ವಿಷಯಕ್ಕೆ ಹೋಗು

ದಿವಿಹಲಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿವಿಹಲಸು
ಹವಾಯಿ ದ್ವೀಪದಲ್ಲಿ ಬೆಳೆಸಲಾದ ದಿವಿಹಲಸು
Scientific classification
ಸಾಮ್ರಾಜ್ಯ:
plantae
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. altilis
Binomial name
ಆರ್ಟೋಕಾರ್ಪಸ್ ಅಲ್ಟಿಲಿಸ್ (Artocarpus altilis)

ದಿವಿಹಲಸು(ಸೀಮೆಹಲಸು)ಇದು ಮಲಯ ದ್ವೀಪ ಸಮೂಹಗಳ ಮೂಲ ನಿವಾಸಿ.ಎಲ್ಲಾ ಉಷ್ಣವಲಯ ಪ್ರದೇಶಗಳಲ್ಲಿ ಈಗ ಬೆಳಸಲ್ಪಟ್ಟಿದೆ.೧೮ನೇ ಶತಮಾನದಲ್ಲಿ ಲೆಫ್ಟಿನೆಂಟ್ ವಿಲಿಯಮ್ ಬ್ಲೀಗ್ ಎಂಬವನು ಇದನ್ನು ಎಲ್ಲಾ ಪ್ರದೇಶಗಳಲ್ಲಿ ಪರಿಚಯಿಸಿದನು.ಕರ್ನಾಟಕದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಮನೆ ಹಿತ್ತಿಲುಗಳಲ್ಲಿ ಬೆಳೆಸುತ್ತಾರೆ.

Breadfruit tree planted in Honolulu, Hawaii

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಮೊರಸಿ ಕುಟುಂಬಕ್ಕೆ ಸೇರಿದ್ದು,ಆರ್ಟೋಕಾರ್ಪಸ್ ಇನ್ಸಿಸ (Artocarpus incisa)(Artocarpus altilis)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ Bread Fruit ಎಂದು ಕರೆಯುತ್ತಾರೆ.ತುಳು ಬಾಷೆಯಲ್ಲಿ 'ಜೀಗುಜ್ಜೆ' ಅಥವಾ "ದೀಗುಜ್ಜೆ"ಎಂದು ಹೆಸರು.

ಸಸ್ಯ ಮೂಲ-ಪರಿಚಯ[ಬದಲಾಯಿಸಿ]

ಇದು ಫೋಲಿನೇಷ್ಯಾದ ನಿವಾಸಿ. ಇದು ಶೀಲಾಂಕ, ಭಾರತ ಬರ್ಮಾ, ಮುಂತಾದ ಕಡೆಗಳಲ್ಲಿ ಬಹುಮಟ್ಟಿಗೆ ಸಮುದ್ರ ತೀರಗಳಲ್ಲಿ ಬೇಸಾಯದಲ್ಲಿದೆ. ಕರ್ನಾಟಕದಲ್ಲಿ ದಕ್ಷಿಣಕನ್ನಡ, ಉತ್ತರಕರ್ನಾಟಕ, ಕಾರವಾರ, ಧಾರವಾಡ ಮುಂತಾದ ಕಡೆಗಳಲ್ಲಿ ಕಂಡುಬರುತ್ತದೆ. ಇದರ ಇತಿಹಾಸ ರೋಚಕ ಹಿನ್ನೆಲೆ ಉಳಿದ್ದು. ಬ್ರಿಟನ್ನನಲ್ಲಿ ಗುಲಾಮರ ಆಹಾರ ಸಮಸ್ಯೆಯನ್ನು ಬಗೆಹರಿಸಲು 'ಕ್ಯಾಪ್ಟನ್ ಕುಕ್','ಕ್ಯಾಪ್ಟನ್ ಬ್ಯ್ಲಾಕ್ಸ್' ಎಂಬ ನಾವಿಕರು ಮೂರನೆ 'ಜಾರ್ಜ್' ದೊರೆಗೆ ತಮ್ಮ ಅನ್ವೇಷಣೆಗಳಿಂದ ಪರಿಹಾರಕ್ಕೆ ಈ ಸಸ್ಯವನ್ನು ಸೂಚಿಸಿದರು. ಆಗ ದೊರೆ 'ಬ್ಲೈ' ಎಂಬಾತನ ಮುಂದಾಳತ್ವದಲ್ಲಿ 'ಚಾಂಟಿ' ಎಂಬ ಹಡಗನ್ನಿತ್ತು 'ಬ್ಯಾಂಕ್'ರವರನ್ನು ಈ ಕೆಲಸಕ್ಕೆ ನೇಮಿಸಿದರು. ಈ ತಂಡ ತಾಹಿತಿಯಿಂದ ಒಂದು ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ತರುತ್ತಿರುವಾಗ 'ಫ಼್ರೆಂಡ್ಲಿ' ದ್ವೀಪಗಳ ಹತ್ತಿರ ಹಡಗಿನಲ್ಲಿರುವವರು ದಂಗೆಯೆದ್ದು 'ಬ್ಲೈ' ಮತ್ತು ಆತನ ನೆಚ್ಚಿನ ೧೮ ಸಿಬ್ಬಂದಿಗಳನ್ನು ಸಣ್ಣ ದೋಣಿಯಲ್ಲಿ ಕೂರಿಸಿ ಅಟ್ಟಿಬಿಟ್ಟರು.ಇವರು ೩೬೧೮ ಮೈಲಿ ದೂರವಿರುವ 'ಟೈಮರ್' ಎಂಬ ಸ್ಥಳವನ್ನು ಪ್ರಯಾಸದಿಂದ ತಲುಪಿಸಿದರು. ಅಲ್ಲಿ ಅವರು ತಾಹಿತಿ ಜನರೊಂದಿಗೆ ಸೇರಿ ಪಿಟಿಕೈರ್ನ್ ದ್ವೀಪದಲ್ಲಿ 'ಉಟೋಹೋಯ್' ವಸಾಹತು ನಿರ್ಮಿಸಿದರು. ನಂತರ ಸುಮಾರು ೧೭೯೦ರ ಹೊತ್ತಿಗೆ ಇಂಗ್ಲೆಂಡ್ ಸೇರಿದರು. ಈ ಸೀಮೆಹಲಸು ಮಲೇಷ್ಯಾವನ್ನು೧೭೫೦ರಲ್ಲಿ ಪ್ರವೇಶಿಸಿದರೆ, ೧೯ನೇ ಶತಮಾನದಲ್ಲಿ ಏಷ್ಯಾದ ಇತರ ಭಾಗಗಳಿಗೆ ಹರಡಿತು. ಭಾರತಕ್ಕೆ ಇದನ್ನು ತಂದ ಕೀರ್ತಿ ಡಚ್ಚರಿಗೆ ಸಲ್ಲುತ್ತದೆ. ೧೦೦ ಗ್ರಾಂ. ಹಣ್ಣಿನಲ್ಲಿರುವ ಪೋಷಕಾಂಶಗಳು ಇಂತಿವೆ.

