ವಿಷಯಕ್ಕೆ ಹೋಗು

ದಾಸರಧಿ ಕೃಷ್ಣಮರ್ಚಾಯುಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾಸರತಿ ಕೃಷ್ಣಮರ್ಚಾಯಲು
ಜನನ(೧೯೨೫-೦೭-೨೨)೨೨ ಜುಲೈ ೧೯೨೫
ವರಂಗಲ್, ಹೈದರಾಬಾದ್ ಜಿಲ್ಲೆ, ತೆಲಂಗಾನ ರಾಜ್ಯ, ಭಾರತ.
ಮರಣ1987 (ವಯಸ್ಸು ೬೧–೬೨)
ವೃತ್ತಿಕವಿ
ರಾಷ್ಟ್ರೀಯತೆಭಾರತೀಯ
ಕಾಲ1949–1987

ಪ್ರಭಾವಗಳು
  • ಕಾರ್ಲ್ ಮಾರ್ಕ್ಸ್

ದಾಸರತಿ ಕೃಷ್ಣಮರ್ಚಾಯುಲು

[ಬದಲಾಯಿಸಿ]

ದಾಸರತಿ ಕೃಷ್ಣಮರ್ಚಾಯುಲು (೧೯೨೫-೧೯೮೭) (తెలుగు:దాశరథి కృష్ణమాచార్యులు) ದಾಸರತಿ ಎಂದೇ ಪ್ರಸಿದ್ದರು. ಅವರು ತೆಲುಗು ಕವಿ ಮತ್ತು ಬರಹಗಾರರು. ದಾಸರತಿರವರಿಗೆ ಅಭ್ಯುದಯ ಕವಿ ಮತ್ತು ಕಲಾಪ್ರಪೂರ್ಣನೆಂಬ ಬಿರುದು ಸಿಕ್ಕಿದೆ. ಅವರಿಗೆ ಟಿಮಿರಾಮ್‍ಟೊ ಸಮರಮ್ ಎಂಬ ಕೃತಿಗೆ ೧೯೭೪ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[] ಲಭಿಸಿತು. ಆಂಧ್ರಪ್ರದೇಶ ಸರ್ಕಾರದ ಆಸ್ಥಾನ ಕವಿಯಾಗಿ ಅವರನ್ನು ಆಯ್ಕೆಮಾಡಿದ್ದರು.

ಬಾಲ್ಯ

[ಬದಲಾಯಿಸಿ]

ದಾಸರತಿ ಕೃಷ್ಣಮರ್ಚಾಯುಲುರವರು ೨೨ ಜುಲೈ ೧೯೨೫ರಲ್ಲಿ ಜನಿಸಿದರು. ಅವರು ಮಧ್ಯಮ ವರ್ಗದ ವೈಷ್ಣವ ಬ್ರಾಹ್ಮಣರು. ಅವರ ಸ್ವಗ್ರಾಮವಾದ ಚಿನ್ನಗುದಡುರು, ಮಾರಿಪೆಡ ಮಂಡಲ್ ವಾರಂಗಲ್ ಜಿಲ್ಲೆಯಲ್ಲಿದೆ. ಅವರು ಸಂಪ್ರದಾಯಸ್ಥ, ಆದರೆ ವಿವೇಚನಾಯುಕ್ತ ವೈಷ್ಣವ ಭಕ್ತ. ಭಾರತೀಯ ಪುರಾಣದಲ್ಲಿ (ಪುರಾಣಗಳು) ಅವರು ಪಂಡಿತರಾಗಿದ್ದರು ಹಾಗು ತೆಲುಗು, ಸಂಸ್ಕೃತ ಮತ್ತು ತಮಿಳು ಭಾಷೆಗಳ ಮೇಲೆ ಹಿಡಿತ ಹೊಂದಿದ್ದರು. ಅವರು ಖಮ್ಮಮ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಅನಂತರ ಅವರು ಹೈದರಾಬಾದ್‍ನ ನಿಜ಼ಾಮರ ವಿರುದ್ಧ ಹೋರಾಡುವುದ್ದಕೋಸ್ಕರ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು.

