ಪದ್ಮಾ ಕೃಷ್ಣಮೂರ್ತಿ
ಪದ್ಮಾ ಕೃಷ್ಣಮೂರ್ತಿಯವರು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕ್ ಬನದಕೊಪ್ಪ ದ ತಂಬರಸಿ ಸುಬ್ಬರಾಯರು ಮತ್ತು ಲಕ್ಷ್ಮೀ ಇವರ ಮಗಳಾಗಿ ೨೬/೧೨/೧೯೫೯ರಲ್ಲಿ ಜನಿಸಿದರು. ಪ್ರಸ್ತುತ ತುಮಕೂರಿನಲ್ಲಿ ನೆಲೆಸಿರುವ ಇವರು ಅಂಚೆ ಕಚೇರಿಯಲ್ಲಿ ಉದ್ಯೋಗದಲ್ಲಿದ್ದಾರೆ.ಪತಿ ಕೃಷ್ಣಮೂರ್ತಿ ವಕೀಲರಾಗಿ ಸೇವೆ ಸಲ್ಲಿಸುತಿದ್ದಾರೆ.ಪದ್ಮಾ ಕೃಷ್ಣಮೂರ್ತಿಯವರು ಬಿ.ಕಾಂ., ಎಂ.ಎ., ಎಲ್ಎಲ್ ಬಿ. ಪದವಿಧರೆಯಾಗಿದ್ದಾರೆ. ಸಾಗರ ತಾಲ್ಲೂಕ್ ಅರೆಹದ ಗ್ರಾಮದ ವಕೀಲ ಕೃಷ್ಣಮೂರ್ತಿಯವರ ಪತ್ನಿಯಾಗಿದ್ದು ತುಮಕೂರಿನಲ್ಲಿ ನೆಲೆಸಿರುತ್ತಾರೆ. ಇವರ ಮಗಳು ಕೃಪಾ ಕೂಡ ಲೇಖಕಿಯಾಗಿದ್ದು ಬಿ. ಇ., ವಿದ್ಯಾರ್ಥಿನಿಯಾಗಿದ್ದಾಳೆ. ಪದ್ಮಾರವರು ಕನ್ನಡ ಸಾಹಿತಿಗಳಾಗಿದ್ದು ಅನೇಕ ಕೃತಿಗಳನ್ನು ರಚಿಸಿದ್ದು ಅವು ಈ ಕೆಳಗಿನಂತಿದೆ.
ರಚಿಸಿದ್ದ ಕೃತಿಗಳು
[ಬದಲಾಯಿಸಿ]- ಹೂದೋಟ' : ಹನಿಗವನ ಸಂಕಲ
- ಪುಟ್ಟ ಪುಟ್ಟ ಹೆಜ್ಜೆಗಳು : ಮಿನಿ ಕಥಾ ಸಂಕಲನ
- ಶಬ್ದ: ಕವನ ಸಂಕಲನ
- ಮಕ್ಕಳ ಮನೆ: ಮಕ್ಕಳ ಕವನಗಳು
- ಪೌಳಿ ಶಂಕರಾನಂದಪ್ಪ: ವ್ಯಕ್ತಿ ಚಿತ್ರಣ
- ಉಂಡಾಡಿ ಗುಂಡ : ಶಿಶು ಸಾಹಿತ್ಯ
- ಅಂಚೆ ಒಂದು ಇಣುಕು ನೋಟ: ತುಮಕೂರು ಅಂಚೆ ವ್ಯವಸ್ಥೆ ಮತ್ತು ಸೇವೆ
- ನೂತನ ನುಡಿಗಟ್ಟುಗಳು: (ಪದ್ಮೋಕ್ತಿ) ೨೦೧ ಆಧುನಿಕ ಗಾದೆಗಳು
- ಡಾ|| ಶ್ಯಾಮಲಾ ಜಿ. ಭಾವೆ: ಸಂಗೀತ ವಿದೂಷಿ ಜೀವನ ಚರಿತ್ರೆ
ಪ್ರಶಸ್ತಿಗಳು ಮತ್ತು ಸಂದ ಗೌರವಗಳು
[ಬದಲಾಯಿಸಿ]೧. ಹೂದೋಟ: ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾವ್ಯ ಪ್ರಶಸ್ತಿ
೨. ಮಕ್ಕಳ ಮನೆ: ಕನ್ನಡ ಸಾಹಿತ್ಯ ಪರಿಷತ್-೨೦೦೮ರ ಮಕ್ಕಳ ಸಾಹಿತ್ಯಕ್ಕೆ ಮೀಸಲಾದ ದಿ|| ಹೆಚ್ ಕರಿಯಣ್ಣ ದತ್ತಿ ಪ್ರಶಸ್ತಿ
