ಡುಕಾಟಿ
ಸಂಸ್ಥೆಯ ಪ್ರಕಾರ | ಅಂಗಸಂಸ್ಥೆ |
---|---|
ಸ್ಥಾಪನೆ | ಜುಲೈ 4, 1926 |
ಮುಖ್ಯ ಕಾರ್ಯಾಲಯ | ಬೊಲೊಗ್ನಾ, ಇಟಲಿ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ಕ್ಲಾಡಿಯೊ ಡೊಮೆನಿಕಾಲಿ (ಸಿಇಒ(CEO)) |
ಉದ್ಯಮ | ಮೋಟರ್ ಸೈಕಲ್ ತಯಾರಿಕೆ |
ಉತ್ಪನ್ನ | ಮೋಟರ್ ಸೈಕಲ್ |
ಉತ್ಪನ್ನ ಫಲಿತಾಂಶ | ೫೫,೫೦೦ ಘಟಕಗಳು (೨೦೧೬) |
ಆದಾಯ | €೭೩೧ million (೨೦೧೬)[೧] |
ಮಾಲೀಕ(ರು) | ವೋಕ್ಸ್‌ವ್ಯಾಗನ್ ಗುಂಪು |
ಪೋಷಕ ಸಂಸ್ಥೆ | ಲಂಬೋರ್ಘಿನಿ |
ವಿಭಾಗಗಳು | ಡುಕಾಟಿ ಕೋರ್ಸೆ |
ಜಾಲತಾಣ | www |
[೨] |
ಡುಕಾಟಿ (ಇಟಾಲಿಯನ್ ಉಚ್ಚಾರಣೆ: [duˈkaːti]) ಇಟಲಿಯ ಬೊಲೊಗ್ನಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಟಾಲಿಯನ್ ಮೋಟಾರ್‌ಸೈಕಲ್ ಉತ್ಪಾದನಾ ಕಂಪನಿಯಾಗಿದೆ. ಕಂಪನಿಯು ತನ್ನ ಇಟಾಲಿಯನ್ ಅಂಗಸಂಸ್ಥೆ ಲಂಬೋರ್ಘಿನಿ ಮೂಲಕ ಜರ್ಮನ್ ವಾಹನ ತಯಾರಕ ಆಡಿ ಒಡೆತನದಲ್ಲಿದೆ. ಇದು ವೋಕ್ಸ್‌ವ್ಯಾಗನ್ ಗ್ರೂಪ್‌ನ ಒಡೆತನದಲ್ಲಿದೆ.[೨]
ಇತಿಹಾಸ
[ಬದಲಾಯಿಸಿ]೧೯೨೬ ರಲ್ಲಿ ಆಂಟೋನಿಯೊ ಕ್ಯಾವಲಿಯೇರಿ ಡುಕಾಟಿ ಮತ್ತು ಅವರ ಮೂವರು ಗಂಡು ಮಕ್ಕಳಾದ ಆಡ್ರಿನೊ, ಮಾರ್ಸೆಲ್ಲೊ ಮತ್ತು ಬ್ರೂನೋ ಕ್ಯಾವಲಿಯೇರಿ ಡುಕಾಟಿ ಅವರು ನಿರ್ವಾತ ಕೊಳವೆಗಳು, ಕಂಡೆನ್ಸರ್ಗಳು ಮತ್ತು ಇತರ ರೇಡಿಯೊ ಘಟಕಗಳನ್ನು ತಯಾರಿಸಲು ಬೊಲೊಗ್ನಾದಲ್ಲಿ ಸೊಸೈಟಿ ಸೈಂಟಿಫಿಕಾ ರೇಡಿಯೋ ಬ್ರೆವೆಟ್ಟಿ ಡುಕಾಟಿ ಸ್ಥಾಪಿಸಿದರು. ೧೯೩೫ ರಲ್ಲಿ ಅವರು ನಗರದ ಬೊರ್ಗೊ ಪ್ಯಾನಿಗಲೆ ಪ್ರದೇಶದಲ್ಲಿ ಹೊಸ ಕಾರ್ಖಾನೆಯ ನಿರ್ಮಾಣಕ್ಕೆ ಅನುವು ಮಾಡಿಕೊಡುವಷ್ಟು ಯಶಸ್ವಿಯಾದರು.
