ಮಿರ್ಚಿ ಭಜಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಮಿರ್ಚಿ ಭಜಿ'

ಮಿರ್ಚಿ ಭಜಿ ಯನ್ನು ಸಾಮಾನ್ಯ ಭಜಿಯ ಹಾಗೆಯೇ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ಆದರೆ ವಿಶೇಷತೆಯೆಂದರೆ ಅದರೊಳಗಿರುವ ಖಾರವಾದ ಮಿರ್ಚಿ ಅಂದರೆ ಹಸಿಮೆಣಸಿನಕಾಯಿ. ಇದು ಭಜಿಗೆ ಬೇಕಾದ ರುಚಿಯನ್ನು ನೀಡುತ್ತದೆ.

ಉತ್ತರ ಕರ್ನಾಟಕ ಹೆಮ್ಮೆಯ ತಿನಸುಗಳಲ್ಲೊಂದು[ಬದಲಾಯಿಸಿ]

ಭಜಿಯು ಒಂದು ವಿಶಿಷ್ಟ ಖಾದ್ಯ. ಸಾಮಾನ್ಯವಾಗಿ ಮಿರ್ಚಿಯನ್ನು ಹಸಿಮೆಣಸಿನಕಾಯಿಯನ್ನು ಉಪಯೋಗಿಸಿ ಮಾಡುತ್ತಾರಾದರೂ ಈಗೀಗ ಬದನೆಕಾಯಿಯ ಎರಡು ಅಗಲವಾದ ತೆಳು ಹೋಳುಗಳ ಮಧ್ಯೆ ಹಸಿ ಚಟ್ನಿ ಹಚ್ಚಿ ಮಿರ್ಚಿ ಕರಿದು ಕೊಡುವದೂ ಉಂಟು. ಇದೂ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಒಟ್ಟಿನಲ್ಲಿ ಮಿರ್ಚಿಭಜಿ ಉತ್ತರ ಕರ್ನಾಟಕದ ಹೆಮ್ಮೆ.

ಭಜಿ ಮಾಡಲು ಬೇಕಾಗುವ ಸಾಮಗ್ರಿಗಳು ೧. ಕಡಲೆ ಹಿಟ್ಟು ೨. ಹಸಿ ಮೆಣಸಿನಕಾಯಿ ೩. ಕಾರದ ಪುಡಿ ೪. ಉಪ್ಪು ೫. ಸೊಡಾ ೬. ಎಣ್ಣೆ

ಮಾಡುವ ವಿಧಾನ 

೧ ಕಪ್ ಕಡಲೆ ಹಿಟ್ಟನ್ನು ತೆಗೆದುಕೊಳ್ಳಬೇಕು ಅದರಲ್ಲಿ ಸ್ವಲ್ಪ ಕಾರದ ಪುಡಿ ಮತ್ತು ೧ ಚುಟಿಗೆ ಸೊಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಕ್ಕಿ ಸ್ವಲ್ಪ ನೀರನ್ನು ಹಾಕಿ ಕಲಸಿಕೊಳ್ಳಬೇಕು ಹೆಚ್ಚು ನಿರನ್ನು ಹಾಕ ಬಾರದು. ೧೦ ನಿಮಿಷದ ನಂತರ ೨ ಕಪ್ ಎಣ್ಣೆಯನ್ನು ಕಾಯಿಸಲು ಇಡಬೇಕು. ಎಣ್ಣೆ ಕಾದ ನಂತರ ಉದ್ದ ಮತ್ತು ದಪ್ಪ ಹಸಿ ಮೆಣಸಿನಕಾಯಿಯನ್ನು ಕಲಸಿದ ಕಡಲೆ ಹಿಟ್ಟಿನಲ್ಲಿ ಎದ್ದಿ ಎಣ್ಣೆಯಲ್ಲಿ ಬಿಡಬೇಕು ಕಂದು ಬಣ್ಣಕ್ಕೆ ಬಂದ ನಂತರ ತೆಗೆಯ ಬೇಕು ಈಗ ನಿಮ್ಮ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ತಿನ್ನಲು ರೇಡಿ.

ಇವನ್ನೂ ನೋಡಿ[ಬದಲಾಯಿಸಿ]