ವಿಷಯಕ್ಕೆ ಹೋಗು

ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರ (ರಿವರ್ಸ್ ಇಂಜಿನಿಯರಿಂಗ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಂತ್ರಜ್ಞಾನದ ಮೂಲತತ್ವ ಆವಿಷ್ಕಾರ ಪ್ರಕ್ರಿಯೆ (RE) ಎಂದರೆ, ಒಂದು ಸಾಧನದ, ಒಂದು ವಸ್ತುವಿನ ಅಥವಾ ಒಂದು ವ್ಯವಸ್ಥೆರೂಪರೇಷೆ, ಕೆಲಸ ಮತ್ತು ಕಾರ್ಯಕಾರಿತ್ವಗಳ ವಿಶ್ಲೇಷಣೆಯ ಮೂಲಕ ಅವುಗಳ ತಾಂತ್ರಿಕ ಮೂಲತತ್ವಗಳನ್ನು ಆವಿಷ್ಕರಿಸುವ ಪ್ರಕ್ರಿಯೆ. ಅದು ಹೆಚ್ಚಾಗಿ, ಕೆಲವು ವಸ್ತುಗಳನ್ನು (ಉದಾ, ಯಾಂತ್ರಿಕ ವಸ್ತು, ಇಲೆಕ್ಟ್ರಾನಿಕ್ ಘಟಕ, ಅಥವಾ ತಂತ್ರಾಂಶ ಮಾಹಿತಿ ಸರಣಿ) ಪ್ರತ್ಯೇಕವಾಗಿ ತೆಗೆದುಕೊಳ್ಳುವುದು ಮತ್ತು ನಿರ್ವಹಣೆಯಲ್ಲಿ ಬಳಸುವುದಕ್ಕಾಗಿ ಅದರ ಕಾರ್ಯಶೈಲಿಯನ್ನು ವಿವರವಾಗಿ ವಿಶ್ಲೇಷಿಸುವುದು ಅಥವಾ ಪ್ರಾರಂಭಿಕ ಹಂತದ ಯಾವುದೇ ಭೌತಿಕ ಭಾಗಗಳನ್ನು ಬಳಸಿಕೊಳ್ಳದೆ ಮೊದಲಿನದ್ದರಂತೆಯೇ ಕೆಲಸ ಮಾಡುವ ಒಂದು ಹೊಸ ವಸ್ತು ಅಥವಾ ಮಾಹಿತಿ ಸರಣಿಯನ್ನು ಮಾಡಲು ಪ್ರಯತ್ನಿಸುವುದು - ಇವುಗಳನ್ನು ಒಳಗೊಂಡಿರುತ್ತದೆ.

ವಾಣಿಜ್ಯ ಅಥವಾ ಸೈನ್ಯದಲ್ಲಿನ ಯಂತ್ರಾಂಶಗಳ ವಿಶ್ಲೇಷಣೆಯಲ್ಲಿ ತಂತ್ರಜ್ಞಾನದ ಮೂಲತತ್ವದ ಆವಿಷ್ಜ್ಕಾರದ ಉಗಮವಿದೆ.[] ಉದ್ದೇಶವೇನೆಂದರೆ ಮೂಲ ಉತ್ಪಾದನೆ ಒಳಗೊಂಡಿರುವ ಕಾರ್ಯವಿಧಾನದ ಬಗೆಗೆ ಸ್ವಲ್ಪ ಅಥವಾ ಏನೂ ಅರಿವಿಲ್ಲದೆಯೇ ಅಂತಿಮ ಉತ್ಪನ್ನಗಳ ವಿನ್ಯಾಸ ನಿರ್ಧಾರಗಳನ್ನು ತರ್ಕಿಸುವುದು. ಕೈಗಾರಿಕೆಯ ಅಥವಾ ಪ್ರತಿರಕ್ಷಣೆಗಾಗಿ ಅಲ್ಲ, ಆದರೆ ಸರಿಯಾಗಿಲ್ಲದ, ಪೂರ್ಣವಾಗಿಲ್ಲದ ಅಥವಾ ಲಭ್ಯವಿಲ್ಲದ ದಾಖಲೀಕರಣಕ್ಕೆ ಬದಲಿಯಾಗಿಡಲು ಮೊದಲಿನಿಂದ ಬಂದ ತಂತ್ರಾಂಶ ಪದ್ಧತಿಗೆ ಅದೇ ತೆರನಾದ ತಂತ್ರವು ಪ್ರಸ್ತುತ ಸಂಶೋಧಿಸಲ್ಪಡುತ್ತಿದೆ.[]

ಪ್ರಚೋದನೆ

[ಬದಲಾಯಿಸಿ]

ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರಕ್ಕೆ ಕಾರಣಗಳು:

  • ಪರಸ್ಪರ-ಕಾರ್ಯಾಚರಣೆಯ ಸಾಧ್ಯತೆಗಳು
  • ಕಳೆದುಹೋದ ದಾಖಲೀಕರಣ: ಒಂದು ನಿರ್ದಿಷ್ಟ ವಸ್ತುವಿನ ದಾಖಲೀಕರಣ ಕಳೆದುಹೋದದ್ದಕ್ಕಾಗಿ (ಅಥವಾ ಬರೆದಿಡಲೇ ಇಲ್ಲದಿದ್ದರೆ), ಮತ್ತು ಅದನ್ನು ತಯಾರಿಸಿದ ವ್ಯಕ್ತಿ ಈಗ ಸಿಗದ ಕಾರಣ ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರವನ್ನು ಮಾಡಲಾಗುವುದು. ಏಕೀಕೃತ ಸರ್ಕ್ಯೂಟ್‌ಗಳು ಅಪ್ರಚಲಿತ, ಸ್ವಾಮ್ಯದ ವಿಧಾನಗಳಲ್ಲಿ ವಿನ್ಯಾಸಗೊಂಡವುಗಳಂತೆ ತೋರುತ್ತವೆ. ಇದರ ಅರ್ಥವೆಂದರೆ ಕಾರ್ಯವಿಧಾನವನ್ನು ಹೊಸ ತಂತ್ರಜ್ಞಾನದೊಂದಿಗೆ ಒಟ್ಟುಗೂಡಿಸಲು ಇರುವ ಒಂದೇ ಒಂದು ದಾರಿಯೆಂದರೆ ಈಗ ಇರುವ ಚಿಪ್‌ನ ತಂತ್ರಜ್ಞಾನದ ಮೂಲತತ್ವವನ್ನು ಆವಿಷ್ಕರಿಸಿ ಬಳಿಕ ಅದನ್ನು ಮರುವಿನ್ಯಾಸಗೊಳಿಸುವುದು.
  • ಉತ್ಪನ್ನದ ವಿಶ್ಲೇಷಣೆ. ಒಂದು ಉತ್ಪನ್ನ ಹೇಗೆ ಕೆಲಸ ಮಾಡುತ್ತದೆ, ಅದು ಯಾವೆಲ್ಲ ಭಾಗಗಳನ್ನು ಒಳಗೊಂಡಿದೆ ಎಂಬುದನ್ನು ಪರೀಕ್ಷಿಸಲು, ಅದರ ಬೆಲೆಯನ್ನು ಅಂದಾಜು ಮಾಡಲು ಮತ್ತು ಸಂಭಾವ್ಯ ಪೇಟೆಂಟ್ ಇನ್‌ಫ್ರೈನ್‌ಮೆಂಟ್‌ನ್ನು ಪತ್ತೆಹಚ್ಚಲು.
  • ಡಿಜಿಟಲ್ ಅಪ್‌ಡೇಟ್/ತಿದ್ದುಪಡಿ. "ನಿರ್ಮಿಸಿದಂಥದ್ದೇ" ಸ್ಥಿತಿಗೆ ಹೊಂದಾಣಿಕೆಯಾಗುವಂತೆ ಒಂದು ವಸ್ತುವಿನ ಡಿಜಿಟಲ್ ಆವೃತ್ತಿಯನ್ನು ಅಪ್‌ಡೇಟ್ ಮಾಡಲು (ಉದಾ. CAD ಮಾದರಿ)
  • ಭದ್ರತೆಯ ಲೆಕ್ಕಪರಿಶೋಧನೆ.
  • ಸೈನ್ಯ ಅಥವಾ ವಾಣಿಜ್ಯದ ಬೇಹುಗಾರಿಕೆ. ಮೂಲರೂಪವನ್ನು ಕದಿಯುವ ಅಥವಾ ಸೆರೆಹಿಡಿಯುವ ಮೂಲಕ ಒಬ್ಬ ವೈರಿಯ ಅಥವಾ ಸ್ಪರ್ಧಿಯ ಹೊಚ್ಚಹೊಸ ಸಂಶೋಧನೆಗಳ ಬಗೆಗೆ ತಿಳಿದುಕೊಳ್ಳುವುದು ಮತ್ತು ಅದನ್ನು ನಾಶಗೊಳಿಸುವುದು.
  • ಪ್ರತಿಯ ರಕ್ಷಣೆಯನ್ನು ಅಳಿಸಿ ಹಾಕುವುದು, ಉಪಯೋಗದಲ್ಲಿನ ನಿರ್ಬಂಧಗಳನ್ನು ತಪ್ಪಿಸಿಕೊಳ್ಳುವುದು.
  • ಅನುಮತಿಯಿಲ್ಲದ/ಅನುಮೋದನೆಯಿಲ್ಲದ ನಕಲು ಪ್ರತಿಗಳನ್ನು ರೂಪಿಸುವುದು.
  • ಶಿಕ್ಷಣಕ್ಕೆ ಸಂಬಂಧಿಸಿದ/ಕಲಿಯುವ ಉದ್ದೇಶಗಳು.
  • ಕುತೂಹಲ
  • ಸ್ಪರ್ಧಾತ್ಮಕ ತಾಂತ್ರಿಕ ಅರಿವು (ನಿಮ್ಮ ಪ್ರತಿಸ್ಪರ್ಧಿಗಳು ನೈಜವಾಗಿ ಏನು ಮಾಡುತ್ತಿದ್ದಾರೆ ಮತ್ತು ಅವರು ತಾವೇನು ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆಯೆಂಬುದನ್ನು ಹೋಲಿಸಿ ಅರ್ಥಮಡಿಕೊಳ್ಳುವುದು)
  • ಕಲಿಯುವುದು: ಇತರರ ತಪ್ಪುಗಳಿಂದ ಕಲಿತುಕೊಳ್ಳುವುದು. ಇತರರು ಈಗಾಗಲೇ ಮಾಡಿದ ಮತ್ತು ಮುಂದೆ ಸರಿಪಡಿಸಿಕೊಂಡ ತಪ್ಪುಗಳನ್ನೇ ಮಾಡಬೇಡಿ

