ದೀಪಿಕಾ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪಿಕಾ ಸಿಂಗ್
೨೦೧೪ ರ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಶೋ ನಲ್ಲಿ ದೀಪಿಕಾ ಸಿಂಗ್
ಜನನ
ದೀಪಿಕಾ ಸಿಂಗ್

೨೬ ಜುಲೈ ೧೯೮೯[೧]
ದೆಹಲಿ, ಭಾರತ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಎಮ್.ಬಿ.ಎ ಪದವಿ
ಶಿಕ್ಷಣ ಸಂಸ್ಥೆಪಂಜಾಬ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ
ವೃತ್ತಿನಟಿ
Years active೨೦೧೧–
Known forದಿಯಾ ಔರ್ ಬಾತಿ ಹಮ್
Height೧.೬೦ ಮಿ.
ಸಂಗಾತಿರೋಹಿತ್ ರಾಜ್ ಗೋಯಲ್ (೨೦೧೪)
ಮಕ್ಕಳು

ದೀಪಿಕಾ ಸಿಂಗ್ (ಜನನ: ೨೬ ಜುಲೈ ೧೯೮೯)ಇವರು ಭಾರತೀಯ ದೂರದರ್ಶನ ನಟಿ. ಇವರು ಸ್ಟಾರ್ ಪ್ಲಸ್ ಸರಣಿಯ ದಿಯಾ ಔರ್ ಬಾತಿ ಹಮ್ ನಲ್ಲಿ ಸಂಧ್ಯಾ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ.[೨]

ಆರಂಭಿಕ ಜೀವನ[ಬದಲಾಯಿಸಿ]

ದೀಪಿಕಾ ಸಿಂಗ್ ಇವರು ೨೬ ಜುಲೈ ೧೯೮೯ ರಂದು ದೆಹಲಿರಜಪೂತ ಕುಟುಂಬದಲ್ಲಿ ಜನಿಸಿದರು. ಆಕೆಗೆ ಮೂವರು ಕಿರಿಯ ಸಹೋದರರು - ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರರಿದ್ದಾರೆ.
ಇವರು ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್‌ನಲ್ಲಿ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.[೩]

ವೃತ್ತಿ[ಬದಲಾಯಿಸಿ]

ದೀಪಿಕಾ ಇವರು ೨೦೧೧ ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಸಂಧ್ಯಾ ಕೊಥಾರಿ ಪಾತ್ರದಲ್ಲಿ, ದಿಯಾ ಔರ್ ಬಾತಿ ಹಮ್ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.[೪] ನಂತರ ಸೆಪ್ಟೆಂಬರ್ ೨೦೧೬ ರಲ್ಲಿ ಪ್ರದರ್ಶನವು ಪ್ರಸಾರವಾಗುವವರೆಗೂ ಅವರು ೫ ವರ್ಷಗಳ ಕಾಲ ಈ ಪಾತ್ರವನ್ನು ನಿರ್ವಹಿಸಿದರು.[೫] ೨೦೧೮ ರಲ್ಲಿ ಇವರು ದಿ ರಿಯಲ್ ಸೋಲ್ಮೇಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರು ೨೦೧೪ ಮತ್ತು ೨೦೧೯ ರಲ್ಲಿ ಏಕ್ತಾ ಕಪೂರ್ ಅವರ ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧಿಯಾದರು.[೬] ನಂತರ ೨೦೧೯ ರಲ್ಲಿ ಕಲರ್ಸ್ ಟಿವಿಯ ಅಲೌಕಿಕ ಕಾರ್ಯಕ್ರಮವಾದ ಕವಚ್ ಮಹಾಶಿವರಾತ್ರಿ ಎಂಬ ಧಾರವಾಹಿಯಲ್ಲಿ ಅವಳಿ ಸಹೋದರಿಯರಾದ ಸಂಧ್ಯಾ ಮತ್ತು ಸಾಕ್ಷಿ ಪಟ್ವರ್ಧನ್ ಅವರ ದ್ವಿಪಾತ್ರವನ್ನು ವಹಿಸಿ ನಟಿಸಿದ್ದಾರೆ.[೭]

ವೈಯಕ್ತಿಕ ಜೀವನ[ಬದಲಾಯಿಸಿ]

