ಡೇವಿಡ್ ಕಾರ್ಡ್
ಡೇವಿಡ್ ಎಡ್ವರ್ಡ್ ಕಾರ್ಡ್ (ಜನನ 1956) ಕೆನಡಾದ ಅಮೇರಿಕನ್ ಕಾರ್ಮಿಕ ಅರ್ಥಶಾಸ್ತ್ರಜ್ಞ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ. 2021 ರ ಆರ್ಥಿಕ ವಿಜ್ಞಾನದ ಅರ್ಧ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು "ಕಾರ್ಮಿಕ ಅರ್ಥಶಾಸ್ತ್ರಕ್ಕೆ ಅವರ ಪ್ರಾಯೋಗಿಕ ಕೊಡುಗೆಗಳಿಗಾಗಿ", ಜೋಶುವಾ ಆಂಗ್ರಿಸ್ಟ್ ಮತ್ತು ಗೈಡೋ ಇಂಬೆನ್ಸ್ ಜಂಟಿಯಾಗಿ ಉಳಿದ ಅರ್ಧವನ್ನು ಪಡೆದರು. [೧] [೨]
ಆರಂಭಿಕ ಜೀವನ ಮತ್ತು ವೃತ್ತಿ
[ಬದಲಾಯಿಸಿ]ಡೇವಿಡ್ ಕಾರ್ಡ್ 1956 ರಲ್ಲಿ ಒಂಟಾರಿಯೊದ ಗುಯೆಲ್ಫ್‌ನಲ್ಲಿ [೩] ಹುಟ್ಟಿದರು. ಅವರ ಪೋಷಕರು ಹೈನುಗಾರರು. [೪] ಕಾರ್ಡ್ ಅವರು ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು 1978 ರಲ್ಲಿ ಕ್ವೀನ್ಸ್ ವಿಶ್ವವಿದ್ಯಾಲಯದಿಂದ ಪಡೆದರು ಮತ್ತು ಅರ್ಥಶಾಸ್ತ್ರದಲ್ಲಿ ತಮ್ಮ ಪಿಎಚ್‌ಡಿ. ಪದವಿಯನ್ನು 1983 ರಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಿಂದ , "ದೀರ್ಘಾವಧಿಯ ಕಾರ್ಮಿಕ ಒಪ್ಪಂದಗಳಲ್ಲಿ ಸೂಚ್ಯಂಕ", ಶೀರ್ಷಿಕೆಯ ಡಾಕ್ಟರೇಟ್ ಪ್ರಬಂಧವನ್ನು ಆರ್ಲೆ ಅಶೆನ್ಫೆಲ್ಟರ್ ಮೇಲ್ವಿಚಾರಣೆಯಲ್ಲಿ ಪೂರ್ಣಗೊಳಿಸಿದ ನಂತರ ಪಡೆದರು.[೫]
ಕಾರ್ಡ್ ತನ್ನ ವೃತ್ತಿಜೀವನವನ್ನು ಚಿಕಾಗೊ ಗ್ರಾಜುಯೇಟ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಆರಂಭಿಸಿದರು, ಅಲ್ಲಿ ಅವರು 2 ವರ್ಷಗಳ ಕಾಲ ಬಿಸಿನೆಸ್ ಎಕನಾಮಿಕ್ಸ್‌ನ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅವರು ಬರ್ಕ್ಲಿಗೆ ತೆರಳುವ ಮೊದಲು 1983 ರಿಂದ 1997 ರವರೆಗೆ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು; 1990 ರಿಂದ 1991 ರವರೆಗೆ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. [೬] 1988 ರಿಂದ 1992 ರವರೆಗೆ, ಕಾರ್ಡ್ ಅವರು ಜರ್ನಲ್ ಆಫ್ ಲೇಬರ್ ಎಕನಾಮಿಕ್ಸ್‌ನ ಅಸೋಸಿಯೇಟ್ ಎಡಿಟರ್ ಆಗಿದ್ದರು ಮತ್ತು 1993 ರಿಂದ 1997 ರವರೆಗೆ ಅವರು ಇಕೋನೊಮೆಟ್ರಿಕಾದ ಸಹ ಸಂಪಾದಕರಾಗಿದ್ದರು. 