ದೀಪ್ ಜೋಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೀಪ್ ಜೋಷಿ ಒಬ್ಬ ಭಾರತೀಯ ಸಮಾಜ ಸೇವಕ. ಅಮೆರಿಕದಲ್ಲಿ ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ, ದೀಪ್ ಜೋಷಿಯನ್ನು ಇತರ ಐವರೊಂದಿಗೆ ೨೦೦೯ರ ಸಾಲಿನ ಪ್ರತಿಷ್ಠಿತ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಗಾಮೀಣ ಸಮುದಾಯಗಳ ಅಭಿವೃದ್ಧಿಗಾಗಿ ದುಡಿಯುವ ದಿಶೆಯಲ್ಲಿ ಹರಿಕಾರರಾಗಿರುವ, ಹೆಸರಾಂತ ಸಮಾಜಸೇವಕ, 'ದೀಪ್ ಜೋಷಿ' ಹಾಗೂ ಅವರ ಸಂಗಡಿಗರು, ಮನಿಲಾದಲ್ಲಿ, ಆಗಸ್ಟ್ ೩೧ ರಂದು 'ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ,' ಸ್ವೀಕರಿಸಲಿದ್ದಾರೆ. ೭೦ ರ ದಶಕದಲ್ಲಿ, ಅಧುನಿಕ ಶಿಕ್ಷಣ ಪಡೆದಮೇಲೂ ತಮ್ಮ ವೈಯಕ್ತಿಕ ವೃತ್ತಿಜೀವನದ ಯೇಳಿಗೆಯೊಂದನ್ನೇ ಗಮನಿಸದೆ, ತಾವು ಬದುಕುತ್ತಿರುವ ಸಮಾಜ ಮುಖಿಯಾಗಿ ಸಾಮಾಜಿಕ ಕಾಳಜಿ, ಜನಪರ ಒಳಿತಿನ ಪ್ರಜ್ಞೆ, ಆದರ್ಶ- ನಾಡನ್ನು ನಿರ್ಮಿಸುವ ಹಂಬಲ, ವಯಕ್ತಿಯ ಚಾರಿತ್ರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಂಡು, ಆ ಕಾಲದ ಮೌಲ್ಯಗಳಿಗೆ ತಮ್ಮನ್ನು ಒಡ್ಡಿಕೊಂಡರು. ತಾಯ್ನಾಡಿನ ನೆಲದ ಮಣ್ಣಿನ-ಮಾತಿಗೆ ಓಗೊಟ್ಟು ತಮ್ಮ ಜೀವನವನ್ನೆಲ್ಲಾ ಗ್ರಾಮೀಣ ಬದುಕನ್ನು ಉತ್ತಮಗೊಳಿಸುವ ಕಾರ್ಯಕ್ಕೆ, ಮುಡುಪಾಗಿಟ್ಟರು. ತಮ್ಮ ನಿಸ್ವಾರ್ಥ, ಆದರ್ಶಮಯ ಬದುಕಿನಿಂದ ಎಲ್ಲರ ಗಮನ ಸೆಳೆದರು.

ಜನನ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ದೀಪ್ ಜೋಷಿಯವರು, ಜನಿಸಿದ ಊರು, ಉತ್ತರ ಭಾರತದ ಉತ್ತರಾಖಂಡದ ಸಂಚಾರ-ಯೋಗ್ಯರಸ್ತೆಗಳೂ ಇಲ್ಲದ, ಕಗ್ಗಹಳ್ಳಿಯ ಮೂಲೆಯೊಂದರಲ್ಲಿ-೭, ಮೇ, ೧೯೪೭ ನೇ ವರ್ಷದಲ್ಲಿ. ಅವರ ಬಾಲ್ಯ ಜೀವನದ ಹಲವು ಘಟ್ಟಗಳು ಹೀಗಿವೆ.

  • 1968-ಇಲಹಾಬಾಡ್ ನಗರದ 'NIT' ಯಲ್ಲಿ B. S. Mechanical Engineering ವಿಭಾಗದಲ್ಲಿ ಪದವಿ.
  • 1977-ಅಮೆರಿಕದ MIT Cambridge, MS, (Eng) , ಸ್ನಾತಕೋತ್ತರ ಪದವಿ.
  • 1977- ಅಮೆರಿಕದ Messachusets, ನ Sloan School of Mgt (MBA) ಪದವಿ ಪಡೆದರು.

