ದೀಪಾ ದಾಸ್ಮುನ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪಾ ದಾಸ್ಮುನ್ಸಿ
೨೦೧೪ ರಲ್ಲಿ ದಾಸ್ಮುನ್ಸಿ

ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವರು
ಅಧಿಕಾರ ಅವಧಿ
೨೮ ಅಕ್ಟೋಬರ್ ೨೦೧೨ – ೧೬ ಮೇ ೨೦೧೪
ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಸೌಗತ ರಾಯ್

ಸಂಸತ್ತಿನ ಸದಸ್ಯ, ೧೫ ನೇ ಲೋಕ ಸಭೆ
ಅಧಿಕಾರ ಅವಧಿ
೨೦೦೯ - ೨೦೧೪
ಪೂರ್ವಾಧಿಕಾರಿ ಪ್ರಿಯಾ ರಂಜನ್ ದಾಸ್ಮುನ್ಸಿ
ಉತ್ತರಾಧಿಕಾರಿ ಮೊಹಮ್ಮದ್ ಸಲೀಂ
ಮತಕ್ಷೇತ್ರ ರಾಯಗಂಜ್

ಸದಸ್ಯೆ, ಪಶ್ಚಿಮ ಬಂಗಾಳ ಶಾಸನ ಸಭೆ
ಅಧಿಕಾರ ಅವಧಿ
೨೦೦೬ - ೨೦೦೯
ಪೂರ್ವಾಧಿಕಾರಿ ಹಫೀಜ್ ಆಲಂ ಸೈರಾನಿ
ಉತ್ತರಾಧಿಕಾರಿ ಅಲಿ ಇಮ್ರಾನ್ ರಾಮ್ಜ್
ಮತಕ್ಷೇತ್ರ ಗೋಲ್ಪೋಖರ್

ಕಾರ್ಯಾಧ್ಯಕ್ಷ, ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್ ಸಮಿತಿ
ಹಾಲಿ
ಅಧಿಕಾರ ಸ್ವೀಕಾರ 
೨೦೧೭
ವೈಯಕ್ತಿಕ ಮಾಹಿತಿ
ಜನನ (1960-07-15) ೧೫ ಜುಲೈ ೧೯೬೦ (ವಯಸ್ಸು ೬೩)
ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಪ್ರಿಯಾ ರಂಜನ್ ದಾಸ್ಮುನ್ಸಿ (m:೧೯೯೪-೨೦೧೭) (ಸಾವು)
ಉದ್ಯೋಗ ರಾಜಕಾರಣಿ
ಕಲಾವಿದೆ

ದೀಪಾ ದಾಸ್ಮುನ್ಸಿ ಒಬ್ಬ ಭಾರತೀಯ ರಾಜಕಾರಣಿ. ಅವರು ೧೫ ನೇ ಲೋಕಸಭೆಯಲ್ಲಿ ರಾಯಗಂಜ್ ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ಅಕ್ಟೋಬರ್ ೨೦೧೨ ರಿಂದ ಮೇ ೨೦೧೪ ರವರೆಗೆ ನಗರಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಅವರು ೨೦೧೭ ರಲ್ಲಿ ಅವರು ಸಾಯುವವರೆಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕಾರಣಿ ಪ್ರಿಯಾ ರಂಜನ್ ದಾಸ್ಮುನ್ಸಿ ಅವರ ಪತ್ನಿಯಾಗಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ದೀಪಾ ದಾಸ್ಮುನ್ಸಿಯವರು ೧೫ ಜುಲೈ ೧೯೬೦ ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆನೋಯ್ ಘೋಷ್ ಮತ್ತು ದುರ್ಗಾ ಘೋಷ್ ದಂಪತಿಗೆ ಜನಿಸಿದರು. ದೀಪಾ ದಾಸ್ಮುನ್ಸಿ ಅವರು ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು ಮತ್ತು ನಾಟಕಶಾಸ್ತ್ರದಲ್ಲಿ ಎಂಎ ಪಡೆದರುತ್ತಾರೆ.

ಅವರು ೧೫ ಏಪ್ರಿಲ್ ೧೯೯೪ ರಂದು ಪ್ರಿಯಾ ರಂಜನ್ ದಾಸ್ಮುನ್ಸಿ ಅವರನ್ನು ವಿವಾಹವಾದರು ಮತ್ತು ಒಬ್ಬ ಮಗನನ್ನು ಹೊಂದಿದ್ದಾರೆ. [೧]

ಸ್ಥಾನಗಳನ್ನು ಪಡೆದಿದ್ದಾರೆ[ಬದಲಾಯಿಸಿ]

1. ೨೦೦೬-೨೦೦೯ ಸದಸ್ಯ, ಗೋಲ್‌ಪೋಖರ್‌ಗೆ ಪಶ್ಚಿಮ ಬಂಗಾಳ ವಿಧಾನಸಭೆ.

2. ೨೦೦೯-೨೦೧೪ ರಾಯಗಂಜ್‌ನಿಂದ ೧೫ ನೇ ಲೋಕಸಭೆಗೆ ಆಯ್ಕೆಯಾದರು.

