ದ ಡಾರ್ಕ್ ನೈಟ್ (ಚಲನಚಿತ್ರ)
ದಿ ಡಾರ್ಕ್ ನೈಟ್ | |
---|---|
![]() ಪೋಸ್ಟರ್ | |
ನಿರ್ದೇಶನ | ಕ್ರಿಸ್ಟೋಫರ್ ನೋಲನ್ |
ನಿರ್ಮಾಪಕ |
|
ಚಿತ್ರಕಥೆ |
|
ಕಥೆ |
|
ಆಧಾರ | Characters appearing in comic books published by DC Comics |
ಪಾತ್ರವರ್ಗ | |
ಸಂಗೀತ | |
ಛಾಯಾಗ್ರಹಣ | ವಾಲಿ ಫಿಸ್ಟರ್ |
ಸಂಕಲನ | ಲೀ ಸ್ಮಿತ್ |
ವಿತರಕರು | ವಾರ್ನರ್ ಬ್ರದರ್ಸ್ ಪಿಕ್ಚರ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 152 ನಿಮಿಷಗಳು |
ದೇಶ |
|
ಭಾಷೆ | ಆಂಗ್ಲ ಭಾಷೆ |
ಬಂಡವಾಳ | $ 185 ಮಿಲಿಯನ್ |
ಬಾಕ್ಸ್ ಆಫೀಸ್ | $ 1.005 ಬಿಲಿಯನ್ |
ದ ಡಾರ್ಕ್ ನೈಟ್ 2008ರ ಒಂದು ಸೂಪರ್‌ಹೀರೊ ಚಲನಚಿತ್ರ. ಕ್ರಿಸ್ಟೋಫರ್ ನೋಲನ್ ಈ ಚಿತ್ರದ ನಿರ್ದೇಶಕರು, ಸಹ ನಿರ್ಮಾಪಕರು ಮತ್ತು ಸಹ ಬರಹಗಾರರಾಗಿದ್ದರು. ಡಿ.ಸಿ. ಕಾಮಿಕ್ಸ್‌ನ ಬ್ಯಾಟ್‍ಮ್ಯಾನ್ ಪಾತ್ರದ ಮೇಲೆ ಆಧಾರಿತವಾದ ಈ ಚಲನಚಿತ್ರವು ನೋಲನ್‍ರ ದ ಡಾರ್ಕ್ ನೈಟ್ ತ್ರಯದ ಎರಡನೇ ಕಂತಾಗಿದೆ ಮತ್ತು ೨೦೦೫ರ ಚಿತ್ರ ಬ್ಯಾಟ್‍ಮಾನ್ ಬಿಗಿನ್ಸ್ನ ಉತ್ತರಭಾಗವಾಗಿದೆ. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕ್ರಿಸ್ಚನ್ ಬೇಲ್ ನಟಿಸಿದ್ದಾರೆ ಮತ್ತು ಪೋಷಕ ಪಾತ್ರಗಳಲ್ಲಿ ಮೈಕಲ್ ಕೇನ್, ಹೀತ್ ಲೆಜರ್, ಗ್ಯಾರಿ ಓಲ್ಡ್‌ಮನ್, ಆರನ್ ಎಖಾರ್ಟ್, ಮ್ಯಾಗಿ ಜಿಲನ್‍ಹಾಲ್ ಮತ್ತು ಮೊರ್ಗನ್ ಫ಼್ರೀಮನ್ ನಟಿಸಿದ್ದಾರೆ. ಚಿತ್ರದಲ್ಲಿ, ಬ್ರೂಸ್ ವೇನ್ / ಬ್ಯಾಟ್‍ಮ್ಯಾನ್ (ಬೇಲ್), ಪೋಲಿಸ್ ಲೆಫ಼್ಟಿನೆಂಟ್ ಜೇಮ್ಸ್ ಗಾರ್ಡನ್ (ಓಲ್ಡ್‌ಮನ್) ಹಾಗೂ ಜಿಲ್ಲಾ ಅಟಾರ್ನಿ ಹಾರ್ವಿ ಡೆಂಟ್ ಗಾಥಮ್ ಸಿಟಿಯಲ್ಲಿನ ಸಂಘಟಿತ ಅಪರಾಧವನ್ನು ಕಿತ್ತುಹಾಕಲು ಒಂದು ಕೂಟವನ್ನು ರಚಿಸಿಕೊಳ್ಳುತ್ತಾರೆ. ಆದರೆ ಜೋಕರ್ (ಲೆಜರ್) ಎಂದು ಕರೆಯಲ್ಪಡುವ ಒಬ್ಬ ಅರಾಜಕತಾವಾದಿ ಮಹಾಮೇಧಾವಿಯಿಂದ ಭೀತಿಗೊಳಗಾಗುತ್ತಾರೆ. ಇವನು ಬ್ಯಾಟ್‍ಮ್ಯಾನ್‍ನ ಪ್ರಭಾವವನ್ನು ದುರ್ಬಲಗೊಳಿಸಿ ನಗರವನ್ನು ಅವ್ಯವಸ್ಥೆಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾನೆ.
೧೯೪೦ರಲ್ಲಿ ಜೋಕರ್‌ನ ವಿನೋದ ಚಿತ್ರಪುಸ್ತಕದ ಪ್ರಥಮ ಪ್ರವೇಶ, ೧೯೮೮ರ ರೇಖಾಚಿತ್ರ ಕಾದಂಬರಿ ದ ಕಿಲಿಂಗ್ ಜೋಕ್ ಮತ್ತು ಹಾರ್ವಿ ಡೆಂಟ್‍ನ ಮೂಲವನ್ನು ಬೇರೆ ರೀತಿಯಲ್ಲಿ ಹೇಳಿದ ೧೯೯೬ರ ಸರಣಿ ದ ಲಾಂಗ್ ಹ್ಯಾಲೊವೀನ್ ಚಲನಚಿತ್ರಕ್ಕಾಗಿ ನೋಲನ್‍ರ ಸ್ಫೂರ್ತಿಯಾಗಿತ್ತು. "ಡಾರ್ಕ್ ನೈಟ್" ಎನ್ನುವುದು ಬ್ಯಾಟ್‍ಮ್ಯಾನ್‍ಗೆ ಅನ್ವಯಿಸಲಾದ ಅಡ್ಡಹೆಸರಾಗಿದೆ.[೧][೨] ದ ಡಾರ್ಕ್ ನೈಟ್ ಅನ್ನು ಮುಖ್ಯವಾಗಿ ಷಿಕಾಗೊ, ಜೊತೆಗೆ ಅಮೇರಿಕ, ಯುನೈಟಡ್ ಕಿಂಗ್ಡಮ್ ಹಾಗೂ ಹಾಂಗ್ ಕಾಂಗ್‍ನ ಹಲವು ಇತರ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು. ಚಲನಚಿತ್ರದಲ್ಲಿ ಜೋಕರ್‌ನ ಮೊದಲ ತೋರಿಕೆ ಸೇರಿದಂತೆ, ಕೆಲವು ದೃಶ್ಯಾವಳಿಗಳನ್ನು ಚಿತ್ರೀಕರಿಸಲು ನೋಲನ್ ಐಮ್ಯಾಕ್ಸ್ ೭೦ ಮಿ.ಮಿ. ಕ್ಯಾಮರಾಗಳನ್ನು ಬಳಸಿದರು. ಆರಂಭದಲ್ಲಿ ದ ಡಾರ್ಕ್ ನೈಟ್ಗಾಗಿ ವಾರ್ನರ್ ಬ್ರದರ್ಸ್ ವೈರಲ್ ಮಾರಾಟಗಾರಿಕಾ ಪ್ರಚಾರವನ್ನು ಸೃಷ್ಟಿಸಿದರು, ಪ್ರಚಾರದ ಜಾಲತಾಣಗಳು ಮತ್ತು ಜೋಕರ್ ಆಗಿ ಲೆಜರ್‌ನ ತೆರೆಚಿತ್ರಗಳನ್ನು ಎತ್ತಿತೋರಿಸುವ ಮಾದರಿ ತುಣುಕುಗಳನ್ನು ಅಭಿವೃದ್ಧಿಪಡಿಸಿದರು. ಚಿತ್ರೀಕರಣವನ್ನು ಮುಗಿಸಿದ ಕೆಲವು ತಿಂಗಳ ನಂತರ, ಮತ್ತು ಚಿತ್ರದ ಬಿಡುಗಡೆಯ ಆರು ತಿಂಗಳು ಮೊದಲು, ಲೆಜರ್ ಜನೆವರಿ ೨೨, ೨೦೦೮ ರಂದು, ಸೂಚಿಸಿದ ಔಷಧಿಗಳ ವಿಷಕಾರಿ ಸಂಯೋಜನೆಯ ಕಾರಣದಿಂದ ಸಾವನ್ನಪ್ಪಿದರು. ಪರಿಣಾಮವಾಗಿ, ವಾರ್ತಾಪತ್ರಿಕೆಗಳಿಂದ ಮತ್ತು ಚಿತ್ರ ನೋಡುವ ಸಾರ್ವಜನಿಕರಿಂದ ತೀವ್ರ ಗಮನ ಸೆಳೆಯಿತು.
