ಪರಮಾನಂದ

ವಿಕಿಪೀಡಿಯ ಇಂದ
Jump to navigation Jump to search

ಪರಮಾನಂದ ಒಂದು ಸಂಸ್ಕೃತ ಜೋಡುಪದ, ಇದರಲ್ಲಿ ಎರಡು ಶಬ್ದಗಳಿವೆ, ಪರಮ ಮತ್ತು ಆನಂದ. ಸಾಮಾನ್ಯವಾಗಿ ಪರಮ ಅಂದರೆ ಅತ್ಯುನ್ನತ, ಕಟ್ಟಕಡೆಯ, ಅಥವಾ ಅತ್ಯಂತ ಶ್ರೇಷ್ಠವಾದದ್ದು, ಆದರೆ ವಾಸ್ತವವಾಗಿ ಅದರರ್ಥ - "ಮೀರಿದ್ದು". ಆನಂದದ ಮೂಲ ಅರ್ಥ ಸಂತೋಷದ ಕ್ಷಣಿಕ ಉಲ್ಬಣದ ಬದಲು ಶಾಶ್ವತತೆಯನ್ನು ಸೂಚಿಸುತ್ತದೆ; ಅದು ಬಲವಾಗಿ ಬೇರೂರಿದ ಆಳವಾದ ಅಧ್ಯಾತ್ಮಿಕ ಭಾವನೆಯನ್ನು ಸೂಚಿಸುತ್ತದೆ.[೧] ಉಪನಿಷತ್ತು ರಚಿಸಿದ ಋಷಿಗಳು ಅಸೀಮಿತ, ರೂಪವಿಲ್ಲದ, ಅನಂತ, ಅವಿನಾಶಿ, ಏಕಮಾತ್ರ ಶಾಶ್ವತ ಪರಮ ಜೀವಿಯಾದ ಬ್ರಹ್ಮನ್ ಅನ್ನು ಸೂಚಿಸಲು ಆನಂದ ಶಬ್ದವನ್ನು ಬಳಸಿದ್ದಾರೆ. ಬ್ರಹ್ಮಮಯ ಅಂದರೆ ಬ್ರಹ್ಮದಿಂದ ತುಂಬಿದ್ದು ಎಂದು.