2002 ರಿಂದ 2005 ರವರೆಗೆ, ಅವರು ಅಮೇರಿಕನ್ ಎಕನಾಮಿಕ್ ರಿವ್ಯೂನ ಸಹ ಸಂಪಾದಕರಾಗಿದ್ದರು. [೬]
ಶೈಕ್ಷಣಿಕ ಕಾರ್ಯಗಳು
[ಬದಲಾಯಿಸಿ]1990 ರ ದಶಕದ ಆರಂಭದಲ್ಲಿ, ಕಾರ್ಡ್ ಅವರು ಅರ್ಥಶಾಸ್ತ್ರಜ್ಞರಲ್ಲಿ ವ್ಯಾಪಕವಾಗಿ ಒಪ್ಪಿಕೊಂಡ ನಂಬಿಕೆಗಳಿಗೆ ವಿರುದ್ಧವಾಗಿ, ನ್ಯೂಜೆರ್ಸಿಯ ಕನಿಷ್ಠ ವೇತನ ಹೆಚ್ಚಳವುಆ ರಾಜ್ಯದ ಫಾಸ್ಟ್ ಫುಡ್ ಕಂಪನಿಗಳಲ್ಲಿ ಉದ್ಯೋಗ ಕಡಿತಕ್ಕೆ ಕಾರಣವಾಗಲಿಲ್ಲ .[೭] [೮] [೨] ಎಂಬ ಅವರ ಆಗಿನ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸಹೋದ್ಯೋಗಿ ಅಲನ್ ಬಿ. ಕ್ರೂಗರ್ ಜೊತೆಗಿನ ತಮ್ಮ ಸಂಶೋಧನೆಗಾಗಿ ಹೆಚ್ಚು ಗಮನ ಸೆಳೆದರು, ಅವರ ವಿಧಾನ ಮತ್ತು ತೀರ್ಮಾನವನ್ನು ಅನೇಕರು ವಿವಾದಿಸಿದ್ದರೂ ಜೋಸೆಫ್ ಸ್ಟಿಗ್ಲಿಟ್ಜ್ ಮತ್ತು ಪಾಲ್ ಕ್ರುಗ್ಮನ್ ಸೇರಿದಂತೆ ಅನೇಕ ಅರ್ಥಶಾಸ್ತ್ರಜ್ಞರು, [೯] ಕಾರ್ಡ್ ಮತ್ತು ಕ್ರೂಗರ್ ಅವರ ಸಂಶೋಧನೆಗಳನ್ನು ಒಪ್ಪಿಕೊಳ್ಳುತ್ತಾರೆ. [೧೦]
ಡೇವಿಡ್ ಕಾರ್ಡ್ ಅವರು ವಲಸೆ, [೧೧] ಶಿಕ್ಷಣ, ಉದ್ಯೋಗ ತರಬೇತಿ ಮತ್ತು ಅಸಮಾನತೆಯ ಕುರಿತಾದ ಸಂಶೋಧನೆಗೆ ಮೂಲಭೂತ ಕೊಡುಗೆಗಳನ್ನು ನೀಡಿದಾರೆ. ಅನೇಕ ಸಂದರ್ಭಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ನಡುವಿನ ಹೋಲಿಕೆಯ ಮೇಲೆ ಅವರ ಹೆಚ್ಚಿನ ಕಾರ್ಯವು ಕೇಂದ್ರಿತವಾಗಿದೆ. ವಲಸೆಯ ಮೇಲಿನ ಅವರ ಸಂಶೋಧನೆಯು ಹೊಸ ವಲಸಿಗರಿಂದ ಆಗುವ ಆರ್ಥಿಕ ಪರಿಣಾಮವು ಕಡಿಮೆ ಎಂದು ತೋರಿಸಿದೆ. ವಲಸಿಗ ಗುಂಪುಗಳನ್ನು ಸಮಾಜದಲ್ಲಿ ತ್ವರಿತವಾಗಿ ಅರಗಿಸಿಕೊಳ್ಳುವುದರ ಕುರಿತು ಕಾರ್ಡ್ ಹಲವಾರು ಕೇಸ್ ಸ್ಟಡಿಗಳನ್ನು