ದಟ್ಸ್ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಟ್ಸ್ ಕನ್ನಡ ಅಂತರ್ಜಾಲದಲ್ಲಿನ ಕನ್ನಡದ ತಾಣಗಳಲ್ಲೊಂದು.

ಇಂಡಿಯ ಇನ್ಫೊ ಕಂಪೆನಿಯ ಕನ್ನಡ ವಿಭಾಗವಾಗಿದ್ದ ಈ ಇ-ಪತ್ರಿಕೆ ೨೦೦೬ ರಲ್ಲಿ oneindia.in ರವರ ಒಂದು ವಿಭಾಗವಾಯಿತು. ಈ ಇ-ಪತ್ರಿಕೆ ಬೆಂಗಳೂರಿನಿಂದ ಅಂತರಜಾಲದಲ್ಲಿ ಪ್ರಸಾರವಾಗುತ್ತಿದೆ. ಇದರ ಸಂಪಾದಕರು ಶ್ರೀ ಶಾಮಸುಂದರ್ ಮತ್ತು ಸಹಾಯಕ ಸಂಪಾದಕರು ಪ್ರಸಾದ ನಾಯಕ್.

ದಟ್ಸ್ ಕನ್ನಡ ವಾರ್ತೆಗಳನ್ನು ಅಂತರಜಾಲದಲ್ಲಿ ಪ್ರಸಾರ ಮಾಡುತ್ತ ಬಂದಿದೆ. ಈ ಇ-ಪತ್ರಿಕೆಯ ಅಂಕಣ ಬರಹಗಳಲ್ಲಿ ಸಾಹಿತಿ / ಬರಹಗಾರರಾದ ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಶ್ರೀವತ್ಸ ಜೋಶಿ, ತ್ರಿವೇಣಿ ಶ್ರೀನಿವಾಸರಾವ್ ಮುಂತಾದವರ ಅಂಕಣ ಬರಹಗಳು ಉಂಟು. ಪತ್ರಿಕೆಯಲ್ಲಿ ಕನ್ನಡ ಚಲನಚಿತ್ರರಂಗ ಕುರಿತ ಸುದ್ದಿಗಳು ಪ್ರಕಟಗೊಳ್ಳುತ್ತವೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]