ತಾರಾ ರಾಣಿ ಶ್ರೀವಾಸ್ತವ್
ತಾರಾ ರಾಣಿ ಶ್ರೀವಾಸ್ತವ | |
---|---|
Born | ಬಿಹಾರ, ಭಾರತ |
Nationality | ಭಾರತೀಯರು |
Known for | ಮಹಾತ್ಮ ಗಾಂಧಿ ಅವರ ಕ್ವಿಟ್ ಇಂಡಿಯಾ ಚಳುವಳಿ |
Spouse | ಫುಲೇಂದು ಬಾಬು |
ತಾರಾ ರಾಣಿ ಶ್ರೀವಾಸ್ತವ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಮಹಾತ್ಮ ಗಾಂಧಿಯವರ ಕ್ವಿಟ್ ಇಂಡಿಯಾ ಚಳುವಳಿಯ ಭಾಗವಾಗಿದ್ದರು. [೧] [೨] ಅವರು ಮತ್ತು ಅವರ ಪತಿ ಫುಲೇಂದ ಬಾಬು ಬಿಹಾರದ ಸರನ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. [೩] ೧೯೪೨ ರಲ್ಲಿ, ಅವರು ಮತ್ತು ಅವರ ಪತಿಯು ಸಿವಾನ್‌ನಲ್ಲಿ ಪೊಲೀಸ್ ಠಾಣೆಯ ಕಡೆಗೆ ಮೆರವಣಿಗೆಯನ್ನು ನಡೆಸುತ್ತಿದ್ದಾಗ ಪೊಲೀಸರಿಂದ ಅವರ ಪತಿ ಗುಂಡು ಏಟಿಗೆ ಗುರಿಯಾದರು. ಅದೇನೇ ಇದ್ದರೂ, ಅವರು ಮೆರವಣಿಗೆಯನ್ನು ನಿಲ್ಲಿಸದೇ ಮುಂದುವರೆಸಿದರು, ಮೆರವಣಿಗೆ ನಂತರ ಅವರ ಸತ್ತ ಪತಿಯನ್ನು ಕಾಣಲು ಹಿಂದಿರುಗಿದರು. ಅವರು ಸ್ವಾತಂತ್ರ್ಯ ಸಿಕ್ಕ ಐದು ವರ್ಷ ನಂತರವೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದರು.
ವೈಯಕ್ತಿಕ ಜೀವನ ಮತ್ತು ಸ್ವಾತಂತ್ರ್ಯ ಹೋರಾಟ
[ಬದಲಾಯಿಸಿ]ಶ್ರೀವಾಸ್ತವ ಅವರು ಪಾಟ್ನಾ ನಗರದ ಸಮೀಪದ ಸರನ್‌ನಲ್ಲಿ ಜನಿಸಿದರು. [೪] ಅವರು ಚಿಕ್ಕ ವಯಸ್ಸಿನಲ್ಲೇ ಫುಲೇಂದು ಬಾಬು ಅವರನ್ನು ವಿವಾಹವಾದರು. [೫] ಲಿಂಗ ಅಸಮಾನತೆಯ ಉಲ್ಬಣಕ್ಕೆ ಕಾರಣವಾಗಬಹುದಾದ ಸಾರ್ವಜನಿಕ ಪ್ರಸ್ತಾಪಗಳನ್ನು ಅನುಸರಿಸಿ, ತಾರಾ ರಾಣಿ ತಮ್ಮ ಹಳ್ಳಿಯ ಮತ್ತು ಸುತ್ತಮುತ್ತಲಿನ ಮಹಿಳೆಯರಿಗೆ ಬ್ರಿಟಿಷ್ ರಾಜ್ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ಸೇರಲು ಪ್ರೇರೇಪಿಸಿದರು. [೬]
೧೨ ಆಗಸ್ಟ್ ೧೯೪೨ ರಂದು, ಮಹಾತ್ಮಾ ಗಾಂಧಿಯವರು ಕರೆ ಮೇರೆಗೆ, ಅವರು ಮತ್ತು ಅವರ ಪತಿ ಸಿವಾನ್ ಪೊಲೀಸ್ ಠಾಣೆಯ ಮುಂದೆ ಭಾರತದ ಧ್ವಜವನ್ನು ಎತ್ತುವ ಮೆರವಣಿಗೆಯನ್ನು ಆಯೋಜಿಸಿದರು, ಇದನ್ನು "ಪ್ರಮುಖ ಪ್ರತಿಭಟನೆ" ಎಂದು ಕರೆಯಲಾಗುತ್ತದೆ. [೭] [೮] ಪೊಲೀಸರು, ಧ್ವಜಾರೋಹಣ ಮಾಡುವುದನ್ನು ತಡೆಯುವುದಕ್ಕಾಗಿ, ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದರು . ನಿಯಂತ್ರಣ ಸಾಧಿಸಲು ಸಾಧ್ಯವಾಗದಿದ್ದಾಗ ಪೊಲೀಸರು ಗುಂಡು ಹಾರಿಸಿದರು. ಫುಲೇಂದು ಬಾಬು ಅವರಿಗೆ ಗುಂಡು ತಗುಲಿ ಗಾಯಗೊಂಡರು. ಅದರ ಹೊರತಾಗಿಯೂ,ತಾರಾ ರಾಣಿ ಅವರು ತಮ್ಮ ಸೀರೆಯನ್ನು ಹರಿದು