ಪಡ್ಡಾಯಿ (ತುಳು ಚಲನಚಿತ್ರ)
ಪಡ್ಡಾಯಿ ೨೦೧೮ರಲ್ಲಿ ತೆರೆಕಂಡ ಒಂದು ತುಳು ಚಲನಚಿತ್ರ. ನಿರ್ದೇಶಕ ಅಭಯಸಿಂಹರ ಚೊಚ್ಚಲ ತುಳು ಚಲನಚಿತ್ರ ಇದಾಗಿದೆ.
ಪಾತ್ರ ವರ್ಗ
[ಬದಲಾಯಿಸಿ]ಈ ಚಲನಚಿತ್ರದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿಧಿ, ಚಂದ್ರಹಾಸ ಉಳ್ಳಾಲ, ಗೋಪಿನಾಥ್ ಭಟ್, ಅವಿನಾಶ್ ರೈ, ಸದಾಶಿವ ನಿನಾಸಂ, ಶ್ರೀನಿಧಿ ಆಚಾರ್, ಪ್ರಭಾಕರ ಕಾಪಿಕಾಡ್, ವಾಣಿ ಪೆರಿಯೋಡಿ, ರವಿ ಭಟ್, ಮಲ್ಲಿಕಾ ಜ್ಯೋತಿಗುಡ್ಡೆ, ಸಂತೋಷ್ ಶೆಟ್ಟಿ ಮತ್ತಿತರು ನಟಿಸಿದ್ದಾರೆ.
ಕಥಾ ತಿರುಳು
[ಬದಲಾಯಿಸಿ]ಯಕ್ಷಗಾನ, ಭೂತಾರಾಧನೆಗೆ ಒತ್ತು ನೀಡಿ ಕಡಲ ಮಧ್ಯದಲ್ಲೂ ಕೆಲವು ದೃಶ್ಯಗಳನ್ನು ಸೆರೆಹಿಡಿದಿದೆ ಪಡ್ಡಾಯಿ ಚಿತ್ರ. ಮುಖಂಡರೊಬ್ಬರ ಮನೆಯಲ್ಲಿನ ಕೆಲಸದಾಳು ದನಿಯ, ತನ್ನ ಪತ್ನಿಯ ಮೂಲಕ ಹೇಗೆ ಬದಲಾಗುತ್ತಾನೆ ಮತ್ತು ಸಮಾಜ ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದೇ ಕಥಾ ಹಂದರ. "ಅತಿ ಆಸೆ ಗತಿ ಕೇಡು" ಎಂಬ ನೀತಿ ಇದರಲ್ಲಿದೆ.[೧] ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕದ ಸ್ಪೂರ್ತಿಯಿಂದಾಗಿ ಮಾಡಿದ ಕರಾವಳಿಯ ಮೊಗವೀರರ ಬದುಕನ್ನು ತೋರಿಸುವ ಚಿತ್ರ ಇದಾಗಿದೆ.[೨]
ಚಿತ್ರ ತಂಡ
[ಬದಲಾಯಿಸಿ]- ನಿರ್ದೇಶಕ : ಅಭಯ ಸಿಂಹ, ಮಂಗಳೂರು
- ನಿರ್ಮಾಪಕ : ನಿತ್ಯಾನಂದ ಪೈ, ಕಾರ್ಕಳ
- ಸಂಗೀತ : ಮಣಿಕಾಂತ್ ಕದ್ರಿ
- ಸಂಕಲನ : ಪ್ರಶಾಂತ್
- ಛಾಯಾಗ್ರಹಣ : ವಿಷ್ಣುಪ್ರಸಾದ್, ಪುತ್ತೂರು
- ಚಿತ್ರಕಥೆ : ಪ್ರಕಾಶ್ ಪಂಡಿತ್
- ಚಿತ್ರ ಬಿಡುಗಡೆಯಾದ ವರ್ಷ : ೨೦೧೮
- ಭಾಷೆ : ತುಳು
ಪದದ ಅರ್ಥ
[ಬದಲಾಯಿಸಿ]ತುಳುವಿನ ಪಡ್ಡಾಯಿ ಅಂದರೆ ಕನ್ನಡದ ಪಶ್ಚಿಮ ದಿಕ್ಕು ಎಂದರ್ಥ. ತುಳುನಾಡಿನ ಮೊಗವೀರರು ಕಡಲನ್ನು ಪಡ್ಡಾಯಿ ಎಂದೂ ಕರೆಯುವ ಕ್ರಮವಿದೆ.
ಪ್ರಶಸ್ತಿ
[ಬದಲಾಯಿಸಿ]೬೫ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡ್ಡಾಯಿ - ತುಳು ಚಲನಚಿತ್ರಕ್ಕೆ ದೊರಕಿದೆ.[೩] [೪]
ರಾಷ್ಟ್ರೀಯ ಪ್ರಶಸ್ತಿ ಪಡೆದ ಇತರೆ ತುಳು ಚಿತ್ರಗಳು
[ಬದಲಾಯಿಸಿ]- ಬಂಗಾರ್ ಪಟ್ಲೇರ್ (೧೯೯೩)
- ಕೋಟಿ ಚೆನ್ನಯ (೨೦೦೭)
- ಗಗ್ಗರ (೨೦೧೦)
- ಮದಿಪು (೨೦೧೭) [೫]
ಉಲ್ಲೇಖಗಳು
[ಬದಲಾಯಿಸಿ]- ↑ https://www.udayavani.com/kannada/news/nri-news/289582/paddayi-tulu-film
- ↑ https://m.dailyhunt.in/news/india/kannada/prajavani-epaper-praj/nyuyaark+sinimotsavakke+paddaayi-newsid-84183152
- ↑ https://vijaykarnataka.indiatimes.com/entertainment/gossip/paddayi-wins-before-release-says-abhaya-simha/articleshow/63857040.cms
- ↑ https://www.udayavani.com/english/news/mangaluru/286050/tulu-movie-%E2%80%98paddayi%E2%80%99-receives-national-honour[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.thehindu.com/todays-paper/tp-features/tp-fridayreview/paddayi-tulus-own-macbeth/article24226763.ece