ದೀಪಿಕಾರವರು ತನ್ನ ಟೆಲಿವಿಷನ್ ಕಾರ್ಯಕ್ರಮದ ನಿರ್ದೇಶಕ ರೋಹಿತ್ ರಾಜ್ ಗೋಯಲ್ ಅವರನ್ನು ೨ ಮೇ ೨೦೧೪ ರಂದು ವಿವಾಹವಾದರು.[೮] ಜನವರಿ ೨೦೧೭ ರಲ್ಲಿ, ಅವರು ತಮ್ಮ ಗರ್ಭಧಾರಣೆಯ ಸುದ್ದಿಗಳನ್ನು ಮಾಧ್ಯಮಗಳಿಗೆ ಮತ್ತು ಅವರ ಅಭಿಮಾನಿಗಳಿಗೆ ಘೋಷಿಸಿದರು.[೯] ಮೇ ೨೦೧೭ ರಲ್ಲಿ, ಅವರು ಗಂಡು ಮಗುವಿಗೆ ಜನ್ಮ ನೀಡಿದರು[೧೦][೧೧] ಮತ್ತು ನಟನೆಯಿಂದ ಸ್ವಲ್ಪ ವಿರಾಮ ಪಡೆದರು.[೧೨]

ಟೆಲಿವಿಷನ್[ಬದಲಾಯಿಸಿ]

ವರ್ಷ ಪ್ರದರ್ಶನಗಳು ಪಾತ್ರ ಚಾನೆಲ್ ಟಿಪ್ಪಣಿಗಳು
೨೦೧೧-೨೦೧೬ ದಿಯಾ ಔರ್ ಬಾತಿ ಹಮ್ ಐಪಿಎಸ್ ಸಂಧ್ಯಾ ಕೊಠಾರಿ / ಸಂಧ್ಯಾ ಸೂರಜ್ ರಾಠಿ ಸ್ಟಾರ್ ಪ್ಲಸ್ ಅನಸ್ ರಶೀದ್ ಎದುರು ಲೀಡ್ ರೋಲ್ [೧೩]
೨೦೧೧ ಜಿಂದಗಿ ಕಾ ಹರ್ ರಂಗ್. . . . ಗುಲಾಲ್ ಸ್ವತಃ ದಿಯಾ ಔರ್ ಬಾತಿ ಹಮ್ ಪ್ರಚಾರ
೨೦೧೨ ನಾಚ್ ಬಲಿಯೆ ೫ ನೀಲು ವಘೇಲಾ ಮತ್ತು ಅರವಿಂದ್ ಕುಮಾರ್ ಅವರನ್ನು ಬೆಂಬಲಿಸಲು
೨೦೧೩ ನಾಚ್ ಬಲಿಯೆ ೬ ಕಾನಿಕಾ ಮಹೇಶ್ವರಿ ಮತ್ತು ಅಂಕುರ್ ಘೈ ಅವರನ್ನು ಬೆಂಬಲಿಸಲು
೨೦೧೪ ಬಾಕ್ಸ್ ಕ್ರಿಕೆಟ್ ಲೀಗ್ ಸ್ಪರ್ಧಿ ಸೋನಿ ಟಿವಿ ದೆಹಲಿ ಡ್ರಾಗನ್ಸ್‌ನಲ್ಲಿ ಆಟಗಾರ್ತಿ
೨೦೧೪ ಯೆ ಹೈ ಮೊಹಬ್ಬಾಟಿನ್ ಸಂಧ್ಯಾ ಸ್ಟಾರ್ ಪ್ಲಸ್ ಅತಿಥಿ, ಹೀನಾ ಖಾನ್ ಮತ್ತು ದೇವೊಲೀನಾ ಭಟ್ಟಾಚಾರ್ಜಿ ಅವರೊಂದಿಗೆ
೨೦೧೫ ತು ಮೇರಾ ಹೀರೋ ಅತಿಥಿ
೨೦೧೨;೨೦೧೬ ಯೆ ರಿಷ್ತಾ ಕ್ಯಾ ಕೆಹೆಲಾತಾ ಹೆ ಅತಿಥಿ, ಕ್ರಾಸ್ ಓವರ್ ಸಂಚಿಕೆ
೨೦೧೭ ತು ಸೂರಜ್, ಮುಖ್ಯ ಸಾಂಜ್ ಪಿಯಾಜಿ ಸಂಧ್ಯಾ ಕಿರುಪಾತ್ರ, (ಫ್ಲ್ಯಾಷ್‌ಬ್ಯಾಕ್‌ನಲ್ಲಿ ಮಾತ್ರ) [೧೪]
೨೦೧೯ ಕಿಚನ್ ಚಾಂಪಿಯನ್ ೫ ಸ್ಪರ್ಧಿ ಕಲರ್ಸ್ ಟಿವಿ ಅಂಟಾರಾ ಬಿಸ್ವಾಸ್ [೧೫][೧೬]
ಬಾಕ್ಸ್ ಕ್ರಿಕೆಟ್ ಲೀಗ್ ೪ ಎಂಟಿವಿ ಇಂಡಿಯಾ ಚೆನ್ನೈ ಸ್ವಾಗರ್ಸ್ನಲ್ಲಿ ಆಟಗಾರ [೧೭]
೨೦೧೯ ಕವಚ್. . . ಮಹಾಶಿವರಾತ್ರಿ ಸಂಧ್ಯಾ ಪಟ್ವರ್ಧನ್ / ಸಂಧ್ಯಾ ಅಂಗದ್ ಜಿಂದಲ್ / ಸಾಕ್ಷಿ ಪಟ್ವರ್ಧನ್ / ಸಾಕ್ಷಿ ಕಪಿಲ್ ಸಲ್ಗಾಂವ್ಕರ್ ಕಲರ್ಸ್ ಟಿವಿ ಮುಖ್ಯ ಪಾತ್ರ [೧೮][೧೯]

