ನಂಜುಂಡಾರಾಧ್ಯ

ವಿಕಿಪೀಡಿಯ ಇಂದ
Jump to navigation Jump to search

ಕಿಕ್ಕೇರಿ ನಂಜುಂಡಾರಾಧ್ಯ:- ನಂಜುಂಡಾರಾಧ್ಯ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯವನು. ಈತನ ಕಾಲ ಸುಮಾರು ಕ್ರಿ.ಶ.೧೫೫೦. ಭೈರವೇಶ್ವರ ಕಾವ್ಯ ಇವರ ಪ್ರಮುಖ ಕೃತಿ. ಭೈರವ ರಾಜನ ಚರಿತೆ ಇದರ ಕಥಾವಸ್ತು. ಬಸವಲಿಂಗ ಕವಿಯ 'ಭೈರವೇಶ್ವರ ಪುರಾಣ ಕಥಾಸಾಗರ', ಸಿದ್ದಲಿಂಗ ಶಿವಯೋಗಿಯ 'ಭೈರವೇಶ್ವರ ಪುರಾಣ', ಶಾಂತಲಿಂಗ ದೇಶಿಕನ 'ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ರತ್ನಾಕರ' ಕೃತಿಗಳು ಇದೇ ವಿಷಯ ಆಧರಿಸಿ ರಚಿತವಾಗಿವೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.