ದು.ನಿಂ.ಬೆಳಗಲಿ
ಗೋಚರ
ದು ನಿಂ ಬೆಳಗಲಿಯವರು ಒಬ್ಬ ಕನ್ನಡ ಲೇಖಕರು. ಇವರು ಕಥೆಗಾರ, ಕಾದಂಬರಿಕಾರ ಹಾಗೂ ಅನುವಾದಕ. ಮಕ್ಕಳ ಸಾಹಿತ್ಯ, ನಗೆಬರಹ, ಪ್ರಬಂಧಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ.
ಪರಿಚಯ/ಶಿಕ್ಷಣ/ವೃತ್ತಿಜೀವನ
[ಬದಲಾಯಿಸಿ]- ದುರದುಂಡೀಶ್ವರ ನಿಂಗಪ್ಪ ಬೆಳಗಲಿ - ಇದು ಅವರ ಪೂರ್ಣ ಹೆಸರು. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಅವರ ಹುಟ್ಟೂರು. ಜನನ ೧೯೩೧ನೇ ಇಸವಿ ಮಾರ್ಚ ೩೦. ತಂದೆ ನಿಂಗಪ್ಪ, ತಾಯಿ ಚೆನ್ನಮ್ಮ.
- ಬನಹಟ್ಟಿ, ಐನಾಪುರ, ಬಾಗಲಕೋಟೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ. ನಂತರ ಮುಂಬಯಿ ಶಿಕ್ಷಣ ಇಲಾಖೆಯ ಎಸ್ ಟಿ ಸಿ, ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಚ್ ಎಸ್ ಸಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವಿಶಾರದ, ಮೈಸೂರು ವಿಶ್ವವಿದ್ಯಾನಿಲಯದ ಡಿಲಿಟ್ ಶಿಕ್ಷಣ.
- ೧೯೫೧ ಜೂನ ತಿಂಗಳಿನಿಂದ ಬೆಳಗಾವಿ ಜಿಲ್ಲೆಯ ಐನಾಪುರದ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕ. ಬನಹಟ್ಟಿಯ ಎಸ್ ಆರ್ ಎ ಪ್ರೌಢಶಾಲೆಯ ಶಿಕ್ಷಕರಾಗಿ ಹಿಂದಿ ಹಾಗೂ ಕನ್ನಡ ಬೋಧನೆ. ೧೯೮೯ರಲ್ಲಿ ನಿವೃತ್ತಿ.
ಕೃತಿಗಳು
[ಬದಲಾಯಿಸಿ]ಕಥಾಸಂಕಲನ
[ಬದಲಾಯಿಸಿ]- ಬೆನ್ನ ಹಿಂದಿನ ಕಣ್ಣು
- ಸಿಟ್ಟ್ಯಾಕೊ ರಾಯ ನನ ಮ್ಯಾಲ
- ಮಾಸ್ತರನ ಹೆಂಡತಿ
- ಗೌಡರ ಮಗಳು ಗೌರಿ
- ಮುಳ್ಳದಾರಿಯಲ್ಲಿ ಬಿರಿದ ಹೂಗಳು
- ಮುತ್ತಿನ ತೆನೆಗಳು
- ಇನ್ನಷ್ಟು ಕಥೆಗಳು
- ಬೇಸಿಗೆಯ ಮೊದಲ ಮಳೆ
ಕಾದಂಬರಿ
[ಬದಲಾಯಿಸಿ]- ಮುಳ್ಳು ಮತ್ತು ಮಲ್ಲಿಗೆ
- ಹತ್ತು ಹೆಡೆಯ ಹಾವು
- ತಿರುಗಣಿ ಮಡು (ಪ್ರ್ರೀತಿಯ ಆ ಮುಖ)[೧]
- ಹಡೆದವರು
- ಬಿಸಿಲು ಬೆಳದಿಂಗಳು (ಗಂಡಿನ ನೆರಳು)
- ಸೀಮೆಗಳು
- ದಾಕ್ಶಾಯಣಿ (ವಾತ್ಸಲ್ಯಮಯಿ)