ತಾಂತ್ರಿಕ ಉಪಕರಣಗಳ ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರ

[ಬದಲಾಯಿಸಿ]

ಕಂಪ್ಯೂಟರ್-ಬೆಂಬಲಿತ ನಕ್ಷೆ(CAD) ಹೆಚ್ಚು ಹೆಸರುವಾಸಿಯಾದ ಬಳಿಕ, ಮೂಲತತ್ವದ ಆವಿಷ್ಕಾರವು ಬಹಳ ಸುಲಭವಾಗಿ ಮಾಡುವಂತಹ ನಮೂನೆ ಆಗಿದ್ದು, 3D CAD,CAM,CAE ಅಥವಾ ಬೇರೆ ಸಾಫ್ಟ್‌ವೇರ್ ಗಳಲ್ಲಿ ಉಪಯೋಗಿಸಲು 3D ವಾಸ್ತವಿಕ ಮಾದರಿಯನ್ನು ರಚಿಸುವುದು ಬಹಳ ಸುಲಭವಾಗಿದೆ.[] ಮೂಲತತ್ವದ ಆವಿಷ್ಕಾರದ ಪ್ರಕ್ರಿಯೆಯು ಒಂದು ವಸ್ತುವನ್ನು ಅಳೆಯುವ ಹಾಗೂ ನಂತರ 3D ಮಾದರಿಗಳನ್ನು ಪುನರ್ ನಿರ್ಮಿಸುವುದನ್ನು ಒಳಗೊಂಡಿದೆ. ಒಂದು ಭೌತಿಕ ವಸ್ತುವನ್ನು ಅಳೆಯಲು 3D ಸ್ಕ್ಯಾನಿಂಗ್ ತಂತ್ರಜ್ಞಾನಗಳಾದ CMM, ಲ್ಯಾಸ್ಟರ್ ಸ್ಕ್ಯಾನರ್ಸ್, ಸ್ಟಕ್ಚರ್ಡ್ ಲೈಟ್ ಡಿಜಿಟೈಸರ್ ಅಥವಾ ಕಂಪ್ಯೂಟೆಡ್ ಟೋಮೋಗ್ರಫಿಯನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಮೋಡದ ಹನಿಯ ಹಾಗೆ ಪ್ರಸ್ತುತಪಡಿಸಿರುವ ಅಳತೆ ಮಾಡಿದ ಡಾಟಾ ಒಂದೇ ಟೋಪೋಲಜಿಕಲ್ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಅದನ್ನು ಆಗಾಗ್ಗೆ ಹೆಚ್ಚು ಬಳಸಲು ಸುಲಭವಾಗುವ ಫಾರ್ಮ್ಯಾಟ್‌ಗೆ ಪರಿವರ್ತನೆ ಮಾಡಲಾಗುತ್ತದೆ. ಅವುಗಳೆಂದರೆ ಒಂದು ತ್ರಿಕೋಣಾಕಾರ-ಮುಖದ ಮೆಶ್, NURBS ನ ಮೇಲ್ಮೈಗಳ ಒಂದು ಗುಂಪು ಅಥವಾ ಒಂದು CAD ಮಾದರಿ. ಈ ಮೂಲತತ್ವದ ಆವಿಷ್ಕಾರವನ್ನು ವ್ಯವಹಾರಗಳಲ್ಲೂ ಉಪಯೋಗಿಸಲಾಗುತ್ತಿದ್ದು, ಅವರು ಪ್ರಸ್ತುತದಲ್ಲಿರುವ ಭೌತಿಕ ಜ್ಯಾಮಿತಿಯನ್ನು ಡಿಜಿಟಲ್ ಉತ್ಪನ್ನ ವಿಸ್ತರಣೆ ಪರಿಸರಕ್ಕೆ ಪರಿವರ್ತಿಸಲು, ಹಾಗೆಯೇ ತಮ್ಮ ಉತ್ಪನ್ನಗಳ ಡಿಜಿಟಲ್ 3D ರೆಕಾರ್ಡ್ ಮಾಡಲು ಅಥವಾ ತಮ್ಮ ಪ್ರತಿಸ್ಪರ್ಧಿಗಳ ಉತ್ಪನ್ನಗಳನ್ನು ವಿಮರ್ಶಿಸಲು ಬಳಸುತ್ತಾರೆ. ಇದನ್ನು ಒಂದು ಉತ್ಪನ್ನವು ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಯಾವುದರಿಂದ ಮಾಡಲ್ಪಟ್ಟಿದೆ ಎಂದು ತಿಳಿಯಲು, ಅದರ ಮೌಲ್ಯವನ್ನು ಅಂದಾಜು ಮಾಡಲು ಮತ್ತು ಯಾವುದೇ ಹಕ್ಕುಸ್ವಾಮ್ಯದ ಚ್ಯುತಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಮತ್ತು ಇತ್ಯಾದಿ ಕೆಲಸಗಳಿಗಾಗಿ ಅದನ್ನು ಬಳಸಲಾಗುತ್ತದೆ ವ್ಯಾಲ್ಯೂ ಇಂಜಿನಿಯರಿಂಗ್ ಒಂದು ಸಂಬಂಧಿತ ಚಟುವಟಿಕೆಯಾಗಿದ್ದು ಇದನ್ನು ಸಹಾ ವ್ಯವಹಾರಗಳಲ್ಲಿ ಬಳಸಲಾಗುತ್ತದೆ ಇದು ಉತ್ಪನ್ನಗಳ ಒಡೆದು ನೋಡುವಿಕೆ ಮತ್ತು ವಿಶ್ಲೇಷಣೆಗಳನ್ನು ಒಳಗೊಂಡಿರುತ್ತದೆ, ಆದರೆ ಇದರ ಮೂಲ ಉದ್ದೇಶವು ಬೆಲೆ ಕಡಿತವನ್ನು ಸಾಧಿಸಲು ಅವಕಾಶಗಳನ್ನು ಹುಡುಕುವುದು.

