ತಿಶಾನಿ ದೋಷಿ
ತಿಶಾನಿ | |
---|---|
ಜನನ | ೦೯ ಡಿಸೆಂಬರ್, ೧೯೭೫ [ವಯಸ್ಸು೪೬] ಮದ್ರಾಸ್, ಭಾರತ |
ವೃತ್ತಿ | ಕವಿ, ಬರಹಗಾರ, ನರ್ತಕಿ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ |
ಪ್ರಮುಖ ಪ್ರಶಸ್ತಿ(ಗಳು) | ಕವನಕ್ಕಾಗಿ ಫಾರ್ವರ್ಡ್ ಬಹುಮಾನಗಳು |
ಬಾಳ ಸಂಗಾತಿ | ಕಾರ್ಲೋ ಪಿಜ್ಜಾಟಿ |
[URL|http://www.tishanidoshi.com/ www |
ತಿಶಾನಿ ದೋಷಿ (ಜನನ ೯ ಡಿಸೆಂಬರ್ ೧೯೭೫) ಅವರು ಭಾರತೀಯ ಕವಿ, ಪತ್ರಕರ್ತೆ ಮತ್ತು ಚೆನ್ನೈ ಮೂಲದ ನೃತ್ಯಗಾರ್ತಿ. ೨೦೦೬ ರಲ್ಲಿ ಅವರು ತಮ್ಮ ಚೊಚ್ಚಲ ಕವನ ಪುಸ್ತಕವಾದ ಕಂಟ್ರಿ ಆಫ್ ದಿ ಬಾಡಿಗಾಗಿ, ''ಫಾರ್ವರ್ಡ್ ಪ್ರಶಸ್ತಿಯನ್ನು'' ಪಡೆದುಕೊಂಡಿದ್ದಾರೆ. ಅವರ ಕವನ ಪುಸ್ತಕವಾದ ಎ ಗಾಡ್ ಅಟ್ ದಿ ಡೋರ್ ಗಾಗಿ ಅತ್ಯುತ್ತಮ ಕವನ ಸಂಕಲನ ವಿಭಾಗದಲ್ಲಿ ೨೦೨೧ ರ ಫಾರ್ವರ್ಡ್ ಫಾರ್ವರ್ಡ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಸೇರಿಸಲಾಗಿದೆ.
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ದೋಷಿ ಅವರು ಭಾರತದ, ಮದ್ರಾಸ್‌ನಲ್ಲಿ ವೆಲ್ಷ್ ತಾಯಿ ಮತ್ತು ಗುಜರಾತಿ ತಂದೆಗೆ ಜನಿಸಿದರು. ಅವರು ಉತ್ತರ ಕೆರೊಲಿನಾದ ಕ್ವೀನ್ಸ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು. ಅವರು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಸೃಜನಶೀಲ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. [೧]
ವೃತ್ತಿ
[ಬದಲಾಯಿಸಿ]ದೋಷಿ ಅವರು ಸ್ವತಂತ್ರ ಬರಹಗಾರರಾಗಿ ಮತ್ತು ಪತ್ರಕರ್ತರಾಗಿ ಕೆಲಸ ಮಾಡುತಿದ್ದಾರೆ. ಹಾಗು ಅವರು ನೃತ್ಯ ಸಂಯೋಜಕಿಯದ ಚಂದ್ರಲೇಖಾ ಅವರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಣ್ಣ ಕಥೆಗಳಾದ "ಲೇಡಿ ಕಸ್ಸಂಡ್ರಾ, ಸ್ಪಾರ್ಟಕಸ್ ಮತ್ತು ಡ್ಯಾನ್ಸಿಂಗ್ ಮ್ಯಾನ್," ೨೦೦೭ ರ೦ದು ''ದಿ ಡ್ರಾಬ್ರಿಡ್ಜ್'' ಜರ್ನಲ್‌ನಲ್ಲಿ ಸಂಪೂರ್ಣವಾಗಿ ಪ್ರಕಟವಾಗಿದೆ. ''ಎವೆರಿಥಿಂಗ್ ಬಿಗಿನ್ಸ್'' ಎಲ್ಸೆವೇರ್, ಎ೦ಬ ಅವರ ಕವನ ಸಂಕಲನಕ್ಕಾಗಿ ೨೦೧೨ ರ೦ದು, ಯುಕೆ ಅಲ್ಲಿನ ''ಬ್ಲೋಡಾಕ್ಸ್ ಬುಕ್ಸ್'' ಮತ್ತು ೨೦೧೩ ರ೦ದು, ಯುಎಸ್ ಅಲ್ಲಿನ ''ಕಾಪರ್ ಕ್ಯಾನ್ಯನ್'' ಪ್ರೆಸ್ನಲ್ಲಿ ಪ್ರಕಟಗೊಂಡಿದೆ.