- ಜೋಗಿಮರಡಿ
- ಅಂಧೇರ ನಗರಿ
- ರಣಹದ್ದುಗಳು
- ಚಂಬಲ್ ಕಣಿವೆಯಲ್ಲಿ
- ಅಂತಸ್ತಿನ ಮನೆ
- ಮೌನಕ್ರಾಂತಿ [೨]
- ದೇವದಾಸಿ
- ಕಾತ್ರಾಳ ರತ್ನಿಯ ಚಾದಂಗಡಿ
ಚರಿತ್ರೆ
[ಬದಲಾಯಿಸಿ]- ಪ್ರೇಮಚಂದ ಬದುಕು,ಬರಹ
- ಪಂಡಿತಪ್ಪ ಚಿಕ್ಕೋಡಿ
- ಈಶ್ವರ ಸಣಕಲ್ಲ
- ಬೆಳಕು ಬಿತ್ತಿದವರು
- ಯುಗಚೇತನ-ಪ್ರೇಮಚಂದ್ರ
ಅನುವಾದ
[ಬದಲಾಯಿಸಿ]- ಅಕ್ರಮ ಸಂತಾನ (ಮರಾಠಿ ದಲಿತ ಆತ್ಮಕತೆ)
- ಗಬಾಳ (ಮರಾಠಿ ದಲಿತ ಆತ್ಮಕತೆ)
- ಸಮರ್ಥ ರಾಮದಾಸರ ಜೀವನ ಚರಿತ್ರೆ
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು
- ಸರ್ವಜ್ಞ
- ಚಿಕ್ಕೋಡಿ ತಮ್ಮಣ್ಣಪ್ಪನವರು
- ಬದುಕುವ ಬಯಕೆ
- ಈಸೋಪನ ಕಥೆಗಳು
- ಮುಂದುವರಿದ ಈಸೋಪನ ಕಥೆಗಳು
- ಮತ್ತಷ್ಟು ಈಸೋಪನ ಕಥೆಗಳು
- ಗಂಗಾಧರ ಮಡಿವಾಳೇಶ್ವರ ತುರಮರಿ
- ಮಡಿವಾಳ ಮಾಚಿದೇವ
- ಮುಲ್ಲಾ ನಸ್ರುದ್ದೀನನ ಹನಿಗತೆಗಳು
- ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು
- ಜಾದೂಪಕ್ಷಿ
ಅನೇಕ ನಗೆಬರಹಗಳನ್ನು, ಪ್ರಬಂಧಗಳನ್ನು ರಚಿಸಿದ್ದಾರೆ.
ನಗೆಬರಹ
[ಬದಲಾಯಿಸಿ]- ಹೆಂಡತಿ ಮತ್ತು ಟ್ರಾನ್ಸಿಸ್ತರ್
- ಸಾಹಿತಿಗಳ ಸಂಗ ಮೋಜಿನ ಪ್ರಸಂಗ
- ಗಂಡ ಹೆಂಡತಿ ಮತ್ತು ಲಗೇಜ್
ಪ್ರಬಂಧ
[ಬದಲಾಯಿಸಿ]- ಸಾಹಿತ್ಯ, ಸಾಧನ ಮತ್ತು ಜೀವನ
- ಕನ್ನಡದಲ್ಲಿ ಕಾದಂಬರಿ ಸಾಹಿತ್ಯ: ಜಮಖಂಡಿ ತಾಲೂಕ ದರ್ಶನ
ಇತರ
[ಬದಲಾಯಿಸಿ]- ಸಾಹಿತಿಗಳ ಸಂಗ ಮೋಜಿನ ಪ್ರಸಂಗ
ಪ್ರಶಸ್ತಿ, ಗೌರವಗಳು
[ಬದಲಾಯಿಸಿ]- ಬದುಕುವ ಬಯಕೆಗೆ (೧) ರಾಷ್ಟ್ರೀಯ ಪ್ರಶಸ್ತಿ ಹಾಗು (೨) ರಾಷ್ಟ್ರೋತ್ಥಾನ ಬಹುಮಾನ
- ಭಾರತೀಯ ಪ್ರಕಾಶಕರ ಒಕ್ಕೂಟ ಪ್ರಶಸ್ತಿ (ಜಾದೂಪಕ್ಷಿ ಕೃತಿಗೆ)
- ಗೌಡರ ಮಗಳು ಕಥಾಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಥಮ ಬಹುಮಾನ
- ಮುಳ್ಳ ದಾರಿಯಲ್ಲಿ ಬಿರಿದ ಹೂಗಳು ಕಥಾಸಂಕಲನಕ್ಕೆ ಗಂಗಾಧರ ಸಾಹಿತ್ಯ ಪುರಸ್ಕಾರ