ಸಣ್ಣ ಟ್ಯುರಿನೀಸ್ ಸಂಸ್ಥೆಯಾದ ಎಸ್‌ಐಎಟಿಎ(SIATA - Società Italiana per Applicazioni Tecniche Auto-Aviatorie) ನಲ್ಲಿ, ಆಲ್ಡೊ ಫರಿನೆಲ್ಲಿ ಬೈಸಿಕಲ್‌ಗಳಲ್ಲಿ ಅಳವಡಿಸಲು ಸಣ್ಣ ಪುಶ್ರೋಡ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು. ೧೯೯೪ ರಲ್ಲಿ ಇಟಲಿಯ ಅಧಿಕೃತ ವಿಮೋಚನೆಯ ನಂತರ ಎಸ್‌ಐಎಟಿಎ(SIATA) ಸಾರ್ವಜನಿಕರಿಗೆ ಮಾರಾಟ ತನ್ನ ಮಾಡುವ ಉದ್ದೇಶವನ್ನು ಪ್ರಕಟಿಸಿತು. ಈ ಎಂಜಿನ್ ಅನ್ನು "ಕುಸಿಯೊಲೊ" ಎಂದು ಕರೆಯುತ್ತಾರೆ.
೧೯೫೦ ರಲ್ಲಿ, ಎಸ್‌ಐಎಟಿಎ(SIATA) ಸಹಯೋಗದೊಂದಿಗೆ ೨೦೦,೦೦೦ ಕ್ಕೂ ಹೆಚ್ಚು ಕ್ಯುಸಿಯೊಲೋಸ್ ಮಾರಾಟವಾದ ನಂತರ ಡುಕಾಟಿ ಸಂಸ್ಥೆಯು ಅಂತಿಮವಾಗಿ ತನ್ನದೇ ಆದ ಕ್ಯುಸಿಯೊಲೋ -ಆಧಾರಿತ ಮೋಟಾರ್‌ಸೈಕಲ್ ಅನ್ನು ನೀಡಿತು. ಈ ಮೊದಲ ಡುಕಾಟಿ ಮೋಟಾರ್‌ಸೈಕಲ್ ೯೮ lb (೪೪ kg) ತೂಕದ ೪೮ ಸಿಸಿ(cc) ಬೈಕ್ ಆಗಿದ್ದು ೪೦ mph (೬೪ km/h), ಮತ್ತು ೧೫ mm ಕಾರ್ಬ್ಯುರೇಟರ್ (೦.೫೯ in) ೨೦೦ mpg-US (೧.೨) ಕ್ಕಿಂತ ಕಡಿಮೆ ನೀಡುತ್ತಿತ್ತು. "೫೫M" ಮತ್ತು "೬೫TL" ಪರವಾಗಿ ಡುಕಾಟಿ ಶೀಘ್ರದಲ್ಲೇ ಕುಸಿಯೊಲೊ ಹೆಸರನ್ನು ಕೈಬಿಟ್ಟಿತು.
೧೯೫೨ ರ ಆರಂಭದಲ್ಲಿ ಮಿಲನ್ ಪ್ರದರ್ಶನದಲ್ಲಿ ಅವರ ೬೫TS ಸೈಕಲ್ ಮತ್ತು ಕ್ರೂಸರ್ (ನಾಲ್ಕು-ಸ್ಟ್ರೋಕ್ ಮೋಟಾರ್ ಸ್ಕೂಟರ್) ಅನ್ನು ಪರಿಚಯಿಸಿತು. ಕ್ರೂಸರ್ ಉತ್ತಮ ಯಶಸ್ಸನ್ನು ಸಾಧಿಸಲಿಲ್ಲ. ಮಾಡಲ್ ಉತ್ಪಾದನೆಯನ್ನು ನಿಲ್ಲಿಸುವ ಮೊದಲು ಎರಡು ವರ್ಷಗಳ ಅವಧಿಯಲ್ಲಿ ಕೆಲವೇ ಸಾವಿರಗಳನ್ನು ಮಾಡಲಾಯಿತು.
