ಪಂಚ ವಾರ್ಷಿಕ ಯೋಜನೆಗಳು
ಗೋಚರ
ಭಾರತ ಸರ್ಕಾರ ಇಲ್ಲಿಯವರೆಗೆ 12 ಪಂಚ ವಾರ್ಷಿಕ ಯೋಜನೆಗಳನ್ನು ದೇಶಕ್ಕೆ ಅರ್ಪಿಸಿರುತ್ತದೆ.
೧೯೫೧ ರಿಂದ ಆರ್ಥಿಕ ಬೆಳವಣಿಗೆಯ ಇತಿಹಾಸ:
[ಬದಲಾಯಿಸಿ]- ಮೊದಲ ಪಂಚವಾರ್ಷಿಕಯೋಜನೆಯಲ್ಲಿದ್ದ ಯೋಜನಾ ಆಯೋಗದ ಸದಸ್ಯರು
- ಮೊದಲ ಯೋಜನಾ ಆಯೋಗದ ಅಧ್ಯಕ್ಷ - ಜವಾಹರಲಾಲ್ ನೆಹರೂ
- ಗುಲ್ಜಾರಿಲಾಲ್ ನಂದಾ - ಉಪಾಧ್ಯಕ್ಷ
- ಮೊರಾರ್ಜಿ ಆರ್ ದೇಸಾಯಿ - ಸದಸ್ಯ
- ವಿ ಕೆ ಕೃಷ್ಣ ಮೆನನ್ - ಸದಸ್ಯ
- ಸಿ ಎಂ ತ್ರಿವೇದಿ ;ಸದಸ್ಯ
- ಶ್ರೀರಾಮ್ ನಾರಾಯಣ - ಸದಸ್ಯ
- T.N. ಸಿಂಗ್ - ಸದಸ್ಯ
- ಎಎನ್ ಖೋಸ್ಲಾ - ಸದಸ್ಯ
- ಪಿ.ಸಿ. ಮಹಲ್ನೋಬಿಸ್ (MAHALANOBIS)- ಸದಸ್ಯ
- ವಿಷ್ಣು ಸಹಾಯ್ - ಕಾರ್ಯದರ್ಶಿ
- ತ್ರಿಲೋಕ್ ಸಿಂಗ್ (TARLOK) ಹೆಚ್ಚುವರಿ ಕಾರ್ಯದರ್ಶಿ
ಪಂಚ ವಾರ್ಷಿಕ ಯೋಜನೆಗಳು
[ಬದಲಾಯಿಸಿ]- 1947 ರಿಂದ, ಭಾರತೀಯ ಆರ್ಥಿಕನೀತಿಯನ್ನು ಯೋಜನಾ ವಿಧಾನದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡ ಮಾಡಲಾಗಿದೆ. ಇದನ್ನು, ಐದು ವರ್ಷದ ಯೋಜನೆಗಳು ಮೂಲಕ ಕೈಗೊಳ್ಳಲಾಯಿತು; ಯೋಜನಾ ಆಯೋಗವು ಅಭಿವೃದ್ಧಿ, ಮತ್ತು ಮೇಲ್ವಿಚಾರಣೆ ಮೂಲಕ ಇದನ್ನು ಸಾಧಿಸಲಾಯಿತು.. ಯೋಜನಾ ಆಯೋಗವು ಪದನಿಮಿತ್ತ ಅಧ್ಯಕ್ಷರಾಗಿ ಪ್ರಧಾನಿಯನ್ನೂ, ಕ್ಯಾಬಿನೆಟ್ ಸಚಿವರ ಸ್ಥಾನ ಕ್ಕೆ ಸರಿಸಮವಾದ ನಾಮನಿರ್ದೇಶನ ಮಾಡಲ್ಪಟ್ಟ ಉಪಾಧ್ಯಕ್ಷ,ರನ್ನೂ ಹೊಂದಿದೆ. ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಕಳೆದ ಆಯೋಗದ ಉಪಾಧ್ಯಕ್ಷರಾಗಿದ್ದರು (2014 ಮೇ 26 ರಂದು ರಾಜೀನಾಮೆ ನೀಡಿದರು.). ಹನ್ನೊಂದನೇ ಯೋಜನೆ ಮಾರ್ಚ್ 2012 ರಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸಿದ್ದು ಹನ್ನೆರಡನೇ ಯೋಜನೆ ನಡೆಯುತ್ತಿದೆ. [1] ನಾಲ್ಕನೇ ಯೋಜನೆಗೆ ಮೊದಲು, ರಾಜ್ಯದ ಸಂಪನ್ಮೂಲಗಳ ಹಂಚಿಕೆ ತಾಂತ್ರಿಕತೆಗಿಂತ ಸಾಂಪ್ರದಾಯಿಕ ನೀಲನಕ್ಷೆಯ (ನೀತಿ) ಮಾದರಿಗಳನ್ನು, ಆಧರಿಸಿತ್ತು. ಇದರ ಬದಲಿಗೆ 1969 ರಿಂದ ಒಂದು ಪಾರದರ್ಶಕ ಮತ್ತು ಸೂತ್ರಬದ್ಧ ಪರಿಷ್ಕೃತ ವಾದ ಗಾಡ್ಗೀಳ್ ಸೂತ್ರದಲ್ಲಿ ರಾಜ್ಯದ ಯೋಜನೆಗಳಿಗಾಗಿ, ಕೇಂದ್ರದ ನೆರವು ಮಂಜೂರಾತಿಯನ್ನು ನಿರ್ಧರಿಸಲಾಯಿತು. ಆ ನಂತರ ಇದೇ ಕ್ರಮ ಬಳಕೆಯಾಗುತ್ತಿವೆ. [2]
# | ಯೋಜನೆ | ವರ್ಷ | ಅಂಗೀಕಾರ | ಛೇರಮನ್ |
---|---|---|---|---|
೧ | ಒಂದನೇಯ ಪಂಚ ವಾರ್ಷಿಕ ಯೋಜನೆ | ೧೯೫೧-೧೯೫೬ | ೮ನೇ ಡಿಸೆಂಬರ , ೧೯೫೧ | ನೆಹರು |
೨ | ಎರಡನೇಯ ಪಂಚ ವಾರ್ಷಿಕ ಯೋಜನೆ | ೧೯೫೬-೧೯೬೧ | 2ನೇ ಮೇ, ೧೯೫೬ | ನೆಹರು |
೩ | ಮೂರನೇಯ ಪಂಚ ವಾರ್ಷಿಕ ಯೋಜನೆ | ೧೯೬೧-೧೯೬೬ | ೧ನೇ ಜೂನ್, ೧೯೬೧ | ನೆಹರು |
೪ | ನಾಲ್ಕನೇಯ ಪಂಚ ವಾರ್ಷಿಕ ಯೋಜನೆ | ೧೯೬೯-೧೯೭೪ | ೧೮ನೇ ಜುಲೈ, ೧೯೭೦ | ಇಂದಿರಾ ಗಾಂದಿ |
೫ | ಐದನೇಯ ಪಂಚ ವಾರ್ಷಿಕ ಯೋಜನೆ | ೧೯೭೪-೧೯೭೯ | ೨೪ನೇ ಸಪ್ಟಂಬರ, ೧೯೭೬ | ಇಂದಿರಾ ಗಾಂದಿ |
೬ | ಆರನೇಯ ಪಂಚ ವಾರ್ಷಿಕ ಯೋಜನೆ | ೧೯೮೦-೧೯೮೫ | ೧೮ನೇ ಜನೇವರಿ , ೧೯೮೧ | ಇಂದಿರಾ ಗಾಂದಿ |
೭ | ಏಳನೇಯ ಪಂಚ ವಾರ್ಷಿಕ ಯೋಜನೆ | ೧೯೮೫-೧೯೮೯ | ೨೫ನೇ ನವ್ಹಂಬರ, ೧೯೮೫ | ರಾಜೀವ ಗಾಂದಿ |
೮ | ಎಂಟನೇಯ ಪಂಚ ವಾರ್ಷಿಕ ಯೋಜನೆ | ೧೯೯೨-೧೯೯೭ | ೯ನೇ ಜುಲೈ, ೧೯೯೨ | ಪಿ.ವಿ. ನರಸಿಂಹರಾವ್ |
೯ | ಒಂಬತ್ತನೇಯ ಪಂಚ ವಾರ್ಷಿಕ ಯೋಜನೆ | ೧೯೯೭-೨೦೦೨ | ೧೯೯೭ | ವಾಜಪೇಯಿ |
೧೦ | ಹತ್ತನೇಯ ಪಂಚ ವಾರ್ಷಿಕ ಯೋಜನೆ | ೨೦೦೨-೨೦೦೭ | ೨೧ನೇ ಡಿಸೆಂಬರ , ೨೦೦೨ | ವಾಜಪೇಯಿ |
೧೧ | ಹನ್ನೋಂದನೇಯ ಪಂಚ ವಾರ್ಷಿಕ ಯೋಜನೆ | ೨೦೦೭-೨೦೧೨ | ೨೫ನೇ ಜೂನ್ , ೨೦೦೮ | ಡಾ. ಮನಮೋಹನ ಸಿಂಗ |
ಒಂದನೇಯ ಪಂಚ ವಾರ್ಷಿಕ ಯೋಜನೆ (೧೯೫೧-೧೯೫೬)
[ಬದಲಾಯಿಸಿ]- ಮೊದಲ ಯೋಜನೆ (1951-1956
- ಭಾರತದ ಮೊದಲ ಪ್ರಧಾನಮಂತ್ರಿ, ಪಂಡಿತ್ ಜವಾಹರಲಾಲ್ ನೆಹರೂ ಅವರು ಭಾರತದ ಸಂಸತ್ತಿನಲ್ಲಿ ಮೊದಲ ಐದು ವರ್ಷದ ಯೋಜನೆಯ ನ್ನು ಮಂಡಿಸಿದರು. ಅದನ್ನು ಪರಿಚಯಿಸುತ್ತಾ , ಈ ಯೋಜನೆಗೆ ತುರ್ತು ಗಮನ ಕೊಡಬಾಕಾದ ಅಗತ್ಯವಿದೆ ಎಂದಿದ್ದರು.. ಮೊದಲ ಐದು ವರ್ಷಗಳ ಯೋಜನೆ ಮುಖ್ಯವಾಗಿ ಪ್ರಾಥಮಿಕ ವಲಯದ ಅಭಿವೃದ್ಧಿಗೆ ಗಮನ ಕೊಡುವುದಾಗಿತ್ತು . ಅದನ್ನು 1951 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಪಂಚವಾರ್ಷಿಕ ಯೋಜನೆ ‘ಹರೋಡ್ ಡೋಮರ್ (Harrod–Domar)) ಮಾದರಿಯನ್ನು ಆಧರಿಸಿದೆ.
- ರೂ.2069 ಕೋಟಿಯ ಒಟ್ಟು ಯೋಜನೆ: ಬಜೆಟ್ (ನಂತರ 2378 ಕೋಟಿ):ಇದನ್ನು ಏಳು ವಿಶಾಲ ವಿಭಾಗಗಳಿಗೆ ಹಂಚಲಾಯಿತು:
- ಗುರಿ - ಸಮಾಜವಾದಿ ಮಾದರಿಯ ಸಮಾಜದ ನಿರ್ಮಾಣ.
- 1. ನೀರಾವರಿ ಮತ್ತು ಶಕ್ತಿ (27.2%),
- 2.ಕೃಷಿ ಮತ್ತು ಸಮುದಾಯ ಅಭಿವೃದ್ಧಿ (17.4%),
- 3.ಸಾರಿಗೆ ಮತ್ತು ಸಂಪರ್ಕ (24%),
- 4.ಉದ್ಯಮ (8.4%) ಮತ್ತು
- 5.ಇತರ ಕ್ಷೇತ್ರಗಳಲ್ಲಿ ಸೇವೆಗಳು (2.5%) ಮತ್ತು),
- 6. ಸಾಮಾಜಿಕ ಸೇವೆಗಳು (16.64%),
- 7.ಭೂಮಿ ಪುನರ್ವಸತಿ (4.1%),.
- ಗುರಿ - ಸಮಾಜವಾದಿ ಮಾದರಿಯ ಸಮಾಜದ ನಿರ್ಮಾಣ.