ಅಮೇರಿಕ ಮತ್ತು ಯುನೈಟಡ್ ಕಿಂಗ್ಡಮ್‍ನ ಸಹನಿರ್ಮಾಣವಾದ ದ ಡಾರ್ಕ್ ನೈಟ್ ಅಮೇರಿಕದಲ್ಲಿ ಜುಲೈ ೧೮,೨೦೦೮ ರಂದು ಮತ್ತು ಯುನೈಟಡ್ ಕಿಂಗ್ಡಮ್‍ನಲ್ಲಿ ಜುಲೈ ೨೫,೨೦೦೮ ರಂದು ಬಿಡುಗಡೆಗೊಂಡಿತು. ಆ ದಶಕದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಮತ್ತು ಸಾರ್ವಕಾಲಿಕ ಶ್ರೇಷ್ಠ ಸೂಪರ್‌ಹೀರೊ ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿತವಾದ[೩][೪] ಈ ಚಿತ್ರವು ಬಹಳ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅದರ ಸಾಹಸ ,ಸಂಗೀತ, ಚಿತ್ರಕಥೆ, (ವಿಶೇಷವಾಗಿ ಲೆಜರ್‌ನ) ನಟನೆಗಳು, ದೃಶ್ಯ ಪರಿಣಾಮಗಳು ಮತ್ತು ನಿರ್ದೇಶನಕ್ಕಾಗಿ. ಅದರ ಚಿತ್ರಮಂದಿರ ಪ್ರದರ್ಶನಗಳ ಅವಧಿಯಲ್ಲಿ ಅಸಂಖ್ಯಾತ ದಾಖಲೆಗಳನ್ನು ಸ್ಥಾಪಿಸಿತು.[೫] ದ ಡಾರ್ಕ್ ನೈಟ್ ೨೮೭ ವಿಮರ್ಶಕರ ಹತ್ತು ಅಗ್ರ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು ಮತ್ತು ಹೆಚ್ಚಿನ ವಿಮರ್ಶಕರು ದ ಡಾರ್ಕ್ ನೈಟ್ ಅನ್ನು ಆ ವರ್ಷ ಬಿಡುಗಡೆಯಾದ ಅತ್ಯುತ್ತಮ ಚಿತ್ರವೆಂದು ಹೆಸರಿಸಿದರು.[೬] ವಿಶ್ವಾದ್ಯಂತ $1 ಬಿಲಿಯನ್‍ಗಿಂತ ಹೆಚ್ಚು ಹಣಗಳಿಸಿದ ಈ ಚಿತ್ರವು ೨೦೦೮ರ ಅತ್ಯಂತ ಹೆಚ್ಚು ಹಣಗಳಿಸಿದ ಚಿತ್ರವಾಯಿತು. ಈ ಚಲನಚಿತ್ರವು ಎಂಟು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆಯಿತು; ಇದು ಅತ್ಯುತ್ತಮ ಧ್ವನಿ ಸಂಕಲನಕ್ಕಾಗಿ ಪ್ರಶಸ್ತಿ ಪಡೆಯಿತು ಮತ್ತು ಲೆಜರ್‌ಗೆ ಮರಣೋತ್ತರವಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಲಾಯಿತು.[೭] ಚಿತ್ರತ್ರಯದಲ್ಲಿನ ಅಂತಿಮ ಚಿತ್ರವಾದ ದ ಡಾರ್ಕ್ ನೈಟ್ ರೈಸಸ್ ಜುಲೈ ೨೦,೨೦೧೨ರಂದು ಬಿಡುಗಡೆಯಾಯಿತು.

ಪಾತ್ರವರ್ಗ[ಬದಲಾಯಿಸಿ]
- ಬ್ರೂಸ್ ವೇನ್ / ಬ್ಯಾಟ್ಮ್ಯಾನ್ ಆಗಿ ಕ್ರಿಶ್ಚಿಯನ್ ಬೇಲ್
- ಆಲ್ಫ್ರೆಡ್ ಪೆನ್ನಿವರ್ತ್ ಆಗಿ ಮೈಕೆಲ್ ಕೈನ್
- ಜೋಕರ್ ಆಗಿ ಹೀತ್ ಲೆಡ್ಜರ್
- ಜೇಮ್ಸ್ ಗೋರ್ಡಾನ್ ಪಾತ್ರದಲ್ಲಿ ಗ್ಯಾರಿ ಓಲ್ಡ್ಮನ್
- ಹಾರ್ವೆ ಡೆಂಟ್ ಆಗಿ ಆರನ್ ಎಕ್ಹಾರ್ಟ್
- ರಾಚೆಲ್ ಡಾವೆಸ್ ಪಾತ್ರದಲ್ಲಿ ಮ್ಯಾಗಿ ಗಿಲೆನ್ಹಾಲ್
- ಲುಸಿಯಸ್ ಫಾಕ್ಸ್ ಪಾತ್ರದಲ್ಲಿ ಮೋರ್ಗನ್ ಫ್ರೀಮನ್

ಕಥಾವಸ್ತು[ಬದಲಾಯಿಸಿ]
ಅಪರಾಧಿಗಳ ಒಂದು ಗುಂಪು ಗಾಥಮ್ ನಗರದ ಒಂದು ಮಾಬ್ ಬ್ಯಾಂಕ್‍ನ್ನು ದರೋಡೆ ಮಾಡುತ್ತಾರೆ. ಹಣದ ಹೆಚ್ಚಿನ ಪಾಲಿಗಾಗಿ ಒಬ್ಬರನ್ನೊಬ್ಬರು ಸಾಯಿಸುತ್ತಾರೆ. ಕೊನೆಯಲ್ಲಿ ಜೋಕರ್ ಒಬ್ಬನೇ ಉಳಿದು ಹಣದೊಂದಿಗೆ ತಪ್ಪಿಸಿಕೊಳ್ಳುತ್ತಾನೆ. ಬ್ಯಾಟ್‍ಮ್ಯಾನ್, ಪೋಲಿಸ್ ಲೆಫ಼್ಟಿನೆಂಟ್ ಜೇಮ್ಸ್ ಗಾರ್ಡನ್ ಹಾಗೂ ಜಿಲ್ಲಾ ಅಟಾರ್ನಿ ಹಾರ್ವಿ ಡೆಂಟ್ ಗಾಥಮ್ ಸಿಟಿಯಲ್ಲಿನ ಸಂಘಟಿತ ಅಪರಾಧವನ್ನು ಕಿತ್ತುಹಾಕಲು ಒಂದು ಕೂಟವನ್ನು ರಚಿಸಿಕೊಳ್ಳುತ್ತಾರೆ. ಗಾಥಮ್‍ನ ರಕ್ಷಕನಾಗಿ ಡೆಂಟ್ ಇರುವುದರಿಂದ ತಾನು ಬ್ಯಾಟ್‍ಮ್ಯಾನ್ ಪಾತ್ರದಿಂದ ನಿವೃತ್ತನಾಗಿ ರೇಚಲ್ ಡಾಸ್‌ಳೊಂದಿಗೆ ಸಾಮಾನ್ಯ ಜೀವನ ಜೀವಿಸಬಹುದು ಎಂದು ಬ್ರೂಸ್ ವೇಯ್ನ್ ವಿಶ್ವಾಸವಿಡುತ್ತಾನೆ. ರೇಚಲ್ ಮತ್ತು ಡೆಂಟ್ ಪ್ರಣಯ ಸಂಬಂಧದಲ್ಲಿರುತ್ತಾರೆ.
ದುಷ್ಕರ್ಮಿ ಗುಂಪಿನ ಮುಖ್ಯಸ್ಥರು ಸಾಲ್ ಮರೋನಿ, ಗ್ಯಾಂಬೋಲ್ ಹಾಗೂ ಚೆಚೆನ್, ಅವರ ನಿಧಿಗಳನ್ನು ಸುರಕ್ಷಿತವಾಗಿ ಇಡಲು ತೆಗೆದುಕೊಂಡು ಹಾಂಗ್ ಕಾಂಗ್‍ಗೆ ಓಡಿಹೋಗಿರುವ ತಮ್ಮ ಭ್ರಷ್ಟ ಲೆಕ್ಕಿಗ ಲೌನೊಂದಿಗೆ ವೀಡಿಯೊ ಕಾನ್ಫರೆನ್ಸ್ ಏರ್ಪಡಿಸುತ್ತಾರೆ. ಬ್ಯಾಟ್‍ಮ್ಯಾನ್ ಕಾನೂನಿನಿಂದ ಅಪ್ರತಿಬದ್ಧನಾದ್ದರಿಂದ ಅವನು ಲೌ ನನ್ನು ಕಂಡುಹಿಡಿದು ಅವನಿಂದ ದುಷ್ಕರ್ಮಿಗಳ ಗುಂಪಿನ ಹಣವನ್ನು ಪಡೆಯುವನು ಎಂದು ಅವರಿಗೆ ಎಚ್ಚರಿಕೆ ನೀಡಲು ಜೋಕರ್ ಆ ಸಭೆಯನ್ನು ಅಡ್ಡಿಪಡಿಸುತ್ತಾನೆ. ಅವರ ಅರ್ಧ ಹಣದ ಬದಲಾಗಿ ತಾನು ಬ್ಯಾಟ್‍ಮ್ಯಾನ್‍ನ್ನು ಸಾಯಿಸುವೆನೆಂದು ಜೋಕರ್ ಪ್ರಸ್ತಾಪ ಮಾಡುತ್ತಾನೆ. ದುಷ್ಕರ್ಮಿಗಳ ಗುಂಪುಗಳ ಮುಖ್ಯಸ್ಥರು ಒಪ್ಪುವುದಿಲ್ಲ, ಮತ್ತು ಗ್ಯಾಂಬೋಲ್ ಜೋಕರ್‌ನ ಮೇಲೆ ಇನಾಮು ಇಡುತ್ತಾನೆ. ಜೋಕರ್ ಗ್ಯಾಂಬೋಲ್‍ನ್ನು ಪತ್ತೆಹಚ್ಚಿ ಕೊಲ್ಲುತ್ತಾನೆ ಮತ್ತು ಅವನ ಗುಂಪಿನ ಮುಖ್ಯಸ್ಥನಾಗುತ್ತಾನೆ. ದುಷ್ಕರ್ಮಿಗಳ ಗುಂಪು ಜೋಕರ್‌ನ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ನಿರ್ಧರಿಸುತ್ತದೆ.
ಬ್ಯಾಟ್‍ಮ್ಯಾನ್ ಲೌನನ್ನು ಹಾಂಗ್ ಕಾಂಗ್‍ನಲ್ಲಿ ಪತ್ತೆಹಚ್ಚಿ ಗಾಥಮ್‍ಗೆ ಸಾಕ್ಷಿಹೇಳಲು ಕರೆದುಕೊಂಡು ಬರುತ್ತಾನೆ. ಇದರಿಂದ ಇಡೀ ದುಷ್ಕರ್ಮಿ ಗುಂಪನ್ನು ಬಂಧಿಸಲು ಡೆಂಟ್‍ಗೆ ಅವಕಾಶವಾಗುತ್ತದೆ. ಬ್ಯಾಟ್‍ಮ್ಯಾನ್ ತನ್ನ ಗುರುತನ್ನು ಬಹಿರಂಗಪಡಿಸದಿದ್ದರೆ ಜನರನ್ನು ಸಾಯಿಸುವುದಾಗಿ ಜೋಕರ್ ಬೆದರಿಸುತ್ತಾನೆ, ಮತ್ತು ಪೋಲಿಸ್ ಆಯುಕ್ತ ಗಿಲನ್ ಲೋಬ್ ಹಾಗೂ ದುಷ್ಕರ್ಮಿ ಗುಂಪಿನ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶನನ್ನು ಕೊಲ್ಲುವ ಮೂಲಕ ಆರಂಭಿಸುತ್ತಾನೆ. ಜೋಕರ್ ಮೇಯರ್ ಆ್ಯಂತನಿ ಗಾರ್ಸಿಯಾನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ, ಆದರೆ ಕೊಲೆಯನ್ನು ತಡೆಯಲು ಗಾರ್ಡನ್ ತನ್ನನ್ನು ಬಲಿ ಕೊಟ್ಟುಕೊಳ್ಳುತ್ತಾನೆ. ಡೆಂಟ್ ಜೋಕರ್‌ನ ಒಬ್ಬ ಬಂಟನನ್ನು ಅಪಹರಿಸಿ ಪ್ರಾಣಘಾತಕ ತಲೆ ಮತ್ತು ಹಿಂಪಕ್ಕ ಆಟದಂತೆ ತೋರುವ ಬೆದರಿಕೆ ಹಾಕುತ್ತಾನೆ. ಬ್ಯಾಟ್‍ಮ್ಯಾನ್ ಮಧ್ಯಪ್ರವೇಶಿಸಿ ಯಾರಿಗಾದರೂ ಗೊತ್ತಾದರೆ ಅವನು ತಪ್ಪಿತಸ್ಥರೆಂದು ನಿರ್ಣಯಿಸಿದ ಎಲ್ಲ ಅಪರಾದಿಗಳು ಬಿಡುಗಡೆಯಾಗುವರು ಎಂದು ಡೆಂಟ್‍ಗೆ ಎಚ್ಚರಿಕೆ ನೀಡುತ್ತಾನೆ. ರೇಚಲ್ ಜೋಕರ್‌ನ ಮುಂದಿನ ಗುರಿಯೆಂದು ಡೆಂಟ್ ತಿಳಿದುಕೊಳ್ಳುತ್ತಾನೆ.
