ತೇಜಸ್ವಿ ಪರಿಸರ ಕಥಾಪ್ರಸಂಗ (ಪುಸ್ತಕ)
ಗೋಚರ
ಲೇಖಕರು | ಕೆ ಪಿ ಪೂರ್ಣಚಂದ್ರ ತೇಜಸ್ವಿ |
---|---|
ಅನುವಾದಕ | ಅ ನಾ ರಾವ್ ಜಾದವ್ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ನಾಟಕ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೩, ೧ನೇ ಮುದ್ರಣ |
ಪುಟಗಳು | ೮೪ |
ಐಎಸ್‍ಬಿಎನ್ | 978-81-8467-374-6 |
ಪೂರ್ಣಚಂದ್ರ ತೇಜಸ್ವಿಯವರ 'ಪರಿಸರದ ಕಥೆ'ಯ ನಾಟಕ ರೂಪ 'ತೇಜಸ್ವಿ ಪರಿಸರ ಕಥಾಪ್ರಸಂಗ'. ರಚನೆ : ಅ ನಾ ರಾವ್ ಜಾದವ್
"ಪರಿಸರ" ಅಂತಂದ್ರೆ... ಬರೀ ಮರ-ಗಿಡ, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ...ಇವಿಷ್ಟೇ ಅಲ್ಲಾ. ಇವೆಲ್ಲದರ ಜೊತೆಗಿರೊ ಅಖಂಡವಾದ ಜಗತ್ತು. ಆ ಜಗತ್ತಿನೊಳಗಿರೊ ಮನುಷ್ಯರ ಅವರ ಆಲೋಚನಾ ಕ್ರಮಗಳು. ಒಬ್ಬೊಬ್ಬ ಮನುಷ್ಯನ ಆಲೋಚನಾ ಕ್ರಮ ಒಂದೊಂದು ರೀತಿ. ಇಲ್ಲಿ ಬರುವ ಬಾಲ್ ಬಾಯ್ ಕಾಳಪ್ಪ, ಗಾರೆ ಸೀನಪ್ಪ, ಮಾರ, ಪ್ಯಾರ, ಗಾಡ್ಲಿ, ಹಾವು ಕಚ್ಚಿದ್ದಕ್ಕೆ ಔಷಧಿ ಅಂತ ನಾರು, ಬೇರು, ಮಣಿ.. ಎಲ್ಲಾ ಮಾರೋ ಗೊಲ್ಲ ಹಾವಾಡಿಗ ಎಂಗ್ಟ... ತಮಗೆ ಹಾವು ಕಚ್ಚಿದಾಗ, ಯಾವ ಔಷಧಿನೂ ಮಾಡಕ್ಕಾಗ್ದೆ ಸಾಯ್ತಾರೆ. ಇದೇ ಜೀವನದ ದುರಂತ. ಇವರೆಲ್ಲರೂ ಬಂಧುಗಳ ಥರ ಪರಿಸರದಲ್ಲಿ ಓಡಾಡ್ತ ಕಥೆಗಳಾದವರು.