ವಿಷಯಕ್ಕೆ ಹೋಗು

ಭೌಗೋಳಿಕ ಕುರುಹು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೌಗೋಳಿಕ ಕುರುಹು (GI)ಎಂಬುದು ಒಂದು ವಸ್ತುವಿನ ಅಥವ ಸಾಮಗ್ರಿಯ ಮೂಲವನ್ನು ನಿರ್ದಿಷ್ಟವಾಗಿ ಒಂದು ಭೌಗೋಳಿಕ ಸ್ಥಳಕ್ಕೆ(ಕ್ಷೇತ್ರ, ಜಾಗ, ಊರು, ದೇಶ) ಗುರುತಿಸುವ ವಿಧಾನ (ಸೂಚಿ ). ಈ ಬಗೆಯಲ್ಲಿ ವಸ್ತುಗಳನ್ನು ಭೌಗೋಳಿಕ ಕುರುಹಿನಿಂದ ಸೂಚಿಸುವುದು ಆ ವಸ್ತುನಿನ ವಿಶೇಷತೆಯ ಬಗೆಗಿನ ನೊಂದಣಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಾಗು ವ್ಯಾಪಾರಗಳಲ್ಲಿ ಆ ವಸ್ತುವಿನ ವಿಶೇಷತೆಯ ಹಕ್ಕನು ನಿಗಧಿಗೊಳಿಸುವ ಒಂದು ಮಾರ್ಗವಾಗಿದಿ. ವಸ್ತು ವಿಶೇಷತೆ ನಿರ್ದಿಷ್ಟ ಮೂಲಗುಣಗಳನ್ನು ಗುರುತಿಸುವಂತಹುದ್ದಾಗಿರಬೇಕು. ಮೂಲಗಣಗಳೆಂದರೆ ತಯಾರಿಸುವ (ಉತ್ಪಾದಿಸುವ) ವಿಧಾನ, ಶೈಲಿ, ಖ್ಯಾತಿ, ರುಚಿ, ಪರಿಮಳ, ರಚನೆ, ವಿನ್ಯಾಸ ಗುಣಗಳಾಗಿದ್ದು,ಅವು ಆ ವಸ್ತು ಮತ್ತು ಕ್ಷೇತ್ರಗಳನ್ನು ಐತಿಹಾಸಿಕವಾಗಿ ಬೆಸೆದಿರಬೇಕು. ಉದಾ:

No. ಕರ್ನಾಟಕದ ಕೆಲ ಭೌಗೋಳಿಕ ಕುರುಹುಗಳು ವಸ್ತು ರಾಜ್ಯ
ಮೈಸೂರು ರೇಶ್ಮೆಕರಕುಶಲತೆಕರ್ನಾಟಕ
ಮೈಸೂರು ಅಗರಬತ್ತಿಉತ್ಪಾದನೆಕರ್ನಾಟಕ
ಚನ್ನಪಟ್ಟನದ ಬೊಂಬೆಗಳುಕರಕುಶಲತೆಕರ್ನಾಟಕ
ಮೈಸೂರು ರೋಸ್ ವುಡ್ ಒಳಕ್ರಿಯೆಕರಕುಶಲತೆಕರ್ನಾಟಕ
ಮೈಸೂರು ಗಂಧದ ಎಣ್ಣೆಉತ್ಪಾದನೆಕರ್ನಾಟಕ
ಮೈಸೂರು ಗಂಧದ ಸಾಬುಉತ್ಪಾದನೆಕರ್ನಾಟಕ
ಕಸ್ತೂರಿ ನೂಲಿನ ಕಲೆಕರಕುಶಲತೆಕರ್ನಾಟಕ
ಮೈಸೂರು ಕುಂಚಕಲೆಕರಕುಶಲತೆಕರ್ನಾಟಕ
ಮೈಸೂರು ವಿಳ್ಯದ ಎಲೆಕೃಷಿಕರ್ನಾಟಕ
೧೦ನಂಜನಗೂಡು ಬಾಳೆಹಣ್ಣುಕೃಷಿಕರ್ನಾಟಕ
೧೧Mysore Jasmineಕೃಷಿಕರ್ನಾಟಕ
೧೨Udupi Jasmineಕೃಷಿಕರ್ನಾಟಕ
೧೩Hadagali Jasmineಕೃಷಿಕರ್ನಾಟಕ
೧೪ಇಲ್ಕಲ್ ಸೀರೇಗಳುಕರಕುಶಲತೆಕರ್ನಾಟಕ
೧೫ಮೈಸೂರು ಪಾಕ್[]ಸಿಹಿ ತಿನಿಸುಕರ್ನಾಟಕ
೧೬ಕೊಡಗಿನ ಕಿತ್ತಳೆಕೃಷಿಕರ್ನಾಟಕ

ಉಲ್ಲೇಖಗಳು

[ಬದಲಾಯಿಸಿ]
  1. "Tamil Nadu celebrates Mysore Pak day today". 20 September 2013. Archived from the original on 28 ಜನವರಿ 2016. Retrieved 22 January 2016.