ಬನಹಟ್ಟಿ

ವಿಕಿಪೀಡಿಯ ಇಂದ
Jump to navigation Jump to search
ಬನಹಟ್ಟಿ
India-locator-map-blank.svg
Red pog.svg
ಬನಹಟ್ಟಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 16.47° N 75.12° E
ವಿಸ್ತಾರ
 - ಎತ್ತರ
12.5 km²
 - 550 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
70,242
 - 5619.36/ಚದರ ಕಿ.ಮಿ.

ಬನಹಟ್ಟಿ ನಗರವು ಕೃಷ್ಣ ನದಿಯ ದಂಡೆಯ ಮೇಲಿರುವ ಬಾಗಲಕೋಟೆ ಜಿಲ್ಲೆಯ ಒಂದು ಪಟ್ಟಣ. ಇದು ಜಮಖಂಡಿಯಿಂದ ಪಶ್ಚಿಮಕ್ಕೆ ೧೯ ಕಿ.ಮೀ ದೂರದಲ್ಲಿದೆ.

ಇದು ಭಾರತದಲ್ಲಿ, ಕರ್ನಾಟಕ ರಾಜ್ಯದ, ಬಾಗಲಕೋಟೆ ಜಿಲ್ಲೆಯ ನಗರ ಪುರಸಭಾ ಪರಿಷತ್ತನ್ನು ಹೊಂದಿದೆ. ೧೯೫೨ ರಲ್ಲಿ ಬನಹಟ್ಟಿ ಮತ್ತು ರಬಕವಿ ಪುರಸಭೆಗಳು ಒಂದು ಪುರಸಭೆಯಾಗಿ ವಿಲೀನಗೊಂಡವು. ಇದು ರಬಕವಿ, ರಾಮಪುರ ಮತ್ತು ಹೊಸೂರು ಊರುಗಳ ಜೊತೆಗೆ ಅವಳಿ ಪಟ್ಟಣವನ್ನು ರೂಪಿಸುತ್ತದೆ. ಇದನ್ನು ಕರ್ನಾಟಕ ರಾಜ್ಯ ಸರ್ಕಾರವು ೧೫ ಮಾರ್ಚ್ ೨೦೧೭ ರಂದು ತಾಲೂಕು ಎಂದು ಘೋಷಿಸಿತು ಮತ್ತೆ ಅದು ೧ ಜನವರಿಯಿ೦ದ ಕಾರ್ಯಾರಂಭಗೊಂಡಿತು.

ಬನಹಟ್ಟಿ ಸುತ್ತಲಿನ ಜಿಲ್ಲೆಗಳಿಗೆ ಜವಳಿ ಉದ್ಯಮದ ಕೇಂದ್ರವಾಗಿದೆ. ಇದಕ್ಕಾಗಿ ಇಲ್ಲಿ ಉತ್ತಮ ಮಾರುಕಟ್ಟೆ ಇದೆ. ಇಲ್ಲಿ೦ದ ವಿದ್ಯುತ ಮಗ್ಗದಿ೦ದ ಮತ್ತು ಕೈಮಗ್ಗದಿ೦ದ ಆವೃತವಾದ ಸೀರೆಗಳನ್ನು ಬೇರೆ ನಗರಗಳಿಗೆ ರಫ಼್ತು ಮಾಡಲಾಗುತ್ತದೆ. ಇಲ್ಲಿ ಕರ್ನಾಟಕದಲ್ಲಿಯೆ ಅತಿ ಹೆಚ್ಛಿನ ೨೨,೦೦೦ ವಿದ್ಯುತ ಮಗ್ಗಗಳಿವೆ.

ಇಲ್ಲಿನ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನ, ವಿರಭಧ್ರೆಶ್ವರ ದೇವಸ್ಥಾನ, ಶ್ರೀ ಮಹಾದೇವ ದೇವಾಲಯ ಮತ್ತು ಶ್ರೀ ಶಂಕರ್ಲಿಂಗ್ ದೇವಸ್ಥಾನಗಳು ಪ್ರಸಿಧ್ಧವಾಗಿವೆ. ಬನಹಟ್ಟಿಯಲ್ಲಿ ಪ್ರತಿ ವರ್ಷವು ಭಾದ್ರಪದ ಮಾಸದಲ್ಲಿ ಶ್ರೀ ಕಾಡಸಿದ್ದೇಶ್ವರ ದೇವರ ತೆರನ್ನು ಬಹು ವಿಜ್ರ೦ಭನೆಯಿ೦ದ ಪಟಾಕಿಗಳನ್ನು ಹಾರಿಸುತ್ತ ಏಳೆಯಲಾಗುತ್ತದೆ.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

ಬನಹಟ್ಟಿ ರಬಕವಿ ಪುರಸವಭೆಯ ಜನಸಂಖ್ಯೆಯಲ್ಲಿ ೫೧% ಪುರುಷರು ಮತ್ತು ೪೯% ಮಹಿಳೆಯರು ಇರುವರು. ಇಲ್ಲಿನ ಸರಾಸರಿ ಸಾಕ್ಷರತಾ ಪ್ರಮಾಣವು ೫೮% ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಕಡಿಮೆಯಿದೆ: ಪುರುಷ ಸಾಕ್ಷರತೆ ೬೭% ಮತ್ತು ಸ್ತ್ರೀ ಸಾಕ್ಷರತೆ ೪೯% ಆಗಿದೆ.

"https://kn.wikipedia.org/w/index.php?title=ಬನಹಟ್ಟಿ&oldid=873749" ಇಂದ ಪಡೆಯಲ್ಪಟ್ಟಿದೆ