ವಿಷಯಕ್ಕೆ ಹೋಗು

ದಿಶಾ ಪಟಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿಶಾ ಪಟಾನಿ
೨೦೧೮ ರಲ್ಲಿ ಪಟಾನಿ
ಜನನ(೧೯೯೨-೦೬-೧೩)೧೩ ಜೂನ್ ೧೯೯೨ or (೧೯೯೫-೦೭-೨೭)೨೭ ಜುಲೈ ೧೯೯೫[][] (32 or 29)
ರಾಷ್ಟ್ರೀಯತೆಭಾರತೀಯ
ವೃತ್ತಿನಟಿ

ದಿಶಾ ಪಟಾನಿ ಬಬ್ಬ ಭಾರತೀಯ ನಟಿ. ಇವರು ಮುಖ್ಯವಾಗಿ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತೆಲುಗು ಚಿತ್ರ ಲೋಫರ್ (೨೦೧೫) ಮೂಲಕ ವರುಣ್ ತೇಜ್ ರವರ ಜೊತೆ ನಟಿಸಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ (೨೦೧೬) ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ, ಇವರು ಚೀನಾದ ಆಕ್ಷನ್ ಹಾಸ್ಯ ಕುಂಗ್ ಫೂ ಯೋಗ (೨೦೧೭) ನಲ್ಲಿ ನಟಿಸಿದ್ದಾರೆ, ಇದು ಸಾರ್ವಕಾಲಿಕ ಅತಿ ಗಳಿಕೆಯ ಚೀನಾದ ಚಲನಚಿತ್ರಗಳಲ್ಲಿ ಒಂದಾಗಿದೆ . ವಾಣಿಜ್ಯಿಕವಾಗಿ ಯಶಸ್ವಿಯಾದ ಹಿಂದಿ ಆಕ್ಷನ್ ಚಿತ್ರಗಳಾದ ಬಾಘಿ 2 (೨೦೧೮) ಮತ್ತು ಭಾರತ್ (೨೦೧೯) ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.

ಆರಂಭಿಕ ಜೀವನನ

[ಬದಲಾಯಿಸಿ]

ಪಟಾನಿ ಯವರು ಉತ್ತರಾಖಂಡದವರು . ಇವರು ೧೩ ಜೂನ್ ೧೯೯೨ ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದರು.[]

ವೃತ್ತಿ

[ಬದಲಾಯಿಸಿ]

ದಿಶಾ ಇವರು ೨೦೧೫ ರಲ್ಲಿ ವರುಣ್ ತೇಜ್ ಅವರೊಂದಿಗೆ ತೆಲುಗು ಚಿತ್ರ ಲೋಫರ್ [][] ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಬಲವಂತದ ಮದುವೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡುವ ಮೌನಿ ಎಂಬ ಹುಡುಗಿಯ ಪಾತ್ರವನ್ನು ಅವಳು ನಿರ್ವಹಿಸಿದಳು. ಪುರಿ ಜಗನ್ನಾಥ್ ಮತ್ತು ಸಿ ಕಲ್ಯಾಣ್ ಈ ಚಿತ್ರವನ್ನು ನಿರ್ದೇಶಿಸಿದರು. ಮುಂದಿನ ವರ್ಷದಲ್ಲಿ, ದಿಷಾ ಮ್ಯೂಸಿಕ್ ವಿಡಿಯೋದಲ್ಲಿ, ಬೆಫಿಕ್ರಾ ಚಿತ್ರದಲ್ಲಿ ಟೈಗರ್ ಶ್ರಾಫ್ ಅವರೊಂದಿಗೆ ಕಾಣಿಸಿಕೊಂಡರು. ಇದನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಟಿ-ಸೀರೀಸ್ ಅಡಿಯಲ್ಲಿ ನಿರ್ಮಿಸಿದರು ಮತ್ತು ಮೀಟ್ ಬ್ರದರ್ಸ್ ಸಂಯೋಜಿಸಿದ್ದಾರೆ. ಮೀಟ್ ಬ್ರದರ್ಸ್ ಬರೆದು ನಿರ್ದೇಶಿಸಿದ್ದು , ಗಾಯಕಿ ಅದಿತಿ ಸಿಂಗ್ ಶರ್ಮಾ ಅವರು ಧ್ವನಿ ನೀಡಿದ್ದಾರೆ.
ಪಟಾನಿ ಯವರು , ನೀರಜ್ ಪಾಂಡೆ ನಿರ್ದೇಶಿಸಿದ ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾತ್ರದಲ್ಲಿ ಸುಶಾಂತ್ ಇವರ ಜೊತೆ ನಟಿಸಿದ್ದಾರೆ . ಕಾರು ಅಪಘಾತದಲ್ಲಿ ಮೃತಪಟ್ಟ ಪ್ರಿಯಾಂಕಾರವರ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ನೀರಜ್ ಪಾಂಡೆ ನಿರ್ದೇಶಿಸಿದ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವು ಸೆಪ್ಟೆಂಬರ್ ೩೦ ,೨೦೧೬ ರಂದು ಬಿಡುಗಡೆಯಾಯಿತು ಮತ್ತು ₹ ೨.೧೬ ಬಿಲಿಯನ್ ಸಂಗ್ರಹದೊಂದಿಗೆ ಸುಶಾಂತ್ ಸಿಂಗ್ ರಜಪೂತ್ ಮತ್ತು ದಿಶಾ ಇಬ್ಬರಿಗೂ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಅವರ ಅಭಿನಯವನ್ನು ವ್ಯಾಪಕವಾಗಿ ಸ್ವೀಕರಿಸಲಾಯಿತು. ತನ್ನ ವಿಮರ್ಶೆಯಲ್ಲಿ, ಟೈಮ್ಸ್ ಆಫ್ ಇಂಡಿಯಾದ ರೇಣುಕಾ ವ್ಯವಾಹರೆ, "ಈ ಚಿತ್ರದಲ್ಲಿ ದಿಶಾ ಅವರ ಅಭಿನಯವು ನಿಮ್ಮ ಹೃದಯ ಸ್ತಂಭನಗಳಲ್ಲಿ ಅವರ ಅಭಿನಯವನ್ನು ಸೆಳೆಯುವುದರಿಂದ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ" ಎಂದು ವಿಮರ್ಶಿಸಿದ್ದಾರೆ. ಇದಲ್ಲದೆ, ಸೋನು ಸೂದ್ ಜೊತೆಗೆ ಜಾಕಿ ಚಾನ್ ಅವರ ಕುಂಗ್ ಫೂ ಯೋಗದಲ್ಲೂ ಅವರು ನಟಿಸಿದ್ದಾರೆ.
ನಂತರ ಬಾಘಿ 2[][] ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆಗೆ ನಟಿಸಿದರು. ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಮತ್ತು ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರವು ಮಾರ್ಚ್ ೩೦,೨೦೧೮ ರಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು ಸುಮಾರು ₹ 243 ಕೋಟಿ ಗಳಿಸಿದೆ .
ಜೂನ್ ೨೦೧೯ ರಲ್ಲಿ, ಅವರು ಭಾರತ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇವರು ಭಾಘಿ ೩[][] ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

