ವಿಷಯಕ್ಕೆ ಹೋಗು

ತುಳುನಾಡಿನ ನದಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂಲಕ ಹರಿಯುವ ಕೆಲವು ನದಿಗಳ ಪಟ್ಟಿ ಇದು. ನದಿಯ ಹೆಸರುಗಳು ಅವು ಹರಿಯುವ ಪ್ರದೇಶವನ್ನು ಅವಲಂಬಿಸಿ ಬದಲಾಗುತ್ತದೆ. ಈ ಜಿಲ್ಲೆಗಳ ಬಹುತೇಕ ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ ಮತ್ತು ಅರೇಬಿಯನ್ ಸಮುದ್ರವನ್ನು ಸೇರುತ್ತವೆ.[]

ನೇತ್ರಾವತಿ

[ಬದಲಾಯಿಸಿ]
ನೇತ್ರಾವತಿ ನದಿ

ನೇತ್ರಾವತಿ ನದಿಯ ಮೂಲ ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳು. ಕುಮಾರಧಾರ, ನೇರಿಯಾರೆ, ಮಣಿಹಳ್ಳ ಮತ್ತು ಗುರುಪುರಾ ನದಿಗಳು ನೇತ್ರಾವತಿ ನದಿಗೆ ಸೇರುತ್ತವೆ. ಮಂಗಳೂರು, ಬಂಟ್ವಾಳ, ಪಾಣೆಮಂಗಳೂರು, ಧರ್ಮಸ್ಥಳ ಮತ್ತು ಉಳ್ಳಾಲ ಈ ನದಿಯ ತೀರದಲ್ಲಿರುವ ಕೆಲವು ಸ್ಥಳಗಳಾಗಿವೆ. ಈ ನದಿ ಮಂಗಳೂರಿನಲ್ಲಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ನೆತ್ರಾವತಿ ನದಿ ದಕ್ಷಿಣ ಕನ್ನಡದ ಜೀವ ನಾಡಿ ಎಂದು ಕರೆಯಲ್ಪಡುತ್ತದೆ. ಇದರ ಉದ್ದವು 103 ಕಿಮೀ. ಇದು ಸುಮಾರು 1352 ಚದರ ಮೈಲುಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ನದಿಯ ನೀರನ್ನು ಕುಡಿಯಲು, ಮೀನುಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸುತ್ತಾರೆ.[]

ಕುಮಾರಧಾರ

[ಬದಲಾಯಿಸಿ]

ಕುಮಾರಧಾರ ನದಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. ಈ ನದಿಯು ನೇತ್ರಾವತಿ ನದಿಗೆ ಸೇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕುಮಾರಧಾರ ನದಿ ತೀರದಲ್ಲಿದೆ.

ಕುಮಾರಧಾರ ನದಿ

ಗುರುಪುರ ಅಥವಾ ಫಲ್ಗುಣಿ ನದಿ

[ಬದಲಾಯಿಸಿ]
ಫಲ್ಗುನಿ ನದಿ

ಗುರುಪುರ ನದಿಯು ಮಂಗಳೂರಿನ ಗುರುಪುರ ಮೂಲಕ ಹರಿಯುತ್ತದೆ. ಬೆಂಗ್ರೆಯ ಬಳಿ ನೇತ್ರಾವತಿ ನದಿಯನ್ನು ಸೇರುತ್ತದೆ.[]

ನಂದಿನಿ ಅಥವಾ ಪಾವಂಜೆ

[ಬದಲಾಯಿಸಿ]

ನಂದಿನಿ ಅಥವಾ ಪಾವಂಜೆ ನದಿ ಸಸಿಹಿತ್ಲು ಬಳಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಇದು ಕನಕಾಗಿರಿ(ಇರುವೈಲು)ನಲ್ಲಿ ಹುಟ್ಟುತ್ತದೆ. ಕಟೀಲು ಹಾಗೂ ಪಾವಂಜೆ ಮೂಲಕ ಹರಿಯುತ್ತದೆ.

ಶಾಂಭವಿ

[ಬದಲಾಯಿಸಿ]

ಶಾಂಭವಿ ನದಿ ಮುಲ್ಕಿ ಪಟ್ಟಣದ ಮೂಲಕ ಹರಿಯುತ್ತದೆ.

ಪಾಂಗಳ

[ಬದಲಾಯಿಸಿ]

ಈ ನದಿಯು ಪಂಗಳ ಗ್ರಾಮವನ್ನು ಮುಟ್ಟುತ್ತದೆ ಮತ್ತು ಮಟ್ಟಿ ಬಳಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ.

ಉದ್ಯಾವರ

[ಬದಲಾಯಿಸಿ]

ಉದ್ಯಾವರ ನದಿಯು ಮಲ್ಪೆ ಬಳಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಉದ್ಯಾವರ ಮತ್ತು ಮಲ್ಪೆ ಈ ನದಿಯು ಹರಿಯುವ ಕೆಲವು ಸ್ಥಳಗಳಾಗಿವೆ.

ಸ್ವರ್ಣ ಅಥವಾ ಸುವರ್ಣ

[ಬದಲಾಯಿಸಿ]

ಸ್ವರ್ಣ ನದಿಪರ್ವೂರ್, ಹಿರಿಯಾಡ್ಕ, ಪರಿಕ (ಉದ್ಯಾನ) ಹರ್ಗ, ಮಣಿಪಾಲ್, ಪೆರಾಂಪಳ್ಳಿ, ಉಪ್ಪೂರ್ ಮತ್ತು ಕಲ್ಯಾಣಪುರ ಮೂಲಕ ಬೆಂಗ್ರೆಯಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಏ ನದಿಯು ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ.

ನರಸಿಂಹ ಪರ್ವತದ ಮೇಲಿರುವ ಹೆಬ್ರಿಯ ಬಳಿ ಪಶ್ಚಿಮ ಘಟ್ಟಗಳಲ್ಲಿ ಈ ನದಿಯು ಹುಟ್ಟುತ್ತದೆ. ಈ ನದಿ ಉಡುಪಿ ತಾಲ್ಲೂಕಿನ ಮೂಲಕ ಹರಿಯುತ್ತದೆ. ಪ್ರಸಿದ್ಧ ಪಟ್ಟಣ ಬಾರ್ಕೂರು ಸೀತಾ ನದಿಯ ದಡದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.revolvy.com/main/index.php?s=List+of+rivers+of...and+Udupi...
  2. https://www.revolvy.com/main/index.php?s=Netravati+River
  3. "ಆರ್ಕೈವ್ ನಕಲು". Archived from the original on 2017-06-01. Retrieved 2018-06-26.