ವೃತ್ತಿ ಬದುಕು[ಬದಲಾಯಿಸಿ]

  • 1968-71 NIT ಇಲಹಾಬಾದ್ ನಗರದಲ್ಲಿ ಅಧ್ಯಾಪಕರಾಗಿ.
  • 1977-79 ಪುಣೆಯ, ' System Research Institute ,' ನಲ್ಲಿ 'Sr. System Analyst', ಆಗಿ ದುಡಿದರು.
  • 1980-86 'Ford Foundation ', Delhi ವಿಭಾಗದ, ಕಾರ್ಯಕ್ರಮ ಅಧಿಕಾರಿ,
  • 1986-87 'PRADAN,' ಸ್ವಯಂ ಸೇವಾ ಸಂಸ್ಥೆ '(NGO)' ಕಾರ್ಯಕ್ರಮ ನಿರ್ದೇಶಕ,
  • 1987-92 'PRADAN,' ಕಾರ್ಯಕಾರಿ ನಿರ್ದೇಶಕ,
  • 1992-2002 'PRADAN,' ಕಾರ್ಯಕ್ರಮ ನಿರ್ದೇಶಕ
  • 2002-07 'PRADAN,' ನ ಕಾರ್ಯಕಾರಿ ನಿರ್ದೇಶಕ,
  • 2007 ರಿಂದ ಮುಂದೆ, 'PRADAN', ನ ಅಲ್ಪಾವಧಿ ಸಲಹೆಗಾರರಾಗಿ,

ಭಾರತದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ, ಪದವಿ ಪಡೆದರು. ನಂತರ, ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯ ಬಳಿಕ, ಭಾರತಕ್ಕೆ ಮರಳಿದರು. ನವ-ದೆಹಲಿಯ, 'ಫೋರ್ಡ್ ಫೌಂಡೇಶನ್' ನಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ, ಆಯ್ಕೆಗೊಂಡು, ಅಭಿವೃದ್ಧಿಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗಿನಿಂದಲೇ ಅವರಲ್ಲಿ, ಗ್ರಾಮಾಭಿವೃದ್ಧಿ ಪರಿಕಲ್ಪನೆಗಳು ತಲೆಯಲ್ಲಿ ರೂಪುಗೊಂಡವು. ಅಮೆರಿಕದಲ್ಲಿ ತರಪೇತಿ ಹೊಂದಿ, ತಮ್ಮನ್ನು ಗ್ರಾಮ-ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. 'ರಜನೀಕಾಂತ್', ಮತ್ತು 'ಅಕೋಲ್,' ಎಂಬ ಇಬ್ಬರು, ವೈದ್ಯರನ್ನು ಸಂಧಿಸಿ, ತಮ್ಮ ಜ್ಞಾನ, ಪರಿಣತಿಗಳನ್ನು ಹಳ್ಳಿಯ ಉದ್ಧಾರಕ್ಕೆ ಮುಡಿಪಾಗಿಟ್ಟರು. ಆ ವೈದ್ಯರ ಪ್ರಭಾವಕ್ಕೆ ಒಳಗಾದರು. ೧೯೮೩ ರಲ್ಲಿ ತಮ್ಮ ಸಂಗಡಿಗರೊಂದಿಗೆ, ಗ್ರಾಮೀಣ ಸ್ವಯಂ ಸೇವಸಂಸ್ಥೆ, 'ಪ್ರದಾನ್.' ಅಭಿವೃದ್ಧಿ ಕಾರ್ಯಗಳಿಗೆ, ವೃತ್ತಿಪರ ಸಹಾಯಮಾಡುವುದು, ಇದರ ಕೆಲಸ. ಕೌಶಲ ಮತ್ತು ಜ್ಞಾನ ಹೊಂದಿದ, ಪದವೀಧರರನ್ನು ನೇಮಿಸಿ, ಅವರಿಗೆ, ೧ ವರ್ಷದ ಕಠಿಣ ತರಬೇತಿನೀಡಿದ ನಂತರ ಹಳ್ಳಿಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ, ಪಾಲ್ಗೊಳ್ಳಲು ನೇಮಿಸುವುದು. 'ಪ್ರದಾನ್' ನ ಕಾರ್ಯವಿಧಾನ. ಪಶುವೈದ್ಯರು, ಗುಮಾಸ್ತಗಿರಿ, ತಾಂತ್ರಿಕ-ಪರಿಣತಿ, ಇತ್ಯಾದಿ ಹಳ್ಳಿಗಳ ಪರಿಣಿತಿ ಕೌಶಲ್ಯ ಹೊಂದಿದ ಜೀವನ ಸುಧಾರಿಸಿಕೊಳ್ಳಲು ನೆರವಾಗುತ್ತಾರೆ. ಗ್ರಾಮಸ್ತರನ್ನು ವೃತ್ತಿಪರರನ್ನಾಗಿ ಮಾಡುವುದು. ಹಾಗೂ ಗ್ರಾಮೀಣ-ಜೀವನದಲ್ಲಿನ ಬಡತನ ದೂರಮಾಡುವ ಗುರಿ ಹೊಂದಿದ 'ಪ್ರದನ್ ಸಂಸ್ಥೆ', ಕೆಲಸಗಳು ಕಡು-ಬಡ-ರಾಜ್ಯಗಳಲ್ಲಿನ ೩,೦೦೦ ಪರಿವಾರಗಳನ್ನು ಮುಟ್ಟಿವೆ. ಹಾಗೂ ೧.೭ ಲಕ್ಷ ಕುಟುಂಬಗಳನ್ನು ತಲುಪಿವೆ. ೨೦೦೯ ರ ಸಾಲಿನ 'ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ' ಯನ್ನು ಪಡೆದ ವಿಶ್ವದ ಕೆಲವು ನಾಗರಿಕರು.