ಹೆಚ್ಚು ಸಾವುಗಳನ್ನು ತಡೆಯಲು ತನ್ನ ರಹಸ್ಯ ಗುರುತನ್ನು ಬಹಿರಂಗಪಡಿಸಲು ಬ್ರೂಸ್ ನಿರ್ಧರಿಸುತ್ತಾನೆ. ಆದರೆ ಹಾಗೆ ಮಾಡುವ ಮೊದಲು, ಜೋಕರ್‌ಗೆ ಆಮಿಷ ನೀಡಲು ತಾನೇ ಬ್ಯಾಟ್‍ಮ್ಯಾನ್ ಎಂದು ಡೆಂಟ್ ತಪ್ಪಾಗಿ ಘೋಷಿಸುತ್ತಾನೆ. ಡೆಂಟ್‍ನನ್ನು ರಕ್ಷಣಾತ್ಮಕ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ, ಆದರೆ ಜೋಕರ್ ಕಾಣಿಸಿಕೊಂಡು ವಾಹನಗಳ ಗುಂಪಿನ ಮೇಲೆ ದಾಳಿ ಮಾಡುತ್ತಾನೆ. ಡೆಂಟ್‍ನನ್ನು ಕಾಪಾಡಲು ಬ್ಯಾಟ್‍ಮ್ಯಾನ್ ಬರುತ್ತಾನೆ. ತನ್ನ ಸಾವಿನ ನಟನೆ ಮಾಡಿದ ಗಾರ್ಡನ್ ಜೋಕರ್‌ನನ್ನು ಬಂಧಿಸಿ ಆಯುಕ್ತ ಹುದ್ದೆಗೆ ಬಡ್ತಿ ಪಡೆಯುತ್ತಾನೆ. ಮರೋನಿಯ ವೇತನಪಟ್ಟಿಯಲ್ಲಿರುವ ಪತ್ತೆದಾರರು ಕಾವಲಾಗಿ ರೇಚಲ್ ಮತ್ತು ಡೆಂಟ್‍ರನ್ನು ಕರೆದೊಯ್ಯುತ್ತಾರೆ; ಅವರು ಮನೆಗೆ ಬರಲಿಲ್ಲವೆಂದು ಗಾರ್ಡನ್‍ಗೆ ನಂತರ ತಿಳಿಯುತ್ತದೆ. ಬ್ಯಾಟ್‍ಮ್ಯಾನ್ ಜೋಕರ್‌ನನ್ನು ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುತ್ತಾನೆ. ಅವರನ್ನು ಸ್ಫೋಟಗಳಿರುವ ಪ್ರತ್ಯೇಕ ಸ್ಥಳಗಳಲ್ಲಿ ಬಲೆಗೆ ಬೀಳಿಸಲಾಗಿದೆ ಮತ್ತು ಉಳಿಸಲು ಒಬ್ಬರನ್ನು ಬ್ಯಾಟ್‍ಮ್ಯಾನ್ ಆರಿಸಬೇಕು ಎಂದು ಜೋಕರ್ ಬಹಿರಂಗಪಡಿಸುತ್ತಾನೆ. ಬ್ಯಾಟ್‍ಮ್ಯಾನ್ ರೇಚಲ್‍ನನ್ನು ಉಳಿಸಲು ಓಡುತ್ತಾನೆ, ಹಾಗೇ ಡೆಂಟ್‍ನನ್ನು ಕಾಪಾಡಲು ಗಾರ್ಡನ್ ಪ್ರಯತ್ನಿಸುತ್ತಾನೆ. ಬ್ಯಾಟ್‍ಮ್ಯಾನ್ ಕಟ್ಟಡಕ್ಕೆ ಆಗಮಿಸುತ್ತಾನೆ, ಆದರೆ ಜೋಕರ್ ತನ್ನನ್ನು ಡೆಂಟ್ ಇರುವ ಸ್ಥಳಕ್ಕೆ ಕಳಿಸಿದ್ದಾನೆ ಎಂದು ಅರಿತುಕೊಳ್ಳುತ್ತಾನೆ. ಎರಡೂ ಕಟ್ಟಡಗಳು ಸ್ಫೋಟಗೊಳ್ಳುತ್ತವೆ, ಮತ್ತು ರೇಚಲ್ ಸಾಯುತ್ತಾಳೆ ಹಾಗೂ ಡೆಂಟ್ ವಿಕಾರಗೊಳ್ಳುತ್ತಾನೆ. ಜೋಕರ್ ಲೌನೊಂದಿಗೆ ತಪ್ಪಿಸಿಕೊಳ್ಳುತ್ತಾನೆ. ಲೌ ಅವನನ್ನು ದುಷ್ಕರ್ಮಿಗಳ ಗುಂಪಿನ ನಿಧಿ ಇರುವಲ್ಲಿಗೆ ಕರೆದೊಯ್ಯುತ್ತಾನೆ. ಜೋಕರ್ ತನ್ನ ಪಾಲಿನ ಹಣವನ್ನು ಸುಟ್ಟು ಲೌ ಹಾಗೂ ಚೆಚೆನ್‍ರನ್ನು ಸಾಯಿಸುತ್ತಾನೆ.
ಬ್ರೂಸ್ ಸ್ವತಃ ಬ್ಯಾಟ್‍ಮ್ಯಾನ್ ಆಗಿದ್ದಾನೆ ಎಂದು ವೇಯ್ನ್ ಎಂಟರ್‌ಪ್ರೈಸಸ್‍ನಲ್ಲಿನ ಒಬ್ಬ ಲೆಕ್ಕಿಗನಾದ ಕೋಲ್ಮನ್ ರೀಸ್ ಊಹಿಸುತ್ತಾನೆ ಮತ್ತು ಆ ಮಾಹಿತಿಯನ್ನು ಪ್ರಚಾರಮಾಡುವುದಾಗಿ ಬೆದರಿಸುತ್ತಾನೆ. ತನ್ನ ಯೋಜನೆಗಳೊಂದಿಗೆ ರೀಸ್‌ನ ಬಹಿರಂಗಪಡಿಸುವಿಕೆಯು ಹಸ್ತಕ್ಷೇಪ ಮಾಡಬಾರದೆಂದು ಬಯಸಿ, ರೀಸ್‍ನನ್ನು ಒಂದು ಗಂಟೆಯೊಳಗೆ ಸಾಯಿಸದಿದ್ದರೆ ಒಂದು ಆಸ್ಪತ್ರೆಯನ್ನು ನಾಶಮಾಡುವುದಾಗಿ ಜೋಕರ್ ಬೆದರಿಕೆ ಹಾಕುತ್ತಾನೆ. ಎಲ್ಲ ಆಸ್ಪತ್ರೆಗಳನ್ನು ಖಾಲಿಮಾಡಲಾಗುತ್ತದೆ ಮತ್ತು ರೀಸ್‍ನನ್ನು ಸುರಕ್ಷಿತವಾಗಿರಿಸಲು ಗಾರ್ಡನ್ ಪ್ರಯಾಣಿಸುತ್ತಾನೆ. ಒಬ್ಬ ಆಸ್ಪತ್ರೆ ದಾದಿಯಾಗಿ ವೇಷ ಹಾಕಿಕೊಂಡು ಜೋಕರ್ ಡೆಂಟ್‍ನ ವಾರ್ಡನ್ನು ಪತ್ತೆಹಚ್ಚಿ ಅವನ ಕೈಗೆ ಒಂದು ಬಂದೂಕನ್ನು ಕೊಟ್ಟು ರೇಚಲ್‍ನ ಸಾವಿಗಾಗಿ ಸೇಡು ತೀರಿಸಿಕೊಳ್ಳುವಂತೆ ಮನವರಿಕೆ ಮಾಡುತ್ತಾನೆ. ಜೋಕರ್ ಆಸ್ಪತ್ರೆಯನ್ನು ನಾಶಮಾಡಿ ಬಸ್ ತುಂಬ ಒತ್ತೆಯಾಳುಗಳೊಂದಿಗೆ ತಪ್ಪಿಸಿಕೊಳ್ಳುತ್ತಾನೆ. ಡೆಂಟ್ ಸಾಯಿಸುವ ಕೇಳಿಯಲ್ಲಿ ತೊಡಗಿ, ತನ್ನ ಅದೃಷ್ಟದ ನಾಣ್ಯವನ್ನು ಹಾರಿಸುವ ಮೂಲಕ ರೇಚಲ್‍ನ ಸಾವಿಗೆ ಹೊಣೆಯೆಂದು ಭಾವಿಸಿದವರ ಹಣೆಬರಹವನ್ನು ನಿರ್ಧರಿಸುತ್ತಾನೆ. ಆ ನಾಣ್ಯದ ಒಂದು ಮುಖವು ಸ್ಫೋಟದಲ್ಲಿ ಸವೆದಿರುತ್ತದೆ. ಅಂತಿಮವಾಗಿ ಅವನ ಕುಟುಂಬದ ಪ್ರತಿ ಗಾರ್ಡನ್‍ನ ಪ್ರೀತಿಯು ರೇಚಲ್‍ನ ಪ್ರತಿ ತನ್ನ ಪ್ರೀತಿಗೆ ಸಮಾನವಾಗಿದೆ ಎಂದು ನಂಬಿ, ಡೆಂಟ್ ಗಾರ್ಡನ್‍ನ ಕುಟುಂಬವನ್ನು ಬಂಧಿಸುತ್ತಾನೆ.