- ಈ ಹಂತದ ಪ್ರಮುಖ ಲಕ್ಷಣವೆಂದರೆ ಎಲ್ಲಾ ಆರ್ಥಿಕ ಕ್ಷೇತ್ರಗಳಲ್ಲಿ ರಾಜ್ಯದ ಸಕ್ರಿಯ ಪಾತ್ರ.ಕ್ಕೆ ಪ್ರಾಮುಖ್ಯತೆ ನೀಡುವುದು.. ಸ್ವಾತಂತ್ರ್ಯದ ನಂತರ, ಭಾರತದಲ್ಲಿ ಬಂಡವಾಳ ಸಾಮರ್ಥ್ಯ ಕಡಿಮೆ ಇದ್ದು ,ಅದರ ಕೊರತೆ ಎದುರಿಸುತ್ತಿರುವ ಕಾರಣ - ಮತ್ತು ಉಳಿತಾಯಕ್ಕೆ ಇರುವ ಟಲ್ಪ ಸಾಧ್ಯತೆಯ ಕಾರಣ ಇಂತಹ ವ್ಯವಸ್ಥೆ ಆ ಸಮಯದಲ್ಲಿ ಸಮರ್ಥನೀಯವೇ ಅಗಿತ್ತು.
- ಯೋಜನೆಯ ಗುರಿ - ಬೆಳವಣಿಗೆಯ ದರ 2.1% - ವಾರ್ಷಿಕ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಆಗಿತ್ತು; ಸಾಧಿಸಿದ ಬೆಳವಣಿಗೆ ದರ 3..6% ನಿವ್ವಳ ದೇಶೀಯ ಉತ್ಪನ್ನ 15% ಏರಿಕೆ ಆಗಿತ್ತು ಉತ್ತಮ . ಮಳೆ ಮತ್ತು ಹೆಚ್ಚು ಬೆಳೆ ಇಳುವರಿ, ವಿನಿಮಯ ಮೀಸಲು ಮತ್ತು ತಲಾ ಆದಾಯ 8% ಹೆಚ್ಚಿಸಿ ಜನಸಂಖ್ಯೆ ಬೆಳವಣಿಗೆಯ ಉತ್ತೇಜಿಸಲು ಕಾರಣವಾಯಿತು, ರಾಷ್ಟ್ರೀಯ ಆದಾಯದ ಕಾರಣ , ತಲಾ ಆದಾಯ ಕೂಡಾ ಹೆಚ್ಚಾಗಿದೆ.
- ಭಾಕ್ರಾ ಅಣೆಕಟ್ಟು ಮತ್ತು ಹಿರಾಕುಡ್ ಅಣೆಕಟ್ಟು ಸೇರಿದಂತೆ ಅನೇಕ ನೀರಾವರಿ ಯೋಜನೆಗಳು ಈ ಅವಧಿಯಲ್ಲಿ ಆರಂಭಿಸಲ್ಪಟ್ಟಿತು. ವಿಶ್ವ ಆರೋಗ್ಯ ಸಂಸ್ಥೆ (Wಊಔ), ಭಾರತ ಸರ್ಕಾರದೊಂದಿಗೆ, ಸಹಕಾರವು , ಶಿಶು ಮರಣ, ಮಕ್ಕಳ ಆರೋಗ್ಯಕ್ಕೆ ಗಮನಗಿವು, ಪರೋಕ್ಷವಾಗಿ ಜನಸಂಖ್ಯಾ ಬೆಳವಣಿಗೆಯ ಹೆಚ್ಚಳಕ್ಕೆ ಕಾರಣವಾಯಿತು.
- 1956 ರ ಯೋಜನೆ ಅವಧಿಯ ಅಂತ್ಯದಲ್ಲಿ, ತಂತ್ರಜ್ಞಾನದ ಐದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ (ಐಐಟಿ) -ಪ್ರಮುಖ ತಾಂತ್ರಿಕ ಸಂಸ್ಥೆಗಳು ಪ್ರಾರಂಭವಾಯಿತು. ಉನ್ನತ ಶಿಕ್ಷಣ ಬಲಪಡಿಸಲು ಮತ್ತು ಹಣ ಆರೈಕೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದಲ್ಲಿ ಸ್ಥಾಪಿಸಲಾಯಿತು. ಐದು ಉಕ್ಕಿನ ಸ್ಥಾವರಗಳನ್ನು ಆರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಂದಳಿಗೆ ಸಹಿ ಮಾಡಲಾಯಿತು.
- • ಛತ್ತೀಸ್ ಗಡದ -ಬಿಲಾಯ್ ನಲ್ಲಿ - ರಪ್ಯಾದ ಸಹಯೋಗದೊಂದಿಗೆ.
- •ಓಡಿಸ್ಸಾದ - ರೂರಕ್ಕೆಲಾ - ಪ. ಜರ್ಮನಿಯ ಸಹಯೋಗದೊಂದಿಗೆ.
- •ಪಶ್ಚಿಮ ಬಂಗಾಳದ - ದುರ್ಗಾಪುರ - ಇಂಗ್ಲೆಂಡ್ ನ ಸಹಯೋಗದೊಂದಿಗೆ.
- ಚಿತ್ತರಂಜನ್ ನಲ್ಲಿ - ಲೋಕೋಮೊಟಿವ್ ಪ್ಯಾಕ್ಟರಿ ಪೆಂಬೂರಿನಲ್ಲಿ ಕೋಚ್ ಪ್ಯಾಕ್ಟರಿ ಆರಂಭ.
- ಎರಡನೇ ಪಂಚವಾರ್ಷಿಕ ಮಧ್ಯದಲ್ಲಿ ಅಸ್ತಿತ್ವಕ್ಕೆ ಬಂದವು . ಸರ್ಕಾರದ ಈ ಯೋಜನೆಯು ಒಟ್ಟಿನಲ್ಲಿ ಭಾಗಶಃ ಯಶಸ್ವಿ ಆಗಿತ್ತು.(ಇಂಗ್ಲಿಷ್ ವಿಕಿ)
ಎರಡನೇಯ ಪಂಚ ವಾರ್ಷಿಕ ಯೋಜನೆ (೧೯೫೬-೧೯೬೧)
[ಬದಲಾಯಿಸಿ]- ಎರಡನೇ ಯೋಜನೆ (1956-1961)
- ಎರಡನೇ ಯೋಜನೆ, ವಿಶೇಷವಾಗಿ ಸಾರ್ವಜನಿಕ ವಲಯದ ಅಭಿವೃದ್ಧಿಯಲ್ಲಿ. ಯೋಜನೆಯನ್ನು ಮಹಲ್ ನೋಬಿಸ್ ಮಾದರಿ ಯನ್ನು ಅನುಸರಿಸಲಾಯಿತು. , ಯೋಜನೆ ದೀರ್ಘ-ಕಾಲದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸಲುವಾಗಿ ಉತ್ಪಾದಕ ವಲಯಗಳ ನಡುವಿನ ಹೂಡಿಕೆಯ ಅತ್ಯುತ್ತಮ ಹಂಚಿಕೆ ಮಾಡಲು ನಿರ್ಧರಿಸಲು ಪ್ರಯತ್ನಿಸಿತು. 1953 ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರಜ್ಞ ಪ್ರಶಾಂತ್ ಚಂದ್ರ ಅವರ s ಅಭಿವೃದ್ಧಿ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಅನುಸರಿಸಿದೆ . . ಇದು ಕಲಾತ್ಮಕ ಸಂಶೋಧನೆ ಕಾರ್ಯಾಚರಣಾ ವಿಧಾನ ಮತ್ತು ಹೊಸ ತಂತ್ರಗಳನ್ನು ಉತ್ತಮಗೊಳಿಸುವಿಕೆ,; ಜೊತೆಗೆ ಭಾರತೀಯ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿವೃದ್ಧಿಪಡಿಸಿದ ಹೊಸ ಬಗೆಯ ಅಂಕಿಅಂಶಗಳ ಅನ್ವಯ; ಬಳಸಲಾಗುತ್ತದೆ. ಯೋಜನೆಯು ಒಂದು ಬಗೆಯ ಮುಚ್ಚಿದ ಆರ್ಥಿಕ ನೀತಿಯನ್ನು ಅನುಸರಿಸಿದೆ. ಇದರಲ್ಲಿ ದೇಶದ ಮುಖ್ಯ ವ್ಯಾಪಾರ ಚಟುವಟಿಕೆಯು ಬಂಡವಾಳ ಉತ್ಪಾದಕ (ಪ್ರಚಲಿತ-ನವೀನ) ವಸ್ತು /ಸರಕುಗಳ ಆಮದು ಮಾಡುವ ಉದ್ದೇಶ ದಲ್ಲಿ ಕೇಂದ್ರಿಕೃತವಾಗಿದೆ ಎಂದು ಭಾವಿಸಲಾಗಿದೆ. [4] [5]
- ಭಿಲಾಯಿ, ದುರ್ಗಾಪುರ, ಮತ್ತು ರೂರ್ಕೆಲಾ ಜಲವಿದ್ಯುತ್ ಯೋಜನೆಗಳು ಮತ್ತು ಐದು ಉಕ್ಕು ಸ್ಥಾವರಗಳ ಸ್ಥಾಪಿಸಲಾಯಿತು. ಕಲ್ಲಿದ್ದಲು ಉತ್ಪಾದನೆ ಹೆಚ್ಚಾಯಿತು. ಹೆಚ್ಚು ರೈಲ್ವೆ ಮಾರ್ಗಗಳನ್ನು ಮಾಡಿ ಈಶಾನ್ಯ ರಾಜ್ಯಗಳನ್ನು ರೈಲ್ವೆ ಸಂಪರ್ಕಕ್ಕೆ ಸೇರಿಸಲಾಯಿತು.
- ಒಂದು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1957 ರಲ್ಲಿ ಪ್ರತಿಭಾ ಶೋಧ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಅಣುಶಕ್ತಿಯಲ್ಲಿ ಕೆಲಸಕ್ಕೆ ತರಬೇತಿಗಾಗಿ ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳು ಹುಡುಕಲು ಆರಂಭಿಸಿದ್ದರು.
- ಭಾರತದಲ್ಲಿ ಎರಡನೇ ಪಂಚವಾರ್ಷಿಕ ಅಡಿಯಲ್ಲಿ ಮಂಜೂರು ಒಟ್ಟು ಪ್ರಮಾಣವನ್ನು ರೂ .48 ಬಿಲಿಯನ್. ಈ ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳ ನಡುವೆ ಹಂಚಲಾಯಿತು:
- 1.ವಿದ್ಯುತ್ ಮತ್ತು ನೀರಾವರಿ,
- 2.ಸಾಮಾಜಿಕ ಸೇವೆಗಳು,
- 3.ಸಂವಹನಗಳು ಮತ್ತು
- 4.ಸಾರಿಗೆ,
- 5.ಇತರೆ . 5. kaigaarike(.Industries)
- ಗುರಿ ಬೆಳವಣಿಗೆಯ ದರ 4.5% ಮತ್ತು ನಿಜವಾದ ಬೆಳವಣಿಗೆ ದರ 4.27% ಆಗಿತ್ತು. [6] (1956 ಕೈಗಾರಿಕಾ ನೀತಿ) ಇಂಗ್ಲಿಷ್`ವಿಕಿ)
ಮೂರನೇ ಪಂಚ ವಾರ್ಷಿಕ ಯೋಜನೆ (೧೯೬೧-೧೯೬೬)
[ಬದಲಾಯಿಸಿ]- ಮೂರನೇ ಯೋಜನೆ (1961-1966
- ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಮತ್ತು ಗೋಧಿ ಉತ್ಪಾದನೆಯಲ್ಲಿ ಸುಧಾರಣೆ ಒತ್ತು ಕೊಡಲಾಯಿತು , ಆದರೆ 1962 ರ ಚೀನಾ-ಭಾರತ ಅಲ್ಪಕಾಲದ ಯುದ್ಧದಲ್ಲಿ ಆರ್ಥಿಕತೆಯಲ್ಲಿ ಮೇಲ್ನೋಟಕ್ಕೇ ದುರ್ಬಲತೆ ಕಂಡಿತು ಮತ್ತು ಯೋಜನೆ ರಕ್ಷಣಾ ಉದ್ಯಮ ಮತ್ತು ಭಾರತೀಯ ಸೇನೆಯ ಕಡೆಗೆ ಗಮನವನ್ನು ಬದಲಾಯಿಸಿತು. 1965-1966 ರಲ್ಲಿ, ಭಾರತವು ಪಾಕಿಸ್ತಾನದೊಂದಿಗೆ ಒಂದು ಯುದ್ಧ ಮಾಡಬೇಕಾಯಿತು. ಆ ಯುದ್ಧ ಹಣದುಬ್ಬರಕ್ಕೆ ಕಾರಣವಾಯಿತು 1965 ರಲ್ಲಿ ತೀವ್ರ ಬರ ಕೂಡ ಉಂಟಾಯಿತು;
- ಮತ್ತು ಯೋಜನೆಯ ಆದ್ಯತೆಯನ್ನು ಬೆಲೆ ಸ್ಥಿರೀಕರಣಕ್ಕೆ ಬದಲಾಯಿಸಲಾಯಿತು.