ವೃತ್ತಿ

[ಬದಲಾಯಿಸಿ]

ಕ್ರಿಯಾವಾದ

[ಬದಲಾಯಿಸಿ]

ಅವರು ಆಂಧ್ರ ಮಹಾಸಭಾ ಚಳುವಳಿಯಲ್ಲಿ ಸ್ವಯಂಸೇವಕರಾಗಿದ್ದರಿಂದ ತೆಲಂಗಾಣ[]ದ ಹಳ್ಳಿ ಹಳ್ಳಿಗೂ ಹೋಗಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದರು. ಮಹಾತ್ಮಗಾಂಧಿ ಹಾಗು ಕಂದುಕುರಿ ವೀರಸಲಿಂಗಮ್‍ರವರಿಂದ ಪ್ರೇರೆಪಿತರಾಗಿದ್ದರು. ಅವರ ಅನೇಕ ಸ್ನೇಹಿತರು ಕಮ್ಯುನಿಸ್ಟ್ ಕ್ರಾಂತಿಕಾರಿಗಳಾಗಿದ್ದರಿಂದ ಅವರು ರಾಜಕೀಯಕ್ಕೆ ಪ್ರವೇಶಿಸಿದರು.

ಸಾಹಿತ್ಯದ ಕೊಡುಗೆ

[ಬದಲಾಯಿಸಿ]

ಅವರು ಬಾಲ್ಯದ ದಿನಗಳಲ್ಲೇ ಕವಿತೆ ಬರೆಯಲಾರಂಭಿಸಿದರು. ಅವರ ಕವಿತೆಗಳು ಕ್ರಾಂತಿಕಾರಿಯಾಗಿದ್ದವು. ಅವರು ಕಾರ್ಲ್ ಮಾರ್ಕ್ಸ್‌ರಿಂದ ಪ್ರೇರೇಪಿತರಾಗಿದ್ದರು. ಅವರು ಬಡ, ಶೋಷಣೆಗೆ ಒಳಗಾದ ಕಾರ್ಮಿಕ ವರ್ಗದವರನ್ನು ಮುಖ್ಯ ಅಂಶವಾಗಿಟ್ಟುಕೊಂಡು ತಮ್ಮ ಕವಿತೆಗಳನ್ನು ರಚಿಸುತ್ತಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಹಲವಾರು ಸ್ವತಂತ್ರ್ಯ ರಾಜ್ಯಗಳು ಹೊಸದಾಗಿ ಮಾಡಿದ ಇಂಡಿಯನ್ ಯೂನಿಯನ್‍ನನ್ನು ಸೇರಿದವು. ಆದರೆ ಹೈದರಾಬಾದ್ ರಾಜ್ಯದ ರಾಜ ಮಿರ್ ಒಸ್ಮನ್ ಆಲಿ ಕಾನ್ ಹೈದರಾಬಾದ್‍ನ ಇಂಡಿಯನ್ ಯೂನಿಯನ್‍ಗೆ ಸೇರಿಸಲು ಒಪ್ಪಲಿಲ್ಲ. ಆ ಸಮಯದಲ್ಲಿ ಸ್ಟೇಟ್ ಕಾಂಗ್ರೆಸ್ ಪಾರ್ಟಿ, ಸ್ವಾಮಿ ರಮಾನಂದತೀರ್ಥರವರ ನಾಯಕತ್ವದಲ್ಲಿ ನಿಜ಼ಾಮ್ಸ್ ವಿರುದ್ದ ಹೋರಾಟಕ್ಕಿಳಿದರು. ಸಾವಿರಾರು ಜನರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಜೈಲು ಪಾಲಾದರು.

ದಾಸರತಿ ಕೃಷ್ಣಮರ್ಚಾಯುಲುರವರನ್ನು ೧೯೪೭ರಲ್ಲಿ ಬಂಧಿಸಿದರು. ಅವರನ್ನು ಮತ್ತು ಹಲವು ನಾಯಕರನ್ನು ವಾರಂಗಲ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು. ಅನಂತರ ದಾಸರತಿ ಕೃಷ್ಣಮರ್ಚಾಯುಲುರವರನ್ನು ನಿಜ಼ಾಮಬಾದ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಅವರು ಜೈಲಿನಲ್ಲಿದ್ದಾಗ ಕವಿತೆಗಳನ್ನು ಬರೆದರು. ಅವರು ಬಿಡುಗಡೆಗೊಂಡ ನಂತರ ತೆಲಂಗಾಣವನ್ನು ಬಿಟ್ಟು ವಿಜಯವಾಡಕ್ಕೆ ತೆರೆಳಿದರು ಹಾಗು ನಿಜ಼ಾಮ್ ವಿರುದ್ದ ಕವಿತೆಗಳನ್ನು ಬರೆದು ತೆಲುಗು ದೇಶಮ್ ಪತ್ರಿಕೆಯಲ್ಲಿ ಪ್ರಕಟಿಸಿದರು.

