ನಂಜನಗೂಡು ರಸಬಾಳೆಹಣ್ಣು
ನಂಜನಗೂಡು ಬಾಳೆಹಣ್ಣು | |
---|---|
ಬದಲಿ ಹೆಸರುಗಳು | ನಂಜನಗೂಡು ರಸಬಾಳೆಹಣ್ಣು |
ಪ್ರದೇಶ | ಮೈಸೂರು & ಚಾಮರಾಜನಗರ |
ದೇಶ | ಭಾರತ |
ನೊಂದಾಯಿಸಿದ್ದು | 2005 |
ಅಧಿಕೃತ ಜಾಲತಾಣ | ipindia |
ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡಿನ ರಸಬಾಳೆಹಣ್ಣು ಎಂದು ಕರೆಯುತ್ತಾರೆ. ಭಾರತದ, ಕರ್ನಾಟಕ ರಾಜ್ಯದ, ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಈ ಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ಇದು ನಂಜನಗೂಡು ಸಮೀಪದಲ್ಲಿರುವ ದೇವರಸನಹಳ್ಳಿ ಗ್ರಾಮದಿಂದ ಬಂದ ಬಾಳೆ ಹಣ್ಣಿನ ಜನಪ್ರಿಯ ತಳಿಯಾಗಿದೆ. ನಂಜನಗೂಡು ಬಾಳೆಗೆ ಭೌಗೋಳಿಕ ಸೂಚಕ ಟ್ಯಾಗ್ ಸಂಖ್ಯೆ ೨೯ಅನ್ನು ನೀಡಲಾಗಿದೆ.[೧] ಈ ಟ್ಯಾಗ್ ಬಾಳೆಹಣ್ಣಿನ ವಿಶಿಷ್ಟ ಗುರುತನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ.
ಕಯ್ಯಾರ ಕಿಞ್ಞಣ್ಣ ರೈ ಅವರ ಹಣ್ಣು ಮಾರುವವನ ಹಾಡಿನ[೨] ಮೂಲಕ ಇದು ಕನ್ನಡ ಸಾಹಿತ್ಯ ಲೋಕದಲ್ಲೂ ಪ್ರಸಿದ್ದವಾಗಿದೆ[೩].
ನಂಜನಗೂಡಿನ ರಸಬಾಳೆತಂದಿಹೆ ಕೊಡಗಿನ ಕಿತ್ತಳೆ ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು
ಕೃಷಿ
[ಬದಲಾಯಿಸಿ]ನಂಜನಗೂಡು ರಸಬಾಳೆ ಕೃಷಿಗೆ ವಿಶೇಷವಾದ ಮಣ್ಣು ಮತ್ತು ಹವಾಮಾನದ ಅಗತ್ಯವಿದೆ. ಈ ಕೃಷಿಯನ್ನು ಮುಖ್ಯವಾಗಿ ನಂಜನಗೂಡು ಸಮೀಪದ ದೇವರಸನಹಳ್ಳಿ ಪ್ರದೇಶದಲ್ಲಿ ನಡೆಯುತ್ತದೆ. ಈ ಪ್ರದೇಶದ ಪರಂಪರೆಯ ಕೃಷಿ ಪದ್ಧತಿಗಳು ಮತ್ತು ನೈಸರ್ಗಿಕ ಪರಿಸರವು ಬಾಳೆಹಣ್ಣಿನ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಸಹಾಯಕವಾಗಿವೆ. ಇಲ್ಲಿನ ಬಾಳೆ ಬೆಳೆಗೆ ಕಪಿಲಾ ನದಿಯ ತಟದಲ್ಲಿ ಕಂಡುಬರುವ ಕಪ್ಪು, ಲವಣಯುಕ್ತ ಮೆಕ್ಕಲು ಮಣ್ಣು