ತೇಗುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ತೇಗುವಿಕೆ

ತೇಗುವಿಕೆ ಎಂದರೆ ಬಾಯಿಯ ಮೂಲಕ ಜಠರಗರುಳು ವ್ಯೂಹದ (ಅನ್ನನಾಳ ಹಾಗೂ ಜಠರ) ಮೇಲ್ಭಾಗದಲ್ಲಿರುವ ವಾಯು ಬಿಡುಗಡೆಯಾಗುವುದು. ಇದು ಸಾಮಾನ್ಯವಾಗಿ ಕೇಳಿಸುತ್ತದೆ ಆದರೆ ಯಾವಾಗಲೂ ಅಲ್ಲ.

ಕಾರಣಗಳು[ಬದಲಾಯಿಸಿ]

  • ತಿನ್ನುವಾಗ ಅಥವಾ ಕುಡಿಯುವಾಗ ಗಾಳಿಯನ್ನು ಕುಡಿಯುವುದರಿಂದ ಮತ್ತು ನಂತರ ಅದನ್ನು ಹೊರಹಾಕುವುದರಿಂದ ಸಾಮಾನ್ಯವಾಗಿ ತೇಗು ಬರುತ್ತದೆ. ಈ ಸಂದರ್ಭದಲ್ಲಿ ಹೊರಹಾಕಿದ ವಾಯುವು ಮುಖ್ಯವಾಗಿ ಸಾರಜನಕ ಹಾಗೂ ಆಮ್ಲಜನಕದ ಮಿಶ್ರಣವಾಗಿರುತ್ತದೆ.
  • ಬಿಯರ್ ಹಾಗೂ ಅಮಾದಕ ಪಾನೀಯಗಳಂತಹ ಇಂಗಾಲದ ಡೈಆಕ್ಸೈಡ್ ಇರುವ ಪೇಯಗಳನ್ನು ಕುಡಿಯುವುದರಿಂದ ತೇಗು ಬರಬಹುದು. ಈ ಸಂದರ್ಭದಲ್ಲಿ ಹೊರಹಾಕಿದ ವಾಯುವು ಮುಖ್ಯವಾಗಿ ಇಂಗಾಲದ ಡೈಆಕ್ಸೈಡ್ ಆಗಿರುತ್ತದೆ.
  • ಮೆಟ್‍ಫ಼ಾರ್ಮಿನ್ ಹಾಗೂ ಎಕ್ಸೆನಟೈಡ್‍ನಂತಹ ಡಾಯಬೀಟೀಸ್ ಔಷಧಿಗಳು ತೇಗನ್ನು ಉಂಟುಮಾಡಬಹುದು, ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಾಗ. ಹಲವುವೇಳೆ ಇದು ಕೆಲವು ವಾರಗಳಲ್ಲಿ ಬಗೆಹರಿಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]