- ಅಣೆಕಟ್ಟಿನ ನಿರ್ಮಾಣಗಳನ್ನು ಮುಂದುವರೆಸಿದರು.
- ಅನೇಕ ಸಿಮೆಂಟ್ ಮತ್ತು ಗೊಬ್ಬರ ಕಾರ್ಕಾನೆಗಳನ್ನು ನಿರ್ಮಿಸಲಾಯಿತು.
- ಪಂಜಾಬ್ ಮಲ್ಲಿ ಗೋಧಿಯ ಬೆಳೆ ಸಮೃದ್ಧವಾಗಿ ಬೆಳೆಯಲು ಪ್ರಾರಂಭಿಸಿತು.
- ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗಿವೆ.
- ತಳ ಮಟ್ಟದ ಪ್ರಜಾಪ್ರಭುತ್ವ ತರವ ಪ್ರಯತ್ನದಲ್ಲಿ ಪಂಚಾಯತ್ ಚುನಾವಣೆಗಳು ಪ್ರಾರಂಭವಾದವು ಮತ್ತು ರಾಜ್ಯಗಳಿಗೆ ಅಭಿವೃದ್ಧಿ ಜವಾಬ್ದಾರಿಗಳನ್ನು ನೀಡಲಾಯಿತು.
- ರಾಜ್ಯ ವಿದ್ಯುತ್ ಮಂಡಳಿಗಳ ಸ್ಥಾಪಿಸಲ್ಪಟ್ಟವು ಮತ್ತು ರಾಜ್ಯದ ಪ್ರೌಢ ಶಿಕ್ಷಣ ಮಂಡಳಿಗಳು ರೂಪುಗೊಂಡವು.
- ರಾಜ್ಯಗಳಿಗೆ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಜವಾಬ್ದಾರಿ ನೀಡಲಾಯಿತು.
- ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರಂಭಗೊಂಡು ಸ್ಥಳೀಯ ರಸ್ತೆ ನಿರ್ಮಾಣ ರಾಜ್ಯದ ಒಂದು ಜವಾಬ್ದಾರಿಯಾಯಿತು.
-
- ಗುರಿ
- ಬೆಳವಣಿಗೆಯ ದರ 5.6%, ಆದರೆ ನಿಜವಾದ ಬೆಳವಣಿಗೆ ದರ 2.4% ಆಗಿತ್ತು. [6]
- ಮೂರನೇ ಯೋಜನೆಯ ಶೋಚನೀಯ ವೈಫಲ್ಯದಿಂದಾಗಿ; ಸರ್ಕಾರ (1966-67, 1967-68, ಮತ್ತು 1968-69 ರಿಂದ) "ಯೋಜನೆಯನ್ನು ರಜಾ" ಕಾಲವೆಂದು ಘೋಷಿಸಲು ವತ್ತಡ ಉಂಟಾಯಿತು. ಈ ಮಧ್ಯಂತರದ ಅವಧಿಯಲ್ಲಿ ಮೂರು ವಾರ್ಷಿಕ ಯೋಜನೆಗಳನ್ನು ಗುರುತಿಸಲಾಗಿದೆ. 1966-67 ಅವಧಿಯಲ್ಲಿ ಮತ್ತೆ ಬರಗಾಲದ ಸಮಸ್ಯೆ ಎದುರಾಯಿತು. . ಸಮಾನ ಆದ್ಯತೆಯನ್ನು ಕೃಷಿ,ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಮತ್ತು ಕೈಗಾರಿಕಾ ವಲಯಕ್ಕೆ ನೀಡಲಾಯಿತು. ಯೋಜನೆ ರಜಾಕ್ಕೆ ಮುಖ್ಯ ಕಾರಣ ಯುದ್ಧ, ಸಂಪನ್ಮೂಲಗಳ ಕೊರತೆ, ಮತ್ತು ಹಣದುಬ್ಬರ ಹೆಚ್ಚಳ ಎಂದು ಭಾವಿಸಲಾಗಿದೆ. (ಇಂಗ್ಲಿಷ್ ವಿಕಿ)
ನಾಲ್ಕನೇಯ ಪಂಚ ವಾರ್ಷಿಕ ಯೋಜನೆ (೧೯೬೯-೧೯೭೪)
[ಬದಲಾಯಿಸಿ]- ನಾಲ್ಕನೇ ಯೋಜನೆ (1969-1974)
- ಈ ಸಮಯದಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿ.
- ಇಂದಿರಾ ಗಾಂಧಿಯವರು ಸರ್ಕಾರದ 14 ಪ್ರಮುಖ ಭಾರತೀಯ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು, ಮತ್ತು
- ಭಾರತದಲ್ಲಿ ಹಸಿರು ಕ್ರಾಂತಿ ಯ ಯೋಜನೆಯಿಂದ ಕೃಷಿಯ ಉತ್ತೇಜನ ಮುಂದುವರಿಯಿತು.
- ಜೊತೆಗೆ, 1971 ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ ಸಮರದ (ಇಂದಿನ ಬಾಂಗ್ಲಾದೇಶ) ಪರಿಸ್ಥಿತಿ , ಭಾರತದ ಕೈಗಾರಿಕಾ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ತೆಗೆದುಕೊಂಡಿತು.
- ಭಾರತ ಭಾಗಶಃ ಬಂಗಾಳ ಕೊಲ್ಲಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನ ಏಳನೇ ತುಕಡಿಯ ನಿಯೋಜನೆಗೆ ಪ್ರತಿಕ್ರಿಯೆಯಾಗಿ, 1974 ರಲ್ಲಿ “ನಗುತ್ತಿರುವ ಬುದ್ಧ”, > ಭೂಗತ ಅಣು ಪರೀಕ್ಷೆ ನಡೆಸಲಾಯಿತು.
- ಯುನೈಟೆಡ್ ಸ್ಟೇಟ್ಸ್ ತನ್ನ ಪಡೆಯನ್ನು ಪಶ್ಚಿಮ ಪಾಕಿಸ್ತಾನದ ವಿರುದ್ಧ ದಾಳಿ ಮತ್ತು ಯುದ್ಧ ವಿಸ್ತರಿಸುವುದನ್ನು ತಡೆಯಲು ಭಾರತಕ್ಕೆ ಎಚ್ಚರಿಕೆ ನೀಡಲು ನಿಯೋಜಿಸಲಾಗಿತ್ತು ಎಂದು ಭಾವಿಸಲಾಗಿತ್ತು.
- ಗುರಿ ಬೆಳವಣಿಗೆಯ ದರ 5.6%, ಆದರೆ ನಿಜವಾದ ಬೆಳವಣಿಗೆ ದರ 3.3% ಆಗಿತ್ತು. [6]
ಐದನೇ ಪಂಚ ವಾರ್ಷಿಕ ಯೋಜನೆ (೧೯೭೪-೧೯೭೯)
[ಬದಲಾಯಿಸಿ]- ಐದನೇ ಯೋಜನೆ (1974-1979)
-
- ನಾಲ್ಕನೇ ಪಂಚವಾರ್ಷಿಕ ಯೋಜನೆ ಮುಗಿಯುವ ಹೊತ್ತಿಗೆ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿತ್ತು ಮತ್ತು ಕೈಗಾರಿಕೆ ಉತ್ಪಾದನೆಯಲ್ಲಿ ಯೂ ಮೂಲಭೂತ ಸೌಕರ್ಯ ಹೊಂದುವಲ್ಲಿ ಉತ್ತಮ ಪ್ರಗತಿ ಸಾಧಿಸಿತ್ತು.
- ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಉದ್ಯೋಗ ಸೃಷ್ಟಿ , ಬಡತನ ನಿವಾರಣೆ (ಗರೀಬಿ ಹಟಾವೊ) ಮತ್ತು ಎಲ್ಲರಿಗೂ ನ್ಯಾಯ ದೊರಕಿಸುವುದರ ಮೇಲೆ ಒತ್ತಡ ಹಾಕಿತು. ಯೋಜನೆಯು ಕೃಷಿ ಉತ್ಪಾದನೆ ಹಾಗೂ ರಕ್ಷಣಾ ಸ್ವಾಲಂಬನೆಯ ಕಡೆಗೂ ವಿಶೇಷ ಗಮನ ಕೊಟ್ಟಿತು.
- 1975 ರಲ್ಲಿ ವಿದ್ಯುತ್ ಸರಬರಾಜು ಆಕ್ಟ್ ನ್ನು ತಿದ್ದುಪಡಿ ಮಾಡಿತ್ತು. ಇದರಿಂದ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ವ್ಯವಸ್ಥೆ ಪ್ರವೇಶಿಸಲು ಕೇಂದ್ರ ಸರ್ಕಾರಕ್ಕೆ ಅನುಕೂಲವಾಯಿತು.
- 1978 ರಲ್ಲಿ ಹೊಸದಾಗಿ ಆಯ್ಕೆಯಾದ ಮೊರಾರ್ಜಿ ದೇಸಾಯಿ ಸರ್ಕಾರ ಈ ಯೋಜನೆಯನ್ನು ತಿರಸ್ಕರಿಸಿತು. [7]
- ಭಾರತೀಯ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆಯನ್ನು ತರಲಾಯಿತು. ಮತ್ತು ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅನೇಕ ರಸ್ತೆಗಳನ್ನು ಅಗಲ ಮಾಡಲಾಯಿತು. ಪ್ರವಾಸೋದ್ಯಮವನ್ನು ಸಹ ವಿಸ್ತರಿಸಲಾಯಿತು. ಇದು 1974 ರಿಂದ 1979 ರ ತನಕ ನಡೆಯಿತು.
- ಗುರಿ ಬೆಳವಣಿಗೆಯ ದರ 4.4% ಮತ್ತು ನಿಜವಾದ ಬೆಳವಣಿಗೆ ದರ 5.0% ಆಗಿತ್ತು. [6]
- (ವಿಸ್ತರಿಸಿ)
ಪರಿವರ್ತನ ಯೋಜನೆ
[ಬದಲಾಯಿಸಿ]- (1978-1980)
- 1978ರಲ್ಲಿ ಬಂದ ಜನತಾ ಪಕ್ಷದ ಸರ್ಕಾರವು ಐದನೇ ಪಂಚವಾರ್ಷಿಕ ಯೋಜನೆಯನ್ನು ತಿರಸ್ಕರಿಸಿತು, ಮತ್ತು ಹೊಸ ಆರನೇ ಪಂಚವಾರ್ಷಿಕ ಯೋಜನೆಯನ್ನು (1978-1983) ಜಾರಿಮಾಡಿತು. . ಈ ಯೋಜನೆಯನ್ನು ಮತ್ತೆ 1980 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರ ಅಧಕಾರಕ್ಕೆ ಬಂದ ನಂತರ ನಿರಾಕರಿಸಿತು, ಮತ್ತು ಹೊಸ ಆರನೇ ಯೋಜನೆಯಲ್ಲಿ ಪರಿವರ್ತನ (ರೋಲಿಂಗ್) ಯೋಜನೆ ಯನ್ನು ಪ್ರತಿಪಾದಿಸಿದರು . ಈ ಯೋಜನೆಗಳು ಮೂರು ರೀತಿಯ ಕ್ರಮವನ್ನು ಒಳಗೊಂಡಿದೆ.
- ಮೊದಲ ಯೋಜನೆ ವಾರ್ಷಿಕ ಬಜೆಟ್ ಒಳಗೊಂಡಿದೆ ಮತ್ತು
- ಎರಡನೇ ಯೋಜನೆ 3, 4 ಅಥವಾ 5 ವರ್ಷಗಳ ಕಾಲ ಜಾರಿಯಲ್ಲಿ ಇರಬಹುದು. ಇದು ಕೆಲವು ವರ್ಷಗಳ ಒಂದು ನಿಶ್ಚಿತ ಸಂಖ್ಯೆಯ ಯೋಜನೆ .ಇದು ಭಾರತೀಯ ಆರ್ಥಿಕ ವರ್ಷದಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಯಿಸುವ ಅವಕಾಶ ಹೊಂದಿರುವುದು.
- ಮೂರನೇ ಯೋಜನೆ 10, 15 ಅಥವಾ 20 ವರ್ಷಗಳ ಕಾಲ ಅಂದರೆ ದೀರ್ಘ ಅವಧಿಗೆ ಯೋಜಿಸಿರುವುದು; ಇದು ದೀರ್ಘ ದೃಷ್ಟಿಕೋನ ಹೊಂದಿದ ಯೋಜನೆ. ಆದ್ದರಿಂದ ರೋಲಿಂಗ್ ಯೋಜನೆಗಳಲ್ಲಿ ಶುರುವಾದ ಮತ್ತು ಯೋಜನೆಯ ಮುಕ್ತಾಯ ದಿನಾಂಕಗಳಲ್ಲಿ ಯಾವುದೇ ಸ್ಥಿರೀಕರಣ ಇಲ್ಲ.