ಅತ್ಯಂತ ಸೂಕ್ತವಾಗಿದೆ. ಸಾವಯವ ಕೃಷಿ ವಿಧಾನಗಳಲ್ಲಿ ಬೆಳೆಯುವ ಮೂಲಕ ಬಾಳೆಹಣ್ಣು ವಿಶೇಷ ರುಚಿ ಮತ್ತು ಸುಗಂಧವನ್ನು ಪಡೆಯುತ್ತದೆ. ಇತರ ಪ್ರದೇಶಗಳಲ್ಲಿ ಬೆಳೆಯುವ ಬಾಳೆಹಣ್ಣು ಗಟ್ಟಿಯಾಗಿದ್ದು, ತನ್ನ ಸ್ವಾಭಾವಿಕ ಸುವಾಸನೆಯನ್ನು ಕಳೆದುಕೊಳ್ಳುತ್ತದೆ. ತಜ್ಞರ ಅಭಿಪ್ರಾಯದ ಪ್ರಕಾರ, ಈ ವಿಶೇಷ ರುಚಿ ಮತ್ತು ಸುವಾಸನೆ ಇದಕ್ಕೆ ಸಂಬಂಧಿಸಿದ ಜೀನುಗಳಲ್ಲಿ ಅಡಗಿದಿವೆ. [೪].
ಮಾರುಕಟ್ಟೆ ಮತ್ತು ಲಭ್ಯತೆ
[ಬದಲಾಯಿಸಿ]ಇದನ್ನು ಸಾಂಪ್ರದಾಯಿಕ ಹಬ್ಬಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಬಾಳೆಹಣ್ಣು ಸ್ಥಳೀಯ ರೈತರಿಗೆ ಗಮನಾರ್ಹ ಆರ್ಥಿಕ ಲಾಭವನ್ನು ತಂದು ಕೂಡುತ್ತದೆ. ಜಿಐ ಟ್ಯಾಗ್ ಬಾಳೆಹಣ್ಣಿನ ಸತ್ಯಾಸತ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಣ್ಣು ಗಾತ್ರದಲ್ಲಿ ಚಿಕ್ಕಾದಾಗಿಯು ಮತ್ತು ತಿನ್ನಲು ಬೆಣ್ಣೆಯಷ್ಟು ಮೆತ್ತಗಿರುತ್ತದೆ. ಸಾಮಾನ್ಯವಾಗಿ ಇದನ್ನ ಸಿಪ್ಪೆಸಮೇತ ತಿನ್ನುತ್ತಾರೆ. ಅನ್ಯಪ್ರದೇಶಗಳಲ್ಲಿ ಬೆಳೆಯಲು ಆಗದ ಕಾರಣ ಇದರ ಲಭ್ಯತೆಯು ಕಡಿಮೆ ಹಾಗಗಿ ಇದಕ್ಕೆ ಒಳ್ಳೆ ಬೇಡಿಕೆ ಇದೆ.
ಇತ್ತೀಚಿಗೆ ರಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ, ಆಕಾರ ಮತ್ತು ಸುವಾಸನೆ ಬದಲಾಗುತ್ತಿದೆ[೫][೪][೬].
ಅಳತೆ
[ಬದಲಾಯಿಸಿ]ನಂಜನಗೂಡು ಬಾಳೆಹಣ್ಣಿನ ಘಾತ್ರ ಅನ್ಯ ಬಾಳೇಹಣ್ಣುಗಳಿಗಿಂತಲೂ ಚಿಕ್ಕದು . ಇದು ೫-೮ cm. ಉದ್ದವಿದ್ದು, ಹಣ್ಣಿನ ಮಧ್ಯದ ಕೊಳವಿ ಭಾಗದ ವ್ಯಾಸ ೨-೩ cm. ಇರುತ್ತದೆ. ಇದರ ಸಿಪ್ಪೆ ತೆಳುವಾಗಿರುತ್ತದೆ. ಸಾವಯವ ನಂಜನಗೂಡು ಬಾಳೆಹಣ್ಣು ಚನ್ನಾಗಿ ಕಳೆತಾಗ ಅದರ ಸಿಪ್ಪೆಯನ್ನು ಹಣ್ಣಿನೊಂದಿಗೆ , ಇಲ್ಲವೆ ಸಿಪ್ಪೆಯನ್ನು ಪ್ರತ್ಯೇಕವಾಗಿ (ಹಸಿಯಾಗಿ ಇಲ್ಲವೆ ತರಕಾರಿಯ ಪದಾರ್ತದಂತೆ)ತಿನ್ನುವುದೂ ಉಂಟು.