ರಾತ್ರಿಯೊಳಗೆ ಗಾಥಮ್ ನಗರವು ತನ್ನ ಆಳ್ವಿಕೆಗೆ ಒಳಪಡುವುದು ಎಂದು ಘೋಷಿಸಿದ ನಂತರ, ಜೋಕರ್ ಎರಡು ಖಾಲಿಯಾಗಿಸುವ ಫ಼ೆರಿಗಳನ್ನು ಸ್ಫೋಟಕಗಳಿಂದ ತುಂಬುತ್ತಾನೆ; ಒಂದು ನಾಗರಿಕರನ್ನು ಸಾಗಿಸುತ್ತಿದ್ದರೆ, ಮತ್ತೊಂದು ಖೈದಿಗಳನ್ನು ಸಾಗಿಸುತ್ತಿರುವ ಫ಼ೆರಿ. ಪ್ರಯಾಣಿಕರಿಗೆ ಮತ್ತೊಂದು ದೋಣಿಯ ಸ್ಫೋಟಕಗಳಿಗೆ ಪ್ರಚೋದಕವನ್ನು ನೀಡಲಾಗಿರುತ್ತದೆ, ಮತ್ತು ಮಧ್ಯರಾತ್ರಿಯೊಳಗೆ ಒಂದು ಫ಼ೆರಿ ನಾಶವಾಗದಿದ್ದರೆ ಎರಡೂ ಫ಼ೆರಿಗಳನ್ನು ಸ್ಫೋಟಿಸುವುದಾಗಿ ಇಂಟರ್‌ಕಾಮ್ ಮೂಲಕ ಜೋಕರ್ ಘೋಷಿಸುತ್ತಾನೆ. ಇಡೀ ನಗರದ ಮೇಲೆ ಗೂಢಚರ್ಯೆ ಮಾಡುವ ಸೋನಾರ್ ಸಾಧನ ಬಳಸಿ ಬ್ಯಾಟ್‍ಮ್ಯಾನ್, ಲೂಷಿಯಸ್ ಫ಼ಾಕ್ಸ್‌ನ ಮನಸ್ಸಿಲ್ಲದ ನೆರವಿನಿಂದ, ಜೋಕರ್‌ನನ್ನು ಪತ್ತೆಹಚ್ಚುತ್ತಾನೆ. ನಾಗರಿಕರು ಮತ್ತು ಖೈದಿಗಳು ಒಬ್ಬರನ್ನೊಬ್ಬರು ಸಾಯಿಸಲು ನಿರಾಕರಿಸುತ್ತಾರೆ. ಅದೇ ವೇಳೆ ಹೋರಾಟದ ನಂತರ ಜೋಕರ್‌ನನ್ನು ಬ್ಯಾಟ್‍ಮ್ಯಾನ್ ಬಂಧಿಸುತ್ತಾನೆ. ಜೋಕರ್‌ನನ್ನು ಸುಪರ್ದಿಗೆ ತೆಗೆದುಕೊಳ್ಳಲು ಪೋಲೀಸರು ಬರುವುದಕ್ಕೆ ಮುನ್ನ, ಒಮ್ಮೆ ಡೆಂಟ್‍ನ ಉದ್ವೇಗದ ವರ್ತನೆಯು ಸಾರ್ವಜನಿಕವಾದಾಗ ಗಾಥಮ್‍ನ ನಿವಾಸಿಗಳು ಭರವಸೆ ಕಳೆದುಕೊಳ್ಳುವರು ಎಂದು ಅವನು ಹಿಗ್ಗುತ್ತಾನೆ.
ಗಾರ್ಡನ್ ಮತ್ತು ಬ್ಯಾಟ್‍ಮ್ಯಾನ್ ರೇಚಲ್ ಸತ್ತ ಕಟ್ಟಡಕ್ಕೆ ಬಂದು ಡೆಂಟ್ ಗಾರ್ಡನ್‍ನ ಕುಟುಂಬವನ್ನು ಸಾಯಿಸುವುದಾಗಿ ಬೆದರಿಸುತ್ತಿರುವುದನ್ನು ಕಾಣುತ್ತಾರೆ. ಡೆಂಟ್ ತನ್ನ ನಾಣ್ಯವನ್ನು ಮತ್ತೊಮ್ಮೆ ಹಾರಿಸಿ ಬ್ಯಾಟ್‍ಮ್ಯಾನ್‍ಗೆ ಗುಂಡು ಹೊಡೆಯುತ್ತಾನೆ, ತನ್ನನ್ನು ಉಳಿಸಿಕೊಳ್ಳುತ್ತಾನೆ ಮತ್ತು ರೇಚಲ್‍ನ ಸಾವಿಗೆ ಗಾರ್ಡನ್‍ನ ನಿರ್ಲಕ್ಷ್ಯವೇ ಕಾರಣ ಎಂದು ಸಾಧಿಸಿ ಗಾರ್ಡನ್‍ನ ಮಗನನ್ನು ಸಾಯಿಸಲು ಗುರಿಯಿಡುತ್ತಾನೆ. ರಕ್ಷಾಕವಚವನ್ನು ಧರಿಸಿದ್ದ ಬ್ಯಾಟ್‍ಮ್ಯಾನ್ ಡೆಂಟ್‍ನನ್ನು ದೂರಕ್ಕೆ ತಳ್ಳಿದಾಗ ಕಟ್ಟಡದ ಮೇಲಿಂದ ಡೆಂಟ್ ಬಿದ್ದು ಸಾಯುತ್ತಾನೆ. ಡೆಂಟ್‍ನ ವೀರತ್ವದ ಅಭಿಪ್ರಾಯವನ್ನು ಸಂರಕ್ಷಿಸಲು ಸಾಯಿಸುವ ಕೇಳಿಗೆ ಜವಾಬ್ದಾರಿ ತೆಗೆದುಕೊಳ್ಳಲು ತನಗೆ ಅವಕಾಶ ನೀಡಬೇಕೆಂದು ಬ್ಯಾಟ್‍ಮ್ಯಾನ್ ಗಾರ್ಡನ್‍ನ ಮನವೊಲಿಸುತ್ತಾನೆ. ಪೋಲೀಸರು ಬ್ಯಾಟ್‍ಮ್ಯಾನ್‍ಗಾಗಿ ಹುಡುಕಲು ಶುರುಮಾಡುತ್ತಿದ್ದಂತೆ, ಗಾರ್ಡನ್ ಬ್ಯಾಟ್-ಸಿಗ್ನಲ್‍ನ್ನು ನಾಶಮಾಡುತ್ತಾನೆ, ಸೋನಾರ್ ಸಾಧನವು ಸ್ವಯಂ ನಾಶವಾಗುತ್ತಿರುವುದನ್ನು ಫ಼ಾಕ್ಸ್ ನೋಡುತ್ತಾನೆ, ಮತ್ತು ಆಲ್‍ಫ಼್ರೆಡ್ ರೇಚಲ್ ತಾನು ಡೆಂಟ್‍ನನ್ನು ಮದುವೆಯಾಗಲು ಯೋಜಿಸಿರುವೆ ಎಂದು ಬರೆದಿರುವ ಪತ್ರವನ್ನು ಸುಡುತ್ತಾನೆ.
ನಿರ್ಮಾಣ[ಬದಲಾಯಿಸಿ]
ಬೆಳವಣಿಗೆ[ಬದಲಾಯಿಸಿ]
ಬ್ಯಾಟ್‍ಮ್ಯಾನ್ ಬಿಗಿನ್ಸ್ನ ಬಿಡುಗಡೆಯ ಮೊದಲು, ಚಿತ್ರಕಥೆಗಾರರಾದ ಡೇವಿಡ್ ಗೋಯರ್ ಜೋಕರ್ ಮತ್ತು ಹಾರ್ವಿ ಡೆಂಟ್‍ರನ್ನು ಪರಿಚಯಿಸುವ ಎರಡು ಉತ್ತರಭಾಗಗಳಿಗೆ ಸಾರಾಂಶವನ್ನು ಬರೆದರು.[೮] ಮೂರನೇ ಚಿತ್ರದಲ್ಲಿ ಜೋಕರ್‌ನ ಪರೀಕ್ಷೆಯ ಅವಧಿಯಲ್ಲಿ ಜೋಕರ್ ಡೆಂಟ್ ಮುಖದ ಮೇಲೆ ಕಲೆಗಳನ್ನು ಮಾಡುವುದು ಅವರ ಮೂಲ ಉದ್ದೇಶವಾಗಿತ್ತು, ಮತ್ತು ಡೆಂಟ್‍ನನ್ನು ಮಹಾಖಳನಾಯಕ ಟೂ-ಫ಼ೇಸ್ ಆಗಿ ಪರಿವರ್ತಿಸುವುದಾಗಿತ್ತು.[೯] ಚಲನಚಿತ್ರದ ಮೊದಲ ಕರಡನ್ನು ಬರೆದ ಗೋಯರ್ ಡಿಸಿ ಕಾಮಿಕ್ಸ್‌ನ ೧೩ ಸಂಚಿಕೆಗಳ ವಿನೋದ ಚಿತ್ರಪುಸ್ತಕವಾದ ಸೀಮಿತ ಸರಣಿಯ ಬ್ಯಾಟ್‍ಮ್ಯಾನ್: ದ ಲಾಂಗ್ ಹ್ಯಾಲೊವೀನ್ ತಮ್ಮ ಕಥಾಹಂದರದ ಮೇಲೆ ಪ್ರಮುಖ ಪ್ರಭಾವವೆಂದು ಉಲ್ಲೇಖಿಸಿದ್ದಾರೆ.[೧೦] ಆರಂಭದಲ್ಲಿ ಉತ್ತರಭಾಗವನ್ನು ನಿರ್ದೇಶಿಸಲು ತಾವು ಮರಳುವರೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಶ್ಚಿತವಿರದಿದ್ದ ನೋಲನ್ ತೆರೆಯ ಮೇಲೆ ಜೋಕರ್‌ನನ್ನು ಪುನರ್ವ್ಯಾಖ್ಯಾನಿಸಲು ಬಯಸಿದ್ದರು.[೧೧] ಜುಲೈ 31, 2006 ರಂದು ವಾರ್ನರ್ ಬ್ರದರ್ಸ್ ಬ್ಯಾಟ್‍ಮ್ಯಾನ್ ಬಿಗಿನ್ಸ್ನ ಉತ್ತರಭಾಗವಾದ ದ ಡಾರ್ಕ್ ನೈಟ್ ಎಂಬ ಹೆಸರಿನ ಚಿತ್ರದ ನಿರ್ಮಾಣದ ಆರಂಭವನ್ನು ಅಧಿಕೃತವಾಗಿ ಘೋಷಿಸಿದರು;[೧೨] ಇದು ಶೀರ್ಷಿಕೆಯಲ್ಲಿ "ಬ್ಯಾಟ್‍ಮ್ಯಾನ್" ಎಂಬ ಶಬ್ದವಿರದ ಮೊದಲ ನೇರ ಸಾಹಸದ ಬ್ಯಾಟ್‍ಮ್ಯಾನ್ ಚಿತ್ರವಾಗಿತ್ತು.