- ರೋಲಿಂಗ್ ಯೋಜನೆಗಳ ಮುಖ್ಯ ಅನುಕೂಲವೇನೆಂದರೆ ಸುಲಭವಾಗಿ ಅಗತ್ಯಕ್ಕೆ ತಕ್ಕಂತೆ ಪ್ರತಿ ವರ್ಷ ತಿದ್ದುಪಾಟು ಮಾಡಿ ಗುರಿಗಳನ್ನು ನಿಗದಿ ಮಾಡಬಹುದು. ಈ ಪಂಚವಾರ್ಷಿಕ ಯೋಜನೆಗಳಲ್ಲಿ ಗುರಿಯ ಬಿಗಿತವನ್ನು ಬದಲಾಯಿಸಲ ಸಾಧ್ಯ. ಎಂಬುದು, ಯೋಜನೆಗಳು ದೇಶದ ಆರ್ಥಿಕ ಸ್ಥಿತಿ ಬದಲಾಗುತ್ತಿರುವ ನಿಯಮಗಳಂತೆ, ಬದಲಾವಣೆ ಹೊಂದುವುದು . ಈ ಯೋಜನೆಯ ಪ್ರಮುಖ ಅನುಕೂಲವೆಂದರೆ ಗುರಿಗಳನ್ನು ಪ್ರತಿ ವರ್ಷ ಪರಿಷ್ಕೃತ ಮಾಡಬಹುದು. ಐದು ವರ್ಷಗಳ ಅವಧಿಗಾಗಿ ಬರೆದಿದ್ದು ಅವುಗಳನ್ನು ಸಾಧಿಸಲು ಬಹಳ ಕಷ್ಟವಾಗುತ್ತದೆ ಎಂಬ ವಾದವಿದೆ. ಆದರೆ ಇದು ಒಂದು ಸಂಕೀರ್ಣ ಯೋಜನೆಯಾಗಿ ಹೊರಹೊಮ್ಮಿತು. ಆದ್ದರಿಂದ, ಆಗಿಂದಾಗ್ಗೆ ಪರಿಷ್ಕರಣೆಗೆ ಅವುಗಳನ್ನು ಒಳಪಡಿಸುವುದರಿಂದ ಸಮತೋಲ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅವಶ್ಯಕವಾದ ಆರ್ಥಿಕ ಸ್ಥಿರತೆ ಇಲ್ಲದೆ , ಅಸ್ಥಿರತೆಘೇ ಕಾರಣವಾಯಿತು , ಎಂಬ ಅಭಿಪ್ರಾಯವಿದೆ.
ಆರನೇಯ ಪಂಚ ವಾರ್ಷಿಕ ಯೋಜನೆ (೧೯೮೦-೧೯೮೫)
[ಬದಲಾಯಿಸಿ]- ಆರನೇ ಯೋಜನೆ (1980-1985)
- ಆರನೇ, ಐದು ವರ್ಷದ ಯೋಜನೆಯು, ಆರ್ಥಿಕ ಉದಾರೀಕರಣದ ಆರಂಭ. ಬೆಲೆ ನಿಯಂತ್ರಣಗಳನ್ನು ತೆಗೆದು ಪಡಿತರ ಅಂಗಡಿಗಳನ್ನು ಮುಚ್ಚಲಾಯಿತು. ಇದು ಆಹಾರ ಬೆಲೆಗಳ ಹೆಚ್ಚಳಕ್ಕೆ ಕಾರಣವಾಯಿತು ,ಮತ್ತು ಜೀವನ ವೆಚ್ಚ ಹೆಚ್ಚಳಕ್ಕೆ ಸಹ ಕಾರಣವಾಯಿತು. ಇದುವರೆಗೆ ಅನುಸರಿಸಿದ “ನೆಹರೂ ಸಮಾಜವಾದ”ದ ಆರ್ಥಿಕ ನೀತಿ ಕೊನೆಗೊಂಡಿತೆಂದು ಹೇಳಬಹುದು.
- ಕುಟುಂಬ ಯೋಜನೆಯನ್ನು ಸಹ, ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು, ವಿಸ್ತರಿಸಲಾಯಿತು. ಚೀನಾ ಅವರ ಕಟ್ಟುನಿಟ್ಟಾದ ಮತ್ತು ನಿರ್ಬಂಧಿಸುವ ಒಂದು ಮಗು ನೀತಿ ವಿರುದ್ಧವಾಗಿ, ಭಾರತೀಯ ನೀತಿ ಬಲದ ಬೆದರಿಕೆ ಇಲ್ಲದೆ ಜಾರಿಗೆ ತರಲಾಯಿತು. ಭಾರತದ ಮುಂದುವರಿದ ಪ್ರದೇಶಗಳಲ್ಲಿ ಜನನ ಪ್ರಮಾಣ ಕಡಿಮೆ ಇತ್ತು . ಆದರೆ ಹಿಂದುಳಿದ ಪ್ರದೇಶಗಳಲ್ಲಿ, ಜನನ ಸಂಖ್ಯೆಯ ವೇಗ ಹೆಚ್ಚು ಆಗಿತ್ತು .
- ಆರನೇ ಪಂಚವಾರ್ಷಿಕ ಯೋಜನೆ , ಭಾರತೀಯ ಆರ್ಥಿಕತೆಗೆ ಒಂದು ಮಹಾನ್ ಯಶಸ್ಸನ್ನು ತಂದಿತು . ಬೆಳವಣಿಗೆಯ ಗುರಿ ದರ 5.2% ಇತ್ತು ಮತ್ತು ನಿಜವಾದ ಬೆಳವಣಿಗೆ ದರ 5.4% ಆಗಿತ್ತು. [6] ಪಂಚವಾರ್ಷಿಕ ಯೋಜನೆ ಯನ್ನು ಎರಡು ಬಾರಿ (ಪರಿಷ್ಕರಣೆ) ಮಾಡಲಾಯಿತು. ಐದು ವರ್ಷದ ಯೋಜನೆಯನ್ನು ಎರಡು ಬಾರಿ ಮಾಡಿದ್ದು ಇದೊಂದೇ.
ಏಳನೇ ಪಂಚ ವಾರ್ಷಿಕ ಯೋಜನೆ (೧೯೮೫-೧೯೮೯)
[ಬದಲಾಯಿಸಿ]- ಏಳನೇ ಯೋಜನೆ (1985-1990)
- ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಪುನರಾಗಮನವು ಏಳನೇ ಪಂಚವಾರ್ಷಿಕ ಯೋಜನೆಯ ಹೆಗ್ಗುರುತಾಗಿದೆ. ಈ ಯೋಜನೆಯಲ್ಲಿ ತಂತ್ರಜ್ಞಾನದ ಉನ್ನತೀಕರಣ ಕೈಗಾರಿಕೆಗಳ ಉತ್ಪಾದನಾ ಮಟ್ಟದ ಸುಧಾರಣೆಗೆ ಒತ್ತಡ ಹಾಕಲಾಯಿತು.
ಏಳನೇ ಐದು ವರ್ಷದ ಯೋಜನೆ ಮುಖ್ಯ ಉದ್ದೇಶಗಳು : ,
- ಆರ್ಥಿಕ ಉತ್ಪಾದಕತೆಯನ್ನು ಹೆಚ್ಚುಮಾಡುವುದು ,
- ಆಹಾರ ಧಾನ್ಯಗಳ ಉತ್ಪಾದನೆ , ಮತ್ತು
- ಉದ್ಯೋಗಾವಕಾಶ ಬೆಳವಣಿಗೆಗೆ ಮಹತ್ವ.
- ಆರನೇ ಪಂಚವಾರ್ಷಿಕ ಯೋಜನೆಯ ಪರಿಣಾಮವಾಗಿ, ಕೃಷಿಯಲ್ಲಿ ಸುಸ್ಥಿರ ಬೆಳವಣಿಗೆಯಾಗಿತ್ತು . ಹಣದುಬ್ಬರದ ದರವನ್ನು ನಿಯಂತ್ರಿಸುವ ವಿಷೇಷ ಅಗತ್ಯ ಇರಲಿಲ್ಲ, ಮತ್ತು ಏಳನೇ ಪಂಚವಾರ್ಷಿಕ ಯೋಜನೆಗೆ ಒಂದು ಪ್ರಬಲ ನೆಲೆಯಾಗಿತ್ತು. ಇದು ವಿದೇಶೀ ವಿನಿಮಯ ಪಾವತಿ ಅನುಕೂಲಕರ ವಾಗಿತ್ತು. ಮತ್ತಷ್ಟು ಅಗತ್ಯ ಆರ್ಥಿಕ ಬೆಳವಣಿಗೆಗೆ ಏಳನೇ ಸಮಾಜವಾದದ ನೆಲೆಯಲ್ಲಿ ಯೋಜನೆಯು ಸಮತೋಲನ ನಿರ್ಮಿಸಲು ಮತ್ತು ಶಕ್ತಿಯ ಉತ್ಪಾದನೆಯ ಕಡೆಗೆ ಶ್ರಮಿಸಿತು . ಏಳನೇ ಪಂಚವಾರ್ಷಿಕ ಒತ್ತಡ ಪ್ರದೇಶಗಳೆಂದರೆ:
- ಸಾಮಾಜಿಕ ನ್ಯಾಯ,
- ದುರ್ಬಲರಮೇಲೆ ದಬ್ಬಾಳಿಕೆ ನಿವಾರಿಸುವುದು,
- ಆಧುನಿಕ ತಂತ್ರಜ್ಞಾನ,
- ಕೃಷಿ ಅಭಿವೃದ್ಧಿ, ಬಡತನ ನಿರ್ಮೂಲನಾ ಕಾರ್ಯಕ್ರಮ,
- ಆಹಾರ, ಬಟ್ಟೆ, ಮತ್ತು ಆಶ್ರಯಗಳ ಪೂರ್ಣ ಪೂರೈಕೆಯನ್ನು ಬಳಸಿಕೊಂಡು, ಸಣ್ಣ ರೈತರು - ಮತ್ತು ದೊಡ್ಡ ಪ್ರಮಾಣದ ರೈತರು ಉತ್ಪಾದಕತೆಯನ್ನು ಹೆಚ್ಚಿಸುವುದು , ಮತ್ತು
- ಭಾರತವನ್ನು ಒಂದು ಸ್ವತಂತ್ರ ಆರ್ಥಿಕ ಘಟಕವಾಗಿ ನಿರ್ಮಿಸುವ ಮಾಡುವ ಪ್ರಯತ್ನವಾಗಿತ್ತು..
- 15 ವರ್ಷದ ಅವಧಿಯಲ್ಲಿ ಸ್ಥಿರ ಬೆಳವಣಿಗೆಯ ಕಡೆಗೆ ಶ್ರಮಿಸುವುದು , ಇದನ್ನು ಆಧರಿಸಿ, ಏಳನೇ ಯೋಜನೆ ಯು 2000 ಇಸವಿಯ ಕಾಲಕ್ಕೆ . 39 ಮಿಲಿಯನ್ ಕಾರ್ಮಿಕರ ಪಡೆ ಬೆಳೆಯಲು (ಯೋಜನೆಯಂತೆ) ನಿರೀಕ್ಷಿಸಲಾಗಿತ್ತು ಮತ್ತು ಸ್ವಾವಲಂಬಿ ಬೆಳವಣಿಗೆಯನ್ನು ಸಾಧಿಸುವ, ಮೂಲ ಉದ್ದೇಶದ ಮೇಲೆ ಕೇಂದ್ರೀಕರಿಸಿತ್ತು /ಹೊಂದಿತ್ತು.
- ಗುರಿ
- ಉದ್ಯೋಗವು ವರ್ಷಕ್ಕೆ 4% ದರದಲ್ಲಿ ಬೆಳೆಯಲು ನಿರೀಕ್ಷಿಸಲಾಗಿತ್ತು.