ಪ್ರಶಸ್ತಿ ವಿಜೇತ ಕೃತಿಗಳು
[ಬದಲಾಯಿಸಿ]೨೦೦೧ ರ೦ದು ತಿಶಾನಿ ಅವರು ೩೦ ವರ್ಷದೊಳಗಿನ ಯುವ ಕವಿಗಳಿಗೆ ಸೀಮಿತವಾದ ''ಎರಿಕ್ ಗ್ರೆಗೊರಿ ಪ್ರಶಸ್ತಿಯನ್ನು'' ಗೆದ್ದರು. ತಿಶಾನಿ ಅವರ ಮೊದಲ ಕವನ ಸಂಕಲನವಾದ, ''ಕಂಟ್ರಿ ಆಫ್ ದಿ ಬಾಡಿ '', ೨೦೦೬ ರ೦ದು ಹೇ-ಆನ್-ವೈ ಉತ್ಸವದಲ್ಲಿ ಸೀಮಸ್ ಹೀನಿ, ಮಾರ್ಗರೇಟ್ ಅಟ್ವುಡ್ ಮತ್ತು ಇತರರೊಂದಿಗೆ ವೇದಿಕೆಯಲ್ಲಿ ಬಿಡುಗಡೆಯಾಗಿತು. ಆರಂಭಿಕ ಕವಿತೆಯಾದ, "ನಾವು ಸಮುದ್ರಕ್ಕೆ ಹೋದ ದಿನ", ೨೦೦೫ ರ ಬ್ರಿಟಿಷ್ ಕೌನ್ಸಿಲ್ -ಬೆಂಬಲಿತ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಗೆದ್ದಿತು. ಈ ಪುಸ್ತಕವು ೨೦೦೬ ರ೦ದು ಅವರ ಅತ್ಯುತ್ತಮ ಮೊದಲ ಸಂಗ್ರಹಕ್ಕಾಗಿ ''ಫಾರ್ವರ್ಡ್ ಕವನ ಪ್ರಶಸ್ತಿಯನ್ನು'' ಗೆದ್ದುಕೊಂಡಿತು. [೨] ಅವರ ಮೊದಲ ಕಾದಂಬರಿ, ದಿ ಪ್ಲೆಷರ್ ಸೀಕರ್ಸ್, ೨೦೧೦ ರಲ್ಲಿ ಬ್ಲೂಮ್ಸ್‌ಬರಿಯಿಂದ ಪ್ರಕಟವಾಯಿತು. ಇದು ೨೦೧೧ ರಲ್ಲಿ ಆರೆಂಜ್ ಪ್ರಶಸ್ತಿಗಾಗಿ ದೀರ್ಘ-ಪಟ್ಟಿಯಲ್ಲಿತ್ತು, ಮತ್ತು ೨೦೧೦ ರಲ್ಲಿ ದಿ ಹಿಂದೂ ಬೆಸ್ಟ್ ಫಿಕ್ಷನ್ ಅವಾರ್ಡ್‌ಗೆ ಕೂಡ ಆಯ್ಕೆಯಾಗಿದೆ.
