ದೈವದ ಸಿರಿಮುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳುನಾಡಿನ ದೈವಾರಧನೆ ಜಗತ್ತು ಸಂಕೀರ್ಣವಾದುದು. ದೈವಾರಾಧನೆಯಲ್ಲಿ ಪಾಲ್ಗೊಳ್ಳುವ ಕಲಾವಿದರು ದೈವ ನರ್ತನದಲ್ಲಿ ಅನೇಕ ಬಗೆಯ ಅಲಂಕಾರಗಳನ್ನು ಮಾಡುತ್ತಾರೆ. ಇದನ್ನು ಪ್ರತ್ಯೇಕ ವಾಗಿ "ಕಟ್ಟೈತ"ವೆಂದು ಕರೆಯಲಾಗುತ್ತದೆ. ದೈವ ಕಲಾವಿದರು ಶಿರಭಾಗಕ್ಕೆ ಕಟ್ಟಿಕೊಳ್ಳುವ ಅಲಂಕರಣಗಳನ್ನು ಒಟ್ಟಾರೆಯಾ 'ಸಿರಿಮುಡಿ"ಎಂದು ಕರೆಯಲಾಗುತ್ತದೆ. ದೈವಾರಾಧನೆಯ ಜಗತ್ತಿನಲ್ಲಿ ನೂರಾರು ದೈವಗಳು ಆಚರಣೆಯಾಗುತ್ತದೆ. ಹಾಗಾಗಿ ಈ ಸಿರಿಮುಡಿಯನ್ನು ಭಿನ್ನ ಹೆಸರಿನಿಂದಲೂ ಕರೆಯಲಾಗುತ್ತದೆ. ದೈವ ಪ್ರಭೇದಗಳಾಗಿರುವ ಕಲ್ಕುಡ-ಕಲ್ಲುರ್ಟಿ ದೈವಗಳು ಧರಿಸುವ ತಲೆ ಮುಡಿಯನ್ನು"ತಿರಿಗುಬ್ಬೆ" ಎಂದು ಕರೆಯಲಾಗುತ್ತದೆ. ಇದನ್ನು'ತಿರಿ"ಮತ್ತು ಬಾಳೆಯ"ಬಂಬೆ" ಯಿಂದ ತಯಾರಿಸುತ್ತಾರೆ. ಹಾಗೆಯೆ ತೆಂಗಿನ ಗರಿಯ ತಲೆಪಟ್ಟಿ ,ಒಲಿ ಕಿರೀಟಗಳನ್ನು ತಯಾರಿಸಲಾಗುತ್ತದೆ.ಕೆಲವನ್ನು"ಕದಿರ್ಮುಡಿ" ಎಂದೂ ಕರೆಯಲಾಗುತ್ತದೆ. ಮುಖ್ಯವಾಗಿ ದೈವದ "ವ್ಯಕ್ತಿತ್ವ"ದ ಅತಿಮಾನುಷತೆ, ಅಲೌಕಿಕತೆ, ಭವ್ಯತೆ ,ಕಾರಣೀಕತೆ, ಇತ್ಯಾದಿ ಸಂಕೀರ್ಣ ಅಂಶಗಳನ್ನು ಹೊಂದಿಕೊಂಡು ತಲೆಯ"ಸಿರಿಮುಡಿ"ಗಳು ಭಿನ್ನ ಸ್ವರೂಪದಿಂದ ಕೂಡಿರುತ್ತದೆ.