ಮ್ಯಾನ್ಮಾರ್, ನ 'ಕಾ ಸೋವಾ',[ಬದಲಾಯಿಸಿ]

ಮಿಲಿಟರಿ ಆಳ್ವಿಕೆಯ, ಮಿಯಾನ್ಮಾರ್ ಮಾನವ ಹಕ್ಕುಗಳ-ಕಾರ್ಯಕರ್ತ, ೩೯ ವರ್ಷ ಪ್ರಾಯದ, 'ಕಾ ಸೋವಾ', ೧೭ ವರ್ಷದ ವಿದ್ಯಾರ್ಥಿಯಾಗಿದ್ದಾಗಿನಿಂದ, ಪ್ರಜಾಪ್ರಭುತ್ವದ ಪರ, ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಜೈಲಿನ ಬಂಧನದಲ್ಲಿಡಲಾಗಿತ್ತು. ಬಿಡುಗಡೆಯ ಬಳಿಕ, ಗ್ರಾಮೀಣ ಜನರಮೇಲಾಗುತ್ತಿದ್ದ ಸರಕಾರೀ-ದೌರ್ಜನ್ಯವನ್ನು ಬಯಲಿಗೆಳೆದರು. 'ಭೂಮಿಹಕ್ಕು, ' (Earth rule)' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಅವರು, ೧೯೯೬ ರಲ್ಲಿ, 'ಯಾದಾನಾ ಅನಿಲ ಕೊಳವೆಮಾರ್ಗ',' ಸ್ಥಾಪಿಸುವುದರ ವಿರುದ್ಧ ಹೋರಾಟ ನಡೆಸಿದ್ದರು. ಮ್ಯಾನ್ಮಾರ್ ನ ಮಿಲಿಟರಿ ಸರಕಾರದೊಂದಿಗೆ ಸಹಕರಿಸಿದ ಅಮೆರಿಕಾ ಮೂಲದ 'ಯುನೋಕೋಲ್,' ಎಂಬ ಸಂಸ್ಥೆಯನ್ನು ಅವರು ವಿರೋಧಿಸಿದ್ದರು. ಪರಿಸರ-ಹಾನಿ, ಮಾನವಹಕ್ಕುಗಳ-ದಮನದ ವಿರುದ್ಧ, ಒಂದು ವರ್ಷದ ಕಾಲ, ಆಂದೋಳನವನ್ನು ಸಂಘಟಿಸಿದ್ದರು. ಇವರ ಹೋರಾಟಕ್ಕೆ ತಲೆಬಾಗಿದ 'ಯುನೋಕೋಲ್' ಕಂಪೆನಿ', ಸಂತ್ರಪ್ತರಿಗೆ ಪರಿಹಾರಕೊಡಲು ಒಮ್ಮತನೀಡಿತು. ಥಾಯ್ಲ್ಯಾಂಡ್ ನ ಶಾಲೆಯೊಂದನ್ನು ಇದು ನಡೆಸುತ್ತಿತ್ತು. 'ಮ್ಯಾನ್ಮಾರ್' ಹಾಗೂ ಇತರದೇಶಗಳ ವಿದ್ಯಾರ್ಥಿಗಳಲ್ಲಿ ಅಹಿಂಸಾತ್ಮಕ ವಿಧಾನಗಳ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. 'ಮಹಾತ್ಮ ಗಾಂಧಿ,' ಯವರ ಆದರ್ಶಗಳನ್ನು ಬಳಕೆಗೆ ತರುವ ಪ್ರಯತ್ನ ನಡೆದಿದೆ.