ತಂತ್ರಾಂಶಗಳ ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರ

[ಬದಲಾಯಿಸಿ]

ರಿವರ್ಸ್ ಇಂಜಿನಿಯರಿಂಗ್ ಶಬ್ದವು ಸಾಫ್ಟ್‌ವೇರ್ ಗೆ ಸಂಬಂಧಿಸಿದಂತೆ ಬೇರೆ ಬೇರೆ ಜನರಿಗೆ ಬೇರೆಬೇರೆ ವಸ್ತುಗಳು ಎಂಬ ರೀತಿ ಅನ್ವಯಿಸುತ್ತದೆ, ಮತ್ತು ಇದು ಚೋಕೋಸ್ಕಿ ಹಾಗೂ ಕ್ರಾಸ್ ಇವರಿಗೆ ಇದರ ಅನೇಕ ಉಪಯೋಗಗಳ ಕುರಿತು ಒಂದು ಸಂಶೋಧನೆ ಪ್ರಬಂಧಗಳನ್ನು ಬರೆಯಲು ಮತ್ತು ಟ್ಯಾಕ್ಸೊನೊಮಿ ಯನ್ನು ವ್ಯಾಖ್ಯಾನಿಸಲು ಪ್ರೇರೇಪಿಸಿತು. ತಮ್ಮ ಪ್ರಬಂಧದಲ್ಲಿ ಅವರು ಹೇಳುತ್ತಾರೆ, "ಮೂಲತತ್ವದ ಆವಿಷ್ಕಾರವೆಂದರೆ ಒಂದು ವಿಷಯ ವ್ಯವಸ್ಥೆಯನ್ನು ವಿಶ್ಲೇಷಿಸುವ ಕ್ರಮವಾಗಿದ್ದು, ಆ ಮೂಲಕ ಆ ವಿಷಯದ ವ್ಯವಸ್ಥೆಯ ನಿರೂಪಣೆಗಳನ್ನು ಎತ್ತರವಾದ ಮಟ್ಟದ ಅಮೂರ್ತತೆಯಲ್ಲಿ ಮಾಡುವುದಾಗಿದೆ".[] ಇದನ್ನು ಹೀಗೂ ಸಹ ನೋಡಬಹುದಾಗಿದೆ "ಅಭಿವೃದ್ಧಿಯ ಚಕ್ರದ ಮೂಲಕ ಹಿಂದೆ ಸಾಗುವುದು."[] ಇಂತಹ ಮಾದರಿಗಳಲ್ಲಿ ಜಲಪಾತದ ತಲೆಕೆಳಗಾದ ಮಾದರಿಯಂತೆ, ನೆರವೇರಿಕೆ ಹಂತದಲ್ಲಿಯ ಉತ್ಪನ್ನದ (ಸೋರ್ಸ್ ಕೋಡ್ ರೂಪದಲ್ಲಿ) ಮೂಲತತ್ವದ ಆವಿಷ್ಕಾರವನ್ನು ವಿಶ್ಲೇಷಣೆಯ ಹಂತದವರೆಗೆ ಮಾಡಲಾಗುತ್ತದೆ. ಮೂಲತತ್ವದ ಆವಿಷ್ಕಾರ ಒಂದು ವಿಧಾನ ಮಾತ್ರವಾಗಿದೆ: ಆಯ್ಕೆಮಾಡಿದ ಸಾಫ್ಟ್‌ವೇರ್ ವ್ಯವಸ್ಥೆಯು ಮಾರ್ಪಾಡಾಗಿರುವುದಿಲ್ಲ(ಯಾವುದು ಅದನ್ನು ರೀಇಂಜಿನಿಯರಿಂಗ್ ಮಾಡುತ್ತದೆ). ಸಾಫ್ಟ್‌ವೇರ್ ತಿದ್ದುವಿಕೆ-ಪ್ರತಿರೋಧ ತಂತ್ರಜ್ಞಾನವನ್ನು ಮಾಲಿಕತ್ವದ ಸಾಫ್ಟ್‌ವೇರ್ ಮತ್ತು ಸಾಫ್ಟ್‌ವೇರ್-ಬೆಂಬಲಿತ ವ್ಯವಸ್ಥೆಗಳ ಮೂಲತತ್ವದ ಆವಿಷ್ಕಾರ ಮತ್ತು ರೀಇಂಜಿನಿಯರಿಂಗ್ ಎರಡನ್ನೂ ಮಾಡುವುದನ್ನು ತಡೆಯೊಡ್ಡಲು ಬಳಸಲಾಗುವುದು. ಆಚರಣೆಗಳಲ್ಲಿ, ಮೂಲತತ್ವದ ಆವಿಷ್ಕಾರದ ಎರಡೂ ಮುಖ್ಯ ವಿಧಗಳು ಉದಯಿಸುತ್ತವೆ. ಮೊದಲ ಪರಿಸ್ಥಿತಿಯಲ್ಲಿ, ಸೋರ್ಸ್‌ ಕೋಡ್ ಈಗಾಗಲೇ ಸಾಫ್ಟ್‌ವೇರ್‌ಗಳಿಗೆ ದೊರೆತಿರುತ್ತದೆ, ಆದರೆ ಉನ್ನತ-ಮಟ್ಟದ ಕಾರ್ಯಕ್ರಮ ಸಂಗತಿಗಳನ್ನು, ಪ್ರಾಯಶಃ ಉತ್ತಮವಲ್ಲದ ಅಥವಾ ಪ್ರಸ್ತುತವಾಗಿ ಬಳಸಲಾಗದ ಡಾಕ್ಯುಮೆಂಟೇಶನ್ ಆಗಿದ್ದರೆ, ಕಂಡುಹಿಡಿಯಲಾಗುತ್ತದೆ. ಎರಡನೆಯ ಪರಿಸ್ಥಿಯಲ್ಲಿ ಸಾಫ್ಟ್‌ವೇರ್ ಗಳಿಗೆ ಅವುಗಳ ಸೋರ್ಸ್ ಕೋಡ್ ಲಭ್ಯವಿರುವುದಿಲ್ಲ ಹಾಗೂ ಅವುಗಳನ್ನು ಕಂಡುಹಿಡಿಯುವಲ್ಲಿನ ಯಾವುದೇ ಪ್ರಯತ್ನಗಳನ್ನು ಮೂಲತತ್ವದ ಆವಿಷ್ಕಾರ ಎಂದು ಕರೆಯಲಾಗುತ್ತದೆ. ಇದರ ಎರಡನೆಯ ಸಂಗತಿಯ ಕುರಿತು ಹೆಚ್ಚಿನ ಜನರಿಗೆ ತಿಳಿದಿದೆ. ಸಾಫ್ಟ್‌ವೇರ್‌ಗಳ ಮೂಲತತ್ವದ ಆವಿಷ್ಕಾರ ಮಾಡುವುದರಿಂದ ಕ್ಲೀನ್ ರೂಪ್ ಡಿಸೈನ್ ತಂತ್ರದ ಮೂಲಕ ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ತಡೆಯಬಹುದು. ಸಂಬಂಧಿತ ಸೂಚನೆಯಾಗಿ, ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಲ್ಲಿ ಕಪ್ಪು ಪೆಟ್ಟಿಗೆಯ ಪರಿಕ್ಷೆಯು ಮೂಲತತ್ವದ ಆವಿಷ್ಕಾರದ ಜೊತೆಗೆ ಅನೇಕ ಸಾಮ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ ಪರೀಕ್ಷಕರು API ಯನ್ನು ಹೊಂದಿರುತ್ತಾರೆ, ಆದರೆ ಅವರ ಗುರಿಗಳು ಹೊರಗಿನಿಂದ ಉತ್ಪನ್ನವನ್ನು ಅಪ್ಪಳಿಸುವ ಮೂಲಕ ಬಗ್‌ಗಳನ್ನು ಮತ್ತು ದಾಖಲೀಕರಣ ಮಾಡದ ವೈಶಿಷ್ಟ್ಯಗಳನ್ನು ಕಂಡುಹಿಡಿಯುವುದು ಆಗಿದೆ.ಮೂಲತತ್ವದ ಆವಿಷ್ಕಾರದ ಇತರ ಉದ್ದೇಶಗಳು, ಲೆಕ್ಕಶೋಧನೆಯಲ್ಲಿ ಭದ್ರತೆ, ಪ್ರತಿಗಳನ್ನು ರಕ್ಷಿಸುವಿಕೆಯನ್ನು ಬೇರ್ಪಡಿಸುವುದು("ಬಿರುಕು ಮಾಡುವಿಕೆ"), ಆಗಾಗ್ಗೆ ಈಗಿನ ಬಳಕೆದಾರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಪ್ರವೇಶ ನಿರ್ಬಂಧಗಳನ್ನು ತಪ್ಪಿಸುವುದು, ಹೊಂದಿಸಿದ ವ್ಯವಸ್ಥೆಗಳನ್ನು ವೈಯಕ್ತಿಕವಾಗಿಸಿಕೊಂಡು ಬಳಸುವುದು,(ಅವುಗಳೆಂದರೆ ಯಂತ್ರ ಆಡಳಿತ ವ್ಯವಸ್ಥೆಗಳು), ಮನೆ-ಒಳಗಿನ ದುರಸ್ತಿಗಳು ಅಥವಾ ಪರಿವರ್ತಿಸುವುದು, ಕಡಿಮೆ ಬೆಲೆಗಳ "ಕ್ರಿಪ್ಲಿಂಗ್" ಹಾರ್ಡ್‌ವೇರ್‌ಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುವುದು, (ಅವುಗಳೆಂದರೆ ಕೆಲವು ಗ್ರಾಫಿಕ್ಸ್ ಕಾರ್ಡ್ ಚಿಪ್‌ಸೆಟ್ಸ್) ಅಥವಾ ಅದಕ್ಕಿಂತ ಹೆಚ್ಚಿನ ಉತ್ಸುಕತೆಯ ತೃಪ್ತಿಯನ್ನು ಒಳಗೊಂಡಿದೆ.ಧೃಢೀಕರಿಸಿದ ಮೂಲತತ್ವದ ಆವಿಷ್ಕಾರ(CREA) IACRB ಯು ಒದಗಿಸಿರುವ ಒಂದು ಸಮರ್ಥನೆಯಾಗಿದೆ, ಮತ್ತು ಅದು ಸಾಫ್ಟ್‌ವೇರ್ ಮೂಲತತ್ವದ ಆವಿಷ್ಕಾರದಲ್ಲಿ ಸಮರ್ಥರಾಗಿದ್ದಾರೆಂದು ಸದಸ್ಯರಿಗೆ ಪ್ರಮಾಣೀಕರಿಸುತ್ತದೆ.