ಪೋಷಕಾಂಶಗಳು ಪ್ರಮಾಣ
ತೇವಾಂಶ ೭೭.೫ ಗ್ರಾಂ
ಸಸಾರಜನಕ ೧.೩ ಗ್ರಾಂ
ಮೇದಸ್ಸು ೦.೫ ಗ್ರಾಂ
ಶರ್ಕರ ೨೦.೧೦ ಗ್ರಾಂ
ನಾರು ೮.೦ ಗ್ರಾಂ
ಖನಿಜ ೦.೮ ಗ್ರಾಂ

ಔಷಧೀಯ ಗುಣಗಳು[ಬದಲಾಯಿಸಿ]

ಪೂರ್ಣವಾಗಿ ಬಲಿತ ಕಾಯಿ, ಹಾಗೂ ಬೀಜಗಳನ್ನು ತರಕಾರಿಯಾಗಿ ಬಳಸುತ್ತಾರೆ. ಕಾಯಿಯ ತಿರುಳಿನಲ್ಲಿ ಶೇ.೭೦ರಷ್ಟು ತಿನ್ನಲು ಯೋಗ್ಯವಿರುವ ಭಾಗವಿರುತ್ತದೆ. ಬೇಯಿಸಿದಾಗ ರುಚಿಯಲ್ಲಿ ಆಲೂಗೆಡ್ದೆಯಂತಿರುತ್ತದೆ. ಬೀಜವನ್ನು ಸುಟ್ಟು ತಿನ್ನಬಹುದು. ಸಾರು, ಪಲ್ಯ, ಹುಳಿ ಮಂತಾದ ತಯಾರಿಕೆಗೆ ಉತ್ತಮ. ಪೊಲಿನೇಷ್ಯಾದಲ್ಲಿ ಹಸಿಕೊಬ್ಬರಿಯನ್ನು ನುಣ್ಣಗೆ ರುಬ್ಬಿ ತಯಾರಿಸಿದ ಹಾಲು ಅಥವಾ ಹೋಳುಗಳನ್ನು ಮಾಡಿ ಅಥವಾ ಹೋಳುಗಳನ್ನು ಮಾಡಿ ಬೇಯಿಸಿ ತಿನ್ನುತ್ತಾರೆ. ಕಾಯಿಗಳನ್ನು ಕತ್ತರಿಸಿ, ಒಣಗಿಸಿ ಉಪಯೋಗಿಸಬಹುದು. ಇತ್ತೀಚೆಗೆ ಬಿಸ್ಕತ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬ್ರಿಟೀಷ್ ಸಾಲೋಮಾನ್ ದ್ವೀಪಗಳಲ್ಲಿ ಇಡೀ ಹಣ್ಣನ್ನು ಸುಟ್ಟು ಜೋಪಾನ ಮಾಡುತ್ತಾರೆ.ಮನೆಯಂಗಳದಲ್ಲಿ ಬೆಳೆಸಿದರೆ ಉತ್ತಮ ಅಲಂಕಾರ ಸಸಿಯಂತೆ ಇರುತ್ತದೆ. ಇದರ ಎಲೆ ದಿನಕ್ಕೆ ಉತ್ತಮ ಮೇವು ಇದರ ಸಸ್ಯಕ್ಷೀರವನ್ನು ದೋಣಿಗಳ ಬಿರುಕು ಮುಚ್ಚಲು ಬಳಸುತ್ತಾರೆ. ಇದರಲ್ಲಿ ನಾರಿನ ಅಂಶ ಹೆಚ್ಚು ಇರುವುದರಿಂದ ಮಲಬದ್ದತೆ ಇರುವವರಿಗೆ ಅನುಕೂಲ.

