ಮೊರ್ಗನ್ ಫ಼್ರೀಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಗನ್ ಫ್ರೀಮನ್
ಡಿಸೆಂಬರ್ 2008 ರಲ್ಲಿ ಫ್ರೀಮನ್
Born (1937-06-01) ಜೂನ್ ೧, ೧೯೩೭ (ವಯಸ್ಸು ೮೬)
Occupation(s)ನಟ, ನಿರ್ದೇಶಕ
Years active1964-ಇಂದಿನವರೆಗೆ
Spouses
  • Jeanette Adair Bradshaw (1967–1979)
  • Myrna Colley-Lee (1984–2010)

ಮೋರ್ಗನ್ ಫ಼್ರೀಮನ್ (ಜನನ ಜೂನ್ ೦೧ ೧೯೩೭) ಓರ್ವ ಅಮೆರಿಕನ್ ನಟ, ನಿರ್ದೇಶಕ ಹಾಗು ಕಥಾ ನಿರೂಪಕ. ೨೦೦೫ರಲ್ಲಿ 'ಮಿಲ್ಲಿಯನ್ ಡಾಲರ್ ಬೆಬಿ' ಸಿನಿಮಾದ ಇವರ ನಟನೆಗೆ ಅಕಾಡಮಿ ಅವಾರ್ಡ್ ಲಭಿಸಿದೆ. ಇವರಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಹಾಗು ಸ್ಕ್ರೀನ್ ಅಕ್ಟರ್ಸ್ ಗಿಲ್ಡ್ ಅವಾರ್ಡ್ ಲಭಿಸಿದೆ. ಇವರು ಬಹಳಷ್ಟು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕೆಲವು ಅನ್ಫ಼ರ್ಗಿವನ್, ಗ್ಲೋರಿ, ರಾಬಿನ್ ಹುಡ್: ಪ್ರಿನ್ಸ್ ಆಫ಼್ ಥೀವ್ಸ್, ಸೆವೆನ್, ಡೀಪ್ ಇಮ್ಪಾಕ್ಟ್, ಬ್ರೂಸ್ ಆಲ್ಮೈಟಿ, ದ ಡಾರ್ಕ್ ನೈಟ್ ಟ್ರೈಲಜಿ ಹಾಗು ಡಾಲ್ಫ಼ಿನ್ ಟೇಲ್. ಇವರು ತಮ್ಮ ಧ್ವನಿಗಾಗಿ ಪ್ರಸಿದ್ಧರಾಗಿದ್ದಾರೆ.

ಬಾಲ್ಯ ಜೀವನ[ಬದಲಾಯಿಸಿ]

ಮೋರ್ಗನ್ ಫ಼್ರೀಮನ್ ಜನಿಸಿದ್ದು ಜೂನ್ ೧, ೧೯೩೭ ದಕ್ಷಿಣ ಅಮೇರಿಕಾದ ಟೆನೆಸ್ಸೀ ರಾಜ್ಯದ ಮೆಮ್ಫ಼ಿಸ್ ಎಂಬಲ್ಲಿ. ಇವರ ತಾಯಿ ಮೇಮ್ ಎಡ್ನಾ ಶಿಕ್ಷಕಿಯಾಗಿದ್ದು, ತನ್ದೆ ಮೋರ್ಗನ್ ಪಾರ್ಟರ್ ಫ಼್ರೀಮನ್ ಕ್ಷೌರಿಕನಾಗಿದ್ದರು. ಇವರ ತಂದೆ ಏಪ್ರಿಲ್ ೨೭, ೧೯೬೧ರನ್ದು ವಿಧಿವಶರಾದರು. ಇವರಿಗೆ ಮೂರು ಜನ ಅಣ್ಣಂದಿರಿದ್ದಾರೆ. ಈವರು ಶಿಶುವಾಗಿದ್ದಗ ತಮ್ಮ ಅಜ್ಜಿಯ ಜೊತೆ ವಾಸಿಸುತಿದ್ದರು.

ಫ಼್ರೀಮನ್ರವರು ಪ್ರಪ್ರಥಮವಾಗಿ ತಮ್ಮ ಶಾಲೆಯ ನಾಟಕದ ನಾಯಕನಾಗಿ ನಟಿಸಿದಾಗ ಅವರ ವಯಸ್ಸು ೯ ವರ್ಷ. ಆನಂತರ ಪ್ರೌಢ ಶಿಕ್ಷಣವನ್ನು ಮಿಸ್ಸಿಸ್ಸಿಪಿಯ ಗ್ರೀನ್ವುಡ್ನ ಬ್ರಾಡ್ ಸ್ಟ್ರೀಟ್ ಹೈಸ್ಕೂಲ್ನಲ್ಲಿ ಮುಗಿಸಿದರು. ೧೨ ನೇ ವಯಸ್ಸಿನಲ್ಲಿ ಅವರು ರಾಜ್ಯಾದ್ಯಂತ ನಾಟಕ ಸ್ಪರ್ಧೆಯನ್ನು ಗೆದ್ದರು, ಮತ್ತು ಇನ್ನೂ ಬ್ರಾಡ್ ಸ್ಟ್ರೀಟ್ ಪ್ರೌಢಶಾಲೆಯಲ್ಲಿ ಇರುವಾಗಲೇ ರೇಡಿಯೊ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು. ೧೯೫೫ ರಲ್ಲಿ, ಅವರು ಬ್ರಾಡ್ ಸ್ಟ್ರೀಟ್ ಕಾಲೇಜಿನಿಂದ ಪದವಿ ಪಡೆದರು. ನಂತರ ಜಾಕ್ಸನ್ ರಾಜ್ಯ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರಕಿದರೂ ಅದನ್ನು ಪಡೆಯದೇ ಯುನೈಟೆಡ್ ಸ್ಟೇಟ್ಸ್ ವಾಯುಪಡೆಯ ರಾಡಾರ್ ತಾಂತ್ರಿಕ ಕಾರ್ಯನಿರ್ವಹಿಸಲು ಸೇರಿದರು.

ಫ್ರೀಮನ್ ತರುವಾಯ ಪಸದೇನ ಪ್ಲೇಹೌಸ್ನಲ್ಲಿ ನಟನೆಯನ್ನು ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೃತ್ಯ ಕಲಿಯಲು ಶುರು ಮಾಡಿದರು. ಹಾಗೆಯೇ ಲಾಸ್ ಏಂಜಲೀಸ್ ಸಿಟಿ ಕಾಲೇಜಿನಲ್ಲಿ ಪ್ರತಿಲಿಪಿಯ ಗುಮಾಸ್ತರಾಗಿ ಕೆಲಸ ಮಾಡಿದರು.

ಉಲ್ಲೇಖಗಳು[ಬದಲಾಯಿಸಿ]

  1. "The Film Programme". September 12, 2008. BBC Radio 4. http://www.bbc.co.uk/programmes/b00dbcdn. Retrieved January 18, 2014. 
  2. "Morgan freeman Net Worth - atlantablackstar". atlantablackstar. Retrieved 13 March 2015.