'ಥಾಯ್ಲೆಂಡ್' ನ ಸಂಶೋಧಕಿ, 'ಕ್ರಿಸಾನಾ ಕ್ರೈಸಿಂಟು', ರವರ ಸಾಧನೆ[ಬದಲಾಯಿಸಿ]

'ಎಡ್ಸ ರೋಗಿಗಳ ಸಂಖ್ಯೆ,' ಹೆಚ್ಚುತ್ತಿರುವುದನ್ನು ಕಂಡು, ೫೭ ವರ್ಷ ಪ್ರಾಯದ, 'ಕ್ರಿಸಾನಾ ಕ್ರೈಸಿಂಟು' ಕಡಿಮೆ ದುಬಾರಿಯ ಸಾಮಾನ್ಯ ಔಷಧಿಗಳನ್ನು ಕಂಡುಹಿಡಿದು, ಒಂದುಸಾಧನೆಮಾಡಿದ್ದರು. ಸರಕಾರವೂ ಕೈಗೂಡಿಸಲಿಲ್ಲ. ಔಷಧಿ ಕಂಪೆನಿಗಳ ಲಾಬಿ, ಅವರಿಗೆ ಯಾವಾಗಲೂ ದಾರಿಗಡ್ಡಬರುತ್ತಿತ್ತು. ಹೇಗೋ ಕ್ರಿಸಿನ ಜಯಿಸಿದರು. 'ಎಜೆಡ್ ಟಿ,' ಔಷಧಿಗಳು ಯಶಸ್ವಿಯಾದವು.

ಚೈನದ ಮಾಜಿ- ಪತ್ರಕರ್ತ 'ಮಾ ಜುನ್', ರ ಒಂದು, ದಿಟ್ಟ ಸಾಧನೆ[ಬದಲಾಯಿಸಿ]

ಮೊಟ್ಟಮೊದಲು ಚೈನಾದೇಶದಲ್ಲಿ ಕಲುಷಿತನೀರಿನ ಬಗ್ಗೆ ಮಾಹಿತಿ ಸಂಗ್ರಹಿಸಿ, ಸಾರ್ವಜನಿಕ ಮತ್ತು ಪರಿಸರ ವಿಷಯಗಳ ಸಂಸ್ಥೆಯೊಂದನ್ನು ಆರಂಭಿಸಿದ ಚೀನಾದ ಮಾಜಿ ಪತ್ರಕರ್ತ, ೪೧ ವರ್ಷದ 'ಮಾ ಜುನ್' ರ ಗಣನೀಯ ಸೇವೆಗೆ, ಅವರನ್ನು ಪುರಸ್ಕಾರಕ್ಕೆ ಆರಿಸಿಕೊಂಡಿದ್ದಾರೆ. ಮತ್ತೋರ್ವ ಚೀನಾದೇಶದ ೫೨ ವರ್ಷ ಪ್ರಾಯದ,'ಯು, ಕ್ಸಿಯೋ ಗಾಂಗ್,' 'ಗ್ರೀನ್ ವಾಟರ್ ಶೆಡ್ ಕಂ,' ಯ ಸಂಸ್ಥಾಪಕ, 'ವಾಟರ್ ಶೆಡ್', ಜೊತೆಗೆ 'ಗ್ರೀನ್ ಬ್ಯಾಂಕಿಂಗ್' ನ ಕಾರ್ಯಗಳು, ಅವರಿಗೆ ಪ್ರಶಸ್ತಿ ದೊರೆಯುವಲ್ಲಿ ಸಹಕಾರಿಯಾಯಿತು. ಫಿಲಿಪ್ಪೀನ್ಸ್ ನ, ೫೪ ವರ್ಷಪ್ರಾಯದ, 'ಆಯಾಂಟೋನಿಯೋ ಒಪಾಸ,' ಕೂಡಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

'ದೀಪ್ ಜೋಷಿ,' ಯವರ ಹಳ್ಳಿಗಾಡಿನ ಜೀವನ-ಸುಧಾರಣಾ ಕಾಳಜಿ ಅನನ್ಯವಾದದ್ದು[ಬದಲಾಯಿಸಿ]