ಮಣ್ಣು ಮತ್ತು ಹವಾಗುಣ[ಬದಲಾಯಿಸಿ]

ನೀರು ಸುಲಭವಾಗಿ ಬಸಿದು ಹೋಗುವಂತಹ ಆಳವಾದ ಗೋಡು ಮಣ್ಣು ಉತ್ತಮ. ಮಣ್ಣು ಫಲವತ್ತಾಗಿದ್ದರೆ ಫಸಲು ಅಧಿಕ.

ಇದು ಉಷ್ಣವಲಯದ ಬೆಳೆ, ಸಮುದ್ರಮಟ್ಟದಿಂದ ೯೦೦ ಮೀಟರ್ ಎತ್ತರದವರೆಗೂ ಸಾಗುವಳಿ ಮಾಡಲು ಸಾಧ್ಯವಿದ್ದರೂ ಬೆಚ್ಚಗಿನ ಹಾಗೂ ಕೆಳಮಟ್ಟದ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ೧೬ ರಿಂದ ೩೦ ಸೆ. ಉಷ್ಣಾಂಶ ಮತ್ತು ೨೦೦-೨೫೦ ಸೆಂ.ಮೀ. ಮಳೆ ಹಾಗೂ ೭೦-೮೦ ಆರ್ದತೆ ಇರುವ ಪ್ರದೇಶಗಳಲ್ಲಿ ಅನುಕೂಲಕರ ಬೆಳವಣಿಗೆ ಹೊಂದಿರುತ್ತದೆ. ಶೀತಪ್ರದೇಶ ಮತ್ತು ಬೆಟ್ಟ ಗುಡ್ಡ ಪ್ರದೇಶಗಳು ಅಷ್ಟು ಸೂಕ್ತವಲ್ಲ.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಅಂದವಾದ ಹರಡಿದ ಹಂದರದ ನಿತ್ಯಹರಿದ್ವರ್ಣದ ಮರ.ದೊಡ್ಡ ಪ್ರಮಾಣಕ್ಕೆ ಬೆಳೆಯುವುದು.ಮರ ಹಾಗೂ ಎಲೆ ತೊಟ್ಟಿನಲ್ಲಿ ಒಂದು ರೀತಿಯ ರಬ್ಬರಿನಂತಹ ಬಿಳಿಯ ಅಂಟು ದ್ರವ ಬರುವುದು.ವರ್ಷಕ್ಕೆ ಒಂದು ಮರ ೧೦೦-೨೦೦ ರಷ್ಟು ಕಾಯಿಗಳನ್ನು ಬಿಡುವುದು.

ದಿವಿಹಲಸಿನ ಕಾಯಿಯ ಅಡ್ಡಕೊಯ್ತ

ಉಪಯೋಗಗಳು[ಬದಲಾಯಿಸಿ]

ಇದರ ಕಾಯಿ ತರಕಾರಿಯಾಗಿ ಉಪಯೋಗಿಸಲ್ಪಡುವುದು.ಇದರಲ್ಲಿ ಹಲವಾರು ಬಗೆಯ ಖಾದ್ಯಗಳನ್ನು ಮಾಡುತ್ತಾರೆ.

ಆಧಾರ[ಬದಲಾಯಿಸಿ]

೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ

External links[ಬದಲಾಯಿಸಿ]

  • A Voyage to the South Sea by William Bligh, 1792, from Project Gutenberg. The title in part of Bligh's own account of the famous mutiny is: A Voyage to the South Sea, undertaken by command of His Majesty, for the purpose of conveying the bread-fruit tree to the West Indies
  • The Breadfruit Institute
  • Fruits of Warm Climates: Breadfruit
  • Know and Enjoy Tropical Fruit: Jackfruit, Breadfruit & Relatives Archived 2009-01-18 ವೇಬ್ಯಾಕ್ ಮೆಷಿನ್ ನಲ್ಲಿ.
  • Artocarpus altilis (Moraceae) Archived 2007-02-05 ವೇಬ್ಯಾಕ್ ಮೆಷಿನ್ ನಲ್ಲಿ.
  • D. Ragone (1997). Breadfruit. Artocarpus altilis (Parkinson) Fosberg. Vol. 10 Promoting the conservation and use of underutilized and neglected crops. Institute of Plant Genetics and Crop Plant Research, Gatersleben/International Plant Genetic Resources Institute, Rome, Italy. Archived from the original on 2008-12-08. Retrieved 2008-05-26.