- ಭಾರತದ ಏಳನೇ ಪಂಚವಾರ್ಷಿಕ ಯೋಜನೆಯಲ್ಲಿ ನಿರೀಕ್ಷಿಸಲಾಗಿದೆ ಫಲಿತಾಂಶಗಳಲ್ಲಿ ಕೆಲವನ್ನು ಕೆಳಗೆ ನೀಡಲಾಗಿದೆ
- 1.ಪಾವತಿ (ಅಂದಾಜು) ಸಮತೋಲನ
- - ರೂ.330 ಶತಕೋಟಿ (US $ 5.3 ಶತಕೋಟಿ),
- 2.ಆಮದು - ರಫ್ತು (-) ರೂ.540 ಶತಕೋಟಿ (US $ 8.7 ಶತಕೋಟಿ), ಟ್ರೇಡ್ ಬ್ಯಾಲೆನ್ಸ್ - (-)ರೂ. 210 ಶತಕೋಟಿ (US $ 3.4 ಬಿಲಿಯನ್)
- 3.ವಾಣಿಜ್ಯ ರಫ್ತು (ಅಂದಾಜು)
- ರೂ.606.53 ಶತಕೋಟಿ (US $ 9.8 ಶತಕೋಟಿ)
- 4.ವಾಣಿಜ್ಯ ಆಮದು (ಅಂದಾಜು)
- ರೂ.954.37 ಶತಕೋಟಿ (US $ 15.5 ಶತಕೋಟಿ)
- 5.ಪಾವತಿಗಳ ಅಂತರ ಪ್ರಕ್ಷೇಪಗಳ
- ರಫ್ತು - ರೂ.607 ಶತಕೋಟಿ (US $ 9.8 ಶತಕೋಟಿ),
- 6.ಆಮದು - (-) ರೂ.954.37 ಶತಕೋಟಿ (US $ 15.5 ಶತಕೋಟಿ), Pಡಿoರಿeಛಿಣioಟಿs ಜಿoಡಿ bಚಿಟಚಿಟಿಛಿe oಜಿ ಠಿಚಿಥಿmeಟಿಣs - (-)ರೂ.347 ಶತಕೋಟಿ (US $ 5.6 ಶತಕೋಟಿ)
- 7.ಏಳನೇ ಐದು ವರ್ಷದ ಯೋಜನೆ ಅಡಿಯಲ್ಲಿ ಭಾರತದ ಜನಸಾಮಾನ್ಯರು ದೇಶಾದ್ಯಂತ ಸ್ವಾವಲಂಬಿ ಆರ್ಥಿಕ ಬೆಳವಣಿಗೆಯನ್ನು ಹೊಂದುವ /ತರುವ ಮತ್ತು ಸ್ವಯಂಸೇವಾ ಸಂಸ್ಥೆಗಳು ಬೆಳವಣಿಗೆಗೆ ಮೌಲ್ಯಯುತ ಕೊಡುಗೆಗಳನ್ನುಕೊಡುವ ಬಗೆಗೆ ಒತ್ತು ಕೊಡಲಾಗಿತ್ತು
- ಗುರಿ
- ಬೆಳವಣಿಗೆಯ ದರ 5.0% ಮತ್ತು ನಿಜವಾದ ಬೆಳವಣಿಗೆ ದರ 6.01% ಆಗಿತ್ತು. [8]
ಎಂಟನೇಯ ಪಂಚವಾರ್ಷಿಕ ಯೋಜನೆ (೧೯೯೨-೧೯೯೭)
[ಬದಲಾಯಿಸಿ]ಎಂಟನೇ ಯೋಜನೆ (1992-1997)
[ಬದಲಾಯಿಸಿ]- ಭಾರತದಲ್ಲಿ 1989-91ರ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯ ಕಾಲ. ಹೀಗಾಗಿ ಯಾವುದೇ ಐದು ವರ್ಷಗಳ ಯೋಜನೆ ಜಾರಿಗೊಳಿಸಲಾಗದ ಸ್ಥಿತಿ ಇತ್ತು . ಈ 1990 ಮತ್ತು 1992 ರ ಅವಧಿಯು ನಡುವೆ ಅವಧಿಯಲ್ಲಿ ಕೇವಲ ವಾರ್ಷಿಕ ಯೋಜನೆ ಗಳಿದ್ದವು. 1991 ರಲ್ಲಿ, ಭಾರತ, ವಿದೇಶಿ ವಿನಿಮಯ (ವಿದೇಶೀ ವಿನಿಮಯ) ಮೀಸಲು ಬಿಕ್ಕಟ್ಟನ್ನು ಎದುರಿಸಿತ್ತು ಅಮೇರಿಕಾದ $ 1 ಬಿಲಿಯನ್ ಮೀಸಲು . ಮಾತ್ರ ಇತ್ತು. ಹೀಗಾಗಿ, ಒತ್ತಡದಲ್ಲಿ ದೇಶದ ಸಮಾಜವಾದಿ ಆರ್ಥಿಕ ನೀತಿಯ ಸುಧಾರಣೆಯನ್ನು ಸವಾಲಾಗಿ ತೆಗೆದುಕೊಂಡರು. ಪಿ.ವಿ. ನರಸಿಂಹ ರಾವ್, ಭಾರತ ಗಣರಾಜ್ಯದ ಒಂಬತ್ತನೇ ಪ್ರಧಾನ ಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ, ಅವರು ರಾಷ್ಟ್ರೀಯ ಆಡಳಿತದಲ್ಲಿ ಆಧುನಿಕ ಭಾರತದ ಆರ್ಥಿಕ ರಕ್ಷಣಾ ನೀತಿಯ ಮೇಲೆ ಪರಿಣಾಮ ಬೀರುವ ಒಂದು ಪ್ರಮುಖ ಆರ್ಥಿಕ ರೂಪಾಂತರ ನೀತಿಯ ನಿರ್ಧಾರವನ್ನು ತೆಗೆದುಕೊಂಡರು. ಹಲವಾರು ಆರ್ಥಿಕ ಬದಲಾವಣೆಯನ್ನು ತಂದರು. ಭಾರತದ ಆಧುನಿಕ ಇತಿಹಾಸದಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಯಿತು. ಆ ಸಮಯದಲ್ಲಿ ಡಾ ಮನಮೋಹನ್ ಸಿಂಗ್ (ಭಾರತದ ಮಾಜಿ ಪ್ರಧಾನಿ) ಬಹುತೇಕ ದಿವಾಳಿಯಂಚಿಗೆ ಹೋಗಿದ್ದ ರಾಷ್ಟ್ರದ ಹಣಕಾಸು ಸ್ಥಿತಿಯನ್ನು ತಹಬಂದಿಗೆ ತಂದರು. ಭಾರತವು ದೇಶದಲ್ಲಿ ಉಚಿತ ಮಾರುಕಟ್ಟೆ. ಖಾಸಗೀಕರಣ ಮತ್ತು ಉದಾರೀಕರಣ ಇವುಗಳ ಸುಧಾರಣೆಗಳನ್ನು ಜಾರಿಗೆ ತಂದ ಆರಂಭವಾಗಿತ್ತು.
- ಕೈಗಾರಿಕೆಗಳು ಆಧುನೀಕರಣಕ್ಕೆ ಎಂಟನೇ ಯೋಜನೆಯು ಪ್ರಮುಖ ಚಿತ್ರವಾಗಿತ್ತು. ಈ ಯೋಜನೆಯಡಿ, ಭಾರತೀಯ ಆರ್ಥಿಕತೆಯು ಹಂತಹಂತದಲ್ಲಿ ಬೆಳೆಯುತ್ತಿರುವ ಮತ್ತು ವಿದೇಶಿ ಸಾಲದ ಕೊರತೆ ಯನ್ನು ಸರಿಪಡಿಸಲು ಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು. . ಏತನ್ಮಧ್ಯೆ ಭಾರತ 1 ಜನವರಿ 1995 ಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆ ಸದಸ್ಯತ್ವ ಪಡೆಯಿತು.
- ಈ ಎಂಟನೇ ಯೋಜನೆಯಲ್ಲಿ “ರಾವ್ ಮತ್ತು ಮನಮೋಹನ್” ಮಾದರಿ ಎಂದು ಹೇಳಬಹುದಾದ ಒಂದು ಆರ್ಥಿಕ ಅಭಿವೃದ್ಧಿಯ ನೀತಿ ಎನ್ನಬಹುದು.
- ಯೋಜನೆಯ ಪ್ರಮುಖ ಉದ್ದೇಶಗಳು
- ಮೂಲಸೌಕರ್ಯ, ಸಾಂಸ್ಥಿಕ ಕಟ್ಟಡ, ಪ್ರವಾಸೋದ್ಯಮ ನಿರ್ವಹಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಪಂಚಾಯತಿ ರಾಜ್ಯ, ತೊಡಗಿರುವ, ನಗರ ಪಾಲಿಕೆ, ಸರ್ಕಾರೇತರ ಸಂಘಟನೆಗಳ ಉತ್ತೇಜನ, ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಜನರ ಭಾಗವಹಿಸುವಿಕೆಯನ್ನು ಬಲಪಡಿಸುವುದು, ಜನಸಂಖ್ಯೆಯ ಬೆಳವಣಿಗೆ ನಿಯಂತ್ರಿಸುವುದು, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ,ಇವುಗಳನ್ನು ಒಳಗೊಂಡಿತ್ತು..
- ಶಕ್ತಿ ಉತ್ಪಾದನೆಗೆ ಹಣಹೂಡುವುದಕ್ಕೆ (26.6%) ಪ್ರಾಮುಖ್ಯತೆ ನೀಡಲಾಯಿತು.
- ಬೆಳವಣಿಗೆಯ ಗುರಿ 5.6% [6] ವಿರುದ್ಧ 6.78% ಸರಾಸರಿ ವಾರ್ಷಿಕ ಬೆಳವಣಿಗೆ ದರ ಸಾಧಿಸಲಾಯಿತು.
- ವರ್ಷಕ್ಕೆ 5.6%,ಸರಾಸರಿ ಬೆಳವಣಿಗೆ ಗುರಿಯಾಯಿತು’ ಇದನ್ನು ಸಾಧಿಸಲು ಒಟ್ಟು ದೇಶೀಯ ಉತ್ಪನ್ನದ 23.2% ಹೂಡಿಕೆ ಅಗತ್ಯವಿತ್ತು . ಏರಿಕೆಯಾಗುತ್ತಿರುವ ಬಂಡವಾಳ ಅನುಪಾತ 4.1 ಆಗಿದೆ. ಬಂಡವಾಳ ಕ್ಕಾಗಿ ಉಳಿತಾಯವು ದೇಶೀಯ ಉತ್ಪಾದನೆಯಿಂದ ಮತ್ತು ವಿದೇಶಿ ಉಳಿತಾಯ ಬರಬೇಕಾಗಿತ್ತು . ವಿದೇಶೀ ಉಳಿತಾಯ ಅಂದಾಜು 1.6% ನಲ್ಲಿ ಇದ್ದರೆ , ಒಟ್ಟು ದೇಶೀಯ ಉತ್ಪಾದನೆಯ ಉಳಿತಾಯ 21.6% ಅಂದಾಜು ಮಾಡಲಾಗಿತ್ತು . ಇದು ಒಟ್ಟಾರೆ ದೇಶೀಯ ಮೂಲಗಳು ಮತ್ತು ವಿದೇಶಿ ಮೂಲಗಳಿಂದ ಬರಬಹುದಾದ ಉಳಿತಾಯದ ಬಂಡವಾಳದ ಅಂದಾಜು. . [9]
ಒಂಬತ್ತನೇಯ ಪಂಚ ವಾರ್ಷಿಕ ಯೋಜನೆ (೧೯೯೭-೨೦೦೨)
[ಬದಲಾಯಿಸಿ]- ಒಂಬತ್ತನೇ ಯೋಜನೆ (1997-2002)
- ಒಂಬತ್ತನೇ ಪಂಚವಾರ್ಷಿಕ ಯೋಜನೆ ಸ್ವಾತಂತ್ರ್ಯ ಬಂದ 50 ವರ್ಷಗಳ ಬಳಿಕ. ಬಿ.ಜೆಪಿ ಯ ಒಕ್ಕೂಟ ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್ ನಿಂದ ಆಯ್ಕೆಯಾದ ಪ್ರಧಾನ ಮಂತ್ರಿ , ಅಟಲ್ ಬಿಹಾರಿ ವಾಜಪೇಯಿ, ಈ ಒಂಬತ್ತನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಭಾರತದ ಪ್ರಧಾನ ಮಂತ್ರಿ., ಒಂಬತ್ತನೇ ಪಂಚವಾರ್ಷಿಕ ಯೋಜನೆ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ದೇಶದ ಸುಪ್ತ ಮತ್ತು ಪರೀಕ್ಷಿತ ಆರ್ಥಿಕ ಸಾಮರ್ಥ್ಯವನ್ನು ಬಳಸಲು ಪ್ರಾಥಮಿಕವಾಗಿ ಪ್ರಯತ್ನಿಸಿದರು.