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ವರ್ಗ ಪಾತ್ರ ಪ್ರದರ್ಶನ ಟಿಪ್ಪಣಿ
ಭಾರತೀಯ ಟೆಲಿ ಪ್ರಶಸ್ತಿ
೨೦೧೨ ಅತ್ಯುತ್ತಮ ನಟಿ ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ಗೆಲುವು
ಬೆಸ್ಟ್ ಫ್ರೆಶ್ ನ್ಯೂ ಫೇಸ್ (ಸ್ತ್ರೀ) ನಾಮನಿರ್ದೇಶನ
ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ (ಅನಸ್ ರಶೀದ್ ಜೊತೆಗೆ) ನಾಮನಿರ್ದೇಶನ
೨೦೧೩ ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ ನಾಮನಿರ್ದೇಶನ
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ ಗೆಲುವು
೨೦೧೫ ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ ನಾಮನಿರ್ದೇಶನ
ಝೀ ಗೋಲ್ಡ್ ಅವಾರ್ಡ್ಸ್
೨೦೧೨ ಬೆಸ್ಟ್ ಗೋಲ್ಡ್ ಡೆಬ್ಯೂಟ್ (ಸ್ತ್ರೀ) ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ಗೆಲುವು
೨೦೧೩ ಅತ್ಯುತ್ತಮ ನಟಿ ನಾಮನಿರ್ದೇಶನ
ಜನಮೆಚ್ಚಿದ ಜೋಡಿ
೨೦೧೫ ಅತ್ಯುತ್ತಮ ನಟಿ(ಸ್ತ್ರೀ)
ಬಿಗ್ ಸ್ಟಾರ್ ಯಂಗ್ ಎಂಟರ್ಟೈನ್ಮೆಂಟ್ ಪ್ರಶಸ್ತಿ
೨೦೧೨ ಸೂಪರ್ ಹಿಟ್ ಟಿವಿ ಸ್ಟಾರ್ ಫೀಮೇಲ್ ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ಗೆಲುವು
ಲಯನ್ ಗೋಲ್ಡ್ ಅವಾರ್ಡ್ಸ್
೨೦೧೨ ಅತ್ಯುತ್ತಮ ಜೋಡಿ(ಅನಸ್ ರಶೀದ್ ರವರ ಜೊತೆ) ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ಗೆಲುವು
ಹೀರಾ ಮನೆಕ್ ಅವಾರ್ಡ್ಸ್
೨೦೧೨ ಅತ್ಯುತ್ತಮ ದೂರದರ್ಶನ ನಟಿ ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ಗೆಲುವು
ನಿಕೆಲೆಡೋನ್ ಕಿಡ್ಸ್ ಚಾಯ್ಸ್ ಅವಾರ್ಡ್ಸ್ - ಭಾರತ
೨೦೧೩ ಅತ್ಯುತ್ತಮ ದೂರದರ್ಶನ ನಟಿ ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ನಾಮನಿರ್ದೇಶನ
ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು[೨೦]
೨೦೧೪ ದೇಶ್ ಕೀಧಾಕನ್ ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ಗೆಲುವು[೨೦]
ಅತ್ಯುತ್ತಮ ನಟಿ ನಾಮನಿರ್ದೇಶನ
ಬಿಗ್ ಎಂಟರ್ಟೈನ್ಮೆಂಟ್ ಅವಾಆರ್ಡ್
೨೦೧೪ ಮೋಸ್ಟ್ ಎಂಟರ್ಟೈನಿಂಗ್ ಟೆಲಿವಿಷನ್ ಆಕ್ಟ್ರೆಸ್ - ಸ್ತ್ರೀ ಸಂಧ್ಯಾ ರಾಠಿ ದಿಯಾ ಔರ್ ಬಾತಿ ಹಮ್ ನಾಮನಿರ್ದೇಶನ

