ವಿಷಯಕ್ಕೆ ಹೋಗು

ತಪ್ಪುನಡತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಪ್ಪುನಡತೆ ಅಕ್ರಮ ಅಥವಾ ಅನೈತಿಕವಾದ ಒಂದು ಕ್ರಿಯೆ. ಕಾನೂನುಬದ್ಧ ತಪ್ಪುಗಳು ಸಾಮಾನ್ಯವಾಗಿ ರಾಜ್ಯ ಮತ್ತು/ಅಥವಾ ನ್ಯಾಯವ್ಯಾಪ್ತಿಯ ಕಾನೂನಿನಲ್ಲಿ ಸಾಕಷ್ಟು ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟಿರುತ್ತವೆ. ಸಾಮಾನ್ಯ ಕಾನೂನಿನ ದೇಶಗಳಲ್ಲಿ ಅವನ್ನು ನಾಗರಿಕ ದೋಷಗಳು ಮತ್ತು ಅಪರಾಧಗಳು (ಅಥವಾ ಕ್ರಿಮಿನಲ್ ದೋಷಗಳು) ಎಂದು ವಿಭಜಿಸಬಹುದು, ಮತ್ತು ನಾಗರಿಕ ಕಾನೂನಿನ ದೇಶಗಳು ಉಲ್ಲಂಘನೆಗಳಂತಹ ಕೆಲವು ಹೆಚ್ಚುವರಿ ವರ್ಗಗಳನ್ನು ಹೊಂದಿರುವುದುಂಟು.

ನೈತಿಕ ತಪ್ಪು ಕಾನೂನುಬದ್ಧ ತಪ್ಪಿಗೆ ಆಧಾರವಾಗಿರುವ ಪರಿಕಲ್ಪನೆಯಾಗಿದೆ. ಕೆಲವು ನೈತಿಕ ತಪ್ಪುಗಳು ಕಾನೂನಿನಿಂದ ಶಿಕ್ಷಾರ್ಹವಾಗಿವೆ, ಉದಾಹರಣೆಗೆ ಅತ್ಯಾಚಾರ ಅಥವಾ ಕೊಲೆ. ಇತರ ನೈತಿಕ ತಪ್ಪುಗಳು ಕಾನೂನಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಮತ್ತೊಂದೆಡೆ, ನಿಲುಗಡೆ ಅಪರಾಧಗಳಂತಹ ಕೆಲವು ಕಾನೂನುಬದ್ಧ ತಪ್ಪುಗಳನ್ನು ನೈತಿಕ ತಪ್ಪುಗಳಾಗಿ ಅಷ್ಟಾಗಿ ವರ್ಗೀಕರಿಸಲಾಗದು.

ಕಾನೂನಿನಲ್ಲಿ, ಅನೈತಿಕ ನಡತೆಯು ಕಾನೂನುಬದ್ಧ ಅಪಚಾರವಾಗಿರಬಹುದು, ಅಂದರೆ ಕಾನೂನುಬದ್ಧ ಹಕ್ಕಿನ ಉಲ್ಲಂಘನೆಯ ಪರಿಣಾಮವಾಗಿ ಆಗುವ ಯಾವುದೇ ನಷ್ಟ. ಅದು ನ್ಯಾಯ ಅಥವಾ ಕಾನೂನಿನ ತತ್ವಗಳಿಗೆ ವಿರುದ್ಧವಾಗಿರುವ ಸ್ಥಿತಿಯನ್ನೂ ಸೂಚಿಸಬಹುದು. ಇದರರ್ಥ ಏನಾದರೂ ಆತ್ಮಸಾಕ್ಷಿ ಅಥವಾ ನೈತಿಕತೆಗೆ ವಿರುದ್ಧವಾಗಿರುವುದು ಮತ್ತು ಇತರರನ್ನು ಅನ್ಯಾಯವಾಗಿ ನಡೆಸಿಕೊಳ್ಳುವುದರಲ್ಲಿ ಪರಿಣಮಿಸುವುದು ಎಂದು. ತಪ್ಪುನಡತೆಯಿಂದ ಊಂಟಾದ ಹಾನಿ ಸಣ್ಣದಾಗಿದ್ದರೆ, ಯಾವುದೇ ಪರಿಹಾರ ನೀಡುವುದು ಇರುವುದಿಲ್ಲ, ಇದನ್ನು ಡ ಮಿನಿಮೆಸ್ ತತ್ವ ಎಂದು ಕರೆಯಲಾಗುತ್ತದೆ. ಇಲ್ಲವಾದರೆ, ಹಾನಿಯ ಪರಿಹಾರಗಳು ಅನ್ವಯವಾಗುತ್ತವೆ.