ಅವರ ಕವನ ಪುಸ್ತಕ ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದಿ ವುಡ್ ಗಾಗಿ ಕವನ ಪುಸ್ತಕ ಸೊಸೈಟಿಯ ಶಿಫಾರಸ್ಸಿಗೆ ಮತ್ತು ೨೦೧೮ ರಲ್ಲಿ ''ಟೆಡ್ ಹ್ಯೂಸ್ ಪ್ರಶಸ್ತಿಗೆ'' ಆಯ್ಕೆಯಾಗಿದೆ. ಅವರ ೨೦೧೯ ರ ಪುಸ್ತಕವಾದ, ''ಸಣ್ಣ ದಿನಗಳು ಮತ್ತು ರಾತ್ರಿಗಳು'', ೨೦೨೦ ರ೦ದು ''ಒಂಡಾಟ್ಜೆ ಪ್ರಶಸ್ತಿಗೆ'' ಶಾರ್ಟ್‌ಲಿಸ್ಟ್ ಮಾಡಲಾಗಿದೆ. [೩] ಔಟ್‌ಲುಕ್-ಪಿಕಾಡರ್ ನಾನ್ ಫಿಕ್ಷನ್ ಸ್ಪರ್ಧೆಯಲ್ಲಿ ತಿಶಾನಿ ಅವರು ಫೈನಲಿಸ್ಟ್ ಆಗಿದ್ದಾರೆ. ಅವರು ೨೦೦೬ ರ ಹೇ ಫೆಸ್ಟಿವಲ್ ಮತ್ತು ೨೦೦೭ ರ ಕಾರ್ಟೇಜಿನಾ ಹೇ ಫೆಸ್ಟಿವಲ್‌ನ ಕವನ ಗಾಲಾಸ್‌ಗೆ ಗೌರವ ಆಹ್ವಾನವನ್ನು ಪಡೆದರು.
ಇತರ ಚಟುವಟಿಕೆಗಳು
[ಬದಲಾಯಿಸಿ]ತಿಶಾನಿ ದೋಷಿ ಅವರು ೨೦೧೫ ರಲ್ಲಿ, ಕೆರಿಬಿಯನ್ ದ್ವೀಪದ ಸೇಂಟ್ ಮಾರ್ಟನ್ ( ಸೇಂಟ್ ಮಾರ್ಟಿನ್ ) ನಲ್ಲಿ ೧೩ ನೇ ವಾರ್ಷಿಕ ಸೇಂಟ್ ಮಾರ್ಟಿನ್ ಪುಸ್ತಕದ ಮೇಳದಲ್ಲಿ, ಮುಖ್ಯ ಭಾಷಣ ಮಾಡಿದರು. ಅವರ ಪುಸ್ತಕನವಾದ ದಿ ಅಡಲ್ಟರಸ್ ಸಿಟಿಜನ್ - ಕವನಗಳ ಕಥೆಗಳ ಪ್ರಬಂಧಗಳು (೨೦೧೫) ರ೦ದು ಹೌಸ್ ಆಫ್ ನೆಹೆಸಿ ಪಬ್ಲಿಷರ್ಸ್ ಉತ್ಸವದಲ್ಲಿ ಬಿಡುಗಡೆ ಮಾಡಿದರು. [೪]
ಅವರು ಕ್ರಿಕ್‌ಇನ್ಫೋ, ಕ್ರಿಕೆಟ್ ಸಂಬಂಧಿತ ವೆಬ್‌ಸೈಟ್‌ನಲ್ಲಿ "ಹಿಟ್ ಅಥವಾ ಮಿಸ್" ಎಂಬ ಶೀರ್ಷಿಕೆಯ ಬ್ಲಾಗ್ ಅನ್ನು ಬರೆಯುತ್ತಾರೆ. ಏಪ್ರಿಲ್ ೨೦೦೯ ರ೦ದು ಬರೆಯಲು ಪ್ರಾರಂಭಿಸಿದ ಬ್ಲಾಗ್‌ನಲ್ಲಿ. ತಿಶಾನಿ ದೋಷಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನ ದೂರದರ್ಶನ ವೀಕ್ಷಕರಾಗಿ ಅವಲೋಕನಗಳನ್ನು ಮತ್ತು ವ್ಯಾಖ್ಯಾನಗಳನ್ನು ಮಾಡಿದ್ದಾರೆ. ಅವರು ಕ್ರಿಕೆಟಿಗರಾದ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆಯಲ್ಲಿ ಸಹ ಸಹಕರಿಸುತ್ತಿದ್ದಾರೆ, ಇದನ್ನು ಅವರು ನಿವೃತ್ತರಾದಾಗ ಪ್ರಕಟಿಸಲಾಗುವುದು. [೫]
ಪುಸ್ತಕಗಳು
[ಬದಲಾಯಿಸಿ]- ೨೦೦೬: ದೇಹದ ದೇಶಗಳು (ಕವನ)
- ೨೦೦೮: ಘರ್ಷಣೆ ಮತ್ತು ಅಸ್ಥಿರತೆ [ಟೋಬಿಯಾಸ್ ಹಿಲ್] ಮತ್ತು ಅಯೋಫೆ ಮ್ಯಾನಿಕ್ಸ್‌ನೊಂದಿಗೆ)
- ೨೦೧೦: ದಿ ಪ್ಲೆಷರ್ ಸೀಕರ್ಸ್ (ಕಾಲ್ಪನಿಕ)
- ೨೦೧೨: ಎವೆರಿಥಿಂಗ್ ಬಿಗಿನ್ಸ್ ಬೇರೆಡೆ (ಕವನ), ಬ್ಲೋಡಾಕ್ಸ್ ಬುಕ್ಸ್, ಯುಕೆ, 2012; ಕಾಪರ್ ಕ್ಯಾನ್ಯನ್ ಪ್ರೆಸ್, ಯುನೈಟೆಡ್ ಸ್ಟೇಟ್ಸ್, 2013.