೩. ಶಬ್ದ: ಪ್ರೊ|| ಎಚ್ಚೆಸ್ಕೆ ನೆನಪಿನ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ( ಗ್ರಾಮಾಂತರ ಬುದ್ಧಿಜೀವಿಗಳ ಬಳಗ , ಕೆ ಆರ್ ನಗರ ಟೌನ್ ಮೈಸೂರು ಜಿಲ್ಲೆ ಇವರಿಂದ)
೪. ಸಾಹಿತ್ಯ ಸರಸ್ವತಿ ಪ್ರಶಸ್ತಿ: ತುಮಕೂರಿನ ಬಿಂಬ ಪತ್ರಿಕೆ ವತಿಯಿಂದ
೫. ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಕೊರಟಗೆರೆ ತಾಲ್ಲೂಕ್ ೫೩ನೇ 'ಕನ್ನಡ ರಾಜ್ಯೋತ್ಸವ' ದಂದು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾದ ಗೌರವ
೬. ವಿದ್ವತ್ ಸನ್ಮಾನ: ಶ್ರೀ ಅಖಿಲ ಹವ್ಯಕ ಮಹಾಸಭಾ- ಬೆಂಗಳೂರು ಇವರಿಂದ ೨೦೦೯ರ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾದ ಗೌರವ
೭. ಚುಟುಕು ಕವಿ ಶ್ರೀ ಪ್ರಶಸ್ತಿ: ಚುಟುಕು ಬ್ರಹ್ಮ ದಿನಕರ ದೇಸಾಯಿ ಇವರ ಸವಿ ನೆನಪಿಗಾಗಿ ಚುಟುಕು ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಘಟಕ ಇವರಿಂದ
೮. ಕಾವ್ಯಶ್ರೀ ಪುರಸ್ಕಾರ: ಸಿರಿಗನ್ನಡ ವೇದಿಕೆ ಮಂಡ್ಯ ಇವರಿಂದ
೯. ಶ್ರೀ ಸ್ವರೂಪಾನಂದ ಟಿ . ಸೊಣ್ಣಪ್ಪ ಪ್ರಶಸ್ತಿ: ಶ್ರೀ ಭುವನೇಶ್ವರಿ ಕನ್ನಡ ಸಂಘ ಮಾಲೂರು ಕೋಲಾರ ಜಿಲ್ಲೆ ಇವರಿಂದ
೧೦. ಸಾಹಿತ್ಯ ರತ್ನ ಪ್ರಶಸ್ತಿ: ಕವಿತಾ ಕೃಷ್ಣ ಸಾಹಿತ್ಯ ಮಂದಿರ ಕ್ಯಾತ್ಸಂದ್ರ ತುಮಕೂರು ಜಿಲ್ಲೆ ಇವರಿಂದ
೧೧. ಕಾವ್ಯಶ್ರೀ ಪುರಸ್ಕಾರ: ಜೀಶಂಪ ವೇದಿಕೆ ಮತ್ತು ಕನ್ನಂಬಾಡಿ ಪ್ರತಿಕೆ,ಮಂಡ್ಯ ಇವರಿಂದ
೧೨. ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿ: ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ. </poem>