ಬೈನರಿ ತಂತ್ರಾಂಶ

[ಬದಲಾಯಿಸಿ]

ಈ ಪ್ರಕ್ರಿಯೆಯು ಕೆಲವೊಂದು ಬಾರಿ ತಂತ್ರಜ್ಞಾನದ ಸಂಕೇತಲಿಪಿಯ ಮೂಲತತ್ವದ ಆವಿಷ್ಕಾರ ಅಥವಾ RCE ಎಂದು ಕರೆಯಲ್ಪಡುತ್ತದೆ.[] ಉದಾಹರಣೆಗೆ, ಜಾವಾ ಪ್ಲಾಟ್‌ಫಾರ್ಮ್‌ನಲ್ಲಿನ ಬೈನರಿ ಪುನರ್‌ಸಂಕಲನವು ಜ್ಯಾಡ್ ಮೂಲಕ ಪೂರ್ಣಗೊಳಿಸಲ್ಪಡುತ್ತದೆ. ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರದ ಒಂದು ಪ್ರಸಿದ್ಧ ಸನ್ನಿವೇಶವೆಂದರೆ ಬಹಳ ವರ್ಷಗಳಿಂದ ಗಣಕಯಂತ್ರದ ಯಂತ್ರಾಂಶ ಆದರ ತತ್ವವಾಗಿದ್ದ ಐತಿಹಾಸಿಕ [[IBM PC ಸಹವರ್ತನ|IBM PC ಸಹವರ್ತನ]] ಉದ್ಯಮವನ್ನು ಪರಿಚಯಿಸಿದ BIOS ಮೊದಲ IBM-ರಹಿತ PCಯನ್ನು ತಯಾರುಮಾಡಿದ್ದು. ಸಾಫ್ಟ್‌ವೇರ್‌ಗಳ ಮೂಲತತ್ವದ ಆವಿಷ್ಕಾರವನ್ನು ಕೇವಲ ಆನಂದಕ್ಕಾಗಿ ಮಾಡುವ ಒಂದು ಗುಂಪಿನ ಉದಾಹರಣೆಯೆಂದರೆ CORE ಆಗಿದ್ದು, ಅದರ ದೀರ್ಘಸ್ವರೂಪ "ಚಾಲೆಂಜ್ ಆಫ್ ರಿವರ್ಸ್ ಇಂಜಿನಿಯರಿಂಗ್" ಆಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆ‍ಯ್‌ಕ್ಟ್ (DMCA), ಕಡತಗಳ ಸಂವಿಭಾಗಿಸುವಿಕೆಯಲ್ಲಿನ ಪರಸ್ಪರ-ಕಾರ್ಯಾಚರಣೆಯ ಸಾಧ್ಯತೆ ಮತ್ತು ಶಿಷ್ಟಾಚಾರಗಳೆಡಿಗೆ ಗುರಿ ಹೊಂದಿರುವ ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರದ ಕೆಲವು ಕಾನೂನುಗಳಿಂದ ತಪ್ಪಿಸಿಕೊಳ್ಳುವ ತಡೆಗೆ ವಿನಾಯಿತಿ ನೀಡುತ್ತದೆ. ಆದರೆ ಇದು ಆ‍ಯ್‌ಕ್ಸೆಸ್‌ಗಾಗಿ ಇಲ್ಲದೆ ಕೇವಲ ಉಪಯೋಗದ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ಅಂಗೀಕರಿಸಲ್ಪಟ್ಟ ಕಾರಣ ಬಹುಮುಖ್ಯ ಮೊಕದ್ದಮೆಗಳಲ್ಲಿ ನ್ಯಾಯಾಧೀಶರು ಇದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.[] ತಪ್ಪಿಸಿಕೊಳ್ಳುವ ನಿರ್ಬಂಧದಿಂದಲೂ ಆಚೆಗೆ, U.S.ನಲ್ಲಿ ತಂತ್ರಜ್ಞಾನದಲ್ಲಿನ ಮೂಲತತ್ವದ ಆವಿಷ್ಕಾರವು ಕಾಪಿರೈಟ್ ಕಾನೂನಿನ ವಿನಾಯತಿಯ ಯುಕ್ತ ಬಳಕೆಯಿಂದ ರಕ್ಷಿಸಲ್ಪಡುತ್ತಿದೆ.[] ಸಾಂಬಾ ತಂತ್ರಾಂಶವು ಮೈಕ್ರೋಸಾಫ್ಟ್- ವಿಂಡೋಸ್ ಅನುಸ್ಥಾಪಿಸಲ್ಪಟ್ಟ, ಮತ್ತು ವಿಂಡೋಸ್ ಇಲ್ಲದೇ ಇರುವ ಕಂಪ್ಯೂಟರ್ ಗಳ ನಡುವೆ ಪರಸ್ಪರ ಫೈಲ್‌ಗಳ ವಿನಿಮಯಕ್ಕೆ ಸಹಕಾರಿಯಾಗಿದೆ. ಈ ತಂತ್ರಜ್ಞಾನವು ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರಕ್ಕೆ ಉದಾಹರಣೆಯಾಗಿದೆ.[] ವಿಂಡೋಸ್ ನ ಫೈಲುಗಳನ್ನು ಇತರೇ ವ್ಯವಸ್ಥೆಗಳಿಗೆ ಅನುರೂಪಿಗೊಳಿಸುವ ಕಾರ್ಯಕ್ಕಾಗಿ ವಿಂಡೋಸ್ ನ ಫೈಲುಗಳ ಶೇಖರಣಾ ವಿಧಾನವನ್ನು ವಿಲೋಮ ತಂತ್ರದ ಮೂಲಕ ತಿಳಿಯಲಾಯಿತು. ವೈನ್ ಯೋಜನೆಯು ವಿಂಡೋಸ್ API ಗೆ ಅದೇ ತೆರನಾದ ಕೆಲಸವನ್ನು ಮಾಡುತ್ತದೆ ಮತ್ತು OpenOffice.org ಇದನ್ನು ಮೈಕ್ರೋಸಾಫ್ಟ್ ಆಫೀಸ್ ವಿನ್ಯಾಸಕ್ಕೆ ಮಾಡುವ ಒಂದು ಗುಂಪು. ರಿಯಾಕ್ಟ್ ಓ.ಯಸ್ ಎಂಬುದು ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಪ್ರಸ್ತುತ ಚಾಲನೆಯಲ್ಲಿರುವ ವಿಂಡೋಸ್ - ಎನ್.ಟಿ ಶ್ರೇಣಿಯ ಜೊತೆ ಸಹರೂಪತೆಯನ್ನು(ಎ.ಪಿ.ಐ ಮತ್ತು ಎ.ಬಿ.ಐ ಗಳ) ಹೊಂದುವ ಈ ಯೋಜನೆಯು, ವಿಂಡೋಸ್‌ಗಾಗಿ ರಚಿಸಲ್ಪಟ್ಟ ಎಲ್ಲಾ ತಂತ್ರಜ್ಞಾನಗಳು ಹಾಗೂ ತಂತ್ರಾಂಶಗಳನ್ನು ಜಿ.ಪಿ.ಎಲ್ ನ ತೆರೆದ ಸಂಕೇತಲಿಪಿ ಮಾದರಿಗಾಗಿ ವಿಲೋಮ ತಂತ್ರಕ್ಕೆ ಒಳಪಡಿಸಲಾಯಿತು.