ನಾಲ್ಕು ನೈತಿಕ ಅಂತ್ಯಗಳಲ್ಲಿ ಒಂದು ಆನಂದ. ಮಾನವರು ತಮ್ಮ ಎಲ್ಲ ಪ್ರಯತ್ನಗಳನ್ನು ಆನಂದ ಪಡೆಯಲು ಗುರಿಯಿಡುತ್ತಾರೆ. ಮನಸ್ಸಿನ ಸ್ಥಿತಿ ಮತ್ತು ನಿಯಂತ್ರಣದ ಮೇಲೆ ಅವಲಂಬಿಸಿರುವ ಖಚಿತವಾಗಿ ಒಳ್ಳೆ ಯೋಚನೆಗಳು ಮತ್ತು ಒಳ್ಳೆ ಕಾರ್ಯಗಳ ಮೂಲಕ ಆನಂದವನ್ನು ಪಡೆಯಲಾಗುತ್ತದೆ. ಇದರರ್ಥ, ಒಬ್ಬರ ಸ್ವಂತ ಮನೋಧರ್ಮದ ಏಕರೂಪತೆಯನ್ನು ಆಧರಿಸಿ, ಅಥವಾ ಇತರ ಶಬ್ದಗಳಲ್ಲಿ, ಕ್ರಿಯೆಗಳ ಫಲಪಡೆಯಲು ಸಾಧನ ಭೂತವಾಗದೆ ಪ್ರತಿ ಕ್ರಿಯೆಯ ನೆರವೇರಿಕೆಯಲ್ಲಿ ಸಮಚಿತ್ತತೆಯ ಅಭ್ಯಾಸದ ಮೂಲಕ ಪರಮಾನಂದದ ಸ್ಥಿತಿಯನ್ನು ತಲುಪಬಹುದು. ಇದಕ್ಕೆ ಒಬ್ಬರ ಜೀವನದ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಮನಸ್ಸಿನ ಏಕರೂಪತೆ ಬೇಕಾಗುತ್ತದೆ. ಭಗವದ್ಗೀತೆಯು ಐದು ಕ್ರಿಯಾಪದಗಳನ್ನು ಬಳಸಿ, ಅವುಗಳೆಂದರೆ ಕರೋಷಿ (ಜೀವನೋಪಾಯವನ್ನು ಸಂಪಾದಿಸಲು, ಸಾಮಾಜಿಕ ಕರ್ತವ್ಯಗಳು ಇತ್ಯಾದಿಗಳಿಗೆ ನಡೆಸಲಾಗುವ ಸಾಮಾನ್ಯ ಚಟುವಟಿಕೆಗಳು), ಅಶ್ನಾಸಿ (ದೇಹ ಮತ್ತು ಆತ್ಮವನ್ನು ಒಟ್ಟಾಗಿಡಲು ಉದ್ದೇಶಿತವಾದ ಚಟುವಟಿಕೆಗಳು, ಉದಾ. ಆಹಾರ ಸೇವನೆ), ಜುಹೋಷಿ (ಪ್ರಾರ್ಥನೆ, ಧ್ಯಾನ ಇತ್ಯಾದಿಗಳಿಗೆ ಸಂಬಂಧಿಸಿದ ಚಟುವಟಿಕೆಗಳು), ದದಾಸಿ (ದಾನ ಇತ್ಯಾದಿಗಳಿಗೆ ಸಂಬಂಧಿಸಿದ ಚಟುವಟಿಕೆಗಳು) ಮತ್ತು ತಪಸ್ಯಸಿ (ಆತ್ಮಸಂಯಮವನ್ನು ತರುವ ಚಟುವಟಿಕೆಗಳು, ಉದಾ. ಎಲ್ಲ ಬಗೆಗಳ ದೃಢ ತಪಸ್ಸುಗಳು), ಕ್ರಿಯೆಗಳನ್ನು ಹೆಸರಿಸುತ್ತದೆ. ಈ ಕ್ರಿಯೆಗಳೊಂದಿಗೆ ಸಾಮಾನ್ಯ ಮನುಷ್ಯನು ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ, ಬಂಧಿತನಾಗುತ್ತಾನೆ, ಮತ್ತು ಅವುಗಳ ಫಲಗಳಿಗೆ ಹಾತೊರೆಯುತ್ತಾನೆ. ಸಮಚಿತ್ತತೆಯ ಅಭ್ಯಾಸವು ಈ ತಪ್ಪು ಗುರುತಿಸುವಿಕೆ, ಬಂಧನ ಮತ್ತು ಹಂಬಲವನ್ನು ತಪ್ಪಿಸುವುದನ್ನು ಒಳಗೊಳ್ಳುತ್ತದೆ. ಆನಂದದ ವಸ್ತುಗಳೊಂದಿಗೆ ಇಂದ್ರಿಯಗಳ ಸಂಪರ್ಕದಿಂದ ಒಬ್ಬ ವ್ಯಕ್ತಿಯು ಆನಂದವನ್ನು ಅನುಭವಿಸುತ್ತಾನೆ, ಮತ್ತು ಆರಾಧನೆ, ಧ್ಯಾನ, ಇತ್ಯಾದಿಗಳ ಅಭ್ಯಾಸದಿಂದಲೂ ಆನಂದ ಸಿಗುತ್ತದೆ ಮತ್ತು ಇದರಿಂದ ದುಃಖದ ಕೊನೆಯಾಗುತ್ತದೆ. ಆದರೆ ಇದು ಕೂಡ ಪರಮಾನಂದದ ಸ್ಥಿತಿಯಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. John Dudley Ball. Ananda:Where Yoga Lives. Popular Press. p. 8.
"https://kn.wikipedia.org/w/index.php?title=ಪರಮಾನಂದ&oldid=779011" ಇಂದ ಪಡೆಯಲ್ಪಟ್ಟಿದೆ