಕಟ್ಟಬಹುದು.

"https://kn.wikipedia.org/w/index.php?title=ಪಿಕಳಾರ&oldid=1047202" ಇಂದ ಪಡೆಯಲ್ಪಟ್ಟಿದೆ