- ೨೦೧೩: ಫೌಂಟೇನ್ವಿಲ್ಲೆ (ಕಾಲ್ಪನಿಕ), ಸೆರೆನ್ ಬುಕ್ಸ್
- ೨೦೧೩: ಮದ್ರಾಸ್ ನಂತರ, ಚೆನ್ನೈ ಈಗ ( ನಂದಿತಾ ಕೃಷ್ಣ ಅವರೊಂದಿಗೆ) [೬]
- ೨೦೧೫: ದಿ ಅಡಲ್ಟೆರಸ್ ಸಿಟಿಜನ್: ಕವನಗಳ ಕಥೆಗಳ ಪ್ರಬಂಧಗಳು (ಹೌಸ್ ಆಫ್ ನೆಹೆಸಿ ಪಬ್ಲಿಷರ್ಸ್) [೭]
- ೨೦೧೭: ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದಿ ವುಡ್ಸ್ (ಹಾರ್ಪರ್‌ಕಾಲಿನ್ಸ್ ಇಂಡಿಯಾ) [೮]
- ೨೦೧೮: ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದಿ ವುಡ್ಸ್ (ಕವನ), ಬ್ಲೋಡಾಕ್ಸ್ ಬುಕ್ಸ್, ಯುಕೆ; ಕಾಪರ್ ಕ್ಯಾನ್ಯನ್ ಪ್ರೆಸ್, ಯುನೈಟೆಡ್ ಸ್ಟೇಟ್ಸ್.
- ೨೦೧೯: ಸಣ್ಣ ದಿನಗಳು ಮತ್ತು ರಾತ್ರಿಗಳು (ಬ್ಲೂಮ್ಸ್ಬರಿ)
- ೨೦೨೧: ಬಾಗಿಲಲ್ಲಿರುವ ದೇವರು
ಉಲ್ಲೇಖಗಳು
[ಬದಲಾಯಿಸಿ]- ↑ "Tishani Doshi - Literary Profile". Poetry Foundation. Retrieved 8 July 2021.
- ↑ "Tishani Doshi, 31, wins the £5,000 best first collection prize for Countries of the Body". BBC News. 2006-10-05. Retrieved 11 May 2009.
- ↑ "Shortlist for £10,000 Ondaatje Prize announced". Books+Publishing (in ಆಸ್ಟ್ರೇಲಿಯನ್ ಇಂಗ್ಲಿಷ್). 2020-04-21. Retrieved 2020-05-07.
- ↑ "Welcome to House of Nehesi Publishers". HouseOfNehesiPublish.com. Retrieved 30 October 2017.
- ↑ "First cricinfo article". Retrieved 11 May 2009.
- ↑ Doshi, Tishani; Krishan, Nandita (2013). Madras Then Chennai Now (in ಇಂಗ್ಲಿಷ್). Roli Books. ISBN 978-81-7436-914-7.
- ↑ Doshi, Tishani (4 June 2015). The Adulterous Citizen ― poems, stories, essays. House of Nehesi Publishers. ISBN 978-0996224222.
- ↑ "HarperCollinsPublishers India - Girls Are Coming Out of the Woods". HarperCollins.co.in. Retrieved 30 October 2017.