ಅಮೆರಿಕದ ಪ್ರತಿಷ್ಠಿತ, ' ಮೆಸ್ಯಾಚ್ಯುಸೆಟ್ಸ್ ಇಸ್ನ್ಟಿಟ್ಯೂಟ್ ಆಫ್ ಟೆಕ್ನೋಲೊಜಿ,' ಯಿಂದ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಗಳಿಸಿದ, ೬೨ ವರ್ಷದ ಹರೆಯದ, 'ದೀಪ್ ಜೋಷಿ,' ಯವರು, ನವ-ದೆಹಲಿಯ , 'ಫೋರ್ಡ್ ಪ್ರತಿಷ್ಠಾನ,' ದಲ್ಲಿ ಸುಮಾರು, ೩ ದಶಕಗಳಕಾಲ ದುಡಿದಿದ್ದಾರೆ. 'ಪ್ರೊಫೆಶನಲ್ ಅಸಿಸ್ಟೆನ್ಸ್ ಫಾರ್ ಡೆವೆಲೊಪ್ಮೆಂಟ್ ಆಯಕ್ಷನ್ ' 'ಪ್ರದನ್' ಎಂಬ ಸೇವಾ ಸಂಘಟೆನೆಯ ಸಹಸ್ಥಾಪಕರು. ಭಾರತದ ಹಳ್ಳಿಗಾಡು ಪ್ರದೇಶದ ಸೇವೆಗೆ ತಮ್ಮನ್ನು ಮುಡಿಪಾಗಿರಿಸಿಕೊಂಡರು. ಸ್ವಯಂಸೇವಾ ಸಂಸ್ಥೆಯೊಂದನ್ನುಸ್ತಾಪಿಸಿ, ಅದಕ್ಕೆ ಭಾರತೀಯ ಪದವೀಧರರನ್ನು ನೇಮಕ ಮಾಡಿಕೊಂಡು ಅವರೆಲ್ಲರೂ ಹಳ್ಳಿಗಳ ಬಡವರಿಗೆ ನೆರವಾಗುವಂತೆ, ಪ್ರೇರೇಪಿಸಿಸುತ್ತಿದ್ದಾರೆ. ಗ್ರಾಮೀಣ ಸಮುದಾಯ ದ ಅಭಿವೃದ್ಧಿಗೆ ಪರಿಕಲ್ಪನೆಗೆ, ಸಂದ ಮನ್ನಣೆ. ಸುಶಿಕ್ಷಿತರು, ಗ್ರಾಮಗಳಿಗೆ ತೆರಳಿ, ಅಭಿವೃದ್ಧಿಕಾರ್ಯಗಳಲ್ಲಿ ಮುಂದಾಗಬೇಕಾಗಿದೆ. ಎಂದು ಪ್ರತಿಕ್ರಿಯಿಸಿದರು. ಗ್ರಾಮೀಣ ಅಭಿವೃದ್ಧಿಯ [ಪ್ರದನ್] ಆ ಕಾರ್ಯದಲ್ಲಿ ಹೃದಯ ಹಾಗೂ ಮೆದುಳುಗಳನ್ನು ಒಂದೆಡೆ ಮೇಳೈಸಿದರು- ಜೋಷಿ. ೨೦೦೯ ರ 'ಮ್ಯಾಗ್ಸೆಸೆ ಪ್ರಶಸ್ತಿ ಸಮಿತಿಯ ಟ್ರಸ್ಟಿ' ಕೇಂದ್ರ ಕಚೇರಿ ಮನೀಲಾದಿಂದ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಶ್ಲಾಘಿಸಿದೆ. "ಜೋಷಿಯವರು ನಂಬಿದ, ವಿದ್ಯಾವಂತರು ಹಳ್ಳಿಯ ಕಡೆ ಸಾಗಿ ಗ್ರಾಮೀಣರಿಗಾಗಿ ದುಡಿಯಬೇಕಾದ ತುರ್ತು ಅಗತ್ಯವಿದೆ ", ಎನ್ನುತ್ತಾರೆ, ಸ್ವಯಂಸೇವಾ ಚಟುವಟಿಕೆಗಳಿಗೆ, ವೃತ್ತಿಪರತೆ ನೀಡುವುದು ಅವರ ಪರಮಾದ್ಯತೆಗಳಲ್ಲೊಂದಾಗಿತ್ತು. ೧೯೫೭ ರಲ್ಲಿ ಶುರುವಾದ 'ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ', ಎಶ್ಯಾದ ನೋಬೆಲ್ ಪ್ರಶಸ್ತಿಗೆ ಸರಿಸಮಾನದ್ದೆಂದು ಪರಿಗಣಿಸಲಾಗಿದೆ. ಈ ಪ್ರಶಸ್ತಿಯನ್ನು ಆಗಸ್ಟ್ ೩೧ ರಂದು 'ಮನಿಲ್ಲಾ,' ನಗರದಲ್ಲಿ ನೀಡಲಾಗುವುದು.

'ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ,' ಇತರ ಭಾರತೀಯರುಗಳು[ಬದಲಾಯಿಸಿ]