ದೇವತಾ ಮನುಷ್ಯ (ಚಲನಚಿತ್ರ)
ಗೋಚರ
ದೇವತಾ ಮನುಷ್ಯ ೧೯೮೮ ರ ಭಾರತೀಯ ಕನ್ನಡ ಚಿತ್ರವಾಗಿದ್ದು, ಇದನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್, ಗೀತಾ, ಕೆ.ಎಸ್.ಅಶ್ವಥ್ ಮತ್ತು ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ತನ್ನ ಹಾಡುಗಳಿಗೆ ಪ್ರಸಿದ್ಧವಾಗಿದ್ದು, ಈ ಹಾಡುಗಳನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು. ಇದು ರಾಜ್ ಕುಮಾರ್ ಅವರ ೨೦೦ ನೇ ಚಲನಚಿತ್ರವಾಗಿತ್ತು.
| ದೇವತಾ ಮನುಷ್ಯ (ಚಲನಚಿತ್ರ) | |
|---|---|
| ಚಿತ್ರ:Devatha Manushya.jpg | |
| ದೇವತಾ ಮನುಷ್ಯ | |
| ನಿರ್ದೇಶನ | ಸಿಂಗೀತಂ ಶ್ರೀನಿವಾಸರಾವ್ |
| ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
| ಚಿತ್ರಕಥೆ | ಸಿಂಗೀತಂ ಶ್ರೀನಿವಾಸರಾವ್, ಚಿ.ಉದಯಶಂಕರ್ |
| ಕಥೆ | ಸಿಂಗೀತಂ ಶ್ರೀನಿವಾಸರಾವ್, ಚಿ.ಉದಯಶಂಕರ್ |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ ಗೀತಾ ಸುಧಾರಾಣಿ, ಟಿ.ಎನ್.ಬಾಲಕೃಷ್ಣ, ಸುಂದರ್ ಕೃಷ್ಣ ಅರಸ್, ರಾಜಾನಂದ, ಶಿವರಾಂ, ಹೇಮಾ ಚೌಧರಿ, ಪದ್ಮ ಕುಮಟಾ, ಉದಯ್ ಹುತ್ತಿನಗದ್ದೆ, ಕೆ.ಎಸ್.ಅಶ್ವಥ್, ಕಾಂಚನಾ, ರಾಜಾಶಂಕರ್,ತೂಗುದೀಪ ಶ್ರೀನಿವಾಸ್ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಸಂಕಲನ | ಪಿ.ಜಿ.ಮೋಹನ್ |
| ಬಿಡುಗಡೆಯಾಗಿದ್ದು | ೧೯೮೮ |
| ನೃತ್ಯ | ಕೈಲಾಸಂ |
| ಸಾಹಸ | ವೈ.ಶಿವಯ್ಯ |
| ಚಿತ್ರ ನಿರ್ಮಾಣ ಸಂಸ್ಥೆ | ಪೂರ್ಣಿಮಾ ಎಂಟರ್‍ಪ್ರೈಸಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ವಾಣಿ ಜಯರಾಂ, ಬಿ.ಆರ್.ಛಾಯಾ, ಮಂಜುಳಾ ಗುರುರಾಜ್ |
| ಇತರೆ ಮಾಹಿತಿ | ಡಾ.ರಾಜ್‍ಕುಮಾರ್ ಅಭಿನಯದ ೨೦೦ನೇ ಚಿತ್ರ ಆನೆಯ ಹೆಸರು: ಕೃಷ್ಣ |