ಸಾಕಷ್ಟು ಸಂಶೋಧನೆಯ ನಂತರ, ನೋಲನ್‍ರ ಸೋದರ ಮತ್ತು ಸಹ ಬರಹಗಾರರಾದ ಜೊನಥನ್ ನೋಲನ್ ಬ್ಯಾಟ್‍ಮ್ಯಾನ್ನ ಮೊದಲ ಸಂಚಿಕೆಯಲ್ಲಿ ಪ್ರಕಟವಾದ ಜೋಕರ್‌ನ ಮೊದಲ ಎರಡು ರೂಪಗಳು ನಿರ್ಧಾರಕ ಪ್ರಭಾವಗಳಾದವೆಂದು ಸೂಚಿಸಿದರು.[೧೩] ಜೋಕರ್‌ನ ಪಾತ್ರ ಬರೆಯುವ ಮುನ್ನ ಜೊನಥನ್ ಫ಼್ರಿಟ್ಜ಼್ ಲ್ಯಾಂಗ್‍ನ ೧೯೩೩ರ ಅಪರಾಧಪ್ರಧಾನ ಚಿತ್ರ ದ ಟೆಸ್ಟಮೆಂಟ್ ಆಫ಼್ ಡಾ. ಮಬೂಸೆಯನ್ನು ನೋಡಿದರು.[೧೪][೧೫] ಜೋಕರ್‌ನ ಸೃಷ್ಟಿಕರ್ತರಲ್ಲಿ ಒಬ್ಬರಾದ ಜೆರಿ ರಾಬಿನ್ಸನ್‌ರನ್ನು ಪಾತ್ರದ ಚಿತ್ರಣದ ಬಗ್ಗೆ ಸಲಹೆ ಕೇಳಲಾಯಿತು.[೧೬] ಜೋಕರ್‌ನಿಗಾಗಿ ವಿಸ್ತಾರವಾದ ಮೂಲಕಥೆಯ ಬಹಿರಂಗಪಡಿಸುವಿಕೆಯನ್ನು ತಪ್ಪಿಸಲು ನೋಲನ್ ನಿರ್ಧರಿಸಿದರು, ಮತ್ತು ಅದರ ಬದಲು ಅವನು ಒಡ್ಡುವ ಅಪಾಯವನ್ನು ಕಡಿಮೆಮಾಡದಂತೆ, ಅಧಿಕಾರಸ್ಥಿತಿಗೆ ಅವನ ಏಳಿಗೆಯನ್ನು ಚಿತ್ರಿಸಲು ನಿರ್ಧರಿಸಿದರು. ಬ್ಯಾಟ್‍ಮ್ಯಾನ್: ದ ಕಿಲಿಂಗ್ ಜೋಕ್, ಚಿತ್ರದಲ್ಲಿ ಜೋಕರ್‌ನ ಸರಿಯಾದ ಸಂದರ್ಭಗಳು ಸಿಕ್ಕಾಗ ಯಾರಾದರೂ ಅವನಂತೆ ಆಗಬಹುದು ಎಂಬ ಸಂಭಾಷಣೆಯ ಒಂದು ಭಾಗದ ಮೇಲೆ ಪ್ರಭಾವ ಬೀರಿತು ಎಂದು ನೋಲನ್ ಸೂಚಿಸಿದರು.[೧೭] ಚಲನಚಿತ್ರ ಹೀಟ್ ಬಹಳ ದೊಡ್ಡ, ನಗರದ ಕಥೆಯನ್ನು ಹೇಳುವ ಅವರು ಗುರಿಗೆ ಒಂದು ರೀತಿಯ ಸ್ಫೂರ್ತಿಯಾಗಿತ್ತು ಎಂದೂ ನೋಲನ್ ಉಲ್ಲೇಖಿಸಿದರು.
ನೋಲನ್‍ರ ಪ್ರಕಾರ, "ವರ್ಧನೆ"ಯು ಉತ್ತರಭಾಗದ ಒಂದು ಮುಖ್ಯ ವಿಷಯವಸ್ತುವಾಗಿದೆ, ಹಾಗಾಗಿ ಬ್ಯಾಟ್‍ಮ್ಯಾನ್ ಬಿಗಿನ್ಸ್ನ ಅಂತ್ಯವನ್ನು ವಿಸ್ತರಿಸಲಾಯಿತು, ಮತ್ತು "ಪರಿಸ್ಥಿತಿಗಳು ಉತ್ತಮವಾಗುವ ಮುನ್ನ ಮತ್ತಷ್ಟು ಹದಗೆಡಬೇಕು" ಎಂಬುದನ್ನು ಗಮನಿಸಬೇಕು.[೧೮] ದ ಡಾರ್ಕ್ ನೈಟ್, ನ್ಯಾಯ ವಿರುದ್ಧ ಸೇಡು, ತನ್ನ ತಂದೆಯೊಂದಿಗೆ ಬ್ರೂಸ್ ವೇಯ್ನ್‌ನ ಸಮಸ್ಯೆಗಳು ಸೇರಿದಂತೆ ಬ್ಯಾಟ್‍ಮ್ಯಾನ್ ಬಿಗಿನ್ಸ್ನ ವಿಷಯವಸ್ತುಗಳನ್ನು ಮುಂದುವರಿಸುವುದು ಎಂದು ಸೂಚಿಸುತ್ತಾ,[೧೯] ಉತ್ತರಭಾಗವು ವೇಯ್ನ್‌ನ್ನು ಪತ್ತೆದಾರನಾಗಿ ಹೆಚ್ಚು ಚಿತ್ರಿಸುವುದು ಎಂದು ನೋಲನ್ ಒತ್ತಿ ಹೇಳಿದರು.[೨೦] ಬ್ರೂಸ್ ವೇಯ್ನ್ ಮತ್ತು ಹಾರ್ವಿ ಡೆಂಟ್ ನಡುವಿನ ಸ್ನೇಹಪರ ಪೈಪೋಟಿಯು ಚಲನಚಿತ್ರದ ಬೆನ್ನುಮೂಳೆ ಎಂದು ನೋಲನ ವಿವರಿಸಿದರು.[೨೧] ಅವರು ಒಟ್ಟಾರೆ ಕಥಾಹಂದರವನ್ನು ಸಂಕೋಚಿಸಲು ಆಯ್ದುಕೊಂಡರು. ಇದರಿಂದ ಅವರಿಗೆ ದ ಡಾರ್ಕ್ ನೈಟ್ನಲ್ಲಿ ಡೆಂಟ್‍ನನ್ನು ಅಪರಾಧಿಯಾಗಿ ಅಭಿವೃದ್ಧಿಪಡಿಸಲು ಅವಕಾಶ ಸಿಕ್ಕಿತು, ಹಾಗಾಗಿ ಚಿತ್ರಕ್ಕೆ ಸಹಾನುಭೂತಿ ಇಲ್ಲದ ಜೋಕರ್ ನೀಡಲಾಗದ ಭಾವನಾತ್ಮಕ ಬಾಗು ಸಿಕ್ಕಿತು.[೧೭] ಶೀರ್ಷಿಕೆಯು ಕೇವಲ ಬ್ಯಾಟ್‍ಮ್ಯಾನ್‌ನ ಉಲ್ಲೇಖವಾಗಿರದೆ, ಪತನಹೊಂದಿದ ದೇವದೂತ ಹಾರ್ವಿ ಡೆಂಟ್‍ನನ್ನೂ ಉಲ್ಲೇಖಿಸುತ್ತದೆ ಎಂದು ನೋಲನ್ ಒಪ್ಪಿಕೊಂಡರು.[೨೨]
ಚಿತ್ರೀಕರಣ[ಬದಲಾಯಿಸಿ]
ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆಗಾಗಿ, ಜೋಕರ್‌ನ ಆರಂಭಿಕ ಬ್ಯಾಂಕ್ ದರೋಡೆ ಮತ್ತು ಚಲನಚಿತ್ರದ ಮಧ್ಯದಲ್ಲಿನ ಕಾರ್‌ನ ಹಿಂಬಾಲಿಸುವಿಕೆ ಸೇರಿದಂತೆ, ನೋಲನ್ ನಾಲ್ಕು ಮುಖ್ಯ ದೃಶ್ಯಾವಳಿಗಳನ್ನು ಆ ಶೈಲಿಯಲ್ಲಿ ಚಿತ್ರೀಕರಿಸಿದರು. ಇದು ಆ ಶೈಲಿಯಲ್ಲಿ ಭಾಗಶಃವಾದರೂ ಚಲನಚಿತ್ರವನ್ನು ಚಿತ್ರೀಕರಿಸಿದ ಮೊದಲ ಬಾರಿಯೆಂದು ಗುರುತಿಸಿಕೊಂಡಿತು.[೨೩] ಜೊತೆಗೆ, ಇದು ೭೦ ಮಿ.ಮಿ. ಚಿತ್ರ ಮಾಧ್ಯಮವನ್ನು ಬಳಸಿದ ಮೊದಲು ಬ್ಯಾಟ್‍ಮ್ಯಾನ್ ಚಿತ್ರವೂ ಆಗಿತ್ತು.[೨೪][೨೫]