೨೦೧೭ ರಲ್ಲಿ

[ಬದಲಾಯಿಸಿ]
  • ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ - ಹೆಚ್ಚು ಮನರಂಜನೆ ನೀಡಿದ ನಟಿ.
  • ಸ್ಟಾರ್ ಸ್ಕ್ರೀನ್ ಪ್ರಶಸ್ತಿ- ಬೆಸ್ಟ್ ಫೀಮೇಲ್ ಡೆಬ್ಯೂಟ್.
  • ಸ್ಟಾರ್ ಡಸ್ಟ್ ಪ್ರಶಸ್ತಿ - ಬೆಸ್ಟ್ ಫೀಮೇಲ್ ಡೆಬ್ಯೂಟ್.
  • ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ - ಬೆಸ್ಟ್ ಫೀಮೇಲ್ ಡೆಬ್ಯೂಟ್.[೧೦]

ಉಲ್ಲೇಖಗಳು

[ಬದಲಾಯಿಸಿ]
  1. "Is Disha Patani lying about her age?". ದಿ ಟೈಮ್ಸ್ ಆಫ್‌ ಇಂಡಿಯಾ. TNN. 28 January 2017. Retrieved 9 May 2018.
  2. The Hitlist Team (19 July 2016). "Is Tiger Shroff's rumoured girlfriend Disha Patani 'faking' her age?". Mid Day. Retrieved 9 May 2018.
  3. "ಆರ್ಕೈವ್ ನಕಲು". Archived from the original on 2020-03-13. Retrieved 2020-03-18.
  4. "disha patani in a still from her debut movie loafer Disha Patani movie stills, Disha HD movie stills, Disha Patani movie posters". InUth. Retrieved 18 March 2020.[ಶಾಶ್ವತವಾಗಿ ಮಡಿದ ಕೊಂಡಿ]
  5. World, Republic. "Disha Patani's these scenes from her debut film 'Loafer' are heart-winning". Republic World. Retrieved 18 March 2020.
  6. "Disha Patani dismisses rumours about team 'Baaghi 2' being upset over her off-screen camaraderie with Tiger Shroff - Tiger Shroff - Disha Patani's alleged love story". The Times of India. Retrieved 18 March 2020.
  7. "Disha Patani looks sporty yet sensuous during 'Baaghi 2' promotions - Disha Patani's interesting Instagram pictures". The Times of India. Retrieved 18 March 2020.
  8. "Disha Patani Hails Tiger Shroff's Baaghi 3 as 'Best Action Film Ever'". News18. 7 March 2020. Retrieved 18 March 2020.
  9. DelhiDecember 24, India Today Web Desk New; December 24, India Today Web Desk New; Ist, India Today Web Desk New. "Disha Patani gears up for Baaghi 3 in this sneak peek video". India Today (in ಇಂಗ್ಲಿಷ್). Retrieved 18 March 2020.{{cite news}}: CS1 maint: numeric names: authors list (link)
  10. "International Indian Film Academy Awards 2017 | Disha patani, Nice dresses, Strapless dress formal". Pinterest (in ಇಂಗ್ಲಿಷ್).