ದಿಯಾ (ಚಲನಚಿತ್ರ)
ದಿಯಾ 2020 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದ್ದು, ಕೆ. ಎಸ್. ಅಶೋಕ ಬರೆದು ನಿರ್ದೇಶಿಸಿದ್ದಾರೆ ಮತ್ತು ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಅಡಿಯಲ್ಲಿ ಡಿ ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ. ಪೃಥ್ವಿ ಅಂಬರ, ದೀಕ್ಷಿತ್ ಶೆಟ್ಟಿ ಮತ್ತು ಕುಶೀ ರವಿ ನಟಿಸಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇದನ್ನು ಭಾರತದಲ್ಲಿ 7 ಫೆಬ್ರವರಿ 2020 ರಂದು ಬಿಡುಗಡೆ ಮಾಡಲಾಯಿತು. ಈ ಚಲನಚಿತ್ರವನ್ನು ತೆಲುಗಿನಲ್ಲಿ ಡಿಯರ್ ಮೇಘಾ ಎಂದು ರೀಮೇಕ್ ಮಾಡಲಾಯಿತು ಮತ್ತು 3 ಸೆಪ್ಟೆಂಬರ್ 2021 ರಂದು ಬಿಡುಗಡೆ ಮಾಡಲಾಯಿತು [೧] ಹಿಂದಿಯಲ್ಲಿ ಇದರ ಮರುನಿರ್ಮಾಣ ನಡೆಯಲಿದೆ ಪೃಥ್ವಿ ಆ ಪಾತ್ರವನ್ನು ಅಬಿನಯಿಸಲಿದ್ದಾರೆ. [೨]
ಪಾತ್ರವರ್ಗ
[ಬದಲಾಯಿಸಿ]- ದಿಯಾ ಸ್ವರೂಪ್ "ಸೂಪ್" ಆಗಿ ಕುಶೀ ರವಿ
- ಆದಿಯಾಗಿ ಪೃಥ್ವಿ ಅಂಬಾರ್
- ರೋಹಿತ್ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ
- ಆದಿಯ ತಾಯಿ ಡಾ.ಲಕ್ಷ್ಮಿ "ಲಕ್ಕಿ" ಪಾತ್ರದಲ್ಲಿ ಪವಿತ್ರಾ ಲೋಕೇಶ್
- ದಿಯಾ ತಂದೆಯಾಗಿ ಅರವಿಂದ್ ರಾವ್
- ದಿಯಾ ತಂದೆಯ ಸ್ನೇಹಿತನಾಗಿ ರಾಜೇಶ್ ರಾವ್
- ರೋಹಿತ್ ಸಹೋದರಿಯಾಗಿ ಜ್ಯೋತಿ ರೈ
- ರೈಲಿನಲ್ಲಿ ಪ್ರಯಾಣಿಕನಾಗಿ ಚಂದನ್ ರಾವಂದೂರ್ ಎನ್
- ಗೋಕುಲ್ ಚಕ್ರವರ್ತಿ ಆಟೋ ಡ್ರೈವರ್ ಆಗಿ
- ರಾಕೇಶ್ ಶ್ರೀನಿವಾಸ್ ಆಟೋ ಡ್ರೈವರ್ ಆಗಿ
- ರೋಹಿತ್ ಗೆಳೆಯನಾಗಿ ದರ್ಶನ್ ಅಪೂರ್ವ
- ರುಡ್ವಿನ್ ರೋಹಿತ್ ಸ್ನೇಹಿತನಾಗಿ
ನಿರ್ಮಾಣ
[ಬದಲಾಯಿಸಿ]ದಿಯಾ ಎಂಬುದು ಕೆಎಸ್ ಅಶೋಕ ಅವರ ಎರಡನೇ ಚಲನಚಿತ್ರವಾಗಿದ್ದು, ಅವರು ಮೊದಲ ಚಿತ್ರ ಹಾರರ್ ಚಲನಚಿತ್ರ ವಾದ 6-5=2 ಅನ್ನು ಮಾಡಿದ ಏಳು ವರ್ಷಗಳ ನಂತರದ್ದಾಗಿದೆ. [೩] ಕಥೆಯು ಮಹಿಳಾ ನಾಯಕಿಯ ಬಾಹ್ಯ ಮತ್ತು ಆಂತರಿಕ ಅನುಭವಗಳು ಮತ್ತು ಸಂಭಾಷಣೆಗಳ ಮೇಲೆ ಕೇಂದ್ರೀಕೃತವಾಗಿದೆ. [೪] ಯುರೋಪಿಯನ್ ಪ್ರಣಯ ಚಲನಚಿತ್ರಗಳಂತೆ ಯಾವುದೇ ಹಾಡುಗಳಿಲ್ಲದ ವಾದ್ಯಸಂಗೀತವನ್ನು ಬಳಸಲು ಅಶೋಕ ನಿರ್ಧರಿಸಿದರು. [೫] ಬೆಂಗಳೂರು, ಕಾರವಾರ, ಕುದುರೆಮುಖ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಲಾಗಿದೆ .
ಸಂಗೀತ
[ಬದಲಾಯಿಸಿ]ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ ಆದರೆ "ಸೋಲ್ ಆಫ್ ದಿಯಾ" ಎಂಬ ಒಂದು ಪ್ರಚಾರ ಗೀತೆಯನ್ನು ಹೊಂದಿತ್ತು. [೬]
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಸೋಲ್ ಆಫ್ ದಿಯಾ" | ಧನಂಜಯ್ ರಂಜನ್ | ಚಿನ್ಮಯಿ, ಸಂಜಿತ್ ಹೆಗ್ಡೆ | 3:35 |
ಬಿಡುಗಡೆ
[ಬದಲಾಯಿಸಿ]ಚಲನಚಿತ್ರವು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ 8 ಮಾರ್ಚ್ 2020 ರಂದು ಸ್ಟ್ರೀಮ್ ಮಾಡಲು ಲಭ್ಯವಾಯಿತು, ಆದರೆ ಅದರ ಉಪಗ್ರಹ ಹಕ್ಕುಗಳನ್ನು ಜೀ ಕನ್ನಡ ಸ್ವಾಧೀನಪಡಿಸಿಕೊಂಡಿತು. [೭] [೮]
ವಿಮರ್ಶೆ
[ಬದಲಾಯಿಸಿ]ದಿಯಾ ಅನ್ನು ವಿಮರ್ಶಿಸಿದ ಟೈಮ್ಸ್ ಆಫ್ ಇಂಡಿಯಾದ, ಸುನಯನಾ ಸುರೇಶ್ ಐದರಲ್ಲಿ ನಾಲ್ಕು ಸ್ಟಾರ್ ಕೊಡುತ್ತ ಕಥೆಯ ನೈಜತೆ, ಮೂರು ಪ್ರಮುಖ ಅಭಿನಯಗಳು, ಛಾಯಾಗ್ರಹಣ, ಮತ್ತು ಸಂಗೀತ ಇವುಗಳನ್ನು ಹೊಗಳಿದರು. ಸುರೇಶ್ ತಮ್ಮ ತೀರ್ಮಾನವನ್ನು ಹೀಗೆ ಕೊಟ್ಟರು: "...ಈ ಚಲನಚಿತ್ರವು ಕಮರ್ಷಿಯಲ್ ಸ್ಟೇಪಲ್ಸ್ ಇಲ್ಲದೆ ಕೆಚ್ಚೆದೆಯ ಹೊಸ ಶೈಲಿಯಲ್ಲಿ ಸಿನೆಮಾವನ್ನು ಅನುಭವಿಸಲು ಬಯಸುವವರಿಗೆ. . . ". [೪] ದಿ ಹಿಂದೂ ಗಾಗಿನ S. ಶಿವಕುಮಾರ್ ಅವರು ತಮ್ಮ ವಿಮರ್ಶೆಯಲ್ಲಿ, ನಿರ್ದೇಶನ, ನಟನೆ, ಬರವಣಿಗೆ ಮತ್ತು ಸಂಗೀತಗಳನ್ನು ಶ್ಲಾಘಿಸಿದರು ಮತ್ತು ಅಂತ್ಯವನ್ನು ತೀರಾ ಹಠಾತ್ ಎಂದು ಟೀಕಿಸಿದರು. ಕುಮಾರ್ ಹೇಳಿದರು: ". . . ನಟನೆಯು, ವಿಶೇಷವಾಗಿ ಕುಶೀ ಮತ್ತು ಪ್ರುಥ್ವಿ ಅವರದು, ಮೊದಲ ದರ್ಜೆಯದಾಗಿದೆ . ಸುಂದರವಾಗಿ ರಚಿಸಿದ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಎಲ್ಲಾ ಚೆಲುವು ಮತ್ತು ಸಮಚಿತ್ತಗಳಿಂದ ಕೂಡಿದೆ. . ." . [೩] ಡೆಕ್ಕನ್ ಹೆರಾಲ್ಡ್‌ನಲ್ಲಿ, ವಿವೇಕ್ ಎಂ.ವಿ. ಅವರು ನಿರ್ದೇಶನ, ಸಂಗೀತ ಶೆಟ್ಟಿ ಮತ್ತು ಅಂಬರರ ಮತ್ತು ಅಭಿನಯವನ್ನು ಹೊಗಳಿದರು ಆದರೆ ಕಥಾವಸ್ತುವನ್ನು ಬಹುಮಟ್ಟಿಗೆ ಊಹಿಸಬಹುದಾದದ್ದು ಎಂದೂ ಟೀಕಿಸಿದರು . ಕುಶೀ ಅಭಿನಯವನ್ನು ಸಹ ಟೀಕಿಸಿದರು. [೯] ನಿಧಾನಗತಿಯ ಆರಂಭದ ಹೊರತಾಗಿ ಕುಶೀ ಅಭಿನಯ ಮತ್ತು ಚಿತ್ರಕಥೆಯನ್ನು ಏಷ್ಯಾನೆಟ್ ನ್ಯೂಸ್ ಶ್ಲಾಘಿಸಿದೆ. [೧೦] ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗಾಗಿ, ಎ.