3. ೩೧ ಆಗಸ್ಟ್ ೨೦೦೯ ಸದಸ್ಯರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿ.

4. ೨೮ ಅಕ್ಟೋಬರ್ ೨೦೧೨,ಕೇಂದ್ರ ರಾಜ್ಯ ಸಚಿವರು, ನಗರಾಭಿವೃದ್ಧಿ.[೨]

ಸಾಧನೆಗಳು[ಬದಲಾಯಿಸಿ]

೧೯೮೪ ರಿಂದ ರಂಗ ಪ್ರದರ್ಶಕ, ದೂರದರ್ಶನ ಕಲಾವಿದರಾಗಿ, ವಸ್ತ್ರ ವಿನ್ಯಾಸಕರಾಗಿ, ಕಲಾ ನಿರ್ದೇಶಕರಾಗಿ (ಟಿವಿ ಧಾರಾವಾಹಿ ಮತ್ತು ಕಿರುಚಿತ್ರಗಳು)ಯೂ ಸೇವೆ ಸಲ್ಲಿಸಿದ್ದಾರೆ. [೨]

ಕ್ರೀಡೆಗಳು ಮತ್ತು ಕ್ಲಬ್‌ಗಳು[ಬದಲಾಯಿಸಿ]

ಅಧ್ಯಕ್ಷೆ, ದೆಹಲಿ ಮಹಿಳಾ ಫುಟ್‌ಬಾಲ್ [೨]

ಇತರ ಮಾಹಿತಿ[ಬದಲಾಯಿಸಿ]

ಸ್ನಾತಕೋತ್ತರ ಹಂತದಲ್ಲಿ ಚಿನ್ನದ ಪದಕ ವಿಜೇತರಾಗಿ ಮತ್ತು ರಂಗಭೂಮಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದರುತ್ತಾರೆ. [೨]

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ದಾಸ್‌ಮುಂಸಿಯವರು ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು ಮತ್ತು ನಾಟಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರು ಸ್ನಾತಕೋತ್ತರ ಹಂತದಲ್ಲಿ ಚಿನ್ನದ ಪದಕ ವಿಜೇತೆ. [೩]

ಅವರು ೨೦೦೬ ರಲ್ಲಿ ಗೋಲ್ಪೋಖರ್ನಿಂದ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. [೪] ೨೦೦೯ ರಲ್ಲಿ, ಅವರು ೧೫ ನೇ ಲೋಕಸಭೆಗೆ ಆಯ್ಕೆಯಾದರು ಮತ್ತು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಸಮಿತಿಯ ಸದಸ್ಯರಾಗಿದ್ದರು. ಅವರು ಕೇಂದ್ರ ರಾಜ್ಯ ಸಚಿವ, ನಗರಾಭಿವೃದ್ಧಿ ಸಚಿವರಾಗಿದ್ದರು.

ಅವರು ನಿರಾಶ್ರಿತ ಬೀದಿ ಮಕ್ಕಳು, ಅಂಗವಿಕಲ ಮಕ್ಕಳು ಮತ್ತು ಬುಡಕಟ್ಟು ಜನರಿಗಾಗಿ ಕೆಲಸ ಮಾಡಿದ್ದಾರೆ. [೫]

ಆಸಕ್ತಿಗಳು[ಬದಲಾಯಿಸಿ]

ದಾಸ್‌ಮುಂಸಿ‌ಯವರಿಗೆ ಪುಸ್ತಕಗಳನ್ನು ಓದುವುದು, ತೋಟಗಾರಿಕೆ ಮಾಡುವುದು, ಅಡುಗೆ ಮಾಡುವುದು ಮತ್ತು ಶಾಸ್ತ್ರೀಯ ಸಂಗೀತವನ್ನು ಕೇಳುವುದು ತಮ್ಮ ಕಾಲಕ್ಷೇಪವಾಗಿದೆ. ಅವರು ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದ್ದಾರೆ ಮತ್ತು ದೆಹಲಿ ಮಹಿಳಾ ಫುಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ. [೫]

ಉಲ್ಲೇಖಗಳು[ಬದಲಾಯಿಸಿ]

  1. 164.100.47.132 https://web.archive.org/web/20140228120945/http://164.100.47.132/LssNew/members/former_Biography.aspx?mpsno=4481. Archived from the original on 28 February 2014. Retrieved 24 February 2014. {{cite web}}: Missing or empty |title= (help)
  2. ೨.೦ ೨.೧ ೨.೨ ೨.೩ "Members : Lok Sabha".
  3. "Detailed Profile: Smt. Deepa Dasmunsi". Government of India. Archived from the original on 5 May 2012. Retrieved 2010-09-25.
  4. "29 - Goalpokhar Assembly Constituency". Partywise Comparison Since 1977. Election Commission of India. Retrieved 2010-09-25.
  5. ೫.೦ ೫.೧ "Biographical Sketch Member of Parliament 15th Lok Sabha". Archived from the original on 28 February 2014. Retrieved 24 February 2014.