ನೊಬೆಲ್ ಪುರಸ್ಕೃತರು (ಪುಸ್ತಕ)

ವಿಕಿಪೀಡಿಯ ಇಂದ
Jump to navigation Jump to search
ನೊಬೆಲ್ ಪುರಸ್ಕೃತರು (ಪುಸ್ತಕ)
ನೊಬೆಲ್ ಪುರಸ್ಕೃತರು
ಲೇಖಕರುಸಿ. ಆರ್. ಕೃಷ್ಣರಾವ್
ದೇಶಭಾರತ
ಭಾಷೆಕನ್ನಡ
ವಿಷಯನೊಬೆಲ್ ಪುರಸ್ಕೃತರ ಮಾಹಿತಿ ಕೋಶ (೧೯೦೧ - ೨೦೧೦)
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨ನೇ ಮುದ್ರಣ
ಪುಟಗಳು೩೪೦
ಐಎಸ್‍ಬಿಎನ್978-81-8467-197-1

ಶ್ರೀ ಸಿ. ಆರ್. ಕೃಷ್ಣರಾವ್ ಬರೆದ "ನೊಬೆಲ್ ಪುರಸ್ಕೃತರು" ಬಗೆ ಕುರಿತು ಸಮಗ್ರ ಮಾಹಿತಿ ನೀಡುವ ಕೋಶ. (1901 ರಿಂದ 2010 ವರೆಗೆ)

ಪ್ರಪಂಚದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ನೊಬೆಲ್ ಪ್ರಶಸ್ತಿ. ಪ್ರಪಂಚದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುವ ಅಂತರರಾಷ್ಟ್ರೀಯ ಪ್ರಶಸ್ತಿ. ಸಂಶೋಧಕರು, ಸಾಹಿತಿಗಳು, ಸಾಧಕರು ತಮ್ಮ ಜೀವಿತ ಕಾಲದಲ್ಲಿ ಪಡೆಯಲು ಬಯಸುವ ಗೌರವಾನ್ವಿತ ಉನ್ನತ ಪುರಸ್ಕಾರ.

ಸ್ವೀಡನ್ ನಲ್ಲಿ ಹುಟ್ಟಿದ ಅಲ್‌ಫ್ರೆಡ್ ನೊಬೆಲ್ (೧೮೩೮ - ೧೮೯೬) ಶ್ರೀಮಂತ ಕುಟುಂಬದಿಂದ ಬಂದವರು. ತಂದೆ ರಾಸಾಯನಿಕ ವಿಜ್ಞಾನಿ. ಅವರ ಪ್ರಯೋಗಶಾಲೆಯೇ ಅಲ್‌ಫ್ರೆಡ್ ಗೆ ರಸಾಯನ ವಿಜ್ಞಾನದಲ್ಲಿ ಅಸಕ್ತಿ ಬೆಳೆಯಲು ಸ್ಫೂರ್ತಿ.

ಇವರ ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿನಿಧಿಯಿಂದ ಈ ಪುರಸ್ಕಾರವನ್ನು ನೀಡಲಾಗುತ್ತಿದೆ, ಸ್ವೀಡನ್ನಿನ ಸರಕಾರ ಸ್ಥಾಪಿಸಿರುವ ಸಮಿತಿ ಪ್ರತಿವರ್ಷ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ ಮತ್ತು ಡಿಸೆಂಬರ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತೆದೆ.

ಕನ್ನಡದಲ್ಲಿ ನೊಬೆಲ್ ಪುರಸ್ಕೃತರ ಕುರಿತು ಪರಿಚಯಿಸು ಗ್ರಂಥ ಇದು. ೧೯೦೧ ರಿಂದ ೨೦೧೦ರವರೆಗೆ ಭೌತ ವಿಜ್ಞಾನ, ರಾಸಾಯನ ವಿಜ್ಞಾನ, ವೈದ್ಯ ವಿಜ್ಞಾನ, ಸಾಹಿತ್ಯ, ಶಾಂತಿ, ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರ ಜೀವನ ಮತ್ತು ಸಾಧನೆಗಳನ್ನು ಸಂಕ್ಷಿಪ್ತವಾಗಿ ಭಾವಚಿತ್ರದೊಂಡಿಗೆ ಪರಿಚಯ ಮಾಡಿಕೊಡುವ ಒಂದು ಮಾಹಿತಿ ಕೋಶ.

ಶಾಲಾ ವಿದ್ಯಾರ್ಥಿಗಳು ಈ ಪುಸ್ತಕ ಉಪಯೋಗ ಪಡೆಯ ಬಹುದು.

ಬಾಹ್ಯ ಸಂಪರ್ಕ[ಬದಲಾಯಿಸಿ]

ನೊಬೆಲ್ ಪುಸ್ಕೃತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗಳು[ಬದಲಾಯಿಸಿ]