ಐಮ್ಯಾಕ್ಸ್ ಶೈಲಿಯನ್ನು ಚಿತ್ರಾತ್ಮಕವಾಗಿ ಆಸಕ್ತಿದಾಯಕವೆಂದು ಭಾವಿಸಲಾದ ಪ್ರಶಾಂತ ದೃಶ್ಯಗಳಿಗೆ ಕೂಡ ನೋಲನ್ ಬಳಸಿದರು. ಐಮ್ಯಾಕ್ಸ್ ಕ್ಯಾಮರಾಗಳ ಬಳಕೆಯು ಚಿತ್ರ ತಯಾರಕರಿಗೆ ಅನೇಕ ಹೊಸ ಸವಾಲುಗಳನ್ನು ಒಡ್ಡಿತು: ಕ್ಯಾಮರಾಗಳು ಸಾಮಾನ್ಯ ಕ್ಯಾಮರಾಗಳಿಗಿಂತ ಹೆಚ್ಚು ದೊಡ್ಡ ಮತ್ತು ಭಾರವಾಗಿದ್ದವು, ಮತ್ತು ಶಬ್ದವನ್ನುಂಟುಮಾಡುತ್ತಿದ್ದದ್ದರಿಂದ ಸಂಭಾಷಣೆಯನ್ನು ದಾಖಲಿಸುವುದು ಕಷ್ಟವಾಗಿತ್ತು.[೨೬] ಜೊತೆಗೆ, ಕ್ಯಾಮರಾಗಳು ೩೦ ಸೆಕೆಂಡ್‍ನಿಂದ ಎರಡು ನಿಮಿಷಗಳವರೆಗೆ ವ್ಯಾಪಿಸುವ ಲಘು ಚಿತ್ರ ತುಂಬಿಕೆಗಳನ್ನು ಹೊಂದಿದ್ದವು[೨೬] ಮತ್ತು ಚಿತ್ರದ ಮಾಧ್ಯಮದ ವೆಚ್ಚ ಸಾಮಾನ್ಯ ೩೫ ಮಿ.ಮಿ. ಸಿನಿಮಾ ಸುರುಳಿಗಿಂತ ಬಹಳಷ್ಟು ಹೆಚ್ಚಾಗಿತ್ತು.[೨೭] ಜೊತೆಗೆ, ಕೆಲವು ಐಮ್ಯಾಕ್ಸ್ ದೃಶ್ಯಾವಳಿಗಳನ್ನು ಮೂಲ ಕ್ಯಾಮರಾ ನೆಗೆಟಿವ್ ಬಳಸಿ ಸಂಪಾದಿಸಲು ನೋಲನ್ ಆಯ್ದುಕೊಂಡರು. ಇದು ಗುಣಮಟ್ಟ ನಷ್ಟವನ್ನು ನಿವಾರಿಸುವ ಮೂಲಕ, ಆ ದೃಶ್ಯಾವಳಿಗಳ ಚಿತ್ರ ಪೃಥಕ್ಕರಣ ಸಾಮರ್ಥ್ಯವನ್ನು ೧೮ ಸಾವಿರ ಪಟ್ಟಿನವರೆಗೆ ಏರಿಸಿತು.[೨೮]
ವಾರ್ನರ್ ಬ್ರದರ್ಸ್ ಷಿಕಾಗೊದಲ್ಲಿ ೧೩ ವಾರಗಳವರೆಗೆ ಚಿತ್ರೀಕರಿಸಲು ಇಷ್ಟಪಟ್ಟರು.[೨೯][೩೦] ದ ಡಾರ್ಕ್ ನೈಟ್ನಲ್ಲಿ ವೇಯ್ನ್ ಎಂಟರ್‌ಪ್ರೈಸಸ್‍ನ ಮುಖ್ಯ ಕಾರ್ಯಾಲಯವು ರಿಚರ್ಡ್ ಡೇಲಿ ಕೇಂದ್ರದಲ್ಲಿರುವಂತೆ ತೋರಿಸಲಾಗಿದೆ.[೩೧] ಷಿಕಾಗೊದಲ್ಲಿ ದ ಡಾರ್ಕ್ ನೈಟ್ನ ನಿರ್ಮಾಣವು ನಗರದ ಆರ್ಥಿಕತೆಯಲ್ಲಿ $45 ಮಿಲಿಯನ್ ಸೃಷ್ಟಿಸಿತು ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿತು.[೩೨] ಷಿಕಾಗೊದಲ್ಲಿ ಚಿತ್ರೀಕರಣ ಎಪ್ರಿಲ್‍ನಲ್ಲಿ ಮತ್ತು ನಂತರ ಜೂನ್‍ನಿಂದ ಸೆಪ್ಟೆಂಬರ್ ೨೦೦೭ರ ವರೆಗೆ ನಡೆಯಿತು.[೩೩][೩೪][೩೨] ಗಮನಾರ್ಹವಾಗಿ, ಬ್ಯಾಟ್‍ಮ್ಯಾನ್ ಬಿಗಿನ್ಸ್ನಲ್ಲಿ ಇರುವಂತೆ, ಷಿಕಾಗೊವನ್ನು ಮರೆಮಾಚಲು ಬಹಳ ಸಿಜಿಐಯನ್ನು ಬಳಸಲಾಗಲಿಲ್ಲ.
ತಯಾರಿಕೆಗಾಗಿ ಲಂಡನ್ ಹತ್ತಿರದ ಪೈನ್‍ವುಡ್ ಸ್ಟೂಡಿಯೋಸ್ ಮುಖ್ಯ ನಿರ್ಮಾಣ ಸ್ಥಳವಾಗಿತ್ತು.[೩೫]
ಹಾಂಗ್ ಕಾಂಗ್‍ನಲ್ಲಿ ನವೆಂಬರ್ ೨೦೦೭ರಲ್ಲಿ ಚಿತ್ರೀಕರಣ ನಡೆಯಿತು.[೩೬][೩೭][೩೮][೩೯]
ವಿನ್ಯಾಸ[ಬದಲಾಯಿಸಿ]
ಬ್ಯಾಟ್‍ಮ್ಯಾನ್ ಬಿಗಿನ್ಸ್ಗಿಂತ ಬ್ಯಾಟ್‍ಸೂಟ್‍ನ ವಿನ್ಯಾಸವನ್ನು ಈ ಚಿತ್ರದಲ್ಲಿ ವಿನ್ಯಾಸಕರು ಸುಧಾರಿಸಿದರು. ಉಡುಪನ್ನು ಬೇಲ್‍ಗೆ ಬಿಗಿಯಲು ನೆರವಾಗಲು ಮತ್ತು ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನವನ್ನು ಸೂಚಿಸಲು ಅಗಲ ಇಲ್ಯಾಸ್ಟಿಕ್ ಬಂಧನಕಾರಕವನ್ನು ಸೇರಿಸಿದರು. ಅದನ್ನು ೨೦೦ ಪ್ರತ್ಯೇಕ ರಬರ್, ನಾರುಗಾಜು, ಲೋಹದ ಜಾಲರಿ ಮತ್ತು ನೈಲಾನ್‍ನ ತುಂಡುಗಳಿಂದ ನಿರ್ಮಿಸಲಾಯಿತು. ಹೊಸ ಕೊಂಬಿಗೆಯನ್ನು ಮೋಟರ್‌ಸೈಕಲ್ ಹೆಲ್ಮೆಟ್‍ನ್ನು ಅನುಕರಿಸಿ ರೂಪಿಸಲಾಯಿತು ಮತ್ತು ಕುತ್ತಿಗೆಯ ಭಾಗದಿಂದ ಪ್ರತ್ಯೇಕವಾಗಿತ್ತು. ಇದರಿಂದ ಬೇಲ್ ತಮ್ಮ ತಲೆಯನ್ನು ಎಡ ಮತ್ತು ಬಲಕ್ಕೆ ತಿರುಗಿಸಲು ಮತ್ತು ಮೇಲೆ ಹಾಗು ಕೆಳಗೆ ಆಡಿಸಲು ಅವಕಾಶವಾಯಿತು.[೪೦] ಪಾತ್ರವು ತನ್ನ ಸೋನಾರ್ ಪತ್ತೆಯನ್ನು ಚಾಲನೆಗೊಳಿಸಿದಾಗ, ಕಣ್ಣುಗಳ ಮೇಲೆ ಬಿಳಿ ಮಸೂರಗಳನ್ನು ತೋರಿಸಲು ಸಜ್ಜನ್ನು ಕೊಂಬಿಗೆಗೆ ಒದಗಿಸಲಾಗಿತ್ತು. ಇದು ಕಾಮಿಕ್ಸ್ ಹಾಗೂ ಅನಿಮೇಷನ್‍ನಿಂದ ಬ್ಯಾಟ್‍ಮ್ಯಾನ್‍ಗೆ ಬಿಳಿ ಕಣ್ಣಿನ ನೋಟವನ್ನು ನೀಡಿತ್ತು.[೪೧] ಕೈಕವಚಗಳು ಹಾರಿಸಬಹುದಾದ ಹಿಂತೆಗೆದುಕೊಳ್ಳಬಹುದಾದ ರೇಜರುಗಳನ್ನು ಹೊಂದಿದ್ದವು.[೪೦] ಗಾಥಮ್ ನಗರದ ಚಿತ್ರಣವು ಬ್ಯಾಟ್‍ಮ್ಯಾನ್ ಬಿಗಿನ್ಸ್ನಲ್ಲಿ ಇರುವುದಕ್ಕಿಂತ ಕಡಿಮೆ ದಿಟ್ಟವಾಗಿದೆ.
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ[ಬದಲಾಯಿಸಿ]
ವಿಷಯಗಳು ಮತ್ತು ವಿಶ್ಲೇಷಣೆ[ಬದಲಾಯಿಸಿ]
ಡೇವಿಡ್ ಗೋಯರ್ ಪ್ರಕಾರ, ವರ್ಧನೆಯು ದ ಡಾರ್ಕ್ ನೈಟ್ನ ಮುಖ್ಯವಸ್ತುವಾಗಿದೆ.[೪೨] ಗಾಥಮ್ ಸಿಟಿ ದುರ್ಬಲವಾಗಿದ್ದು ಮತ್ತು ನಗರದ ಹಿಂಸಾಚಾರ ಮತ್ತು ಭ್ರಷ್ಟಾಚಾರ ಜೊತೆಗೆ ಜೋಕರ್‌ನ ಬೆದರಿಕೆಗಳಿಗೆ ನಾಗರಿಕರು ಬ್ಯಾಟ್‍ಮ್ಯಾನ್‍ನನ್ನು ಹೊಣೆಮಾಡುತ್ತಾರೆ. ಇದು ಅವನ ಮಿತಿಗಳನ್ನು ಪರೀಕ್ಷಿಸುತ್ತದೆ ಮತ್ತು ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವುದು ನಗರವನ್ನು ಮತ್ತಷ್ಟು ಕೆಳಕ್ಕಿಳಿಸುತ್ತಿದೆ ಎಂದೆನಿಸುವಂತೆ ಮಾಡುತ್ತದೆ.
