ದಾವಣಗೆರೆ ಮೆಣಸಿನಕಾಯಿ
Jump to navigation
Jump to search
ಬಳ್ಳಾರಿಯಲ್ಲಿ ಹೆಚ್ಚಾಗಿ ಜನಪ್ರಿಯವಾದ ಮೆಣಸಿನಕಾಯಿ ಬೋಂಡ ಅಥವಾ ಮೆಣಸಿನಕಾಯಿ ಬಜ್ಜಿಗೆ ಬಳ್ಳಾರಿ ಮೆಣಸಿನಕಾಯಿ ಎಂದೇ ಕರೆಯಲಾಗುತ್ತದೆ. ಕೆಲವೊಮ್ಮೆ ಬರೆ ಮೆಣಸಿನಕಾಯಿ ಎಂದು ಆಡುಮಾತಿನಲ್ಲಿ ಉಪಯೋಗಿಸುವುದುಂಟು. ಕಡಲೇ ಹಿಟ್ಟಿನಲ್ಲಿ ಮೆಣಸಿನಕಾಯಿ ಅದ್ದಿ ಕರಿದ ಖಾದ್ಯವಿದು, ಖಾರ - ಮಂಡಕ್ಕಿಯೊಂದಿಗೆ ತಿನ್ನುತ್ತಾರೆ. ಕೊಟ್ಟೂರು , ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಹರಿಹರ, ಚಿತ್ರದುರ್ಗ, ಹಿರಿಯೂರು,ಗದಗ್ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ದಾರಿಯಲ್ಲಿ, ಗಲ್ಲಿಗಲ್ಲಿಗಳಲ್ಲಿ ಮೆಣಸಿನಕಾಯಿ ಬೋಂಡ, ಖಾರ - ಮಂಡಕ್ಕಿ ಮಾರಿ ಜೀವನ ಸಾಗಿಸುವವರು ಇಂದಿಗೂ ಇದ್ದಾರೆ.
ಮಾಡುವ ವಿಧಾನ[ಬದಲಾಯಿಸಿ]
ಕಡಲೆ ಹಿಟ್ಟಿಗೆ ಖಾರ, ಜೀರಿಗೆ ಬೆರೆಸಿ ಮೆಣಸಿನಕಾಯಿಯನ್ನು ಅದರಲ್ಲಿ ಅದ್ದಿ ಕರೆಯಲಾಗುತ್ತದೆ. ಸುಲಭ ವಿಧಾನವಾದ್ದರಿಂದ ಕನ್ನಡಿಗರ 'ಫಾಸ್ಟ್ ಫುಡ್'ಗಳಲ್ಲಿ ಇದೊಂದು.