ತರುಣ್ ದೀಪ್ ರೈ
ತರುಣದೀಪ್ ರೈ ಭಾರತದ ಸಿಕ್ಕಿಂ ರಾಜ್ಯದ ನಾಮ್ಚಿಯಲ್ಲಿ ೨೨ ಫೆಬ್ರವರಿ ೧೯೮೪ ರಲ್ಲಿ ಜನಿಸಿದರು.[೧] ಒಬ್ಬ ಭಾರತೀಯ ವೃತ್ತಿಪರ ಬಿಲ್ಲುಗಾರರು.[೨][೩] ಬಿಲ್ಲುಗಾರಿಕೆ ಕ್ರೀಡೆಯಲ್ಲಿ ಇವರ ಕೊಡುಗೆಗಾಗಿ ಭಾರತ ಸರ್ಕಾರದಿಂದ ೨೦೨೧ ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಇದಕ್ಕೂ ಮೊದಲು ೨೦೧೮ ರಲ್ಲಿ ಇವರಿಗೆ ಖೇಲ್ ರತನ್ ಪ್ರಶಸ್ತಿಯನ್ನು ನೀಡಲಾಯಿತು.
ವೃತ್ತಿ
[ಬದಲಾಯಿಸಿ]
ತರುಣ್‌ದೀಪ್ ಅವರು ತಮ್ಮ ೧೯ ನೇ ವಯಸ್ಸಿನಲ್ಲಿ ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ೨೦೦೩ ನಲ್ಲಿ ಆಡಿದಾಗ ಅಂತರರಾಷ್ಟ್ರೀಯ ಬಿಲ್ಲುಗಾರಿಕೆಗೆ ಪಾದಾರ್ಪಣೆ ಮಾಡಿದರು.[೪] ತರುಣ್‌ದೀಪ್ ರೈ ೨೪ ನವೆಂಬರ್ ೨೦೧೦ ರಂದು ಚೀನಾದ ಗುವಾಂಗ್‌ಝೌನಲ್ಲಿ ನಡೆದ ೧೬ ನೇ ಏಷ್ಯನ್ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ತಮ್ಮ ಮೊದಲ ವೈಯಕ್ತಿಕ ಬೆಳ್ಳಿ ಪದಕವನ್ನು ಗೆದ್ದರು.[೫] ಅವರು ೨೦೦೬ ರಲ್ಲಿ ದೋಹಾದಲ್ಲಿ ನಡೆದ ನೇ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ಭಾರತೀಯ ಬಿಲ್ಲುಗಾರಿಕೆ ತಂಡದ ಸದಸ್ಯರಾಗಿದ್ದರು.[೪] ೨೦೦೪ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ, ತರುಣ್‌ದೀಪ್ ಪುರುಷರ ವೈಯಕ್ತಿಕ ೭೨ ಶ್ರೇಯಾಂಕದ ಸುತ್ತಿನಲ್ಲಿ ೬೪೭ -ಬಾಣದ ಸ್ಕೋರ್‌ನೊಂದಿಗೆ ೩೨ ನೇ ಸ್ಥಾನ ಪಡೆದರು.[೪] ಅವರು ಮೊದಲ ಎಲಿಮಿನೇಷನ್ ಸುತ್ತಿನಲ್ಲಿ ಗ್ರೀಸ್‌ನ ಅಲೆಕ್ಸಾಂಡ್ರೊಸ್ ಕರಾಗೊರ್ಗಿಯೊ ಅವರನ್ನು ಎದುರಿಸಿದರು, ೧೪೭-೧೪೩ ರಲ್ಲಿ ಸೋತರು. ಈ ಅಂಕವು ರೈಗೆ ೪೩ ನೇ ಶ್ರೇಯಾಂಕವನ್ನು ನೀಡಿತು. ೨೦೦೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೧೧ ನೇ ಸ್ಥಾನದಲ್ಲಿರುವ ಭಾರತೀಯ ಪುರುಷರ ಬಿಲ್ಲುಗಾರಿಕೆ ತಂಡದ ಸದಸ್ಯರಾಗಿದ್ದರು. ವೃತ್ತಿಜೀವನದಲ್ಲಿ - ಭುಜದ ಗಾಯವನ್ನು ಎರಡು ವರ್ಷಗಳ ಕಾಲ ಅನುಭವಿಸಿದ್ದರು. ಮಿತಿಮೀರಿದ ಅಭ್ಯಾಸದಿಂದಾಗಿ ಅವರು ಬಲ ಭುಜದ ಗಾಯವನ್ನು ಅನುಭವಿಸಿದರು ಮತ್ತು ೨೦೦೭ ಮತ್ತು ೨೦೦೮ ಆಟದಿಂದ ಹೊರಗುಳಿದಿದ್ದರು. ತರುಣ್‌ದೀಪ್ ರೈ ೨೦೧೦ ರ ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ವೈಯಕ್ತಿಕ ಸ್ಪರ್ಧೆಯಲ್ಲಿ ಮಾತ್ರ ಸ್ಪರ್ಧಿಸಿದ್ದರು. ಅವರು ಆ ಸ್ವರ್ಧೆಯಲ್ಲಿ ಯಾರೂ ನಿರೀಕ್ಷಿಸದ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. ತರುಣ್‌ದೀಪ್ ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ರಿಕರ್ವ್ ತಂಡದ ಸದಸ್ಯರಾಗಿದ್ದರು.