ಇತರ ವಿಮರ್ಶಕರು ಒಳ್ಳೆಯದರ ಮೇಲೆ ದುಷ್ಟತನದ ವಿಜಯದ ವಿಷಯವಸ್ತುವನ್ನು ಉಲ್ಲೇಖಿಸಿದ್ದಾರೆ. ಚಲನಚಿತ್ರದ ಆರಂಭದಲ್ಲಿ ಹಾರ್ವಿ ಡೆಂಟ್‍ನನ್ನು ಗಾಥಮ್‍ನ "ದೇವದೂತ"ನಾಗಿ ಕಾಣಲಾಗುತ್ತದೆ ಆದರೆ ಅಂತ್ಯದಲ್ಲಿ ಅವನು ಕೇಡಿಗೆ ಎಳೆಯಲ್ಪಡುತ್ತಾನೆ.[೪೩] ಮತ್ತೊಂದೆಡೆ, ಜೋಕರ್‌ನನ್ನು ಅರಾಜಕತೆ ಮತ್ತು ಅವ್ಯವಸ್ಥೆಯ ಚಿತ್ರಣವಾಗಿ ಕಾಣಲಾಗುತ್ತದೆ. ಹಾನಿ ಉಂಟುಮಾಡಿ ಜಗತ್ತು ಸುಡುವುದನ್ನು ನೋಡುವುದು ಬಿಟ್ಟು ಅವನಿಗೆ ಬೇರೆ ಉದ್ದೇಶವಿಲ್ಲ, ಆದೇಶಗಳಿಲ್ಲ, ಬಯಕೆಗಳಿಲ್ಲ. ಜೊತೆಗೆ ಮಾನವ ದೋಷದ ಭಯಾನಕ ತರ್ಕವೂ ಮತ್ತೊಂದು ವಿಷಯವಸ್ತುವಾಗಿದೆ. ಫ಼ೆರಿ ದೃಶ್ಯವು ಮಾನವರನ್ನು ಅಧರ್ಮದಿಂದ ಸುಲಭವಾಗಿ ಹೇಗೆ ಪ್ರಲೋಭನೆಗೊಳಿಸಬಹುದು, ಮತ್ತು ಅದು ಸಂಭಾವ್ಯ ವಿಪತ್ತಿಗೆ ಹೇಗೆ ಕಾರಣವಾಗಬಹುದು ಎಂದು ತೋರಿಸುತ್ತದೆ.[೪೪]
ದುಷ್ಟತನದ ಸಾಂಪ್ರದಾಯಿಕ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಲು ನಿರಾಕರಿಸುವ ಜೋಕರ್‌ನಂತಹ ಪಾತ್ರದ ಸೇರ್ಪಡೆಯು, ಕೆಲವು ವಿಮರ್ಶಕರು ಮತ್ತು ವಿದ್ವಾಂಸರು ದ ಡಾರ್ಕ್ ನೈಟ್‍ನ ಹಿಂಸಾಚಾರದ ಚಿತ್ರಣವನ್ನು ೯/೧೧ ರ ನಂತರದ ಅಮೇರಿಕದಲ್ಲಿನ ಜಾಗತಿಕ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಲದ ಬಳಕೆಯ ಸ್ಪಷ್ಟವಾದ ಸಂಕೇತವಾಗಿ ಗುರುತಿಸುವುದಕ್ಕೆ ಕಾರಣವಾಗಿದೆ.
ಕೆಲವು ಲೇಖಕರು ದ ಡಾರ್ಕ್ ನೈಟ್ ಅನ್ನು ನವ ನ್ವಾರ್ ಚಿತ್ರವೆಂದು ವರ್ಣಿಸಿದ್ದಾರೆ.[೪೫]
ಬಾಕ್ಸ್ ಆಫ಼ಿಸ್[ಬದಲಾಯಿಸಿ]
ದ ಡಾರ್ಕ್ ನೈಟ್ ಉತ್ತರ ಅಮೇರಿಕಾದಲ್ಲಿ $534.9 ಮಿಲಿಯನ್ ಹಣ ಗಳಿಸಿತು ಮತ್ತು ಇತರ ಪ್ರದೇಶಗಳಲ್ಲಿ $469.7 ಮಿಲಿಯನ್ ಹಣ ಗಳಿಸಿತು. ಹಾಗಾಗಿ ವಿಶ್ವಾದ್ಯಂತ ಒಟ್ಟಾರೆ ಮೊತ್ತ $1 ಬಿಲಿಯನ್ ಆಯಿತು. ಇದು $1 ಬಿಲಿಯನ್‍ಗಿಂತ ಹೆಚ್ಚು ಹಣಗಳಿಸಿದ ಇತಿಹಾಸದಲ್ಲಿನ ನಾಲ್ಕನೇ ಚಲನಚಿತ್ರವಾಯಿತು.
ಗೃಹ ಮಾಧ್ಯಮಗಳು[ಬದಲಾಯಿಸಿ]
ಉತ್ತರ ಅಮೇರಿಕಾದಲ್ಲಿ ಚಲನಚಿತ್ರವನ್ನು ಡಿವಿಡಿ ಮತ್ತು ಬ್ಲೂ-ರೇ ಡಿಸ್ಕ್‌ಗಳಲ್ಲಿ ಡಿಸೆಂಬರ್ ೯,೨೦೦೮ ರಂದು ಬಿಡುಗಡೆಮಾಡಲಾಯಿತು. ಸಾಮಾನ್ಯ ಡಿವಿಡಿ ಬಿಡುಗಡೆಗಳ ಜೊತೆಗೆ, ಕೆಲವು ಅಂಗಡಿಗಳು ಚಲನಚಿತ್ರದ ತಮ್ಮ ಸ್ವಂತದ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದವು.
ಯುನೈಟಡ್ ಕಿಂಗ್ಡಮ್‍ನಲ್ಲಿ, ಅದರ ಬಿಡುಗಡೆಯ ಮೊದಲ ದಿನದಂದು ಚಲನಚಿತ್ರವು ೫೧೩,೦೦೦ ಘಟಕಗಳ ಒಟ್ಟು ಮಾರಾಟವನ್ನು ಹೊಂದಿತ್ತು. ಇದರಲ್ಲಿ107,730 (21%) ಬ್ಲೂ-ರೇ ಡಿಸ್ಕ್‌ಗಳಾಗಿದ್ದವು. ಇದು ಮೊದಲ ದಿನದಂದು ಮಾರಾಟವಾದ ಬ್ಲೂ-ರೇ ಡಿಸ್ಕ್‌ಗಳ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿತ್ತು.[೪೬] ಅಮೇರಿಕದಲ್ಲಿ, ದ ಡಾರ್ಕ್ ನೈಟ್ ಒಂದು ದಿನದಲ್ಲಿ ಅತ್ಯಂತ ಹೆಚ್ಚು ಡಿವಿಡಿಗಳು ಮಾರಾಟವಾದ (ಬಿಡುಗಡೆಯ ಮೊದಲ ದಿನದಂದು ೩ ಮಿಲಿಯನ್ ಘಟಕಗಳು ಮಾರಾಟವಾದವು) ಮಾರಾಟದ ದಾಖಲೆಯನ್ನು ಸ್ಥಾಪಿಸಿತು.[೪೭]
ಉಲ್ಲೇಖಗಳು[ಬದಲಾಯಿಸಿ]
- ↑ Marc Tyler Nobleman (2012). Bill the Boy Wonder:The Secret Co-Creator of Batman. Charlesbridge Publishing, U.S. ISBN 978-1580892896
- ↑ "Noblemania". Archived from the original on August 13, 2017. Retrieved July 21, 2012.
{{cite web}}
:|archive-date=
/|archive-url=
timestamp mismatch (help) - ↑ "The 50 Best Movies of the Decade (2000–2009)". Paste. November 3, 2009. Archived from the original on October 17, 2017. Retrieved December 14, 2011.
{{cite web}}
:|archive-date=
/|archive-url=
timestamp mismatch (help) - ↑ "Film Critics Pick the Best Movies of the Decade". Metacritic. January 3, 2010. Archived from the original on April 3, 2016. Retrieved September 4, 2012.
{{cite web}}
:|archive-date=
/|archive-url=
timestamp mismatch (help) - ↑ "Movie Records". the-numbers.com. Archived from the original on May 8, 2013. Retrieved August 24, 2010.
{{cite web}}
:|archive-date=
/|archive-url=
timestamp mismatch (help) - ↑ "Best of 2008". CriticsTop10. Archived from the original on October 30, 2014. Retrieved November 12, 2014.
{{cite web}}
:|archive-date=
/|archive-url=
timestamp mismatch (help) - ↑ "Academy Awards Database – ACTOR IN A SUPPORTING ROLE, 2008". Archived from the original on December 17, 2013.
{{cite web}}
:|archive-date=
/|archive-url=
timestamp mismatch (help) - ↑ "A Round Up so Far". Batman – The Dark Knight. June 15, 2007. Archived from the original on July 7, 2007. Retrieved June 15, 2009.
{{cite web}}
:|archive-date=
/|archive-url=
timestamp mismatch (help) - ↑ "Premiere Features Batman Begins". Superhero Hype!. Coming Soon Media, L.P. May 9, 2005. Archived from the original on May 6, 2006. Retrieved November 2, 2006.
{{cite news}}
:|archive-date=
/|archive-url=
timestamp mismatch (help) - ↑ Nolan, Christopher; Goyer, David S. (2007). "Introduction". Absolute Batman: The Long Halloween. London: Titan. ISBN 978-1-4012-1282-7.
- ↑ Jolin, Dan (January 2008). "Fear Has a Face". Empire. 223: 87–88. Archived from the original on November 7, 2011. Retrieved July 8, 2008.
{{cite journal}}
:|archive-date=
/|archive-url=
timestamp mismatch (help) - ↑ Warner Bros. Pictures (July 31, 2006). "Batman Sequel Title & Casting Confirmed!". ComingSoon.net. Coming Soon Media, L.P. Archived from the original on August 6, 2006. Retrieved July 31, 2006.
{{cite news}}
:|archive-date=
/|archive-url=
timestamp mismatch (help) - ↑ Stax (January 9, 2006). "That Joker Adrien Brody". IGN Comics. Archived from the original on August 10, 2006. Retrieved July 31, 2006.
{{cite news}}
:|archive-date=
/|archive-url=
timestamp mismatch (help) - ↑ Nolan, Jonathan. Christopher Nolan: The Movies. The Memories. Part 6: Jonathan Nolan on The Dark Knight Archived July 21, 2015, ವೇಬ್ಯಾಕ್ ಮೆಷಿನ್ ನಲ್ಲಿ., EMPIRE. from Empire's issue 253. Retrieved October 10, 2015.
- ↑ Jolin. Dan. The Making Of The Joker Archived December 9, 2013, ವೇಬ್ಯಾಕ್ ಮೆಷಿನ್ ನಲ್ಲಿ., EMPIRE. From December 2009 issue of Empire Magazine. Retrieved on October 26, 2015.
- ↑ "Updates on The Dark Knight Plus Our Own Exclusive on the Involvement of Joker Creator Jerry Robinson in the Batman Sequel!". insomniacmania.com. Insomniac Mania. August 24, 2006. Archived from the original on August 30, 2006. Retrieved August 28, 2006.