ಬೈನರಿ ತಂತ್ರಾಂಶದ ತಂತ್ರಜ್ಞಾನಗಳು

[ಬದಲಾಯಿಸಿ]

ವಿವಿಧ ವಿಧಾನಗಳ ಮೂಲಕ ರಿವರ್ಸ್ ಎಂಜಿನಿಯರಿಂಗ್ ತಂತ್ರಾಂಶವನ್ನು ಪರಿಪೂರ್ಣಗೊಳಿಸಬಹುದಾಗಿದೆ. ರಿವರ್ಸ್ ಎಂಜಿನಿಯರಿಂಗ್ ಮೂರು ಮುಖ್ಯ ಗುಂಪುಗಳು ಹೀಗಿವೆ:

  1. ಪ್ರೋಟೊಕಾಲ್ ರಿವರ್ಸ್ ಎಂಜಿನಿಯರಿಂಗ್ ನಲ್ಲಿ ಮಾಹಿತಿಯ ವಿನಿಮಯ ಪರಿವೀಕ್ಷಣೆ ಮುಖಾಂತರ ವಿಮರ್ಶಿಸುವುದು ಸಾಮಾನ್ಯವಾಗಿದ್ದು, ಇದರಲ್ಲಿ ಬಸ್ ಅನಾಲೈಜರ್ ಮತ್ತು ಪಾಕೆಟ್ ಸ್ನಿಫ್ಫರ್ ಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಕಂಪ್ಯೂಟರ್ ಬಸ್ ಅಥವಾ ಕಂಪ್ಯೂಟರ್ ನೆಟವರ್ಕ್ ಸಂಪರ್ಕವನ್ನು ಮತ್ತು ಟ್ರಾಫಿಕ್ ದತ್ತಾಂಶ ಬಹಿರಂಗ ಪಡಿಸುವುದಕ್ಕೆ ಪ್ರವೇಶ ಪಡೆಯುವುದು. ಬಸ್ ಅಥವಾ ನೆಟವರ್ಕ್ ವರ್ತನೆಯನ್ನು ನಂತರ ವರ್ತನೆಯನ್ನು ಅನುಕರಿಸುವ ಸ್ಟ್ಯಾಂಡ್ ಅಲೋನ್ ಇಂಪ್ಲಿಮೇಷನ್ ಅನ್ನು ಉತ್ಪಾದಿಸುವುದಕ್ಕೆ ವಿಮರ್ಶಿಸಬಹುದಾಗಿದೆ. ರಿವರ್ಸ್ ಎಂಜಿನಿಯರಿಂಗ್ ನಲ್ಲಿ ಡಿವೈಸ್ ಡ್ರೈವರ್ ಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ. ಕೆಲ ಬಾರಿ, ಎಂಬೆಡ್ಡೆಡ್ ಸಿಸ್ಟಮ್ ಗಳಲ್ಲಿನ ರಿವರ್ಸ್ ಎಂಜಿನಿಯರಿಂಗ್, ಉದ್ದೇಶಪೂರ್ವಕವಾಗಿ ಉತ್ಪಾದಕರಿಂದ ಪರಿಚಯಿಸಲ್ಪಟ್ಟ JTAG ಪೋರ್ಟ್ ಗಳು ಅಥವಾ ಇತರ ಡಿಬಗ್ಗಿಂಗ್ ಮುಖಾಂತರ ಕೆಲ ಸಲಕರಣೆಗಳಿಂದ ಸಾಕಷ್ಟು ಸಹಕರಿಸಲ್ಪಡುತ್ತದೆ. ಮೈಕ್ರೋಸಾಫ್ಟ್‌ ವಿಂಡೋಸ್‌ನಲ್ಲಿ softICEನಂತಹ ಕಡಿಮೆ ಮಟ್ಟದ ಡಿಬಗ್ಗರ್ ಗಳು ಜನಪ್ರಿಯವಾಗಿವೆ.
  2. ಡಿಸ್‌ಅಸೆಂಬ್ಲರ್ ಉಪಯೋಗಿಸುವ ಡಿಸ್‌ಅಸೆಂಬ್ಲಿ ಅಂದರೆ ತನ್ನದೆ ಮಾದರಿಯಲ್ಲಿ ಓದಬಲ್ಲ ಮತ್ತು ತಿಳಿದುಕೊಳ್ಳಬಲ್ಲ ಕಚ್ಚಾ ಯಂತ್ರದ ಪ್ರೋಗ್ರಾಮ್ ಭಾಷೆಯಾಗಿದ್ದು, ನೆಮೋನಿಕ್ ಯಂತ್ರ ಭಾಷೆಯೊಂದಿಗೆ ಮಾತ್ರ ಅದು ಸಹಕರಿಸುತ್ತದೆ. ಇದು ಯಾವುದೇ ಕಂಪ್ಯೂಟರ್ ಪ್ರೊಗ್ರಾಮ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ ಆದರೆ. ಇದು ಕೆಲ ಸಮಯವನ್ನು ವಿಶೇಷವಾಗಿ ಯಂತ್ರದ ಕೋಡ್ ಬಳಸದವರಿಗಾಗಿ ತೆಗೆದುಕೊಳ್ಳುತ್ತದೆ. ವಿಶೇಷವಾಗಿ ಇಂಟರ್‌ಆ‍ಯ್‌ಕ್ಟಿವ್ ಡಿಸ್‌ಅಸೆಂಬ್ಲರ್ ಜನಪ್ರಿಯವಾಗಿರುವ ಸಲಕರಣೆಯಾಗಿದೆ.
  3. ಡಿಕಾಂಪೈಲರ್ ಉಪಯೋಗಿಸುವ ಡಿಕಾಂಪಿಲೇಷನ್ ಸಂಸ್ಕರಣೆಯು ಪ್ರೊಗ್ರಾಮ್‌ನ ಬೈಟ್ ಕೋಡ್ ಅಥವಾ ಮಷಿನ್ ಕೋಡ್ ಗಳಲ್ಲಿ ಮಾತ್ರ ಲಭ್ಯವಿರುವ ಯಾವುದಾದರೂ ಉನ್ನತ ಮಟ್ಟದ ಭಾಷೆಯಲ್ಲಿ ಸೋರ್ಸ್‌ ಕೋಡ್ ಅನ್ನು ಪುನರ್ ನಿರ್ಮಿಸುವುದಕ್ಕೆ ವೈವಿಧ್ಯಮಯವಾದ ಫಲಿತಾಂಶಗಳೊಂದಿಗೆ ಪ್ರಯತ್ನಿಸುತ್ತದೆ.

ಸೋರ್ಸ್ ಕೋಡ್‌

[ಬದಲಾಯಿಸಿ]

ರಿವರ್ಸ್ ಎಂಜಿನಿಯರಿಂಗ್ ನ ಹಾಗೆ UML ಆಕೃತಿಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ UML ಸಲಕರಣೆಗಳನ್ನು ಸೋರ್ಸ್‌ ಕೋಡ್ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಉಲ್ಲೇಖಿಸಲಾಗುತ್ತದೆ. UML ಸಲಕರಣೆಗಳ ಪಟ್ಟಿಯನ್ನು ನೋಡಿ.