ಭೌಗೋಳಿಕ ಸೂಚನೆ
[ಬದಲಾಯಿಸಿ]ಕರ್ನಾಟಕ ಸರ್ಕಾರದ ತೋಟಗಾರಿಕ ಇಲಾಖೆ ನಂಜನಗೂಡು ಬಾಳೆಹಣ್ಣಿನ ನೋಂದಣಿ ಗೂಡ್ಸ್ ಆಕ್ಟ್, ೧೯೯೯ ಭೌಗೋಳಿಕ ಲಕ್ಷಣಗಳ (ಭೌಗೋಳಿಕ ಕುರುಹು) ಅಡಿಯಲ್ಲಿ, ಪೆಟೆಂಟ್ ಗಳಿಸಿತು. ಡಿಸೈನ್ಸ್ ನಿಯಂತ್ರಕ ಜನರಲ್ ಮತ್ತು ಟ್ರೇಡ್ಮಾರ್ಕ್ ಕಚೇರಿಯು ಮೈಸೂರು ರೈತರಿಗೆ ನಂಜನಗೂಡು ಬಾಳೆಹಣ್ಣಿನ ಮತ್ತು ಅದರ ಉತ್ಪನ್ನಗಳ ಬ್ರಾಂಡ್ ಹಕ್ಕು ನೀಡಿದೆ.[೪] ಇದಕ್ಕೆ ಭೌಗೋಳಿಕ ಲಕ್ಷಣದ ನೊಂದಣಿ ೨೦೦೫ ರಲ್ಲಿ ದೊರೆಯಿತು.
ಇವನ್ನೂ ನೋಡಿ
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕರ್ನಾಟಕಕ್ಕೆ ಸಿಕ್ಕಿದ ಇನ್ನಿತರ GI TAG ಗಳು
- ಭಾರತ ಸರ್ಕಾರದ Geographical indication registry Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ https://www.deccanherald.com/india/karnataka/mysurus-nanjangud-banana-slipping-out-of-farmers-favour-1237125.html
- ↑ "ಕಯ್ಯಾರ ಕಿಞ್ಞಣ್ಣ ರೈ ಅವರ ಹಣ್ಣು ಮಾರುವವನ ಹಾಡು". Archived from the original on 2017-04-29. Retrieved 2017-03-24.
- ↑ "ನಂಜನಗೂಡಿನ ರಸಬಾಳೆ-ಸಾಹಿತ್ಯ: ಕಯ್ಯಾರ ಕಿಞ್ಞಣ್ಣ ರೈ".
{{cite web}}
: CS1 maint: url-status (link) - ↑ ೪.೦ ೪.೧ ೪.೨ Geographical Indications Journal (8–11). New Delhi: Government of India: 44–49. 2005 https://web.archive.org/web/20130809224647/http://ipindia.nic.in/girindia/journal/8.pdf. Archived from the original (PDF) on 2013-08-09. Retrieved 2016-08-12.
{{cite journal}}
: Missing or empty|title=
(help) - ↑ "Mangoes and grapes give K'taka farmers sweet taste of success". Times of India. 2016.
- ↑ "Farmers Come Together to Save Nanjangud Rasabale". the new indian express. 2015. Archived from the original on 2016-02-02. Retrieved 2016-08-12.