ಪಟ್ಟಿಗಳನ್ನಾಗಿ ಮಾಡಿ ಬಾಬು ಅವರ ಗಾಯಗಳಿಗೆ ಬ್ಯಾಂಡೇಜ್ ಮಾಡಿದ ನಂತರ, ತಾರಾ ರಾಣಿ ಪೊಲೀಸ್ ಠಾಣೆಗೆ ತನ್ನ ಮೆರವಣಿಗೆಯನ್ನು ಮುಂದುವರೆಸಿದರು. ಅಲ್ಲಿ ಅವರು ಧ್ವಜವನ್ನು ಹಾರಿಸಲು ಪ್ರಯತ್ನಿಸಿದರು. ಹಿಂದಿರುಗಿದ ನಂತರ, ತಮ್ಮ ಪತಿ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಕಂಡುಕೊಂಡರು. [೮] ೧೫ ಆಗಸ್ಟ್ ೧೯೪೨ ರಂದು, ದೇಶಕ್ಕಾಗಿ ತಮ್ಮ ಪತಿಯ ತ್ಯಾಗದ ಗೌರವಾರ್ಥವಾಗಿ ಛಾಪ್ರಾದಲ್ಲಿ ಪ್ರಾರ್ಥನಾ ಸಭೆಯನ್ನು ನಡೆಸಲಾಯಿತು. ೧೫ ಆಗಸ್ಟ್ ೧೯೪೭ ರಂದು ಭಾರತ ವಿಭಜನೆಯಾಗುವವರೆಗೂ ಅವರು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದರು. [೮]
ಉಲ್ಲೇಖಗಳು
[ಬದಲಾಯಿಸಿ]- ↑ Thakur, Bharti (2006). Women in Gandhi's Mass Movements. Deep & Deep Publications. ISBN 9788176298186.
- ↑ Devi, Bula (14 August 2012). "Unsung heroines of Independence". The Hindu. Retrieved 23 July 2017.
- ↑ "Tara Rani Srivastava". General Knowledge. JagranJosh: 10–12. 6 July 2017.
- ↑ Devi, Bula (14 August 2012). "Unsung heroines of Independence". The Hindu. Retrieved 23 July 2017.Devi, Bula (14 August 2012). "Unsung heroines of Independence". The Hindu. Retrieved 23 July 2017.
- ↑ "Tara Rani Srivastava". General Knowledge. JagranJosh: 10–12. 6 July 2017."Tara Rani Srivastava". General Knowledge. JagranJosh: 10–12. 6 July 2017 – via Google Books.
- ↑ Shukla, Vivekananda (1989). Rebellion of 1942: Quit India movement. H.K. Publishers & Distributors. pp. 63–64.
- ↑ Shukla, Vivekananda (1989). Rebellion of 1942: Quit India movement. H.K. Publishers & Distributors. pp. 63–64.Shukla, Vivekananda (1989). Rebellion of 1942: Quit India movement. H.K. Publishers & Distributors. pp. 63–64.
- ↑ ೮.೦ ೮.೧ ೮.೨ Independence Day 2016: 10 unsung heroes from India’s history (Wayback Machine) Original