ತ್ರಿವಿಕ್ರಮ ಹೆಜ್ಜೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Tri.H..jpg
'ತ್ರಿವಿಕ್ರಮ ಹೆಜ್ಜೆಗಳು'

'ಶ್ರೀ.ಟಿ. ಅರ್. ಅನಂತರಾಮು' ರವರು ಸಂಪಾದಿಸಿದ, ಬಹಳ ಮಹತ್ವದ ಗ್ರಂಥಗಳಲ್ಲೊಂದು. ಕನ್ನಡದಲ್ಲಿ ಚಾರ್ಲ್ಸ್ ಡಾರ್ವಿನ್, ಮೇರಿಕ್ಯೂರಿ, ಐನ್ ಸ್ಟೈನ್, ಸಿ.ವಿ.ರಾಮನ್, ವಿಕ್ರಮ್ ಸಾರಾಭಾಯಿ, ಜಗದೀಶ್ ಚಂದ್ರ ಬೋಸ್, ಬರವಣಿಗೆಗಳು ಲಭ್ಯವಿವೆ. ಇಲ್ಲಿ, ಹಿಂದಿನ ತಲೆಮಾರಿನ ಶ್ರೇಷ್ಠ ಅಭಿಯಂತರಂತಹ, 'ಶ್ರೀ.ಮೋಕ್ಷಗುಂಡಂ ವಿಶ್ವೇಶ್ವರಯ್ಯ' ನವರ ಜೊತೆಗೆ, ಇಂದಿನ ಬಹು-ಮುಂಚೂಣಿಯಲ್ಲಿರುವ 'ಐ.ಟಿ.ಕ್ಷೆತ್ರದ ದಿಗ್ಗಜ'ಗಳಲ್ಲಿ ಒಬ್ಬರಾದ ಶ್ರೀ 'ಎನ್ ಆರ್ ನಾರಾಯಣಮೂರ್ತಿ', 'ಶ್ರೀಮತಿ, ಸುಧಾ ಮೂರ್ತಿ'ಗಳ ವರೆಗೆ, ವ್ಯಕ್ತಿಚಿತ್ರಣವನ್ನು ಒಂದು ಹೊಸರೀತಿಯಲ್ಲಿ ಸಂಪಾದಿಸಿ ಪ್ರಸ್ತುತಪಡಿಸಿದ ಖ್ಯಾತಿ, ಅನಂತರಾಮುರವರದು. ಇಂತಹ ಮತ್ತು ಬೇರೆಬೇರೆ ವಿಷಯಗಳ ಬಗ್ಗೆ ಸುಮಾರು ೫೦ ಪುಸ್ತಕಗಳ ಮಾಲೆಯನ್ನು ಅವರು ತಮ್ಮ ಕೊರಳಿನಲ್ಲಿ ಧರಿಸಿದ್ದಾರೆ. 'ವಿಷಯ ಪ್ರಸ್ತಾವನೆ', 'ಮಾಹಿತಿ', 'ವಿಷಯಕ್ಕೆ ತಕ್ಕ, ದೃಷ್ಟಾಂತ' ಗಳ ಸಮೇತ ಓದುಗರಿಗೆ ಬಹು ಉಪಯುಕ್ತವಾದ ಪುಸ್ತಕಗಳಾಗಿವೆ.

೨೩೪ ಪುಟಗಳ 'ತ್ರಿವಿಕ್ರಮ ಹೆಜ್ಜೆಗಳು' ಕನ್ನಡ ನಾಡಿಗಾಗಿ-ನಾಳೆಗಾಗಿ ಸಿದ್ಧಪಡಿಸಿದ ಪುಸ್ತಕ[ಬದಲಾಯಿಸಿ]

'ಟಿ.ಆರ್.ನಂತರಾಮು'ರವರ, 'ಸಿ.ವಿ.ಜಿ.ಪಬ್ಲಿಕೇಶನ್' ದ್ವಾರಾ ಪ್ರಕಾಶಿತ,(ಬೆಂಗಳೂರು) ಕೃತಿ, ನಮ್ಮ ನಾಡಿನಲ್ಲಿ ಸಾಧನೆಗಳಿಂದ ಹೆಜ್ಜೆಗುರುತುಮೂಡಿಸಿದ ವಿಜ್ಞಾನಿ, ತಂತ್ರಜ್ಞರ ಕುರಿತಾದ ಲೇಖನಗಳ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಅನೇಕ ಮೇರುವ್ಯಕ್ತಿಗಳು ತಮ್ಮ ಅನುಪಮ ಕೊಡುಗೆಯನ್ನು ಕೊಡುತ್ತಿದ್ದಾರೆ. ಇವರು ಈಗಿನ, ಹೊಸಪೀಳಿಗೆಯಯವರಿಗೆ ಹೊಸಬಗೆಯ ಚಿಂತನೆಗೆ ಪ್ರೇರಕರಾಗಿದ್ದಾರೆ. 'ಡಾ. ರಾಜಾರಾಮಣ್ಣ', 'ರಾಗಿ ಬ್ರಹ್ಮ, ಲಕ್ಷ್ಮಣಯ್ಯ', 'ಪ್ರೊ. ಯು. ವಿ. ರಾವ್', 'ಡಾ. ರಾಶಿ', 'ಡಾ. ಎಮ್.ಎಚ್,ಮರಿಗೌಡ', 'ಹೆಚ್. ಸಿ. ಜವರಾಯ', 'ಜಿ.ಹೆಚ್.ಕೃಂಬಿಗಲ್', 'ಜಾನ್ ಕ್ಯಾಮರಾನ್, ಪ್ರೊ. ಸಿ. ಎನ್. ಆರ್. ರಾವ್,' 'ಎಂ. ಕೆ. ವೈನುಬಾಪು', 'ಡಾ. ಬಿ. ಪಿ. ರಾಧಾಕೃಷ್ಣ', 'ಪ್ರೊ.ಮಾಧವ ಗಾಡ್ಗೀಳ್', 'ಪ್ರೊ.ಬಿ.ಜಿ.ಎಲ್.ಸ್ವಾಮಿ', 'ಪ್ರೊ. ಸಿ. ವಿ. ವಿಶ್ವೇಶ್ವರ', ಮುಂತಾದವರ ವ್ಯಕ್ತಿಚಿತ್ರಗಳು ಕೊಡಲ್ಪಟ್ಟಿವೆ.