{{cite news}}
:|archive-date=
/|archive-url=
timestamp mismatch (help) - ↑ ೧೭.೦ ೧೭.೧ Thompson, Anne (July 6, 2008). "Dark Knight Review: Nolan Talks Sequel Inflation". Variety. Archived from the original on July 10, 2008. Retrieved July 7, 2008.
{{cite journal}}
:|archive-date=
/|archive-url=
timestamp mismatch (help) - ↑ Horowitz, Josh (August 23, 2006). "Exclusive! Dirt on The Dark Knight!". betterthanfudge.com. Better Than Fudge. Archived from the original on September 19, 2006. Retrieved August 23, 2006.
{{cite news}}
:|archive-date=
/|archive-url=
timestamp mismatch (help) - ↑ Stax (October 3, 2006). "Exclusive: Nolan's Dark Knight Revelations". IGN. Archived from the original on February 27, 2007. Retrieved October 23, 2006.
{{cite news}}
:|archive-date=
/|archive-url=
timestamp mismatch (help) - ↑ "Joker's Wild". Wizard Entertainment. February 11, 2008. Archived from the original on February 8, 2008. Retrieved February 11, 2008.
{{cite news}}
:|archive-date=
/|archive-url=
timestamp mismatch (help) - ↑ Horowitz, Josh (December 3, 2007). "'Dark Knight' Opening Scenes Reveal 'Radical' New Joker". MTV. Archived from the original on December 6, 2007. Retrieved December 4, 2007.
{{cite news}}
:|archive-date=
/|archive-url=
timestamp mismatch (help) - ↑ Boucher, Geoff (November 17, 2008). "Thor's cartoon, Stan Lee's medal and Dick Tracy's fate all in Everyday Hero headlines". Los Angeles Times. Archived from the original on December 16, 2008. Retrieved November 22, 2008.
{{cite news}}
:|archive-date=
/|archive-url=
timestamp mismatch (help) - ↑ "Nolan to Shoot Dark Knight in IMAX Format". Filmwad. Archived from the original on May 31, 2007. Retrieved September 23, 2011.
{{cite news}}
:|archive-date=
/|archive-url=
timestamp mismatch (help) - ↑ "'The Dark Knight' to Mark 10th Anniversary With Limited IMAX Re-Release". www.msn.com (in ಅಮೆರಿಕನ್ ಇಂಗ್ಲಿಷ್). Archived from the original on July 23, 2018. Retrieved July 23, 2018.
{{cite web}}
:|archive-date=
/|archive-url=
timestamp mismatch (help) - ↑ "'The Dark Knight' Set for 10th Anniversary Imax Re-Release (EXCLUSIVE)". Variety. July 18, 2018. Archived from the original on August 17, 2018. Retrieved September 4, 2018.
{{cite web}}
:|archive-date=
/|archive-url=
timestamp mismatch (help) - ↑ ೨೬.೦ ೨೬.೧ "How The Dark Knight Went IMAX". Slash Film. June 14, 2008. Archived from the original on November 23, 2010. Retrieved January 23, 2011.
{{cite web}}
:|archive-date=
/|archive-url=
timestamp mismatch (help) - ↑ "3D a 'Flash in the Pan' – 'Inception' Cinematographer". The Wrap. November 12, 2010. Archived from the original on January 17, 2011. Retrieved January 23, 2011.
{{cite web}}
:|archive-date=
/|archive-url=
timestamp mismatch (help) - ↑ Weintraub, Steve (December 22, 2010). "Exclusive: Exclusive: David Keighley (Head of Re-Mastering IMAX) Talks 'The Dark Knight', 'The Dark Knight Rises', 'Tron: Legacy', New Cameras, More". Collider.com. Archived from the original on February 27, 2011. Retrieved November 1, 2011.
{{cite news}}
:|archive-date=
/|archive-url=
timestamp mismatch (help) . - ↑ Armour, Terry (January 28, 2007). "Quiet on the Set? Not in This Town". Chicago Tribune. Retrieved January 30, 2007.[ಶಾಶ್ವತವಾಗಿ ಮಡಿದ ಕೊಂಡಿ]
- ↑ Pearlman, Cindy (October 25, 2006). "Caped Crusader May Alight Here Next Year". Chicago Sun-Times. Archived from the original on March 18, 2017. Retrieved October 25, 2006.
{{cite news}}
:|archive-date=
/|archive-url=
timestamp mismatch (help) - ↑ Palmer, Dan (July 29, 2008). "Mies's Gotham". Confessions of a Preservationist. The Landmark Society of Western New York, Inc. Archived from the original on December 16, 2008. Retrieved August 4, 2008.
{{cite web}}
:|archive-date=
/|archive-url=
timestamp mismatch (help) - ↑ ೩೨.೦ ೩೨.೧ Yue, Lorene (June 8, 2007). "Batman Movie Filming to Start Saturday". Crain's Chicago Business. Archived from the original on June 10, 2007. Retrieved June 8, 2007.
{{cite news}}
:|archive-date=
/|archive-url=
timestamp mismatch (help) - ↑ "Batman's Back in Chicago". nbc5.com. WMAQ-TV. April 18, 2007. Archived from the original on October 15, 2007. Retrieved April 19, 2007.
{{cite news}}
:|archive-date=
/|archive-url=
timestamp mismatch (help) - ↑ Giardina, Carolyn (May 29, 2007). "'Dark Knight' Heeds Imax Signal". The Hollywood Reporter. Archived from the original on May 31, 2007. Retrieved May 29, 2007.
{{cite journal}}
:|archive-date=
/|archive-url=
timestamp mismatch (help) - ↑ "Pinewood Studios – The Dark Knight (2008) production information". Archived from the original on August 3, 2008.
{{cite web}}
:|archive-date=
/|archive-url=
timestamp mismatch (help) - ↑ "New Batman Flick to Be Filmed in HK". ninemsn.com. ninemsn. November 3, 2007. Archived from the original on November 7, 2007. Retrieved November 3, 2007.
{{cite news}}
:|archive-date=
/|archive-url=
timestamp mismatch (help) - ↑ "New Batman Movie Completes High Profile Shooting in Hong Kong". International Herald Tribune. November 12, 2007. Archived from the original on January 20, 2008. Retrieved November 12, 2007.
{{cite news}}
:|archive-date=
/|archive-url=
timestamp mismatch (help) - ↑ Chiang, Scarlett (September 21, 2007). "Holy Chaos, Batman!". The Standard. Hong Kong: Sing Tao Newspaper Limited. Archived from the original on October 29, 2007. Retrieved September 21, 2007.
{{cite news}}
:|archive-date=
/|archive-url=
timestamp mismatch (help) - ↑ https://plus.google.com/+travelandleisure/posts. "Central To Mid-Levels Escalator". Travel + Leisure (in ಇಂಗ್ಲಿಷ್). Archived from the original on July 9, 2018. Retrieved July 9, 2018.
{{cite news}}
:|archive-date=
/|archive-url=
timestamp mismatch (help);|last=
has generic name (help); External link in
(help)|last=
- ↑ ೪೦.೦ ೪೦.೧ Jensen, Jeff (June 15, 2007). "Batman's New Suit". Entertainment Weekly. Archived from the original on September 14, 2010. Retrieved June 18, 2007.
{{cite journal}}
:|archive-date=
/|archive-url=
timestamp mismatch (help) - ↑ "Batman flattert nach Hongkong" (in German). Kino.de. October 15, 2007. Archived from the original on October 17, 2007. Retrieved October 25, 2007.
{{cite news}}
:|archive-date=
/|archive-url=
timestamp mismatch (help)CS1 maint: unrecognized language (link) - ↑ Adler, Shawn (April 27, 2007). "'Batman' Writer David Goyer Spills 'Dark Knight,' 'Invisible' Details". MTV. Archived from the original on January 12, 2009. Retrieved January 7, 2009.
{{cite web}}
:|archive-date=
/|archive-url=
timestamp mismatch (help) - ↑ Boucher, Geoff (November 17, 2008). "Thor's cartoon, Stan Lee's medal and Dick Tracy's fate all in Everyday Hero headlines". Los Angeles Times. Archived from the original on December 16, 2008. Retrieved November 22, 2008.
{{cite news}}
:|archive-date=
/|archive-url=
timestamp mismatch (help) - ↑ Chen, David (July 20, 2008). "Assessing the Themes of The Dark Knight". Slashfilm.com. Archived from the original on September 10, 2012. Retrieved January 7, 2009.
{{cite web}}
:|archive-date=
/|archive-url=
timestamp mismatch (help) - ↑ Spicer, Andrew (2010). Historical Dictionary of Film Noir. Lanham, MD: Scarecrow Press. p. 427. ISBN 978-0-8108-5960-9.
- ↑ Reynolds, Simon (December 9, 2008). "'The Dark Knight' breaks Blu-ray records". Digital Spy. Archived from the original on December 10, 2008. Retrieved December 9, 2008.
{{cite news}}
:|archive-date=
/|archive-url=
timestamp mismatch (help) - ↑ Chmielewski, Dawn C. (December 11, 2008). "'Dark Knight' DVD selling at brisk pace". Los Angeles Times. Archived from the original on December 15, 2008. Retrieved December 11, 2008.
{{cite news}}
:|archive-date=
/|archive-url=
timestamp mismatch (help)
ಹೆಚ್ಚಿನ ಓದಿಗಾಗಿ[ಬದಲಾಯಿಸಿ]
- Byrne, Craig (2008). The Dark Knight: Featuring Production Art and Full Shooting Script (Hardcover). Universe. ISBN 978-0-7893-1812-1.
- Nolan, Christopher; Goyer, David S. (2007). "Introduction". Absolute Batman: The Long Halloween (Hardcover). New York: DC Comics. ISBN 978-1-4012-1282-7.
- O'Neil, Dennis (2008). The Dark Knight (Paperback). Novelization of the film. Berkley. ISBN 978-0-425-22286-7.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Official website (Warner Bros.)
- Official website (DC Comics)
- The Dark Knight: Blu-ray Disc Review at HD Report
- CS1 errors: archive-url
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 ಅಮೆರಿಕನ್ ಇಂಗ್ಲಿಷ್-language sources (en-us)
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from March 2018
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: external links
- CS1 errors: generic name
- CS1 ಇಂಗ್ಲಿಷ್-language sources (en)
- CS1 maint: unrecognized language
- ವಿಕೀಕರಣ ಮಾಡಬೇಕಿರುವ ಲೇಖನಗಳು
- Template film date with 3 release dates
- Official website different in Wikidata and Wikipedia
- ಇಂಗ್ಲಿಷ್-ಭಾಷೆಯ ಚಲನಚಿತ್ರಗಳು