ಉಲ್ಲೇಖಗಳು[ಬದಲಾಯಿಸಿ]

 1. "Deepika Singh says there is no better gift than the gift of love". Tellychakkar.com. 26 ಜುಲೈ 2012. Archived from the original on 25 ಸೆಪ್ಟೆಂಬರ್ 2012. Retrieved 27 ಜುಲೈ 2012.
 2. "About Diya Aur Baati Hum". Star Plus. Archived from the original on 2011-11-19. Retrieved 2012-05-27.
 3. Shruti Jambhekar (26 December 2011). "Deepika Singh's study interests". ಟೈಮ್ಸ್ ಆಫ್ ಇಂಡಿಯ. Archived from the original on 6 ಆಗಸ್ಟ್ 2013. Retrieved 22 July 2012.
 4. "Star Plus launches new fiction property Diya Aur Baati Hum". Best Media Info. Retrieved 2019-08-13.
 5. "Diya Aur Baati Hum Completes 5 Glorious Years; It's Celebration Time On The Sets Of The Show! [PICS]". Filmibeat (in ಇಂಗ್ಲಿಷ್). 2016-08-30. Retrieved 2019-08-13.
 6. "Diya Aur Baati Hum fame Deepika Singh aka Sandhya all set to sizzle on the pitch in BCL post maternity leave". CatchNews.com (in ಇಂಗ್ಲಿಷ್). Retrieved 2019-08-13.
 7. "Kawach 2: New promo of Deepika Singh and Namik Paul's show will send shivers down your spine - Times of India". The Times of India (in ಇಂಗ್ಲಿಷ್). Retrieved 2019-08-13.
 8. "Actress Deepika Singh ties the knot with director in Mumbai - Times of India ►". The Times of India (in ಇಂಗ್ಲಿಷ್). Retrieved 2019-08-13.
 9. "Good News: Bigg Boss 10 winner Deepika Singh aka Sandhya of 'Diya Aur Baati Hum' is PREGNANT!". Archived from the original on 14 ಜನವರಿ 2017. Retrieved 13 January 2017.
 10. "Diya Aur Baati Hum actress Deepika Singh blessed with a son". Retrieved 21 May 2017.
 11. "Deepika Singh celebrates son's 2nd birthday, regrets she couldn't spend the whole day with her baby - Times of India". The Times of India (in ಇಂಗ್ಲಿಷ್). Retrieved 2019-08-13.
 12. "Working with costars in Kawach 2". Times of India (in ಇಂಗ್ಲಿಷ್). 2019-05-22. Retrieved 2019-08-13.
 13. "I was tired of doing 15 hours shift for Diya Aur Baati Hum everyday: Deepika Singh". Hindustan Times (in ಇಂಗ್ಲಿಷ್). 2017-01-07. Retrieved 2019-08-13.
 14. "'Diya Aur Baati Hum' sequel to be titled 'Tu Sooraj Main Saanjh Piyaji'". ದಿ ಟೈಮ್ಸ್ ಆಫ್‌ ಇಂಡಿಯಾ. 20 February 2017. Archived from the original on 12 ಆಗಸ್ಟ್ 2017. Retrieved 9 August 2017.
 15. DelhiFebruary 20 (20 February 2019). "Diya Aur Baati Hum's Deepika Singh to make a comeback alongside Rashami Desai and Arjun Bijlani". India Today (in ಇಂಗ್ಲಿಷ್). Retrieved 2019-08-13.{{cite web}}: CS1 maint: numeric names: authors list (link)
 16. "Arjun Bijlani, Rashami Desai, Deepika Singh enjoy with kids on Kitchen Champion | TV - Times of India Videos". timesofindia.indiatimes.com. Retrieved 2019-08-13.
 17. "New innings". The Tribune India. 28 April 2019.
 18. "Deepika Singh: Wanted to lose weight before signing a show". mid-day (in ಇಂಗ್ಲಿಷ್). 2019-06-11. Retrieved 2019-08-13.
 19. "Deepika Singh on comeback post motherhood: Didn't want to feel guilty 10-15 years later". India Today (in ಇಂಗ್ಲಿಷ್). 24 May 2019. Retrieved 2019-08-13.
 20. ೨೦.೦ ೨೦.೧ "IndianTelevisionAcademy.com". indiantelevisionacademy.com. Archived from the original on 7 November 2014. Retrieved 31 March 2018.