೧೯೪೮ರಲ್ಲಿ ಇಂಡಿಯನ್ ಯೂನಿಯನ್, ಹೈದರಾಬಾದ್ ಅನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ದಾಸರತಿ ಕೃಷ್ಣಮರ್ಚಾಯುಲುರವರು ಆಂಧ್ರಪ್ರದೇಶ ಸರ್ಕಾರದಲ್ಲಿ ಕೆಲಕಾಲ ಕೆಲಸ ಮಾಡಿದರು, ಅನಂತರ ಅವರು ಆಲ್ ಇಂಡಿಯಾ ರೇಡಿಯೊ ವಿಜಯವಾಡ ಹಾಗು ಮದ್ರಾಸ್‍ನಲ್ಲಿ ಕಾರ್ಯ ನಿರ್ವಹಿಸಿ, ೧೯೭೧ ರಲ್ಲಿ ನಿವೃತ್ತಿ ಹೊಂದಿದರು. ಅವರು ಸರ್ಕಾರಿ ಕವಿಯಾಗಿ ೧೯೭೧ ರಿಂದ ೧೯೮೪ರ ವರೆಗೆ ಸೇವೆ ಸಲ್ಲಿಸಿದರು. ಅವರು ದೂರದರ್ಶನ ಹಾಗು ಆಕಾಶವಾಣಿಯ ನಿರ್ಮಾಪಕರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ.

ಲೇಖನಗಳು

[ಬದಲಾಯಿಸಿ]

ದಾಸರತಿ ಕೃಷ್ಣಮರ್ಚಾಯುಲುರವರ ಮೊದಲ ಪುಸ್ತಕ 'ಅಗ್ನಿದಾರಾ' ೧೯೪೭ ರಲ್ಲಿ ಪ್ರಕಟಗೊಂಡಿತು. ಈ ಪುಸ್ತಕವನ್ನು ಅವರು ನಿಜ಼ಾಮರ ಆಡಳಿತದ ವಿರುದ್ದ ಬರೆದಿದ್ದಾರೆ. ಅವರು ಈ ಪುಸ್ತಕವನ್ನು ಜೈಲಿನಲ್ಲಿದ್ದಾಗ ಶುರುಮಾಡಿ, ಬಿಡುಗಡೆಗೊಂಡ ನಂತರ ಮುಗಿಸಿದರು.

ಅವರ ಕೆಲವು ಪುಸ್ತಕಗಳು

  • ರುಧ್ರವೀಣಾ (೧೯೫೦)
  • ಮಹನ್‍ದ್ರೊದೈಯಮಮ್
  • ಪುನರ್‍ನಪಮ್
  • ಅಮೃತಬಿಶೇಕಮ್
  • ಕವಿತಾಪುಷ್ಪಕಮ್
  • ಗಲೀಬ್ ಗೀತಲು (೧೯೬೧)

ಗಲೀಬ್ ಗೀತಲು, ಉರ್ದುಯಿಂದ ತೆಲುಗಿಗೆ ಅನುವಾದಿಸಿರುವ ಕವಿತೆ. ಅವರು ಕೆಲವು ತೆಲುಗು ಚಲನಚಿತ್ರಗಳಿಗೆ ಗೀತೆ ರಚಿಸಿದ್ದಾರೆ.

ತೆಲುಗು ಚಿತ್ರರಂಗ

[ಬದಲಾಯಿಸಿ]

ಅವರು ಹಲವಾರು ಚಲನಚಿತ್ರಗಳಿಗೆ ಗೀತ ರಚಿಸಿದ್ದಾರೆ. ಸುಮಾರು ೨೦೦೦ ಹಾಡುಗಳನ್ನು ಅವರು ತೆಲುಗು ಚಿತ್ರರಂಗಕ್ಕೆ ಬರೆದಿದ್ದಾರೆ. ಅವರು ಪೂಜಾ ಎಂಬ ಚಿತ್ರಕ್ಕೂ ಹಾಡುಗಳನ್ನು ಬರೆದಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ದಾಸರತಿ ಕೃಷ್ಣಮರ್ಚಾಯುಲುರವರ ಕಿರಿಯ ಸಹೋದರ ದಾಸರತಿ ರಂಗಚಾರ್ಯುಲುರವರು ಸಹ ಬರಹಗಾರರಾಗಿದ್ದರು.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು". Archived from the original on 2013-12-30. Retrieved 2015-11-03.
  2. "ತೆಲಂಗಾಣ ರಾಜ್ಯ".