ಶಾರದ ಅವರು ಚಿತ್ರಕಥೆ, ನಿರ್ದೇಶನ, ಪ್ರದರ್ಶನಗಳು, ಸಂಗೀತ ಮತ್ತು ಛಾಯಾಗ್ರಹಣಕ್ಕಾಗಿ ಪ್ರಶಂಸೆಯೊಂದಿಗೆ ಐದರಲ್ಲಿ ನಾಲ್ಕು ನಕ್ಷತ್ರಗಳನ್ನು ನೀಡಿದರು. ಶಾರದ ಕಾಮೆಂಟ್ ಮಾಡಿದ್ದಾರೆ: ". . . ಸಾಮಾನ್ಯವಲ್ಲದ ಪ್ರೇಮಕಥೆಯನ್ನು ಕೌಶಲ್ಯದಿಂದ ಹೇಳುತ್ತ ನಿರ್ದೇಶಕರು ಆಘಾತಗಳೊಂದಿಗೆ ವಿಶಿಷ್ಟ ರೀತಿಯ ಸಂಭ್ರಮವನ್ನು ಸೃಷ್ಟಿಸುತ್ತಾರೆ. . ." . [೬]
ಪ್ರಶಸ್ತಿ [lower-alpha ೧] | ಸಮಾರಂಭದ ದಿನಾಂಕ [lower-alpha ೨] | ವರ್ಗ | ಸ್ವೀಕರಿಸುವವರು(ಗಳು) | ಫಲಿತಾಂಶ | Ref. |
---|---|---|---|---|---|
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿಗಳು | 21 ಫೆಬ್ರವರಿ 2021 | ಅತ್ಯುತ್ತಮ ಚಿತ್ರ | ಡಿ. ಕೃಷ್ಣ ಚೈತನ್ಯ | ಗೆಲುವು | [೧೧] </br> [೧೨] </br> [೧೩] |
ಅತ್ಯುತ್ತಮ ನಿರ್ದೇಶಕ | ಕೆ. ಎಸ್. ಅಶೋಕ | Nominated | |||
ಅತ್ಯುತ್ತಮ ಚಿತ್ರಕಥೆ | Nominated | ||||
ಅತ್ಯುತ್ತಮ ಸಂಭಾಷಣೆ | ಗೆಲುವು | ||||
ಅತ್ಯುತ್ತಮ ನಟ | ಪೃಥ್ವೀ ಅಂಬಾರ್ | Nominated | |||
ಅತ್ಯುತ್ತಮ ನಟಿ | ಕುಶೀ ರವಿ | ಗೆಲುವು | |||
ಅತ್ಯುತ್ತಮ ಪೋಷಕ ನಟ | ದೀಕ್ಷಿತ್ ಶೆಟ್ಟಿ | Nominated | |||
ಅತ್ಯುತ್ತಮ ಪೋಷಕ ನಟಿ | ಪವಿತ್ರಾ ಲೋಕೇಶ್ | Nominated | |||
ಅತ್ಯುತ್ತಮ ಸಂಗೀತ ನಿರ್ದೇಶಕ | ಬಿ. ಅಜನೀಶ್ ಲೋಕನಾಥ್ | Nominated | |||
ಅತ್ಯುತ್ತಮ ಹಿನ್ನೆಲೆ ಸಂಗೀತ [lower-alpha ೩] | ಗೆಲುವು | ||||
ಅತ್ಯುತ್ತಮ ಸಾಹಿತಿಗಳು | ಧನಂಜಯ್ ರಂಜನ್ – ("ಸೋಲ್ ಆಫ್ ದಿಯಾ" ಗಾಗಿ) | Nominated | |||
ಅತ್ಯುತ್ತಮ ಮಹಿಳಾ ಗಾಯಕಿ | ಚಿನ್ಮಯಿ - ("ಸೋಲ್ ಆಫ್ ದಿಯಾ" ಗಾಗಿ) | ಗೆಲುವು | |||
ಅತ್ಯುತ್ತಮ VFX | style="background: #FFE3E3; color: black; vertical-align: middle; text-align: center; " class="no table-no2 notheme"|Nominated | ||||
ಅತ್ಯುತ್ತಮ ಸಂಪಾದನೆ | ನವೀನ್ ರಾಜ್ | Nominated | |||
ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | 19 ಸೆಪ್ಟೆಂಬರ್ 2021 | ಅತ್ಯುತ್ತಮ ಚಿತ್ರ - ಕನ್ನಡ | ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ | Nominated | [೧೪] |
ಅತ್ಯುತ್ತಮ ನಿರ್ದೇಶಕ - ಕನ್ನಡ | ಕೆ. ಎಸ್. ಅಶೋಕ | Nominated | |||
ಅತ್ಯುತ್ತಮ ನಟಿ - ಕನ್ನಡ | ಕುಶೀ ರವಿ | Nominated | |||
ಅತ್ಯುತ್ತಮ ಪೋಷಕ ನಟ - ಕನ್ನಡ | ದೀಕ್ಷಿತ್ ಶೆಟ್ಟಿ | Nominated | |||
ಅತ್ಯುತ್ತಮ ಪುರುಷ ಚೊಚ್ಚಲ - ಕನ್ನಡ | ಪೃಥ್ವೀ ಅಂಬಾರ್ | ಗೆಲುವು | |||
ಅತ್ಯುತ್ತಮ ಸಂಗೀತ ನಿರ್ದೇಶಕ - ಕನ್ನಡ | ಬಿ. ಅಜನೀಶ್ ಲೋಕನಾಥ್ | ಗೆಲುವು | |||
ಅತ್ಯುತ್ತಮ ಗೀತರಚನೆಕಾರ - ಕನ್ನಡ | ಧನಂಜಯ್ ರಂಜನ್ – ("ಸೋಲ್ ಆಫ್ ದಿಯಾ" ಗಾಗಿ) | ಗೆಲುವು | |||
ಅತ್ಯುತ್ತಮ ಹಿನ್ನೆಲೆ ಗಾಯಕಿ - ಕನ್ನಡ | ಚಿನ್ಮಯಿ - ("ಸೋಲ್ ಆಫ್ ದಿಯಾ" ಗಾಗಿ) | Nominated | |||
ಅತ್ಯುತ್ತಮ ಛಾಯಾಗ್ರಾಹಕ - ಕನ್ನಡ | ವಿಶಾಲ್ ವಿಟ್ಠಲ್ , ಸೌರಭ್ ವಾಘ್ಮಾರೆ | ಗೆಲುವು | |||
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) - ಕನ್ನಡ | ಕುಶೀ ರವಿ | ಗೆಲುವು |
ಉಲ್ಲೇಖಗಳು
[ಬದಲಾಯಿಸಿ]- ↑ "Pooja Hegde launches first single from 'Dear Megha'". Telangana Today (in ಅಮೆರಿಕನ್ ಇಂಗ್ಲಿಷ್). 2021-07-16. Retrieved 2021-09-01.
- ↑ "Pruthvi Ambar to be part of Dia movie's Hindi remake". 21 January 2021.
- ↑ ೩.೦ ೩.೧ Kumar, S. shiva (13 February 2020). "A look at K.S. Ashoka's 'Dia', the most interesting Kannada film of 2020". The Hindu. Retrieved 23 February 2020.
- ↑ ೪.೦ ೪.೧ "Dia Movie Review: A heartwarming tale that leaves you misty eyed". The Times of India. Retrieved 23 February 2020.
- ↑ "Dia, a love tale from the director of 6-5=2". The New Indian Express.