[೬] ತರುಣದೀಪ್ ರೈ ಅವರು 2012 USನ ಆಗ್ಡೆನ್‌ನಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ದೇಶಕ್ಕೆ ಮೂರನೇ ಸ್ಥಾನವನ್ನು ನೀಡಿದರು. ತರುಣ್‌ದೀಪ್ ೨೦೦೩ ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ೪ ನೇ ಸ್ಥಾನ ಗಳಿಸಿದ ಭಾರತೀಯ ಬಿಲ್ಲುಗಾರಿಕೆ ತಂಡದ ಭಾಗವಾಗಿದ್ದರು.[೭] 2005 ರಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಅವರು ೨೦೦೫ ರಲ್ಲಿ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ ಮೊದಲ ಭಾರತೀಯರಾದರು, ಅಲ್ಲಿ ಅವರು ಕಂಚಿನ ಪದಕದ ಪ್ಲೇ-ಆಫ್‌ಗಾಗಿ ದಕ್ಷಿಣ ಕೊರಿಯಾದ ವಾನ್ ಜೊಂಗ್ ಚೋಯ್ ವಿರುದ್ಧ ೧೦೬-೧೧೨ ಅಂತರದಲ್ಲಿ ಸೋತರು.[೭] ತರುಣ್‌ದೀಪ್ ರೈ ಗುವಾಹಟಿ ಮತ್ತು ಶಿಲ್ಲಾಂಗ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಪ್ರಾಬಲ್ಯದಲ್ಲಿ ತರುಣ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]- ತರುಣ್‌ದೀಪ್ ಅವರು ಬಿಲ್ಲುಗಾರಿಕೆಯಲ್ಲಿನ ಸಾಧನೆಗಳಿಗಾಗಿ ಅರ್ಜುನ ಪ್ರಶಸ್ತಿಯನ್ನು (೨೦೦೫) ಸ್ವೀಕರಿಸಿದ್ದಾರೆ.[೮]
- ೨೦೨೦ ರಲ್ಲಿ ಭಾರತ ಸರ್ಕಾರವು ಅವರಿಗೆ ಭಾರತ ಗಣರಾಜ್ಯದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.[೯]
ಟೋಕಿಯೋ ಒಲಿಂಪಿಕ್ಸ್
[ಬದಲಾಯಿಸಿ]ತರುಣ್‌ದೀಪ್ ರೈ ಅವರು ಅತಾನು ದಾಸ್ ಮತ್ತು ಪ್ರವೀಣ್ ಜಾಧವ್ ಅವರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನ ಕೋಟಾವನ್ನು ಪಡೆದರು.[೧೦] ಲಾಕ್‌ಡೌನ್ ಸಂಭವಿಸಿದಾಗಿನಿಂದ ಅವರು ಎಎಸ್‌ಐ ಕ್ಯಾಂಪಸ್‌ನಲ್ಲಿ ಇರಲು ಆಯ್ಕೆ ಮಾಡಿಕೊಂಡರು ಮತ್ತು ಅವರ ಕೊನೆಯ ಒಲಿಂಪಿಕ್ಸ್‌ಗಾಗಿ ತರಬೇತಿ ಪಡೆದರು.[೧೧][೧೨] ಆ ತರಬೇತಿಯಲ್ಲಿ ೬ ತಿಂಗಳಲ್ಲಿ ೧೪ ಕೆಜಿ ತೂಕ ಕಡಿಮೆ ಮಾಡಿದ್ದರು.[೧೩][೧೪]
ಉಲ್ಲೇಖಗಳು
[ಬದಲಾಯಿಸಿ]- ↑ "Tarundeep Rai – Archery – Olympic Athlete". 2012 London Olympic and Paralympic Summer Games. International Olympic Committee. Archived from the original on 1 August 2012. Retrieved 2 August 2012.
- ↑ "Tarundeep Rai in good form". The Hindu. 23 June 2005. Archived from the original on 6 August 2012. Retrieved 6 February 2010.
- ↑ "Tarundeep Rai withdraws". The Hindu. 17 August 2007. Archived from the original on 19 June 2011. Retrieved 6 February 2010.
- ↑ ೪.೦ ೪.೧ ೪.೨ https://www.iloveindia.com/sports/archery/indian-archers/tarundeep-rai.html
- ↑ "Tarundeep Rai creates history at Asian Games". The Times of India. 24 November 2010. Retrieved 25 November 2010.
- ↑ "Indian archery team books Olympic ticket". 23 June 2012.
- ↑ ೭.೦ ೭.೧ "Tarundeep Rai Profile". iloveindia.com. Retrieved 6 February 2010."Tarundeep Rai Profile". iloveindia.com. Retrieved 6 February 2010.
- ↑ "Pankaj Advani named for Khel Ratna". The Hindu. 18 August 2006. Archived from the original on 6 June 2011. Retrieved 6 February 2010.
- ↑ "Padma Awards: 2020" (PDF). Ministry of Home Affairs (India). 25 January 2020. pp. 2–6. Retrieved 26 August 2020.
- ↑ Stanley, John (2019-06-12). "Indian men upset Canada to qualify three places for Tokyo 2020 Olympic Games". World Archery (in ಇಂಗ್ಲಿಷ್). Retrieved 2021-01-12.
- ↑ Scroll Staff. "Archer Tarundeep Rai using lockdown time to build shoulder muscles, stay in shape for Tokyo Olympics". Scroll.in (in ಅಮೆರಿಕನ್ ಇಂಗ್ಲಿಷ್). Retrieved 2021-01-12.
- ↑ "Bonding in isolation: Archers Tarundeep and Pravin stay sharp amid lockdown". ESPN (in ಇಂಗ್ಲಿಷ್). 2020-04-29. Retrieved 2021-01-12.
- ↑ "'I lost 14 kgs in six months' - Veteran Indian archer Tarundeep Rai targets Tokyo medal after gruelling fitness journey". Olympic Channel. Retrieved 2021-01-12.
- ↑ "Tarundeep Rai: I need to win medal at Tokyo Olympics so I can meet my son's gaze - Sports News, Firstpost". Firstpost. 2020-12-23. Retrieved 2021-01-12.