- ಇದು ಬಡತನದ ಸಂಪೂರ್ಣ ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ದೇಶದ ಸಾಮಾಜಿಕ ಕ್ಷೇತ್ರವೂ ಪ್ರಬಲ ಬೆಂಬಲ ನೀಡಿತು. ಎಂಟನೇ ಪಂಚವಾರ್ಷಿಕ ಯೋಜನೆಯ ತೃಪ್ತಿಕರ ಅಳವಡಿಕೆಯು ವೇಗವಾಗಿ ಅಭಿವೃದ್ಧಿಯ ಹಾದಿಯಲ್ಲಿ ಮುಂದುವರೆಯಲು ರಾಜ್ಯಗಳ ಸಾಮರ್ಥ್ಯವನ್ನು ಖಾತರಿ ಪಡಿಸಿತು. ಒಂಬತ್ತನೇ ಪಂಚವಾರ್ಷಿಕ ಯೋಜನೆಯು ಸಾರ್ವಜನಿಕ ಕೈಗಾರಿಕಾ ವಿಭಾಗ ಮತ್ತು ದೇಶದ ಆರ್ಥಿಕ ಅಭಿವೃದ್ಧಿ ಮುಟ್ಟುವಲ್ಲಿ ಖಾಸಗಿ ಕೈಗಾರಿಕಾ ವಿಭಾಗ ಜಂಟಿ ಪ್ರಯತ್ನಗಳು ನಡೆದವು. ಜೊತೆಗೆ, ಒಂಬತ್ತನೇ ಪಂಚವಾರ್ಷಿಕ ಯೋಜನೆ ದೇಶದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ಅಭಿವೃದ್ಧಿಯ ಕಡೆಗೆ ಕೊಡುಗೆಗಳನ್ನು ಹಾಗೂ ಸರ್ಕಾರೇತರ ಸಂಸ್ಥೆಗಳು ಸಹ ಕೊಡುಗೆಗಳನ್ನು ನೀಡಿತು. ವಿಶೇಷ ಆಕ್ಷನ್ ಪ್ಲ್ಯಾನ್ಸ್ (sಚಿPs) ರೂಪದಲ್ಲಿ ಹೊಸ ಅನುಷ್ಠಾನ ಕ್ರಮಗಳನ್ನು ಸಾಕಷ್ಟಿರುವ ಸಂಪನ್ಮೂಲಗಳೊಂದಿಗೆ ನಿಗದಿತ ಸಮಯದಲ್ಲಿ ಗುರಿಗಳನ್ನು ಪೂರೈಸಲು ಒಂಬತ್ತನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಪ್ರಯತ್ನಿಸಲಾಯಿತು. ವಿಶೇಷ ಕ್ರಿಯಾ ಯೋಜನೆ ಅಡಿಯಲ್ಲಿ ಸಾಮಾಜಿಕ ಮೂಲಸೌಕರ್ಯ, ಕೃಷಿ, ಮಾಹಿತಿ ತಂತ್ರಜ್ಞಾನ ಮತ್ತು ಜಲ ನೀತಿಯ ವಿಷಯವನ್ನುಒಳಪಡಿಸಲಾಯಿತು..
- ಬಜೆಟ್
- ಒಂಬತ್ತನೇ ಪಂಚವಾರ್ಷಿಕ ಯೋಜನೆ ಒಟ್ಟು ರೂ. 8,59,200 ಕೋಟಿ ಸಾರ್ವಜನಿಕ(ಸರ್ಕಾರಿ ಉದ್ಯಮ) ವಲಯದಲ್ಲಿ ಹಣಹೂಡುವ ಯೋಜನೆ ಹೊಂದಿತ್ತು. ಒಂಬತ್ತನೇ ಪಂಚವಾರ್ಷಿಕ ಯೋಜನೆ ಎಂಟನೇ ಪಂಚವಾರ್ಷಿಕ ಆ ಹೋಲಿಸಿದರೆ ಯೋಜನೆಯಲ್ಲಿ ಹಣಹೂಡುವ ವಿಷಯದಲ್ಲಿ ಯೋಜನೆ ವೆಚ್ಚಕ್ಕೆ ಸಂಬಂಧಿಸಿದಂತೆ 48% ಮತ್ತು 33% ಹೆಚ್ಚಳ ಕಂಡಿತು. ಒಟ್ಟು ಹಣಹೂಡಿಕೆ , ಕೇಂದ್ರದ ಪಾಲು- ಸುಮಾರು 57% ಆಗಿತ್ತು. ;ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 43% ಆಗಿತ್ತು
- ಒಂಬತ್ತನೇ ಪಂಚವಾರ್ಷಿಕ ಯೋಜನೆಯು ಶೀಘ್ರ ಆರ್ಥಿಕ ಪ್ರಗತಿ ಮತ್ತು ದೇಶದ ಜನರ ಜೀವನ-ಗುಣಮಟ್ಟದ ನಡುವಿನ ಅಂತರ ನಿವಾರಿಸುವ ಸಂಬಂಧದ ಮೇಲೆ ಕೇಂದ್ರೀಕೃತವಾಗಿತ್ತು . ಈ ಯೋಜನೆಯ ಮುಖ್ಯ ಗುರಿ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಮೇಲೆ ಒತ್ತು ಮತ್ತು ದೇಶದ ಬೆಳವಣಿಗೆ ಹೆಚ್ಚಿಸಲು ಆಗಿತ್ತು. ಒಂಬತ್ತನೇ ಪಂಚವಾರ್ಷಿಕ ಯೋಜನೆ ದೇಶದಲ್ಲಿ ಬಡವರ ಸ್ಥಿತಿ ಸುಧಾರಣೆಗೆ ಮತ್ತು ಸುಧಾರಣೆ ನೀತಿಗಳನ್ನು ಅಪೇಕ್ಷಿತ ಉದ್ದೇಶವನ್ನು ಸಾಧಿಸಲು ಚಳುವಳಿ ರೀತಿಯ ಕಾರ್ಯಕ್ರಮ ಹೊಂದಿತ್ತು. ಒತ್ತು. ಒಂಬತ್ತನೇ ಪಂಚವಾರ್ಷಿಕ ಯೋಜನೆಯು ಇನ್ನೂ ಸಮಾಜದಲ್ಲಿರುವ ಐತಿಹಾಸಿಕವಾಗಿ ಬಂದ ಅಸಮಾನತೆಯನ್ನು ಸರಿಪಡಿಸುವ ಆಧಾರಿತ ನೀತಿಗಳನ್ನು ಮತ್ತು ಗುರಿ ಯನ್ನು ಹೊಂದಿತ್ತು..
- ಉದ್ದೇಶಗಳು
- ಒಂಬತ್ತನೇ ಪಂಚವಾರ್ಷಿಕ ಯೋಜನೆ ಮುಖ್ಯ ಉದ್ದೇಶ ಐತಿಹಾಸಿಕ ಅಸಮಾನತೆಯ ಸರಿಪಡಿಸಲು ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಆಗಿತ್ತು. ಒಂಬತ್ತನೇ ಪಂಚವಾರ್ಷಿಕ ಯೋಜನೆಯ ಇತರೆ ಲಕ್ಷಣಗಳೆಂದರೆ:
- 1.ಜನಸಂಖ್ಯಾ ನಿಯಂತ್ರಣ.
- 2.ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಸುವುದು.
- 3.ಬಡತನ ಇಳಿಮುಖಕ್ಕೆ ತರುವುದು.
- 4.ಬಡವರಿಗೆ ಆಹಾರ ಮತ್ತು ನೀರಿನ ಸರಿಯಾದ ಲಭ್ಯತೆಯನ್ನು ಖಾತ್ರಿಗೊಳಿಸುವುದು.
- 5.ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಮತ್ತು ಇತರ ಮೂಲಭೂತ ಅಗತ್ಯಗಳ ಲಭ್ಯತೆ.
- 6.ದೇಶದ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ.
- 7.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಮತ್ತು ಸಾಮಾಜಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಹಿಂದುಳಿದ ವರ್ಗಗಳಿಗೆ ಅಧಿಕಾರ ನೀದಿಕೆ.
- 8.ಕೃಷಿ ವಿಷಯದಲ್ಲಿ ಸ್ವಾವಲಂಬನೆ ಅಭಿವೃದ್ಧಿ ಪಡಿಸುವುದು.
- 9. ಆರ್ಥಿಕ ಅಭಿವೃದ್ಧಿ ಸಹಾಯದಿಂದ ಏರುತ್ತಿರುವ ಬೆಲೆಯನ್ನು ವೇಗವರ್ಧಕ.
ಸ್ಥಿರ ಗೊಳಿಸುವುದು
- ಕಾರ್ಯಸೂಚಿ (ಸ್ಟ್ರಾಟಜೀಸ್)
- 1.ಭಾರತೀಯ ಆರ್ಥಿಕತೆಯನ್ನು ರಚನಾತ್ಮಕವಾಗಿ ರೂಪಾಂತರಗಳಿಸುವುದು ಮತ್ತು ಬೆಳವಣಿಗೆಗೆ ಉತ್ತೇಜನ..
- 2. ದೇಶದ.ಆರ್ಥಿಕತೆಯಲ್ಲಿ ಹೊಸ ಉಪಕ್ರಮಗಳು ಮತ್ತು ಸವಾಲುಗಳನ್ನು ಎದುರಿಸಲು ಕ್ರಮಗಳನ್ನು ದೀಕ್ಷಾಬದ್ಧ ಕ್ರಮ.
- 3.ವಿರಳವಾದ ಸಂಪನ್ಮೂಲಗಳ ದಕ್ಷ ಬಳಕೆ ಮತ್ತು ಕ್ಷಿಪ್ರ ಬೆಳವಣಿಗೆಗೆ ಖಚಿತಪಡಿಸಿಕೊಳ್ಳುವುದು..
- 4.ಸಾರ್ವಜನಿಕ ಮತ್ತು ಖಾಸಗಿ ವಲಯದ ಬೆಂಬಲದ ಸಂಯೋಜನೆಯಿಂದ ಉದ್ಯೋಗ ಹೆಚ್ಚಿಸುವುದು..
- 5. ಸ್ವಾವಲಂಬನೆ ಸಾಧಿಸಲು ರಫ್ತು ಹೆಚ್ಚಿಸುಲು ಹೆಚ್ಚಿನ ಕ್ರಮ.
- 6.ವಿದ್ಯುತ್, ದೂರಸಂಪರ್ಕ, ರೈಲ್ವೇ ಇತ್ಯಾದಿಗಳ ಸೇವೆಗಳ ಅಭಿವೃದ್ಧಿ
- 7. ದೇಶದ ಸಾಮಾಜಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ವರ್ಗಗಳಿಗೆ ವಿಶೇಷ ಯೋಜನೆಗಳನ್ನು ಮಾಡಲು ಅಧಿಕಾರ ಕೊಡುವುದು.. ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳು ಪಾಲ್ಗೊಳ್ಳುವಿಕೆ / ಮತ್ತು ನಗರ ಸಂಸ್ಥೆಗಳು /ಪಾಲಿಕೆಗಳುs ಭಾಗವಹಿಸುವಿಕೆ ಗೆ ಪ್ರೋತ್ಸಾಹ .
- ಸಾಧನೆ
- 1.ಒಂಬತ್ತನೇ ಪಂಚವಾರ್ಷಿಕ ಯೋಜನೆ 6.5% ಒಂದು ಗುರಿ ವಿರುದ್ಧ 5.4% ಒಂದು ಜಿಡಿಪಿ ಬೆಳವಣಿಗೆ ದರ ಸಾಧಿಸಿದ
- 2.ಕೃಷಿ ಉದ್ಯಮದ 4.2% ಗುರಿಯ ವಿರುದ್ಧ 2.1% ಪ್ರಮಾಣದಲ್ಲಿ ಬೆಳೆಯಿತು
- 3.ದೇಶದ ಕೈಗಾರಿಕಾ ಬೆಳವಣಿಗೆ 3% ನ ಗುರಿಯನ್ನು ಹೊಂದಿತ್ತು , ಇದು 4.5% ಹೆಚ್ಚಾಗಿತ್ತು .
- 4.ಸೇವಾ ಉದ್ಯಮವು 7.8% ಬೆಳವಣಿಗೆ ದರ ಹೊಂದಿತ್ತು.
- ಸರಾಸರಿ 6.7% ವಾರ್ಷಿಕ ಬೆಳವಣಿಗೆ ದರ ಹೊಂದಲಾಯಿತು.