- ↑ ೬.೦ ೬.೧ "Dia movie review: Director Ashoka delivers a heart-warming, unique love story". The New Indian Express. Archived from the original on 15 February 2020. Retrieved 16 February 2020.
- ↑ "List Of Upcoming Kannada Movies in Amazon Prime Video". Ttollywood online. 7 March 2020. Retrieved 11 March 2020.
- ↑ "kannada-film-dia-is-streaming-on-amazon-prime-video-release-date-8th-march-2020". binged. 8 March 2020. Retrieved 11 March 2020.
- ↑ "Dia Review, A Pleasing Feel Good Romance Drama". Deccan Herald. Archived from the original on 15 February 2020. Retrieved 23 February 2020.
- ↑ "Dia Film Asianet news Review". asianetnews. 17 February 2020. Archived from the original on 16 February 2020. Retrieved 16 February 2020.
- ↑ "Chandanavana Film Critics Academy Awards: Love Mocktail, Dia, Gentleman Dominate Nomination List". ibtimes. 13 February 2021. Retrieved 12 June 2021.
- ↑ "Winners: Chandanavana Film Critics Academy 2020: Dia, Popcorn Monkey Tiger, Gentleman Walk Away with Maximum Honours". 23 February 2021.
- ↑ "CFCA Awards 2021 – Dhananjaya and Kushee win Best Actors award in lead role". 22 February 2021.
- ↑ "The 9th South Indian International Movie Awards Nominations for 2020". South Indian International Movie Awards. Archived from the original on 24 ಆಗಸ್ಟ್ 2021. Retrieved 24 August 2021.
ಬಾಹ್ಯ ಕೊಂಡಿಗಳು
[ಬದಲಾಯಿಸಿ]
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found