ಮಾಡಿದ್ದಾರೆ, ವಲಸಿಗರು ವೇತನದ ಮೇಲೆ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಪರಿಣಾಮ ಬೀರುತ್ತಾರೆ ಎಂದು ಕಂಡುಕೊಂಡಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, "[ವಲಸೆಯ ವಿರುದ್ಧ] ಆರ್ಥಿಕ ವಾದಗಳು ಬಹುತೇಕ ಅಪ್ರಸ್ತುತ. " ಎಂದು ಕಾರ್ಡ್ ಹೇಳಿದ್ದಾರೆ[೪]. ಆದಾಗ್ಯೂ,ಇದು ವ'ಲಸಿಗರು ಕಾರ್ಮಿಕ ಮಾರುಕಟ್ಟೆಗೆ ಅಪಾಯವನ್ನುಂಟುಮಾಡುವುದಿಲ್ಲ ಎಂದು ವಲಸೆ ಹೆಚ್ಚಿಸಬೇಕು ಎಂದು ಕಾರ್ಡ್ ನಂಬುತ್ತಾರೆ 'ಎಂದು ಸೂಚಿಸುವುದಿಲ್ಲ. [೪]
ಕಾರ್ಡ್ ಕೆಲವೊಮ್ಮೆ ಬಲವಾದ ರಾಜಕೀಯ ಪರಿಣಾಮಗಳನ್ನು ಬೀರಬಹುದಾದ ಸಮಸ್ಯೆಗಳನ್ನು ಸಂಶೋಧಿಸುತ್ತಾರೆ ಎಂಬ ವಾಸ್ತವದ ಹೊರತಾಗಿಯೂ, ಅವರು ರಾಜಕೀಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ನಿಲುವು ತೆಗೆದುಕೊಳ್ಳುವುದಿಲ್ಲ ಅಥವಾ ನೀತಿಯ ಕುರಿತಾದ ಸಲಹೆಗಳನ್ನು ಮಾಡುವುದಿಲ್ಲ. ಅದೇನೇ ಇದ್ದರೂ, ಹೆಚ್ಚಿದ ವಲಸೆ ಮತ್ತು ಕನಿಷ್ಠ ವೇತನ ಶಾಸನವನ್ನು ಬೆಂಬಲಿಸಲು ಅವರ ಕೆಲಸವನ್ನು ಅನೇಕ ಬಾರಿ ಉಲ್ಲೇಖಿಸಲಾಗುತ್ತದೆ. [೧೨] [೧೩]
ಪ್ರಶಸ್ತಿಗಳು
[ಬದಲಾಯಿಸಿ]ಅವರು ಕನಿಷ್ಠ ವೇತನಕ್ಕೆ ಸಂಬಂಧಿಸಿದ ಅವರ ಕೆಲಸಕ್ಕಾಗಿ ಮತ್ತು ಮೇರಿಯಲ್ ಬೋಟ್ ಲಿಫ್ಟ್ ನ ಆರ್ಥಿಕ ಪರಿಣಾಮಗಳ ಕುರಿತಾಗಿ ಅವರ ಕೆಲಸಕ್ಕೆ "ಆರ್ಥಿಕ ಚಿಂತನೆ ಮತ್ತು ಜ್ಞಾನಕ್ಕೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದ ನಲವತ್ತು ವರ್ಷದೊಳಗಿನ ಆ ಅಮೇರಿಕನ್ ಅರ್ಥಶಾಸ್ತ್ರಜ್ಞ"ರಿಗೆ ಕೊಡುವ 1995 ರ ಜಾನ್ ಬೇಟ್ಸ್ ಕ್ಲಾರ್ಕ್ ಪದಕವನ್ನು ಪಡೆದರು. [೪] ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಮೇರಿಕನ್ ಆರ್ಥಿಕ ಸಂಘದ 2009 ರಿಚರ್ಡ್ ಟಿ. ಎಲಿ ಉಪನ್ಯಾಸ ನೀಡಿದರು. 2011 ರ ಅರ್ಥಶಾಸ್ತ್ರ ಪ್ರಾಧ್ಯಾಪಕರ ಸಮೀಕ್ಷೆಯು ಕಾರ್ಡ್ ಅವರನ್ನು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಮ್ಮ ದೇಶದ ಐದನೇ ನೆಚ್ಚಿನ ಅರ್ಥಶಾಸ್ತ್ರಜ್ಞ ಎಂದು ಹೆಸರಿಸಿದೆ. [೧೪] ಎನ್. ಗ್ರೆಗೊರಿ ಮಂಕಿವ್ ಜೊತೆಯಲ್ಲಿ, ಅವರು 2014 ರ ಅಮೇರಿಕನ್ ಎಕನಾಮಿಕ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. [೧೫]
ಅವರು ರಿಚರ್ಡ್ ಬ್ಲಂಡೆಲ್ ಜೊತೆಗೆ ಅರ್ಥಶಾಸ್ತ್ರ, ಹಣಕಾಸು ಮತ್ತು ಮ್ಯಾನೇಜ್ಮೆಂಟ್ ವಿಭಾಗದಲ್ಲಿ "ಪ್ರಾಯೋಗಿಕ ಮೈಕ್ರೋ ಎಕನಾಮಿಕ್ಸ್ಗೆ ಅವರ ಕೊಡುಗೆಗಳಿಗಾಗಿ" ( ಇವು ತೀರ್ಪುಗಾರರ ಶಬ್ದಗಳು) 2014 BBVA ಫೌಂಡೇಶನ್ ಫ್ರಾಂಟಿಯರ್ಸ್ ಆಫ್ ನಾಲೆಡ್ಜ್ ಅವಾರ್ಡ್ ಅನ್ನು ಪಡೆದಿದ್ದಾರೆ. "ಮುಖ್ಯವಾದ ಪ್ರಾಯೋಗಿಕ ಪ್ರಶ್ನೆಗಳಿಂದ ಪ್ರೇರೇಪಿಸಲ್ಪಟ್ಟ ಅವರು ಸೂಕ್ತ ಅರ್ಥಶಾಸ್ತ್ರದ ಮಾದರಿಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಅಂದಾಜು ಮಾಡಿದರು, ಈ ಪ್ರಕ್ರಿಯೆಯಲ್ಲಿ ಗಮನಾರ್ಹ ಕ್ರಮಶಾಸ್ತ್ರೀಯ ಕೊಡುಗೆಗಳನ್ನು ನೀಡಿದರು. ಇವರಿಬ್ಬರೂ ಸಾಂಸ್ಥಿಕ ವಿವರ, ಜಾಗರೂಕ ಮತ್ತು ನವೀನ ಸಂಶೋಧನಾ ವಿನ್ಯಾಸ, ಅರ್ಥಶಾಸ್ತ್ರದ ಪರಿಕರಗಳ ಕಟ್ಟುನಿಟ್ಟಾದ ಅನ್ವಯಿಕೆ ಮತ್ತು ಫಲಿತಾಂಶಗಳ ನಿರ್ಲಿಪ್ತ ವರದಿಗಾರಿಕೆಗೆ ತಮ್ಮ ಗಮನಕ್ಕೆ ಹೆಸರುವಾಸಿಯಾಗಿದ್ದಾರೆ. " [೧೬]
2021 ರಲ್ಲಿ ಯುಎಸ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರಾಗಿ ಕಾರ್ಡ್ ಆಯ್ಕೆಯಾದರು. [೧೭] ಅವರು 2021 ರಲ್ಲಿ ಆರ್ಥಿಕ ವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಗೆದ್ದರು. [೨]
ಪ್ರಕಟಣೆಗಳು
[ಬದಲಾಯಿಸಿ]ಪುಸ್ತಕಗಳು
[ಬದಲಾಯಿಸಿ]- Card, David; Raphael, Steven, eds. (2013). Immigration, Poverty, and Socioeconomic Inequality. New York: Russell Sage Foundation. ISBN 9780871544988.
- Card, David; Krueger, Alan B. (2011). Akee, Randall K. Q.; Zimmermann, Klaus F. (eds.). Wages, School Quality, and Employment Demand. IZA Prize in Labor Economics Series. Oxford: Oxford University Press. ISBN 9780199693382.
- Ashenfelter, Orley; Card, David, eds. (2011). Handbook of Labor Economics. Handbook of Labor Economics. Vol. 4A. Amsterdam: Elsevier. ISBN 9780444534507.
- Ashenfelter, Orley; Card, David, eds. (2011). Handbook of Labor Economics. Handbook of Labor Economics. Vol. 4B. Amsterdam: Elsevier. ISBN 9780444534521.
- Auerbach, Alan J.; Card, David; Quigley, John M., eds. (2006). Poverty, The Distribution of Income , and Public Policy. New York: Russell Sage Foundation. ISBN 9780871540461.
- Card, David; Blundell, Richard; Freeman, Richard B., eds. (2004). Seeking a Premier Economy: The Economic Effects of British Economic Reforms, 1980–2000. National Bureau of Economic Research Comparative Labor Markets Series. Chicago: University of Chicago Press. ISBN 9780226092843.
- Card, David; Blank, Rebecca M., eds. (2000). Finding Jobs: Work and Welfare Reform. New York: Russell Sage Foundation. ISBN 9780871541161.
- Ashenfelter, Orley C.; Card, David, eds. (1999). Handbook of Labor Economics. Handbook of Labor Economics. Vol. 3A. Amsterdam: Elsevier. ISBN 9780444501875.
- Ashenfelter, Orley C.; Card, David, eds. (1999). Handbook of Labor Economics. Handbook of Labor Economics. Vol. 3B. Amsterdam: Elsevier. ISBN 9780444501882.
- Ashenfelter, Orley C.; Card, David, eds. (1999). Handbook of Labor Economics. Handbook of Labor Economics. Vol. 3C. Amsterdam: Elsevier. ISBN 9780444501899.
- Card, David; Krueger, Alan B. (1995). Myth and Measurement: The New Economics of the Minimum Wage (1st ed.). Princeton: Princeton University Press. ISBN 9780691043906.
- Card, David; Krueger, Alan B. (2016). Myth and Measurement: The New Economics of the Minimum Wage (Twentieth-Anniversary ed.). Princeton: Princeton University Press. ISBN 9780691169125.