ಏಕಿಕೃತಗೊಂಡಿರುವ ಸರ್ಕ್ಯೂಟ್ ಗಳು/ಸ್ಮಾರ್ಟ್‌ಕಾರ್ಡ್‌ಗಳ ಮೂಲತತ್ವದ ಆವಿಷ್ಕಾರ

[ಬದಲಾಯಿಸಿ]

ಸ್ಮಾರ್ಟ್‌ಕಾರ್ಡ್‌ ಪರಿಶೀಲಿಸುವ ರೂಪದಲ್ಲಿರುವ ರಿವರ್ಸ್ ಎಂಜಿನಿಯರಿಂಗ್ ಒಂದು ಆಕ್ರಮಣಕಾರಿ ಮತ್ತು ವಿನಾಶಕಾರಿಯದ್ದಾಗಿದೆ. ದಾಳಿಕೊರನು ಸ್ಮಾರ್ಟ್‌ಕಾರ್ಡ್‌ನ ಪದರು-ಪದರುಗಳನ್ನು ತಿಕ್ಕುತ್ತದೆ ಮತ್ತು ಎಲೆಕ್ಟ್ರಾನ್ ಮೈಕ್ರೋಸ್ಕೋಪಿನಿಂದ ಚಿತ್ರಗಳನ್ನು ತೆಗೆಯುತ್ತದೆ. ಈ ತಂತ್ರದ ಮೂಲಕ ಸ್ಮಾರ್ಟ್‌ಕಾರ್ಡ್‌ ನಲ್ಲಿರುವ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಬಿಡಿಭಾಗಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಸಾಧ್ಯವಾಗುತ್ತದೆ. ದಾಳಿಕೋರನಿಗೆ ಎದುರಾಗುವ ಮುಖ್ಯ ಸಮಸ್ಯೆ ಎಂದರೆ ಪ್ರತಿಯೊಂದನ್ನು ಸರಿಯಾದ ರೀತಿಯಲ್ಲಿ ತಂದು ಪ್ರತಿಯೊಂದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿಯುವುದಾಗಿದೆ. ಎಂಜಿನಿಯರ್ ಗಳು ಕೀ ಮತ್ತು ಆಪರೇಷನ್ ಗಳನ್ನು ಸ್ಮರಣಶಕ್ತಿಯ ಸ್ಥಿತಿಯನ್ನು ಮಿಶ್ರಣ ಮಾಡುವ ಮೂಲಕ ಅಡಗಿಸಿಡಲು ಪ್ರಯತ್ನಿಸುತ್ತಾರೆ ಉದಾಹರಣೆಗೆ ಬಸ್ ಸ್ಕ್ರ್ಯಾಂಬ್ಲಿಂಗ್.[೧೦][೧೧] ಕೆಲ ಪ್ರಕರಣಗಳಲ್ಲಿ ಸ್ಮಾರ್ಟ್‌ಕಾರ್ಡ್‌ ಕಾರ್ಯನಿರ್ವಹಿಸುತ್ತಿರುವಾಗಲೇ ವೋಲ್ಟೆಜ್ ಅಳೆಯುವುದಕ್ಕೆ ಪ್ರೋಬ್ ಲಗತ್ತಿಸುವುದು ಕೂಡ ಸಾಧ್ಯವಾಗುತ್ತದೆ. ಈ ರೀತಿಯ ದಾಳಿಯನ್ನು ಕಂಡು ಹಿಡಿಯುವುದಕ್ಕೆ ಮತ್ತು ತಡೆಯುವುದಕ್ಕೆ ಎಂಜಿನಿಯರ್ ಗಳನ್ನು ಸೆನ್ಸರ್ ಗಳನ್ನು ಅಳವಡಿಸಿರುತ್ತಾರೆ.[೧೨] ಪಾವತಿ ಮಾಡುವುದಕ್ಕೆ ಉಪಯೋಗಿಸಲಾಗುವ ಸ್ಮಾರ್ಟ್‌ಕಾರ್ಡ್‌‌ಗಳನ್ನು ಮುರಿಯುವುದಕ್ಕೆ ಅತ್ಯಂತ ಹೆಚ್ಚಿನ ಶ್ರಮ ಬೇಕಾಗುತ್ತದೆ. ಮತ್ತು ಬೃಹತ್ ಪ್ರಮಾಣದಲ್ಲಿ ಚಿಪ್ ಉತ್ಪಾದಿಸುವವರ ಬಳಿ ಮಾತ್ರ ಆ ಉಪಕರಣಗಳು ಲಭ್ಯವಿರುತ್ತವೆ. ಅಲ್ಲದೆ, ಶಾಡೋ ಅಕೌಂಟ್ ನಂತಹ ಇತರ ಸುರಕ್ಷಾ ಕ್ರಮಗಳ ಕಾರಣದಿಂದಾಗಿ ಲಾಭವೂ ಕಡಿಮೆ ಇರುತ್ತದೆ.

ಮಿಲಿಟರಿ ಉದ್ದೇಶಕ್ಕಾಗಿ ಮೂಲತತ್ವದ ಆವಿಷ್ಕಾರದ ಬಳಕೆ

[ಬದಲಾಯಿಸಿ]

ಯುದ್ಧ ಕ್ಷೇತ್ರದಲ್ಲಿ ನಿಯಮಿತ ಪಡೆಗಳಿಂದ ಅಥವಾ ಗುಪ್ತಚರ ಕಾರ್ಯಾಚರಣೆಯಿಂದ ಪಡೆದುಕೊಳ್ಳಲಾದ ಯಂತ್ರಗಳು ಮಾಹಿತಿಯನ್ನು ಕೆಲವು ಸಂದರ್ಭಗಳಲ್ಲಿ ಮೂಲತತ್ವದ ಆವಿಷ್ಕಾರವನ್ನು ಇತರ ದೇಶಗಳ ಮಿಲಿಟರಿ ತಂತ್ರವನ್ನು ನಕಲು ಮಾಡುವುದಕ್ಕೆ ಮಿಲಿಟರಿಯಲ್ಲಿ ಉಪಯೋಗಿಸಲಾಗುತ್ತದೆ. ದ್ವಿತೀಯ ಜಾಗತಿಕ ಯುದ್ಧ ಮತ್ತು ಶೀತಲ ಸಮರದ ವೇಳೆ ಕೆಲವು ವೇಳೆ ಇದನ್ನು ಉಪಯೋಗಿಸಲಾಗುತ್ತಿತ್ತು. ದ್ವಿತೀಯ ಜಾಗತಿಕ ಯುದ್ದದಲ್ಲಿ ಪರಿಚಿತ ಉದಾಹರಣೆಗಳನ್ನು ನಂತರ ಸೇರ್ಪಡೆಗೊಳಿಸಲಾಯಿತು.

  • ಜೆರ್ರಿ ಕ್ಯಾನ್: ಬ್ರಿಟಿಷ್ ಮತ್ತು ಅಮೆರಿಕನ್ ಸೇನಾ ಪಡೆಗಳು ಜರ್ಮನ್ ರು ಅತ್ತ್ಯುತ್ತಮ ವಿನ್ಯಾಸದ ಗ್ಯಾಸೋಲಿನ್ ಕ್ಯಾನ್ ಗಳನ್ನು ಹೊಂದಿದ್ದಾರೆ ಎಂದು ಗುರುತಿಸಿದವು. ಆ ಕ್ಯಾನ್‌ಗಳ ವಿನ್ಯಾಸಗಳ ತಂತ್ರಜ್ಞಾನದ ಮೂಲತತ್ವವನ್ನು ಆವಿಷ್ಕಾರಗೊಳಿಸಿದರು. ಆ ಕ್ಯಾನ್‌ಗಳನ್ನು ಜೆರ್ರಿ ಕ್ಯಾನ್ ಎಂದು ಪ್ರಸಿದ್ಧಿ ಪಡೆದವು.
  • ಟುಪೋಲೆವ್ ಟು-4: ಜಪಾನ್ ಮೇಲೆ ಬಾಂಬಿನ ದಾಳಿ ಮಾಡುವುದಕ್ಕೆ ನಿಯೋಜಿಸಲ್ಪಟ್ಟಿದ್ದ ಮೂರು ಬಿ-29 ಅಮೆರಿಕನ್ ಬಾಂಬರ್ ವಿಮಾನಗಳು ಅನಿವಾರ್ಯವಾಗಿ ಯುಎಸ್ಎಸ್ಆರ್ ನಲ್ಲಿ ಇಳಿಯಬೇಕಾಯಿತು. ಆ ರೀತಿಯ ಬಾಂಬರ್ ಗಳನ್ನು ಹೊಂದಿರದಿದ್ದ ರಷ್ಯನ್ನರು ಬಿ-29 ವಿಮಾನವನ್ನು ನಕಲು ಮಾಡುವುದಕ್ಕೆ ತೀರ್ಮಾನಿಸಿದರು. ಕೆಲವೇ ವರ್ಷಗಳ ಅವಧಿಯಲ್ಲಿ ಅವರು ಅದರಂತೆ ಇರುವ ಟು-4 ಅನ್ನು ಅಭಿವೃದ್ಧಿಗೊಳಿಸಿದರು.
  • ವಿ2 ರಾಕೆಟ್: ವಿ2 ರಾಕೆಟ್ ಗೆ ಸಂಬಂಧಿಸಿದ ತಾಂತ್ರಿಕ ದಾಖಲೆಗಳು ಪಾಶ್ಚಿಮಾತ್ಯ ಒಕ್ಕೂಟದಿಂದ ಯುದ್ದದ ಕೊನೆಯ ದಿನಗಳಲ್ಲಿ ವಶವಾಗಲ್ಪಟ್ಟಿತು. ಸೋವಿಯತ್ ಮತ್ತು ಬಂಧಿತ ಜರ್ಮನ್ ಎಂಜಿನಿಯರ್ ಗಳು ಯೋಜನೆ ಮತ್ತು ತಾಂತ್ರಿಕ ದಾಖಲೆಗಳನ್ನು ಪುನರ್ ಸಿದ್ದಪಡಿಸಬೇಕಾಗಿತ್ತು. ಅದೇ ರೀತಿಯ ಆರ್-1 ರಾಕೆಟ್ ಸಿದ್ಧಪಡಿಸುವುದಕ್ಕೆ ಅವರು ಹಾರ್ಡ್‌ವೇರ್‌ ನಲ್ಲಿ ಕೆಲಸ ಮಾಡಬೇಕಾಗಿತ್ತು. ಯುದ್ಧಾನಂತರ ಪ್ರಾರಂಭವಾದ ಇದು. ನಂತರ ಆರ್-7 ಮತ್ತು ಸ್ಪೇಸ್ ರೇಸ್‌ಗೆ ದಾರಿ ಮಾಡಿಕೊಟ್ಟಿತು.
  • ಕೆ-13/ಆರ್-3ಎಸ್ ಕ್ಷಿಪಣಿ : ನ್ಯಾಟೊದಲ್ಲಿ ಎಎ-2 ಅಟೋಲ್ ಎಂದು ಕರೆಯಲ್ಪಡುವ ಇವುಗಳನ್ನು ಸೋವಿಯತ್ ರಿವರ್ಸ್ ಎಂಜಿನಿಯರಿಂಗ್ ನಿಂದ ಎಐಎಂ-9 ಸೈಡ್ ವಿಂಡರ್ ನಿಂದ ನಕಲು ಬಹುಶಃ ತೈವಾನ್ ನ ಎಐಎಂ-9ಬಿ ಚೀನಾದ ಮಿಗ್-17ಕ್ಕೆ ಅಪ್ಪಳಿಸಿ ಸ್ಫೋಟಗೊಳ್ಳದೆ ವಿಮಾನದಲ್ಲಿ ಸೇರಿಕೊಂಡಿತು ಆಶ್ಚರ್ಯಕರ ಸಂಗತಿ ಎಂದರೆ ಪೈಲಟ್ ಕೂಡ ಅದರೊಂದಿಗೆ ವಾಯುನೆಲೆಗೆ ಮರಳಿದ. ಇದನ್ನು ರಷ್ಯನ್ ವಿಜ್ಞಾನಿಗಳು ಕ್ಷಿಪಣಿ ಅಭಿವೃದ್ಧಿಯಲ್ಲಿ ಇದನ್ನು ವಿಶ್ವವಿದ್ಯಾಲಯದ ಕೋರ್ಸ್ ಎಂದು ವಿವರಿಸುತ್ತಾರೆ.
  • ಬಿಜಿಎಂ-71 ಟಿಓಡಬ್ಲ್ಯೂ ಕ್ಷಿಪಣಿ: ಮ್ಯಾವರಿಕ್ ಮತ್ತು ಟಿಓಡಬ್ಲ್ಯೂ ಕ್ಷಿಪಣಿಗಳ ಜಂಟಿ ಉತ್ಪಾದನೆಗೆ ಎಂದು ಇರಾನ್ ಮತ್ತು ಹಗ್ಸ್ ಮಿಸೈಲ್ ಸಿಸ್ಟಮ್ ನಡುವೆ ನಡೆದ ಮಾತುಕತೆ ಬೆಲೆ ನಿಗದಿ ಮತ್ತು 1979ರ ಕ್ರಾಂತಿಯ ಕಾರಣದಿಂದಾಗಿ ಮುರಿದು ಎಲ್ಲ ಜಂಟಿ ಉತ್ಪಾದನೆಯ ಯೋಜನೆಗಳು ಅಂತ್ಯವಾಗುವಂತೆ ಮಾಡಿತು. ನಂತರ ಇರಾನ್, ಕ್ಷಿಪಣಿಯನ್ನು ರಿವರ್ಸ್ ಎಂಜಿನಿಯರಿಂಗ್ ನಲ್ಲಿ ಉತ್ಪಾದಿಸಿ ಸದ್ಯಕ್ಕೆ ತೂಫಾನ್ ಹೆಸರಿನಲ್ಲಿ ಅದನ್ನೇ ಉಪಯೋಗಿಸುತ್ತಿದೆ.
  • ಚೀನಾ ಹಲವಾರು ಪಾಶ್ಚಿಮಾತ್ಯ ಮತ್ತು ರಷ್ಯಾದ ಹಾರ್ಡ್‌ವೇರ್‌ ಗಳನ್ನು ರಿವರ್ಸ್ ಎಂಜಿನಿಯರಿಂಗ್ ಮೂಲಕ ಫೈಟರ್ ವಿಮಾನದಿಂದ ಹಿಡಿದು ಎಚ್ಎಂಎಂಡಬ್ಲ್ಯೂವಿ ಕಾರುಗಳವರೆಗೆ ರಿವರ್ಸ್ ಎಂಜಿನಿಯರಿಂಗ್ ಮೂಲಕ ನಕಲು ಮಾಡಿದ ಉದಾಹರಣೆಗಳು ಇವೆ.

ನ್ಯಾಯಬದ್ಧತೆ

[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮತ್ತು ಇತರ ದೇಶಗಳಲ್ಲಿ ಕಲಾಕೃತಿ ಅಥವಾ ಪ್ರಕ್ರಿಯೆಯೊಂದು ವ್ಯಾಪಾರಿ ಗೌಪ್ಯತೆ ನಿಂದ ಸಂರಕ್ಷಿಸಲ್ಪಟ್ಟಿದೆ. ಕಾನೂನು ಬದ್ಧವಾಗಿ ಕಲಾತ್ಮಕ ಕೃತಿ ಅಥವಾ ಪ್ರಕ್ರಿಯೆಯನ್ನು ಪಡೆದಿದ್ದಲ್ಲಿ ರಿವರ್ಸ್ ಎಂಜಿನಿಯರಿಂಗ್ ಕಾನೂನು ಬದ್ಧವಾಗಿರುತ್ತದೆ. ಪೆಟೆಂಟ್‌ಗಳು, ಸಂಶೋಧನೆಯನ್ನು ಬಹಿರಂಗಪಡಿಸಬೇಕಾದ ಅಗತ್ಯವಿರುತ್ತದೆ. ಮತ್ತು ಆದ್ದರಿಂದ ಪೆಟೆಂಟ್‌ಗೊಳಪಟ್ಟ ವಸ್ತುಗಳನ್ನು ಅಧ್ಯಯನಕ್ಕೆ ಮೂಲತತ್ವದ ಆವಿಷ್ಕಾರಕ್ಕೆ ಒಳಪಡಿಸುವ ಅಗತ್ಯವಿರುವುದಿಲ್ಲ. ಪ್ರತಿಸ್ಪರ್ಧಿಯ ಉತ್ಪನ್ನವು ಪೆಂಟೆಂಟ್ ಕಾನೂನು ಉಲ್ಲಂಘನೆ ಅಥವಾ ಕೃತಿಸ್ವಾಮ್ಯ ಕಾನೂನು ಉಲ್ಲಂಘನೆ ಆಗಿದೆಯೋ ಎಂದು ನಿರ್ಧರಿಸುವುದು ಕೂಡ ತಂತ್ರಜ್ಞಾನದ ಮೂಲತತ್ವದ ಆವಿಷ್ಕಾರದಲ್ಲಿ ಸಾಮಾನ್ಯವಾಗಿ ಕಂಡು ಬರುವ ಪ್ರಚೋದನೆಯಾಗಿರುತ್ತದೆ. ಕ್ರಿಯಾಸಾಮರ್ಥ್ಯದ ಉದ್ದೇಶಕ್ಕಾಗಿ ಮಾಡಲಾಗುವ ಮೂಲತತ್ವದ ಆವಿಷ್ಕಾರವು ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಸಿಸ್ಟಮ್‌ಗಳು (ಉದಾಹರಣೆಗೆ ಅದಾಖಲಿಕೃತ ಫೈಲ್ ಫಾರ್ಮ್ಯಾಟ್ ಅನ್ನು ಬೆಂಬಲಿಸುವುದಕ್ಕೆ ಅಥವಾ ಅದಾಖಲಿಕೃತ ಹಾರ್ಡವೇರ್ ಸಾಮಗ್ರಿಗಳು) ಹೆಚ್ಚಾಗಿ ಕಾನೂನುಬದ್ಧವಾಗಿವೆ ಎಂದು ನಂಬಲಾಗುತ್ತದೆ. ಆದಾಗ್ಯೂ ಪೆಟೆಂಟ್ ಮಾಲೀಕರು ಕೆಲ ಬಾರಿ ಯಾವುದೇ ಕಾರಣಗಳಿಗಾಗಿ ತಮ್ಮ ಉತ್ಪನ್ನಗಳ ಮೂಲತತ್ವದ ಆವಿಷ್ಕಾರವನ್ನು ಅಡಗಿಸಿಡುವ ಪ್ರಯತ್ನ ಮಾಡುತ್ತಾರೆ.

ಇದನ್ನೂ ಗಮನಿಸಿ

[ಬದಲಾಯಿಸಿ]

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Eilam, Eldad (2005). Reversing: Secrets of Reverse Engineering. Wiley Publishing. p. 595. ISBN 0764574817.
  • James, Dick (January 19, 2006). "Reverse Engineering Delivers Product Knowledge; Aids Technology Spread". Electronic Design. Penton Media, Inc. Archived from the original on 2009-06-19. Retrieved 2009-02-03.
  • Raja, Vinesh (2008). Reverse Engineering - An Industrial Perspective. Springer. p. 242. ISBN 978-1-84628-855-5. {{cite book}}: Unknown parameter |coauthors= ignored (|author= suggested) (help)
  • Thumm, Mike (2007). "Talking Tactics" (PDF). IEEE 2007 Custom Integrated Circuits Conference (CICC). IEEE, Inc. Archived from the original (PDF) on 2009-03-19. Retrieved 2009-02-03.
  • Cipresso, Teodoro (2009). "Software Reverse Engineering Education". SJSU Master's Thesis. ProQuest UML. Retrieved 2009-08-22.

ಆಕರಗಳು

[ಬದಲಾಯಿಸಿ]
  1. ಇ. ಜೆ. ಚಿಕೊಸ್ಕಿ ಮತ್ತು ಜೆ. ಹೆಚ್.ಕ್ರಾಸ್, II, “ರಿಸರ್ವ್ ಇಂಜಿನಿಯರಿಂಗ್ ಆ‍ಯ್‌೦ಡ್ ಡಿಸೈನ್ ರಿಕವರಿ: ಎ ಟಕ್ಸೊನಾಮಿ,” IEEE ಸಾಫ್ಟ್‌ವೇರ್, ಸಂಪುಟ. 7, ನಂ. 1, pp. 13-17, ಜನವರಿ 1990.
  2. ಎ ಸರ್ವೇ ಆಫ್ ರಿವರ್ಸ್ ಇಂಜಿನಿಯರಿಂಗ್ ಆ‍ಯ್‌೦ಡ್ ಪ್ರೊಗ್ರಾಮ್ ಕಾಂಪ್ರೆಹೆನ್ಷನ್. ಮೈಖೆಲ್ ಎಲ್. ನೆಲ್ಸನ್, ಏಪ್ರಿಲ್ 19, 1996, ODU CS 551 - ಸಾಫ್ಟ್‌ವೇರ್ ಇಂಜಿನಿಯರಿಂಗ್ ಸರ್ವೇ
  3. ಟಿ.ವರಡಿ, ಆರ್. ಆರ್. ಮಾರ್ಟಿನ್, ಜೆ. ಕಾಕ್ಸ್, ರಿವರ್ಸ್ ಇಂಜಿನಿಯರಿಂಗ್ ಆಫ್ ಜಿಯೊಮೆಟ್ರಿಕ್ ಮಾಡೆಲ್ಸ್-ಆ‍ಯ್‌ನ್ ಇಂಟ್ರುಡಕ್ಷನ್, ಕಂಪ್ಯೂಟರ್ ಎಡೆಡ್ ಡಿಸೈನ್ 29 (4), 255-268, 1997.
  4. Chikofsky, E.J. (1990). "Reverse Engineering and Design Recovery: A Taxonomy in IEEE Software". IEEE Computer Society: 13–17. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  5. Warden, R. (1992). Software Reuse and Reverse Engineering in Practice. London, England: Chapman & Hall. pp. 283–305.
  6. Chuvakin, Anton (2004). Security Warrior (1st ed.). O'Reilly. {{cite book}}: |access-date= requires |url= (help); Unknown parameter |coauthors= ignored (|author= suggested) (help); Unknown parameter |month= ignored (help)
  7. "US Code: Title 17,1201. Circumvention of copyright protection systems". Retrieved 2006-05-25.
  8. ಪಮೆಲಾ ಸಾಮ್ಯುಯೆಲ್ಸನ್ ಆ‍ಯ್‌೦ಡ್ ಸುಜಾನೆ ಸ್ಕಾಟ್‌ಮರ್‌ರವರ, "ದ ಲಾ ಆ‍ಯ್‌೦ಡ್ ಎಕಾನಾಮಿಕ್ಸ್ ಆಫ್ ರಿವರ್ಸ್ ಇಂಜಿನಿಯರಿಂಗ್" ನೋಡಿ, 111 ಯೆಲ್ ಲಾ ಜರ್ನಲ್ 1575-1663 (ಮೇ 2002).
  9. "Samba: An Introduction". 2001-11-27. Retrieved 2009-05-07.
  10. ವೂಲ್ಫ್‌ಗ್ಯಾಂಗ್ ರಾಂಕಲ್, ವೂಲ್ಫ್‌ಗ್ಯಾಂಗ್ ಎಫಿಂಗ್, ಸ್ಮಾರ್ಟ್‌ಕಾರ್ಡ್‌ ಹ್ಯಾಂಡ್‌ಬುಕ್ (2004)
  11. ಟಿ. ವೆಲ್ಜ್: ಸ್ಮಾರ್ಟ್‌ಕಾರ್ಡ್‌ಸ್ ಆ‍ಯ್‌ಸ್ ಮೆಥಾಡ್ಸ್ ಫಾರ್ ಪೇಮೆಂಟ್(2008), ಸೆಮಿನಾರ್ ITS-ಭದ್ರತಾ Ruhr-Universität Bochum, "http://www.crypto.rub.de/its_seminar_ws0708.html[permanent dead link]"
  12. ಡೇವಿಡ್ ಸಿ. ಮಸ್ಕರ್: ಪ್ರೊಟೆಕ್ಟಿಂಗ್ & ಎಕ್ಸ್‌ಪ್ಲಾಯಿಟಿಂಗ್ ಇಂಟೆಲೆಕ್ಚುಯೆಲ್ ಪ್ರಾಪರ್ಟಿ ಇನ್ ಎಲೆಕ್ಟ್ರಾನಿಕ್ಸ್, IBC ಕಾನ್‌ಫೆರೆನ್ಸಸ್, 10 ಜೂನ್ 1998

ಬಾಹ್ಯ ಕೊಂಡಿಗಳು

[ಬದಲಾಯಿಸಿ]