೧೯೫೩ ರಲ್ಲಿ, ನಿರ್ವಹಣೆಯು ವಿಭಿನ್ನ ಮೋಟಾರ್‌ಸೈಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನ ಮಾರ್ಗಗಳನ್ನು ಅಂಗೀಕರಿಸಿ ಕಂಪನಿಯನ್ನು ಡುಕಾಟಿ ಮೆಕಾನಿಕಾ ಎಸ್‌ಪಿಎ ಮತ್ತು ಡುಕಾಟಿ ಎಲೆಟ್ರೊನಿಕಾ ಎಂಬ ಎರಡು ಪ್ರತ್ಯೇಕ ಘಟಕಗಳಾಗಿ ವಿಭಜಿಸಿತು. ಡಾ. ಗೈಸೆಪ್ಪೆ ಮೊಂಟಾನೊ ಡುಕಾಟಿ ಮೆಕ್ಯಾನಿಕಾ ಎಸ್‌ಪಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಬೊರ್ಗೊ ಪ್ಯಾನಿಗೇಲ್ ಕಾರ್ಖಾನೆಯನ್ನು ಸರ್ಕಾರದ ನೆರವಿನೊಂದಿಗೆ ಆಧುನೀಕರಿಸಲಾಯಿತು. ೧೯೫೪ ರ ಹೊತ್ತಿಗೆ, ಡುಕಾಟಿ ಮೆಕ್ಕಾನಿಕಾ ಸ್ಪಾ ಉತ್ಪಾದನೆಯನ್ನು ದಿನಕ್ಕೆ ೧೨೦ ಬೈಕ್‌ಗಳಿಗೆ ಹೆಚ್ಚಿಸಿತು.
೧೯೬೦ ರ ದಶಕದಲ್ಲಿ, ಡುಕಾಟಿಯು ಮೋಟಾರ್‌ಸೈಕಲ್ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಗಳಿಸಿತು. ಆಗ ಲಭ್ಯವಿರುವ ಅತ್ಯಂತ ವೇಗದ ೨೫೦ ಸಿಸಿ(cc) ರೋಡ್ ಬೈಕು, ಮ್ಯಾಕ್ ೧ ಅನ್ನು ಉತ್ಪಾದಿಸಿತು.[೪][೫][೬] ೧೯೭೦ ರ ದಶಕದಲ್ಲಿ ಡುಕಾಟಿಯು ದೊಡ್ಡ-ಸ್ಥಳಾಂತರಿಸುವ V-ಟ್ವಿನ್ ಎಂಜಿನ್‌ಗಳೊಂದಿಗೆ ಮೋಟಾರ್‌ಸೈಕಲ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. ೧೯೭೩ ರಲ್ಲಿ, ತಮ್ಮ ಟ್ರೇಡ್‌ಮಾರ್ಕ್ ಡೆಸ್ಮೋಡ್ರೊಮಿಕ್ ವಾಲ್ವ್ ವಿನ್ಯಾಸವನ್ನು ಪರಿಚಯಿಸಿತು. ೧೯೮೫ ರಲ್ಲಿ, ಕ್ಯಾಗಿವಾ ಡುಕಾಟಿಯನ್ನು ಖರೀದಿಸಿದರು. ಡುಕಾಟಿ ಮೋಟಾರ್‌ಸೈಕಲ್‌ಗಳನ್ನು "ಕಾಗಿವಾ" ಹೆಸರಿನೊಂದಿಗೆ ರಿಬ್ಯಾಡ್ಜ್ ಮಾಡಲು ಯೋಜಿಸಿದರು. ಖರೀದಿಯು ಪೂರ್ಣಗೊಳ್ಳುವ ಹೊತ್ತಿಗೆ, ಕ್ಯಾಗಿವಾ ತನ್ನ ಮೋಟಾರ್‌ಸೈಕಲ್‌ಗಳಲ್ಲಿ "ಡುಕಾಟಿ" ಹೆಸರನ್ನು ಇಟ್ಟುಕೊಂಡಿತ್ತು. ಹನ್ನೊಂದು