- ಒಂಬತ್ತನೇ ಪಂಚವಾರ್ಷಿಕ ಯೋಜನೆ ದೇಶದ ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಹೊಸ ಕ್ರಮಗಳನ್ನು ಯೋಜಿಸುವ ಕ್ರಮದಲಿ ಹಿಂದಿನ ದೌರ್ಬಲ್ಯಗಳ ಮೂಲವನ್ನು ಕಾಣಬೇಕಾಗುತ್ತದೆ.. ಆದಾಗ್ಯೂ, ಯಾವುದೇ ದೇಶದ ಚೆನ್ನಾಗಿ ಯೋಜಿತವಾದ ಆರ್ಥಿಕತೆಗೆ, ರಾಷ್ಟ್ರದ ಜನಸಾಮಾನ್ಯರ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಸಂಯೋಜಿತವಾಗಿ ಭಾಗವಹಿಸುವಿಕೆ ಇರಬೇಕು. ಸರ್ಕಾರದ, ಸಾರ್ವಜನಿಕ ಖಾಸಗಿ, ಮತ್ತು ಎಲ್ಲಾ ಮಟ್ಟದ ಸಂಯೋಜಿತ ಪ್ರಯತ್ನ ಭಾರತದ ಆರ್ಥಿಕ ಬೆಳವಣಿಗೆ ತೀರಾ ಅಗತ್ಯ.
- ಗುರಿ ಬೆಳವಣಿಗೆ 7.1% ಮತ್ತು ನಿಜವಾದ ಬೆಳವಣಿಗೆ 6.8% ಆಗಿತ್ತು.
ಹತ್ತನೇಯ ಪಂಚ ವಾರ್ಷಿಕ ಯೋಜನೆ (೨೦೦೨-೨೦೦೭)
[ಬದಲಾಯಿಸಿ]- ಹತ್ತನೆ ಯೋಜನೆ(2002-2007)
- ಹತ್ತನೆ ಯೋಜನೆಯ ಮುಖ್ಯ ಉದ್ದೇಶಗಳೆಂದರೆ
- ವರ್ಷಕ್ಕೆ 8% ಜಿಡಿಪಿ ( )ಬೆಳವಣಿಗೆ ಸಾಧಿಸುವುದು.
- 2007 ರ ವೇಳೆಗೆ 5% ಬಡತನ ದರವನ್ನು ಕಡಿತ.ಗೊಳಿಸುವುದು.
- ಕಾರ್ಮಿಕರಿಗೆ ಲಾಭದಾಯಕ ಮತ್ತು ಉತ್ತಮ ಗುಣಮಟ್ಟದ ಉದ್ಯೋಗ ನೀಡುವುದು . (ಆದಷ್ಟು ಕನಿಷ್ಠ.ಸಂಖ್ಯೆಗೆ )2007 ನೀ ಇಸವಿಯ ಹೊತ್ತಿಗೆ ವೇತನ ದರಗಳಲ್ಲಿ ಮತ್ತು ಸಾಕ್ಷರತೆ ಮೂಲಕ ಕನಿಷ್ಠ ಲಿಂಗ ತಾರಮ್ಯದ .ಅಂತರವನ್ನು 50% ರಷ್ಟು ಕಡಿಮೆ ಮಾಡುವುದು.
- 20 ಅಂಶಗಳ ಕಾರ್ಯಕ್ರಮಗಳ ಅನಷ್ಟಾನ.
- ಬೆಳವಣಿಗೆಯ ಗುರಿ
- 8.1% - ಸಾಧಿಸಿದ ಬೆಳವಣಿಗೆ: 7.7%
- ಹತ್ತನೇ ಐದು ವರ್ಷಗಳ ಯೋಜನೆಗೆ ಅಂದಾಜು ವೆಚ್ಚ ರೂ.43.825 ಕೋಟಿ.
- (ಒಟ್ಟು ಯೋಜನೆಯನ್ನು ಮೊತ್ತ ರೂ 921.291 ಕೋಟಿ ; ಕೇಂದ್ರ ಸರ್ಕಾರ(57.9%) ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೂ 691.009 ಕೋಟಿ (42.1%) ಹಣ ಹೂಡುವ ಯೋಜನೆ)
ಹನ್ನೋಂದನೇಯ ಪಂಚ ವಾರ್ಷಿಕ ಯೋಜನೆ (೨೦೦೭-೨೦೧೨)
[ಬದಲಾಯಿಸಿ]- ಹನ್ನೊಂದನೇ ಯೋಜನೆ (2007-2012)
-
- ಗುರಿಗಳು
- ಕ್ಷಿಪ್ರ ಮತ್ತು ಒಟ್ಟಾರೆ ಪ್ರಗತಿ. (ಬಡತನವನ್ನು ಕಡಿಮೆಗೊಳಿಸುವುದು)
- ಸಾಮಾಜಿಕ ವಲಯಕ್ಕೆ ಒತ್ತು ಮತ್ತು ಅದರಲ್ಲಿ.ಸೇವೆಯನ್ನು ಒದಗಿಸುವುದು.
- ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮೂಲಕ ಸಬಲೀಕರಣ.
- ಲಿಂಗ ಅಸಮಾನತೆಯ ಕಡಿತ.
- ಪರಿಸರ ಸಂರಕ್ಷಣೆ.
- ಕ್ರಮವಾಗಿ 4%, 10% ಮತ್ತು 9% ಕೃಷಿ, ಕೈಗಾರಿಕೆ ಮತ್ತು ಸೇವಾವಿಭಾಗದಲ್ಲಿ ಬೆಳವಣಿಗೆ ಪ್ರಮಾಣವನ್ನು ಹೆಚ್ಚಿಸಲು.ಯೋಜನೆ.
- ಗರ್ಭಧಾರಣೆ ಕ್ಷಮತೆ ಯನ್ನು 2.1 ಗೆ ಕಡಿಮೆಮಾಡುವುದು.
- 2009 ರ ಹೊತ್ತಿಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು.
ಹನ್ನೆರಡನೆಯ ಪಂಚವಾರ್ಷಿಕ ಯೋಜನೆ
[ಬದಲಾಯಿಸಿ]- ಹನ್ನೆರಡನೆಯ ಯೋಜನೆ (2012-2017)
- (Main article: 12th Five-Year Plan (India))
- ಮುಖ್ಯ ಲೇಖನ: 12ನೇ ಪಂಚವಾರ್ಷಿಕ ಯೋಜನೆ (ಭಾರತ)
- ಹನ್ನೆರಡನೆಯ ಯೋಜನೆ ಸಂದಿಗ್ಧತೆಯಲ್ಲಿ
- ಹನ್ನೆರಡನೆಯ ಯೋಜನೆಯ ಅವಧಿಯಲ್ಲಿ ಭಾರತದ ರಾಜಕೀಯದಲ್ಲಿ ಮಹತ್ತರ ಮಹತ್ತರ ಬದಲಾವಣೆಯಾಯಿತು.ಯು.ಪಿ.ಎ.ಕೂಟದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಮನಮೋಹನ ಸಿಂಗ್ 26-5-2014 ರವರೆಗೆ ಪ್ರಧಾನಿಯಾಗಿದ್ದು ಅಂದು ರಾಜೀನಾಮೆ ನೀಡಿದರು. ಭಾರತೀಯ ಜನತಾ ಪಕ್ಷದ ಶ್ರೀ ನರೇಂದ್ರ ಮೋದಿ 26-5-2014 ರಿಂದ ಪ್ರಧಾನಿಯಾಗಿ ನಿಯುಕ್ತಿಹೊಂದಿ ಅಧಿಕಾರ ಸ್ವೀಕರಿಸಿದರು. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, 2014 ಮೇ 26 ರಂದು ರಾಜೀನಾಮೆ ನೀಡಿದರು. ಹೊಸ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಯೋಜನಾ ಆಯೋಗವನ್ನು ರದ್ದುಪಡಿಸಿ ಹೊಸ ವ್ಯವಸ್ಥೆ ತರಲು ಬಯಸಿದ್ದಾರೆ.ಅದಕ್ಕಾಗಿ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು; ಆದರೆ ಅದರಲ್ಲಿ ಆಯೋಗ ರದ್ದತಿಗೆ ಬಹುಮತ ಸಿಕ್ಕಿದರೂ ಒಮ್ಮತ ಮೂಡಿಲ್ಲ.ಹೊಸ ಸರ್ಕಾರದ ಆರ್ಥಿಕ ನೀತಿ ಬದಲಾಗಬಹುದು. ಆದ್ದರಿಂದ ಈ ಹನ್ನೆರಡನೆಯ ಯೋಜನೆ (2012-2017) ನೆನೆಗುದಿಗೆ ಬಿದ್ದಿದೆ.
- ಭಾರತ ಸರ್ಕಾರದ ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ 8.2% ಬೆಳವಣಿಗೆ ದರ ನಿರ್ಧರಿಸಿದೆ. ಆದರೆ ಡಿಸೆಂಬರ್ 2012, 27 ರಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (National Development Council (NDC) 12 ನೇ ಯೋಜನೆಗಾಗಿ 8% ಬೆಳವಣಿಗೆಯ ದರ ಅನುಮೋದನೆ ಪಡೆಯಿತು. [10].
- ಕುಸಿದ ಜಾಗತಿಕ ಸ್ಥಿತಿಗತಿಯನ್ನು ಗಮನಿಸಿ, ಅಂದಿನ ಯೋಜನಾ ಆಯೋಗದ ಉಪಅಧ್ಯಕ್ಷರಾದ ಶ್ರೀ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, ಮುಂದಿನ ಐದು ವರ್ಷಗಳಲ್ಲಿ 9% ರಷ್ಟು ಸರಾಸರಿ ಬೆಳವಣಿಗೆ ದರ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂತಿಮವಾಗಿ ಫೈನಲ್ ಬೆಳವಣಿಗೆಯ ಗುರಿ ದಹಲಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ನಡೆದ ಯೋಜನೆಯು, ಒಪ್ಪಿಗೆ ಮೂಲಕ 8% ದರದ ಬೆಳವಣಿಗೆಗೆ ಹೊಂದಿಸಲಾಗಿದೆ.
- "ರಾಜ್ಯ ಯೋಜನಾ ಮಂಡಳಿಗಳು ಮತ್ತು ಇಲಾಖೆಗಳ, 12 ನೇ ಯೋಜನೆ ಪ್ರಸ್ತಾವನೆ ದಾಖಲೆ ಪತ್ರದಂತೆ, ಪ್ರಗತಿಯು ಶೇಕಡಾ 8 ರಿಂದ 8.5 ರ ಮಧ್ಯೆ ಎಲ್ಲೋ ಸಾಧ್ಯವೆಂದು ಭಾವಿಸುತ್ತೇನೆ; ಸರಾಸರಿ 9% ರ ದರ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು, ಶ್ರೀ ಅಹ್ಲುವಾಲಿಯಾ ಹೇಳಿದರು . ಕಳೆದ ವರ್ಷದ ಅನುಮೋದನೆ ಮಾಡಿದ ,9% ವಾರ್ಷಿಕ ಸರಾಸರಿ ಬೆಳವಣಿಗೆ ದರ ಕುರಿತು ಯೋಜನಾ ಮಂಡಳಿಯಲ್ಲ್ಲಿ ಮೇಲಿನಂತೆ ಹೇಳಿದರು.
- ನಾನು ಅದು ಕಾರ್ಯಸಾಧ್ಯವೆಂದು ಹೇಳುವುದಾದರೆ ಅದಕ್ಕೆ ತೀವ್ರ ಪ್ರಯತ್ನದ ಅಗತ್ಯವಿರುತ್ತದೆ. ನೀವು ಮಾಡದಿದ್ದರೆ, ಶೇಕಡಾ 8 ರ ಬೆಳವಣಿಗೆಗೆ ಯಾವುದೇ ದೇವರ ನೀಡಿದ ಬಲ ಬೇಕಾಗಿಲ್ಲ. ವಿಶ್ವ ಆರ್ಥಿಕತೆಯು, ಕಳೆದ ವರ್ಷದಲ್ಲಿ ತುಂಬಾ ತೀವ್ರವಾಗಿ ಹದಗೆಟ್ಟಿತು ನಾನು ಯೋಚಿಸಿ ಕೊಟ್ಟಿರುವ... 12 ನೇ ಪಂಚವಾರ್ಷಿಕ ಯೋಜನೆ ಮೊದಲ ವರ್ಷದ (2012-13) ಬೆಳವಣಿಗೆ ದರ 6.5/ 7 ಪ್ರತಿಶತದವರೆಗೆ ಇದೆ", ಎಂದರು.
