ಪಾಡ್ರಿಕ್ ಕಾಲಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಡ್ರಿಕ್ ಕಾಲಂ
Photographed by Carl Van Vechten, 1959.
ಜನನPatrick Collumb
(೧೮೮೧-೧೨-೦೮)೮ ಡಿಸೆಂಬರ್ ೧೮೮೧
Columbkille, County Longford, Ireland
ಮರಣ11 January 1972(1972-01-11) (aged 90)
Enfield, Connecticut, United States
ರಾಷ್ಟ್ರೀಯತೆIrish
ಜನಾಂಗೀಯತೆIrish
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆUniversity College Dublin
ಕಾಲ1902–58

ಪಾಡ್ರಿಕ್ ಕಾಲಂ (8 ಡಿಸೆಂಬರ್ 1881 – 11 ಜನವರಿ 1972) ಐರಿಷ್ ಕವಿ ಮತ್ತು ನಾಟಕಕಾರ.ಐರಿಷ್ ಸಾಹಿತ್ಯ ಪುನರುಜ್ಜೀವನದಲ್ಲಿ ಇವನದು ದೊಡ್ಡ ಹೆಸರು.

ಆರಂಭಿಕ ಜೀವನ[ಬದಲಾಯಿಸಿ]

ಹುಟ್ಟಿದ್ದು ಐರ್ಲೆಂಡಿನ ಲಾಂಗ್‍ಫೋರ್ಡ್‍ನಲ್ಲಿ.ಇವನ ಹೆತ್ತವರ ಎಂಟು ಜನ ಮಕ್ಕಳಲ್ಲಿ ಇವನು ಹಿರಿಯವ[೧] . ಸ್ಥಳೀಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಡಬ್ಲಿನ್‍ಗೆ ಹೋಗಿ ರೈಲ್ವೆ ಕಚೇರಿಯೊಂದರಲ್ಲಿ ಗುಮಾಸ್ತನಾದ.

ಸಾಹಿತ್ಯ ಸೇವೆ[ಬದಲಾಯಿಸಿ]

ಯೇಟ್ಸ್, ಜಾರ್ಜ್ ವಿಲಿಯಂ ರಸೆಲ್, ಸಿಂಜ್ ಮತ್ತು ಲೇಡಿ ಗ್ರೆಗರಿ ಇವರನ್ನೊಳಗೊಂಡ ಐರಿಷ್ ಸಾಹಿತ್ಯ ಪುನರುಜ್ಜೀವನ ಲೇಖಕರ ಗುಂಪಿಗೆ ಸೇರಿದ. ಇವನು ಡಬ್ಲಿನಿನಲ್ಲಿ ಸ್ಥಾಪಿಸಿದ ಅಟ್ಟೆ ಥಿಯೋಡರ್ ಎನ್ನುವ ರಂಗಮಂದಿರವು ಐರ್ಲೆಂಡಿನ ನವೋದಯದಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ದಿ ಲ್ಯಾಂಡ್ (1905) ಎಂಬ ನಾಟಕ ಐರಿಷ್ ರಂಗಭೂಮಿಯ ಮೇಲೆ ಬಂದು ಗೌರವ ತಂದಿತು. ದಿ ಫಿಡ್ಲರ್ಸ್ ಹೌಸ್ (1907), ಥಾಮಸ್ ಮಸ್ಕೆರಿ (1910), ದಿ ಡೆಸರ್ಟ್ (1912), ಬಲೂನ್ (1929) ಇವು ಈತನ ಇತರ ನಾಟಕಗಳು. ಜೇಮ್ಸ್ ಸ್ಟೀಫನ್ಸ್ ಮತ್ತು ಥಾಮಸ್ ಮೆಕ್‍ಡೊನಾ ಇವರ ಜೊತೆಗೂಡಿ ಐರಿಷ್ ರಿವ್ಯೂ ಪತ್ರಿಕೆ ಸ್ಥಾಪಿಸಿ ಕೆಲಕಾಲ ಅದರ ಸಂಪಾದಕನಾಗಿಯೂ ಕೆಲಸ ಮಾಡಿದ.

ಅಮೆರಿಕದಲ್ಲಿ[ಬದಲಾಯಿಸಿ]

1914ರಲ್ಲಿ ಅಮೆರಿಕಕ್ಕೆ ತೆರಳಿ ಕನೆಕ್ಟಿಕಟ್‍ನಲ್ಲಿ ನೆಲಸಿದ. 1923ರಲ್ಲಿ ಹವಾಯಿ ಸರ್ಕಾರದ ಆದೇಶದಿಂದ ಅಲ್ಲಿಗೆ ಹೋಗಿ ಆ ಜನರ ಜಾನಪದವನ್ನು ಅಭ್ಯಸಿಸಿ ಎರಡು ಹೊತ್ತಗೆಗಳನ್ನು ಹೊರತಂದ. 1939 ರಿಂದ ನ್ಯೂಯಾರ್ಕಿನಲ್ಲಿ ನೆಲೆಸಿದ. ವೈಲ್ಡ್ ಅರ್ತ್ (1907), ಡ್ರಮ್ಯಾಟಿಕ್ ಲೆಜೆಂಡ್ಸ್ (1922), ದಿ ಸ್ಟೋರಿ ಆಫ್ ಲೋರಿ ಮೇನ್ (1937) ಈತನ ಮುಖ್ಯ ಕಾವ್ಯಕೃತಿಗಳು. ಕ್ಯಾಸಲ್ ಕಾನ್‍ಕರ್ ಎಂಬ ಒಂದು ಕಾದಂಬರಿಯನ್ನಲ್ಲದೆ ಮಕ್ಕಳಿಗಾಗಿ ಅನೇಕ ಗ್ರಂಥಗಳನ್ನು ಈತ ರಚಿಸಿದ್ದಾನೆ. 1952ರಲ್ಲಿ ಅಮೆರಿಕನ್ ಅಕೆಡಮಿ ಆಫ್ ಪೊಯಟ್ಸ್ ಗೌರವವನ್ನೂ 1953ರಲ್ಲಿ ಗ್ರೆಗರಿ ಪದಕವಾದ ಐರಿಷ್ ಅಕಾಡೆಮಿ ಆಫ್ ಲೆಟರ್ಸ್‍ನ ಗ್ರೆಗರಿ ಪದಕವನ್ನೂ ಈತ ಗಳಿಸಿದ.

ಉಲ್ಲೇಖಗಳು[ಬದಲಾಯಿಸಿ]

  1. 30 April 2012 4:17:03 AM #.26#. "Biodata". Poemhunter.com. Retrieved 30 April 2012.{{cite web}}: CS1 maint: numeric names: authors list (link)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: