ತಮಿಳು ವಿಕಿಪೀಡಿಯ
ಗೋಚರ
ಜಾಲತಾಣದ ವಿಳಾಸ | ta |
---|---|
ವಾಣಿಜ್ಯ ತಾಣ | ಇಲ್ಲ |
ತಾಣದ ಪ್ರಕಾರ | ಅಂತರಜಾಲ ವಿಶ್ವಕೋಶ |
ನೊಂದಾವಣಿ | Open read access. No registration needed for general editing, but necessary for certain tasks including
|
ಲಭ್ಯವಿರುವ ಭಾಷೆ | ತಮಿಳು |
ಬಳಕೆದಾರರು(ನೊಂದಾಯಿತರೂ ಸೇರಿ) | 1,77,100+ (ಜುಲೈ 2020ರ ಪ್ರಕಾರ) |
ವಿಷಯದ ಪರವಾನಗಿ | Creative Commons Attribution/ Share-Alike 3.0 (most text also dual-licensed under GFDL) Media licensing varies |
ಒಡೆಯ | ವಿಕಿಮೀಡಿಯ ಫೌಂಡೇಶನ್ |
ಪ್ರಾರಂಭಿಸಿದ್ದು | ಸೆಪ್ಟೆಂಬರ್ 2003 |
ತಮಿಳು ವಿಕಿಪೀಡಿಯ ( ತಮಿಳು:தமிழ் விக்கிப்பீடியா ) ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿರುವ ವಿಕಿಪೀಡಿಯದ ತಮಿಳು ಭಾಷೆಯ ಆವೃತ್ತಿಯಾಗಿದೆ.[೧] ಇದನ್ನು ಸೆಪ್ಟೆಂಬರ್ 2003 ರಲ್ಲಿ ಸ್ಥಾಪಿಸಲಾಯಿತು ಮತ್ತು ಮಾರ್ಚ್ 2017 ರಂದು 91,000 ಲೇಖನಗಳನ್ನು ದಾಟಿದೆ. 1 ಜುಲೈ 2020 ರ ಹೊತ್ತಿಗೆ, ತಮಿಳು ವಿಕಿಪೀಡಿಯ 61 ನೇ ಅತಿದೊಡ್ಡ ವಿಕಿಪೀಡಿಯ ಮತ್ತು ಲೇಖನ ಎಣಿಕೆಯ ಪ್ರಕಾರ ಭಾರತೀಯ ಭಾಷೆಗಳಲ್ಲಿ ಎರಡನೇ ಅತಿದೊಡ್ಡ ವಿಕಿಪೀಡಿಯ ಆಗಿದೆ. [೧] 10,000 ಕ್ಕೂ ಹೆಚ್ಚು ಲೇಖನಗಳನ್ನು ಹೊಂದಿರುವ ದ್ರಾವಿಡ ಭಾಷಾ ಮೂಲದ ಮೊದಲ ವಿಕಿಪೀಡಿಯ ಇದಾಗಿದೆ. ಈ ಯೋಜನೆಯು ದಕ್ಷಿಣ ಏಷ್ಯಾದ ಇತರ ಭಾಷೆಗಳಲ್ಲಿ ವಿಕಿಪೀಡಿಯದ ಪ್ರಮುಖ ಗುಣಮಟ್ಟದ ಮಾತೃಕೆಗಳಲ್ಲಿ ಪ್ರಮುಖವಾಗಿದೆ.[೨] ಮಾರ್ಚ್ 2017ರ ವೇಳೆಗೆ 91,610 ಕ್ಕೂ ಹೆಚ್ಚು ಲೇಖನಗಳನ್ನು ಮತ್ತು 109,691 ನೋಂದಾಯಿತ ಬಳಕೆದಾರರನ್ನು ಹೊಂದಿತ್ತು.[೩] ಇದು ಮೇ 2017 ರಂದು 100,000 ಲೇಖನಗಳನ್ನು ದಾಟಿತು.[೪]
ಬಳಕೆದಾರರು ಮತ್ತು ಸಂಪಾದಕರು
[ಬದಲಾಯಿಸಿ]ನೋಂದಾಯಿತ ಬಳಕೆದಾರರ
ಸಂಖ್ಯೆ |
ಲೇಖನಗಳ ಸಂಖ್ಯೆ | ಕಡತಗಳ ಸಂಖ್ಯೆ | ನಿರ್ವಾಹಕರ ಸಂಖ್ಯೆ |
---|---|---|---|
177100 | 129665 | 7748 | 40 |
ಉಲ್ಲೇಖಗಳು
[ಬದಲಾಯಿಸಿ]- ↑ Frederick, Prince (May 21, 2009). "The Tamil Wiki…six years on". ದಿ ಹಿಂದೂ. Chennai, India. Archived from the original on ಮೇ 28, 2009. Retrieved May 26, 2009.
- ↑ stats:EN/TablesWikipediaTA.htm
- ↑ "List of Wikipedias". meta.wikimedia.org. Retrieved 2016-08-28.
- ↑ of Wikipedias