ಕೆಲವು ದೈವಗಳು "ಸಿರಿಮುಡಿ"ಗಳು ತೆಂಗಿನ ಎಳೆ, ತಿರಿ ಮತ್ತು ಬಾಳೆ ಬಂಬೆಯಿಂದ ತಯಾರಿಸಲ್ಫಟ್ಟರೆ, ಇನ್ನು ಕೆಲವು ಬೇರೆ ಬೇರೆ ಸಾಮಾಗ್ರಿಗಳನ್ನು ಹೊಂದಿಸಿಕೊಂಡು ತಯಾರಾಗುತ್ತದೆ. ಹಾಗೂ ಜನಪದ ಕಲಾವಿದರ "ಕುಸುರಿ" ಕೆಲಸಗಳಿಗೆ ಹೊಂದಿಕೆಯಾಗುವ ಸ್ಥಳೀಯವಾದ ವಸ್ತುಗಳನ್ನೆ ಇಲ್ಲಿ ಬಳಸಲಾಗುತ್ತದೆ. ದೈವಾರಾಧನೆಯ ಆರಂಭಿಕ ನೆಲೆಯಲ್ಲಿ ಹಾಳೆ,ತೆಂಗಿನ ಗರಿ, ಬಾಳೆ ಬಂಬೆ ಗಳನ್ನೇ ಬಳಸಲಾಗುತ್ತಿತ್ತು.ಕ್ರಮೇಣ ಲೋಹದ ತಲೆ ಪಟ್ಟಿಗಳು ಬಳಕೆಗೆ ಬಂದಿವೆ. ಸಿರಿಮುಡಿಗಳು ಗಾತ್ರ ಮತ್ತು ಎತ್ತರದಲ್ಲಿ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಅಧಿಕಾರ ಸ್ಥಾನದ ನೆಲೆಯಲ್ಲಿ ಗುರುತಿಸಿಕೊಳ್ಳುವ ದೈವ ಸಂಬಂಧದ ನೆಲೆಯಲ್ಲಿಯೂ ಇವು ಭಿನ್ನವಾಗುತ್ತದೆ. ಎತ್ತರದ ಸಿರಿಮುಡಿಗಳನ್ನು ಧರಿಸುವ ದೈವಗಳಿಗೆ ಸರ್ವೇಸಾಮಾನ್ಯವಾಗಿ, ಬೆನ್ನಿಗೆ ಮತ್ತು ಎದುರು ಭಾಗದಲ್ಲಿ ಅಣೆಗಳನ್ನು ಕಟ್ಟುವ ಸಂಪ್ರದಾಯವಿರುವುದಿಲ್ಲ. ಅರಸು ದೈವಗಳೆಂದು ಕರೆದುಕೊಳ್ಳುವ ಉಳ್ಳಾಕುಲು ದೈವಗಳು ಎತ್ತರದ"ಮುಡಿಧಾರಣೆ" ಯನ್ನು ಮಾಡಿಕೊಳ್ಳುತ್ತದೆ. ರಚನಾ ದೃಷ್ಟಿಯಿಂದ ಭಿನ್ನವಾಗಿರುವ ಇವು ಭಿನ್ನ ಹೆಸರಿನಿಂದಲೂ ಕರೆದುಕೊಳ್ಳುತ್ತವೆ. ಸ್ತ್ರೀ ದೈವಗಳಿಗೂ ಅರಸು ದೈವಗಳಿಗಿಂತ ಭಿನ್ನವಾದ ಎತ್ತರದ ಮುಡಿಗಳಿರುತ್ತವೆ. ಉಪ್ಪಿನಂಗಡಿಯ ಮಹಾಕಾಳಿ ಮತ್ತು ಕೇರಳ ಮೂಲದ ಭಗವತಿ ದೈವಗಳ ಮುಡಿಗಳು ಇದಕ್ಕೆ ಉದಾಹರಣೆಯಾಗಿದೆ. ಅರಸು ದೈವಗಳಿಗೆತಿರಿಯನ್ನು ಬಳಸುವ ಪದ್ಧತಿಯಿಲ್ಲ. ಅರಸು ದೈವಗಳು ಪ್ರತಿನಿಧಿಸುವ ಅಧಿಕಾರ ಸ್ಥಾನವನ್ನು ಪ್ರತ್ಯೇಕಿಸಿ ನೋಡುವ ಸಮುದಾಯದ ಮನೋಧರ್ಮದಿಂದಾಗಿ ಅವುಗಳಿಗೆ ಇಂತಹದ್ದೇ ಅಲಂಕರಣಗಳಿರಬೇಕೆನ್ನುವ ದೃಷ್ಟಿಯೂ ಅಡಕವಾಗಿದೆ. ಗಾತ್ರದಲ್ಲಿ ಎತ್ತರ, ಅಗಲ ವಾಗಿರುವುದರಿಂದ ಅವು ನೋಡುಗರ ಗಮನವನ್ನು ಸೆಳೆಯುವಂತಿದೆ. ಪ್ರಾದೇಶಿಕವಾಗಿ ಕಾಸರಗೋಡಿನ ಕಡೆಯ ಉಳ್ಳಾಕುಲು ಗಳ"ಸಿರಿಮುಡಿ" ಯು ಗಾತ್ರದಲ್ಲಿ ಸುಮಾರು ಹತ್ತು ಅಡಿಗಳಷ್ಟು ಎತ್ತರವಾಗಿರುತ್ತದೆ.ತ್ರಿಕೋನಾಕಾರಾದಲ್ಲಿರುತ್ತದೆ. ರಚನೆಯಲ್ಲಿ ಬಿದಿರು/ಸಲಾಕೆಯನ್ನು ಬಳಸಲಾಗುತ್ತದೆ. ಕಲಾವಿದನ ತಲೆಯ ಭಾಗವನ್ನು ಹೊಂದಿಕೊಳ್ಳುವ ಅರ್ಧ ವರ್ತುಲದಲ್ಲಿ ಅಂಚನ್ನು ಕೆಂಪು ಬಟ್ಟೆಯ ದಂಡೆಯಿಂದ ಕಟ್ಟುತ್ತಾರೆ. ಬೆಳ್ಳಿಯ -ಬಂಗಾರದ ಹೂಗಳಿಂದ ಹೊಂದಿಸಲಾಗಿ ನೋಡಿ ಆಕರ್ಷಕವಾಗಿರುತ್ತದೆ. ತ್ರಿಕೋನಾಕಾರದ ಮುಡಿಯ ಮೇಲ್ಬಾಗವನ್ನು ಹಿಂದು-ಮುಂದನ್ನು ಕೆಂಪಾದ"ಬೇರ್ಪತ್ತು" ಎನ್ನುವ ಬಟ್ಟೆಯಿಂದ ಹೊಂದಿಸಿ ಕಟ್ಟುತ್ತಾರೆ. ಮುಡಿಯ ಎರಡು ಪಕ್ಕಗಳಿಂದ ತುದಿಯವರೆಗೆ"ನಿಶಾನಿ" ಎನ್ನುವ ಪತಾಕೆಯನ್ನು ಕಟ್ಟುತ್ತಾರೆ. ತ್ರಿಕೋನಾಕಾರದ ಮುಡಿಯ ಮಧ್ಯ ಭಾಗದಲ್ಲಿ ಸೂರ್ಯ-ಚಂದ್ರ ,ಆನೆ- ಕುದುರೆ ಆಕಾರದ, ಬೆಳ್ಳಿ-ಬಂಗಾರದ ಗುಬ್ಬಿಗಳಿಂದ,ಹೂಗಳಿಂದ ಅಂದಗೊಳಿಸುತ್ತಾರೆ. ತುದಿ ಭಾಗವನ್ನು ಬೆಳ್ಳಿ ಮೊದಲಾದವುಗಳಿಂದ ಸಿಂಗರಿಸುತ್ತಾರೆ.ಅರ್ಧ ವರ್ತುಲದ ಹಂದೆಯನ್ನು ನಾಗಜಡೆಗಳಿಂದ ಜೋಡಿಸುತ್ತಾರೆ. ಈ ಬಗೆಯಲ್ಲಿ ತಯಾರಾಗುವ "ಉಲ್ಲಾಕುಳು" "ಸಿರಿಮುಡಿ" ಯನ್ನು "ಪಾಂಬೋಡಿ" ಆಕಾರದಲ್ಲಿ ಭಿನ್ನವಾಗಿರುತ್ತದೆ.