- Card, David; Freeman, Richard B., eds. (1993). Small Differences that Matter: Labor Markets and Income Maintenance in Canada and the United States. National Bureau of Economic Research Comparative Labor Markets Series. Chicago: University of Chicago Press. ISBN 9780226092836.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಯುಸಿ ಬರ್ಕಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಡೇವಿಡ್ ಕಾರ್ಡ್ ಅವರ ಅಂತರ್ಜಾಲದ ಪುಟ
- ಡೇವಿಡ್ ಕಾರ್ಡ್, ನಿರ್ದೇಶಕರು, ಸೆಂಟರ್ ಫಾರ್ ಲೇಬರ್ ಎಕನಾಮಿಕ್ಸ್ ಯೂಸಿ ಬರ್ಕ್ಲಿ ಸೆಂಟರ್ ಫಾರ್ ಲೇಬರ್ ಎಕನಾಮಿಕ್ಸ್
- ಡೇವಿಡ್ ಕಾರ್ಡ್ ಸಂದರ್ಶನ, ದಿ ರೀಜನ್, ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಮಿನ್ನಿಯಾಪೋಲಿಸ್, ಡಿಸೆಂಬರ್ 1, 2006 ರದ್ದು
ಉಲ್ಲೇಖಗಳು
[ಬದಲಾಯಿಸಿ]- ↑ "The Sveriges Riksbank Prize in Economic Sciences in Memory of Alfred Nobel 2021". NobelPrize.org. Archived from the original on 2021-10-11.
- ↑ ೨.೦ ೨.೧ ೨.೨ "Canadian-born David Card among 3 winners of Nobel in economics". CBC News. The Associated Press. 11 October 2021. Retrieved 11 October 2021.
- ↑ "David Card – Facts" (in ಅಮೆರಿಕನ್ ಇಂಗ್ಲಿಷ್). Nobel Prize. Retrieved 2021-10-11.
- ↑ ೪.೦ ೪.೧ ೪.೨ ೪.೩ "The Immigration Equation" by Roger Lowenstein. The New York Times Magazine, July 9, 2006
- ↑ Kagan, Sam; Fazel-Zarandi, Mahya (11 October 2021). "Card GS '83, Angrist GS '89 win Nobel Prize in Economics". Daily Princetonian. Retrieved 11 October 2021.
- ↑ ೬.೦ ೬.೧ "Curriculum Vita ‐ David Card" (PDF). January 2018. Retrieved December 29, 2019.
- ↑ Card, David; Krueger, Alan B. (1994). "Minimum Wages and Employment: A Case Study of the Fast-Food Industry in New Jersey and Pennsylvania". American Economic Review. 84 (4): 772–793. JSTOR 2118030.
- ↑ Card, David E.; Krueger, Alan B. (1997). Myth and Measurement: The New Economics of the Minimum Wage. Princeton University Press. ISBN 978-0-691-04823-9.
- ↑ Krugman, Paul (July 17, 2015). "Opinion | Liberals and Wages".
- ↑ Stiglitz, Joseph (2002). "Employment, social justice and societal well-being" (PDF). International Labour Review. 141 (1–2): 9–29. doi:10.1111/j.1564-913x.2002.tb00229.x. Archived from the original (PDF) on 2006-07-25.
- ↑ Card, David. "Is the new immigration really so bad?" Archived 2006-04-25 ವೇಬ್ಯಾಕ್ ಮೆಷಿನ್ ನಲ್ಲಿ., Federal Reserve Bank of Philadelphia.
- ↑ Lowenstein, Roger. "Why the Next President Should Raise the Minimum Wage". Fortune. No. 29 February 2016. Retrieved 11 October 2021.
- ↑ Pellow, Nicholas (16 June 2017). "Immigration and Jobs: David Card's Influential Study". Chicago Policy Review. Retrieved 11 October 2021.
- ↑ https://econjwatch.org/file_download/487/DavisMay2011.pdf
- ↑ Lempinen, Edward; Anwar, Yasmin (11 October 2021). "UC Berkeley's David Card wins 2021 Nobel Prize in economics". UC Berkeley. Archived from the original on 25 ಜನವರಿ 2022. Retrieved 11 October 2021.
- ↑ "BBVA Foundation Awards Prof. Richard Blundell Frontiers of Knowledge Award". UCL Department of Economics. 17 February 2015. Retrieved 11 October 2021.
- ↑ "2021 NAS Election". www.nasonline.org. Retrieved 2021-04-27.