- ತಕ್ಷಣ ಅವರು ಅದರ ಅನುಮೋದನೆಗೆ ದೇಶದ ಯೋಜನಾ ಮಂಡಳಿಯ ಇತರ ಸದಸ್ಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಚಿಸಿದರು. ಅಂತಿಮ ಸಂಖ್ಯೆ. (ಆರ್ಥಿಕ ಬೆಳವಣಿಗೆ ಗುರಿ) ಹಾಕುವ ಮೊದಲು ಅವರು ಆಯೋಗದ ಅಭಿಪ್ರಾಯ ತಿಳಿಯಲು ಬಯಸಿದರು.
- ಶ್ರೀ ಅಹ್ಲುವಾಲಿಯಾ ಅವರು -ಸರ್ಕಾರ 12 ನೇ ಪಂಚವಾರ್ಷಿಕ ಅವಧಿಯಲ್ಲಿ 10% ರಷ್ಟು ಬಡತನ ಕಡಿಮೆ ಮಾಡಲು ಉದ್ದೇಶಿಸಿದೆ. ನಾವು ಯೋಜನೆಯ ಅವಧಿಯಲ್ಲಿ ಸಮರ್ಥನೀಯ ಆಧಾರದಲ್ಲಿ ವಾರ್ಷಿಕವಾಗಿ 9% ಸಾದಿಸಬಲ್ಲ ಬಡತನ ನಿವಾರಣೆಯ ಅಂದಾಜುಗಳು ಕಡಿಮೆ ಗುರಿ ಇರಲಿ",ಎಂದು ಹೇಳಿದರು. ಹಿಂದಿನ ರಾಜ್ಯ ಯೋಜನಾ ಮಂಡಳಿಗಳು ಮತ್ತು ಯೋಜನಾ ಇಲಾಖೆಗಳ ಒಂದು ಸಮ್ಮೇಳನವನ್ನು ಉದ್ದೇಶಿಸಿ ಅವರು ಬಡತನ ಇಳಿಕೆ ಪ್ರಮಾಣ 11 ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ದ್ವಿಗುಣವಾಗಿದೆ ಹೇಳಿದರು. ಆಯೋಗದ, “ತೆಂಡೂಲ್ಕರ್ ಬಡತನ ರೇಖೆ”, ನಿಯಮ ಅನುಸರಿಸಿ,2004-05 ಮತ್ತು 2009-10 ನಡುವೆ ಐದು ವರ್ಷಗಳಲ್ಲಿ ,ಈ ಕಡಿತದ ದರ ಪ್ರತಿ ವರ್ಷ 1.5% ಅಂಕಗಳಷ್ಟಿತ್ತು; 1993-95 ನಡುವಿನ ಅವಧಿಗೆ ಹೋಲಿಸಿದರೆ ಅದು ಎರಡು ಪಟ್ಟು ಆಗಿತ್ತು”, ಎಂದು ಹೇಳಿದ್ದಾರೆ. . [11]
ಹೊಸ ಸರ್ಕಾರ ಮತ್ತು ನೀತಿ ಆಯೋಗ
[ಬದಲಾಯಿಸಿ]- ಹೊಸತಾಗಿ ರಚನೆಯಾಗಿರುವ ನೀತಿ ಆಯೋಗದ (NITI Aayog=National Institution for Transforming India) ಮೊದಲ ಉಪಾಧ್ಯಕ್ಷರಾಗಿ ಅರ್ಥ ಶಾಸ್ತ್ರಜ್ಞ ಅರವಿಂದ್ ಪನಗಾರಿಯಾ ಅವರನ್ನು ದಿ.1-6-2015 ಸೋಮವಾರ ನೇಮಕಗೊಳಿಸಲಾಗಿದೆ. ಜತೆಗೆ ಆರು ಸದಸ್ಯರು ಮತ್ತು ಮೂವರು ವಿಶೇಷ ಆಹ್ವಾನಿತರನ್ನು ನಿಯುಕ್ತಿಗೊಳಿಸಲಾಗಿದೆ. ಪಂಚವಾರ್ಷಿಕ ಯೋಜನೆಯ ವ್ಯವಸ್ಥೆ ಅಥವಾ ಕ್ರಮವನ್ನು ಕೈಬಿಡಲಾಗಿದೆ.
- ನೀತಿ ಆಯೋಗದ ಸದಸ್ಯರು
- ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ,
- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ: ಅಮಿತಾಭ್ ಕಾಂತ್
- ಉಪಾಧ್ಯಕ್ಷ:ರಾಜೀವ್ ಕುಮಾರ್
- ಅಧಿಕಾರನಿಮಿತ್ತ ಸದಸ್ಯರು: ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುರೇಶ್ ಪ್ರಭು ಮತ್ತು ರಾಧಾ ಮೋಹನ್ ಸಿಂಗ್
- ವಿಶೇಷ ಆಹ್ವಾನಿತರು: ನಿತಿನ್ ಗಡ್ಕರಿ, ಸ್ಮೃತಿ ಜುಬಿನ್ ಇರಾನಿ ಮತ್ತು ತನ್ವರ್ ಚಂದ್ ಗೆಹ್ಲೋಟ್
- ಪೂರ್ಣ ಅವಧಿ ಸದಸ್ಯರು: ಬೈಬೆಕ್ ದೇಬ್ರಾಯ್(ಅರ್ಥಶಾಸ್ತ್ರಜ್ಞ), ವಿ ಕೆ ಸಾರಸ್ವತ (ಮಾಜಿ DRDO ಮುಖ್ಯಸ್ಥ) ಮತ್ತು ರಮೇಶ್ ಚಂದ್ (ಕೃಷಿ ತಜ್ಞ)
- ಆಡಳಿತದ ಸಮಿತಿ (ಕೌನ್ಸಿಲ್): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು.
ಭಾರತ ಆಬಿವೃದ್ಧಿಯಲ್ಲಿ ನಡೆದುಬಂದ ದಾರಿ
[ಬದಲಾಯಿಸಿ]- ಕಳೆದ 25 ವರುಷಗಳಲ್ಲಿ ಭಾರತೀಯ ಉದ್ದಿಮೆಯ ಚಹರೆ ಪೂರ್ತಿ ಬದಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಆದ ಪ್ರಗತಿ ಯಾರನ್ನಾದರೂ ಬೆರಗುಗೊಳಿಸುವಂತಿದೆ. 1991ರಲ್ಲಿ ಸುಮಾರು 10 ಕೋಟಿ ಡಾಲರ್ ನಿರ್ಯಾತ ಮಾಡಿದ ನಮ್ಮ ಮಾಹಿತಿ ತಂತ್ರಜ್ಞಾನದ ಉದ್ದಿಮೆಗಳು ಕಳೆದ ವರುಷ 10 ಸಾವಿರ ಕೋಟಿ ಡಾಲರ್ ನಿರ್ಯಾತದಿಂದ ಗಳಿಸಿದವು ಅಂದರೆ ಸಾವಿರ ಪಟ್ಟಿನ ಅಗಾಧ ಬೆಳವಣಿಗೆ.
- ನಮ್ಮ ಐಟಿ ಕಂಪನಿಗಳು ಬಹು ರಾಷ್ಟ್ರೀಯವಾಗಿದ್ದು ಜಗತ್ತಿನ ಅತಿ ದೊಡ್ಡ ಮತ್ತು ಉತ್ತಮ ಕಂಪನಿಗಳೊಡನೆ ಸರಿ ಸಾಟಿಯಾಗಿ ಇಂದು ನಿಂತಿವೆ. ನಮ್ಮ ವಾಹನ ಉತ್ಪಾದಕರು 91ರಲ್ಲಿ ಒಟ್ಟಾರೆ ಒಂದು ಲಕ್ಷ ಕಾರು ತಯಾರಿಸುತ್ತಿದ್ದವು. ಅವು ಕಳೆದ ವರುಷ 25 ಲಕ್ಷ ಕಾರು ಉತ್ಪಾದಿಸಿದವು. ಇಷ್ಟೇ ಅಲ್ಲದೆ ಹಲವು ಭಾರತೀಯ ಮತ್ತು ವಿದೇಶೀ ಕಂಪನಿಗಳು ಭಾರತದಲ್ಲೇ ಹೊಸ ವಾಹನಗಳ ವಿನ್ಯಾಸವನ್ನೂ ಮಾಡುತ್ತಿದ್ದಾರೆ. ಇಂದು ಜಗತ್ತಿನ ಅತಿ ದೊಡ್ಡ ಸ್ಕೂಟರ್ ಮೋಟರ್ ಸೈಕಲ್ ಮತ್ತು ಟ್ರ್ಯಾಕ್ಟರ್ ಕಂಪನಿಗಳು ಭಾರತೀಯವು............
- ಹೊಸ ಆರ್ಥಿಕ ನೀತಿಯ ಆರಂಭಕ್ಕೆ ಮೊದಲಿನ 25 ವರ್ಷಗಳು ಅಂದರೆ 1966ರಿಂದ 1991ರ ವರೆಗಿನ 25ವರುಷಗಳ ಔದ್ಯೋಗಿಕ ಬೆಳವಣಿಗೆಗಳೆಡೆಗೆ ಸ್ವಲ್ಪ ಲಕ್ಷ್ಯ ಹರಿಸದೇ ಇದ್ದರೆ ಈಗಿನ ಬೆಳವಣಿಗೆಗಳ ಪೂರ್ಣ ಚಿತ್ರ ದಕ್ಕಲಿಕ್ಕಿಲ್ಲ.
- ಹೊಸ ಆರ್ಥಿಕ ನೀತಿ ಕಾರ್ಯರೂಪಕ್ಕೆ ಬರುವ ಹಿಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಕೈಗಾರಿಕಾಭಿವೃದ್ಧಿ ಆಗಲೇ ಇಲ್ಲವೇ? ಖಂಡಿತವಾಗಿ ಆಗಿತ್ತು. ಬಟ್ಟೆ ಉದ್ಯಮದಲ್ಲಿ ನೇಯುವ, ನೂಲೆಳೆಯುವ, ಬೇರೆ ಬೇರೆ ಚಿತ್ರಗಳನ್ನು ಪ್ರಿಂಟ್ ಮಾಡುವ ಅನೇಕ ತಂತ್ರಜ್ಞಾನಗಳು 80ರ ದಶಕದಲ್ಲಿ ಆಧುನೀಕರಣಗೊಂಡವು.[೩]
ಹೆಚ್ಚಿನ ಓದಿಗೆ
[ಬದಲಾಯಿಸಿ]- ಗುಲಾಮಗಿರಿಗೆ ಬೆಳ್ಳಿ ಹಬ್ಬ ![ಶಾಶ್ವತವಾಗಿ ಮಡಿದ ಕೊಂಡಿ]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official website of the Planning Commission of India Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.
- ನೋಡಿ
ಉಲ್ಲೇಖಗಳು
[ಬದಲಾಯಿಸಿ]- ↑ Planning Commission (24 February 1997). "A Background Note on Gadgil Formula for distribution of Central Assistance for State Plans". Retrieved 2010-09-17.
- ↑ niti-aayog-plans-new-planning-framework[೧]
- ↑ ಲೈಸನ್ಸ್ ರಾಜ್‌ನಿಂದ ಜಾಗತಿಕ ಮಾರುಕಟ್ಟೆ ಸವಾಲುಗಳ ಕಡೆಗೆ/ಶಿವಾನಂದ ಕಣವಿ/05/08/2016[ಶಾಶ್ವತವಾಗಿ ಮಡಿದ ಕೊಂಡಿ]
- ೧. Planning Commission, Government of India : Five Year Plans.
- ೨. Planningcommission.nic.in. Retrieved on 2012-03-17.
- ೩.Sony Pellissery and Sam Geall "Five Year Plans" in Encyclopedia of Sustainability, Vol. 7 pp. 156-160
- ೪.Jalal Alamgir, India's Open-Economy Policy: Globalism, Rivalry, Continuity (London and New York: Routledge 2008), Chapter 2.
- ೫.Baldev Raj Nayar, Globalization And Nationalism: The Changing Balance Of India's Economic Policy, 1950–2000 (New Delhi: Sage, 2001)
- ೬. World bank and economic development of India. APH Publishing. p. 375. ISBN 81-7648-121-"A Background Note on Gadgil Formula for distribution of Central Assistance for State Plans". Retrieved 2010-09-17.
- 8.http://www.powermin.nic.in/indian_electricity_scenario/pdf/Historical%20Back%20Groundhttp://planningcommission.nic.in/plans/planrel/fiveyr/9th/vol1/v1c2-1.htm
- 09.Indian Economy: Problems of development and planning. pune: Wishwa Prakashan. p. 676.
- 10."National Development Council approves 12th Five Year Plan". Indian Express. 2012-12-27. Retrieved 2013-07-10.
ವರ್ಗಗಳು:
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತದ ಅರ್ಥ ವ್ಯವಸ್ಥೆ