ಕೆ. ಎಸ್. ನಿಸಾರ್ ಅಹಮದ್
ಗೋಚರ
(ನಿಸಾರ್ ಅಹಮ್ಮದ್ ಇಂದ ಪುನರ್ನಿರ್ದೇಶಿತ)
ಪ್ರೊ. ಕೆ. ಎಸ್. ನಿಸಾರ್ ಅಹಮದ್ | |
---|---|
ಜನನ | ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ | ೫ ಫೆಬ್ರವರಿ ೧೯೩೬
ಮರಣ | 3 May 2020[೧] ಬೆಂಗಳೂರು, yelahanka | (aged 84)
ವೃತ್ತಿ | ಸಾಹಿತಿ, ಪ್ರಾಧ್ಯಾಪಕ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಾವ್ಯ ಮತ್ತು ವಿಮರ್ಶೆ |
ಸಾಹಿತ್ಯ ಚಳುವಳಿ | ನವ್ಯ ಕಾವ್ಯ |
ಪ್ರಮುಖ ಕೆಲಸ(ಗಳು) | ಮನಸು ಗಾಂಧಿ ಬಜಾರು(1960) ನಿತ್ಯೋತ್ಸವ |
ಪ್ರಮುಖ ಪ್ರಶಸ್ತಿ(ಗಳು) | ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧) |
ಪ್ರಭಾವಗಳು |
ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಕವಿಯಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.
ಜೀವನ
[ಬದಲಾಯಿಸಿ]ನಿಸಾರ್ ಅಹಮದ್ ಬೆಂಗಳೂರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂರಚನಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತರು
ಸಾಹಿತ್ಯ
[ಬದಲಾಯಿಸಿ]ನಿಸಾರ್ ಅಹಮದ್ [೨] ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
- ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.[೩]
- ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು,ಗೀತೆಗಳು ಸಂಗೀತದೊಂದಿಗೆ ಪ್ರಚಾರಗೊಂಡಿತು.
- ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ
- ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
- ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ಕೃತಿಗಳು
[ಬದಲಾಯಿಸಿ]ಕವನ ಸಂಕಲನಗಳು
[ಬದಲಾಯಿಸಿ]- ಮನಸು ಗಾಂಧಿ ಬಜಾರು (೧೯೬೦)[೪]
- ನೆನೆದವರ ಮನದಲ್ಲಿ (೧೯೬೪)
- ಸುಮುಹೂರ್ತ (೧೯೬೭)
- ಸಂಜೆ ಐದರ ಮಳೆ (೧೯೭೦)
- ನಾನೆಂಬ ಪರಕೀಯ (೧೯
- ನಿತ್ಯೋತ್ಸವ (೧೯೭೬)
- ಸ್ವಯಂ ಸೇವೆಯ ಗಿಳಿಗಳು (೧೯೭೭)
- ಅನಾಮಿಕ ಆಂಗ್ಲರು(೧೯೮೨),
- ಬಹಿರಂತರ (೧೯೯೦)
- ಸಮಗ್ರ ಕವಿತೆಗಳು (೧೯೯೧)
- ನವೋಲ್ಲಾಸ (೧೯೯೪)
- ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
- ಅರವತ್ತೈದರ ಐಸಿರಿ(೨೦೦೧)
- ಸಮಗ್ರ ಭಾವಗೀತೆಗಳು(೨೦೦೧)
- ಪ್ರಾತಿನಿಧಿಕ ಕವನಗಳು(೨೦೦೨)
- ನಿತ್ಯೋತ್ಸವ ಕವಿತೆ [೫]
ಗದ್ಯ ಸಾಹಿತ್ಯ
[ಬದಲಾಯಿಸಿ]- ಅಚ್ಚುಮೆಚ್ಚು
- ಇದು ಬರಿ ಬೆಡಗಲ್ಲೊ ಅಣ್ಣ
- ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ
- ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ೨೦೦೬ರ ಮಾಸ್ತಿ ಪ್ರಶಸ್ತಿ.
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಗೊರೂರು ಪ್ರಶಸ್ತಿ
- ಅನಕೃ ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
- ಪಂಪ ಪ್ರಶಸ್ತಿ
- ೧೯೮೧ರ ರಾಜ್ಯೋತ್ಸವ ಪ್ರಶಸ್ತಿ
- ೨೦೦೩ರ ನಾಡೋಜ ಪ್ರಶಸ್ತಿ
- ೨೦೦೬ರ ಅರಸು ಪ್ರಶಸ್ತಿ
- ೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ "ಕೆ ಎಸ್ ನಿಸಾರ್ ಅಹಮದ್ ನಿಧನ". ಪ್ರಜಾವಾಣಿ. Retrieved 3 May 2020.
- ↑ ಕೆ. ಎಸ್. ನಿಸಾರ್ ಅಹಮದ್[permanent dead link]
- ↑ ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು
- ↑ 'ಮಾಸ್ತಿ': ಅವರಿಲ್ಲದ ಗಾಂಧೀಬಜಾರು ಬರೀ ಬೇಜಾರು
- ↑ ಭಾವಗೀತೆ, ಜೋಗದ ಸಿರಿಬೆಳಕಿನಲ್ಲಿ
ಹೊರಸಂಪರ್ಕಕೊಂಡಿಗಳು
[ಬದಲಾಯಿಸಿ]ವರ್ಗಗಳು:
- Pages using the JsonConfig extension
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Pages using div col with unknown parameters
- ಸಾಹಿತಿಗಳು
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ೧೯೩೬ ಜನನ
- ೨೦೨೦ ನಿಧನ
- ನಾಡೋಜ ಪ್ರಶಸ್ತಿ ಪುರಸ್ಕೃತರು
- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
- ಕವಿಗಳು
- ಪಂಪ ಪ್ರಶಸ್ತಿ ಪುರಸ್ಕೃತರು
- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು