ಕೆಮ್ಮೀಸೆ ಪಿಕಳಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಕಳಾರ
ಕೆಂಪು ಕಪೋಲದ ಪಿಕಳಾರ
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
Pycnonotidae
ಕುಲ:
Pycnonotus
ಪ್ರಜಾತಿ:
Jocosus

ಕೆಮ್ಮೀಸೆ ಪಿಕಳಾರ ಅಥವಾ ಕೆಂಪು ಕಪೋಲದ ಪಿಕಳಾರ ಏಷಿಯಾ ಖಂಡದಲ್ಲಿ ಕಂಡುಬರುವ ಅತಿ ಸಾಮನ್ಯವಾದ ಪಿಕಳಾರ (Bulbul) ಜಾತಿಯ ಹಕ್ಕಿ. ಇತರ ಪಿಕಳಾರಗಳಂತೆ ಈ ಹಕ್ಕಿಯೂ ಕೂಡ ಹಣ್ಣು, ಮಕರಂದ ಹಾಗು ಕ್ರಿಮಿ ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಈ ಹಕ್ಕಿಯನ್ನು ನಗರಗಳ ಉದ್ಯಾನವನಗಳಲ್ಲಿಯೂ, ಮಲೆನಾಡಿನ ದಟ್ಟ ಅರಣ್ಯಗಳಲ್ಲಿಯೂ ಕಾಣಬಹುದು.

ಗಾತ್ರ, ಆಕಾರ ಮತ್ತು ಬಣ್ಣ[ಬದಲಾಯಿಸಿ]

ಕೆಮ್ಮೀಸೆ ಪಿಕಳಾರ ಗುಬ್ಬಚ್ಚಿಗಿಂತಲೂ ಕೊಂಚ ದೊಡ್ಡದು ಹಾಗು ಮೈನಾಗಿಂತಲೂ ಕೊಂಚ ಸಣ್ಣ ಗಾತ್ರದ ಹಕ್ಕಿ. ಇದರ ಗಾತ್ರ ಸುಮಾರು ೨೦ ಸೆ.ಮೀ. ಕಪ್ಪು ಬಣ್ಣದ ಜುಟ್ಟು, ಬಿಳಿಯ ಎದೆ ಭಾಗ, ಕೆಂಪು ಬಣ್ಣದ ಗಲ್ಲ (ಕೆನ್ನೆ), ಕಂದು ಬಣ್ಣದ ಬೆನ್ನು ಹಾಗು ಬಾಲ ಈ ಹಕ್ಕಿಯ ಪ್ರಮುಖ ಗುರುತಿನ ಚಿಹ್ನೆಗಳು.