- ಮುತ್ತಿನ ತೆನೆಗಳು ಕಥಾಸಂಕಲನಕ್ಕೆ ವಿಶ್ವಬಾರತೀಯ ಪರಿಷತ್ತಿನ ಪ್ರಥಮ ಬಹುಮಾನ
- ದೇವದಾಸಿ ಕಾದಂಬರಿಗೆ (೧) ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ (೨) ಸರ್ ಎಮ್.ವಿಶ್ವೇಶ್ವರಯ್ಯ ಪ್ರತಿಷ್ಠಾನದ ಪ್ರಥಮ ಬಹುಮಾನ
- ಅಕ್ರಮ ಸಂತಾನ ಅನುವಾದಕ್ಕೆ ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ , ೧೯೯೩
- ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.
- ೧೯೮೮ ರಲ್ಲಿ ಉತ್ತಮ ಶಿಕ್ಷಕನೆಂದು ರಾಷ್ಟ್ರಪ್ರಶಸ್ತಿ.
- ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಡಾ. ಅಂಬೇಡ್ಕರ್ ಫೆಲೋಶಿಪ್ (೧೯೯೬)
- ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ
- ದೆಹಲಿಯಲ್ಲಿ ನಡೆದ ಪ್ರೇಮ್ ಚಂದ್ ಶತಮಾನೋತ್ಸವದಲ್ಲಿ ಪ್ರತಿನಿಧಿಯಾಗಿ ಭಾಗಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಲೇಖಕರ ಕಮ್ಮಟದಲ್ಲಿ ಆಹ್ವಾನಿತ ಪ್ರತಿನಿಧಿ
- ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ದಲಿತ ಲೇಖಕರ ಸಮ್ಮೇಳನದಲ್ಲಿ ಆಹ್ವಾನಿತ ಪ್ರತಿನಿಧಿ
ಇವರಿಗೆ ಅರವತ್ತು ವರ್ಷ ವಯಸ್ಸು ತುಂಬಿದ ಸಂದರ್ಭದಲ್ಲಿ ಅಥಣಿ ತಾಲೂಕಿನ ಮಲಾಬಾದದ ವಿಮೋಚನಾ ವಸತಿಶಾಲೆಯಲ್ಲಿ ’ಬೆಳಗಲಿ’ ಎಂಬ ಅಭಿನಂದನಾ ಗ್ರಂಥ ಸಲ್ಲಿಸಿ ಗೌರವಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ National Library page, Ministry of Culture, Govt of India
- ↑ DD to beam serials on noted works Archived 2015-12-07 at Archive.is, The Hindu, Sep 05, 2004
ಹೊರಕೊಂಡಿಗಳು
[ಬದಲಾಯಿಸಿ]- ದು ನಿಂ ಬೆಳಗಲಿ, ಕಣಜ ಮಾಹಿತಿತಾಣ
ಇವನ್ನೂ ನೋಡಿ
[ಬದಲಾಯಿಸಿ]ಎಂ.ವಿ.ಸೀತಾರಾಮಯ್ಯ
ಬಸವರಾಜ ಕಲ್ಗುಡಿ