ಪ್ರದೇಶ[ಬದಲಾಯಿಸಿ]

ಸುಳ್ಯ-ಪುತ್ತೂರು ಭಾಗಗಳಲ್ಲಿನ ಉಲ್ಲಾಕುಳಗಳು "ಸಿರಿಮುಡಿ[೧]ಆಕಾರದಲ್ಲಿ ಭಿನ್ನವಾಗಿದ್ದು ,ಇವುಗಳನ್ನು "ಪೂಮುಡಿ" ಎಂದು ಕರೆಯಲಾಗುತ್ತದೆ. ರಚನೆಯ ದೃಷ್ಟಿಯಿಂದ ಇವು 'ಪಾಂಬೋಡಿಯ ಮುಡಿಯ" ಅರ್ಧ ವರ್ತುಲ ಆಕಾರಕ್ಕೆ ಮಿತವಾಗಿರುತ್ತದೆ." ಅರ್ಧ ಚಂದ್ರಾಕೃತಿ "ಈ ಸಿರಿಮುಡಿಯನ್ನು ಹೂವಿನಿಂದಲೇ ರಚಿಸಲಾಗುತ್ತದೆ. ಆದ್ದರಿಂದ ಅದನ್ನು "ಪೂಮುಡಿ" ಎಂದೇ ಕರೆಯಲಾಗಿದೆ. ಉಲ್ಲಾಕುಳಗಳ ಮುಡಿಯನ್ನು ಅರಸುತನದ " ಅಧಿಕಾರ ಸ್ಥಾನ" ನೆಲೆಯ ಕಿರೀಟದ ಪ್ರತೀಕವೆಂದು ಪರಿಭಾವಿಸಿ ರೂಪಿಸಲಾಗುತ್ತದೆ. ಉಲ್ಲಾಕುಲು -ದೈವಗಳನ್ನು ಜನ ಸಮುದಾಯ ದೇವರಿಗೆ ದೇವರಾಗಿಯೂ , ದೈವಗಳಿಗೆ ದೈವಗಳಾಗಿಯೂ ಇರುವ ಅಲೌಖಿಕ ಶಕ್ತಿಗಳೆಂದು ಪರಿಭಾವಿಸಲಾಗಿದೆ. ಹಾಗಾಗಿ ಈ ದೈವಗಳಿಗೆ ಅಣಿ , ತಿರಿ, ಮುಖವಾಡ ಧರಿಸುವುದನ್ನು ನಿಷೇಧಿಸಿದೆ. ಅರಸುತನದ ಪ್ರತೇಕವಾಗಿ ಮೀಸೆ, ತಲೆಗೆ ಕಟ್ಟುವ ಕಿರೀಟದ ರೀತಿಯ "ಸಿರಿಮುಡಿ" ಯನ್ನು ಧಾರಣೆ ಮಾಡುವುದಕ್ಕೆ ಅಣುವು ಮಾಡಿಕೊಡಲಾಗಿದೆ[೨].

ಬಳಕೆಯ ವಸ್ತುಗಳು[ಬದಲಾಯಿಸಿ]

  1. ತೆಂಗಿನ ಗರಿ
  2. ಬಾಳೆ
  3. ಬೆಳ್ಳಿಯ ಅಭರಣ.

ಬಳಸುವ ಕಲಾವಿದರು[ಬದಲಾಯಿಸಿ]

ಬಳಸುವ ಕಲಾವಿದರ ಪಟ್ಟಿ

  1. ನಲಿಕೆ
  2. ಪಂಬದ
  3. ಪರವ

ಉಲ್ಲೇಖಗಳು[ಬದಲಾಯಿಸಿ]

  1. http://shodhganga.inflibnet.ac.in/handle/10603/131824
  2. ಪೂವಪ್ಪ ಕಣಿಯೂರು (೨೦೦೪). ಪೂಕರೆ ಮತ್ತು ಇತರ ಜಾನಪದೀಯ ಲೇಖನಗಳು. ಸುಳ್ಯ: ರಾಜ್ ಪ್ರಕಾಶನ ಮೈಸೂರು. pp. ೩೬.