ವರ್ಷಗಳ ನಂತರ, ೧೯೯೬ ರಲ್ಲಿ, ಕ್ಯಾಗಿವಾ ಟೆಕ್ಸಾಸ್ ಪೆಸಿಫಿಕ್ ಗ್ರೂಪ್‌ನಿಂದ(TPG) ಪ್ರಸ್ತಾಪವನ್ನು ಒಪ್ಪಿಕೊಂಡರು. ಕಂಪನಿಯಲ್ಲಿನ ೫೧% ಪಾಲನ್ನು US$೩೨೫ ಮಿಲಿಯನ್‌ಗೆ ಮಾರಾಟ ಮಾಡಿದರು. ನಂತರ ೧೯೯೮ ರಲ್ಲಿ, ಟೆಕ್ಸಾಸ್ ಪೆಸಿಫಿಕ್ ಗ್ರೂಪ್ ಡುಕಾಟಿಯ ಏಕೈಕ ಮಾಲೀಕರಾಗಲು ಉಳಿದ ೪೯% ಅನ್ನು ಖರೀದಿಸಿತು. ೧೯೯೯ ರಲ್ಲಿ, ಟಿಪಿಜಿ(TPG) ಡುಕಾಟಿ ಸ್ಟಾಕ್‌ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ನೀಡಿತು. ಕಂಪನಿಯನ್ನು "ಡುಕಾಟಿ ಮೋಟಾರ್ ಹೋಲ್ಡಿಂಗ್ ಸ್ಪಾ" ಎಂದು ಮರುನಾಮಕರಣ ಮಾಡಿತು. ಟಿಪಿಜಿ(TPG) ತನ್ನ ೬೫% ರಷ್ಟು ಷೇರುಗಳನ್ನು ಡುಕಾಟಿಯಲ್ಲಿ ಮಾರಾಟ ಮಾಡಿತು. ಡಿಸೆಂಬರ್ ೨೦೦೫ ರಲ್ಲಿ, ಕಾರ್ಲೋ ಮತ್ತು ಆಂಡ್ರಿಯಾ ಬೊನೊಮಿಯ ಹೂಡಿಕೆ ನಿಧಿಯಾದ ಇನ್ವೆಸ್ಟಿಂಡಸ್ಟ್ರಿಯಲ್ ಹೋಲ್ಡಿಂಗ್ಸ್‌ಗೆ ಟೆಕ್ಸಾಸ್ ಪೆಸಿಫಿಕ್‌ನ ಪಾಲನ್ನು ಮಾರಾಟ ಮಾಡುವ ಮೂಲಕ ಡುಕಾಟಿ ಇಟಾಲಿಯನ್ ಮಾಲೀಕತ್ವಕ್ಕೆ ಮರಳಿತು.
ಡುಕಾಟಿ ಮೋಟಾರ್ ಹೋಲ್ಡಿಂಗ್ ಎಸ್.ಪಿ.ಎ
ಮಾಲೀಕತ್ವ
[ಬದಲಾಯಿಸಿ]೧೯೨೬ ರಿಂದ, ಡುಕಾಟಿಯು ಹಲವಾರು ಗುಂಪುಗಳು ಮತ್ತು ಕಂಪನಿಗಳ ಒಡೆತನದಲ್ಲಿದೆ.
- ೧೯೨೬-೧೯೫೦ - ಡುಕಾಟಿ ಪ್ಯಾಮಿಲಿ
- ೧೯೫೦-೧೯೬೭ - ಸರ್ಕಾರಿ ಇಸ್ಟಿಟುಟೊ ಪರ್ ಲಾ ರಿಕೊಸ್ಟ್ರೂಜಿಯೋನ್ ಇಂಡಸ್ಟ್ರಿಯಲ್ (IRI) ನಿರ್ವಹಣೆ
- ೧೯೬೭-೧೯೭೮ - ಸರ್ಕಾರಿ ಇಎಫ್‌ಐಎಂ(EFIM) ನಿರ್ವಹಣೆ (ದಿನನಿತ್ಯದ ಕಾರ್ಖಾನೆ ಕಾರ್ಯಾಚರಣೆಗಳ ಮೇಲೆ ನಿಯಂತ್ರಣ)
- ೧೯೭೮-೧೯೮೫ - ವಿಎಂ(VM) ಗ್ರೂಪ್
- ೧೯೮೫-೧೯೯೬ - ಕಾಗಿವಾ ಗ್ರೂಪ್
- ೧೯೯೬-೨೦೦೫ - ಟೆಕ್ಸಾಸ್-ಪೆಸಿಫಿಕ್ ಗ್ರೂಪ್ (ಯುಎಸ್ ಮೂಲದ) ಮಾಲೀಕತ್ವ
- ೨೦೦೫-೨೦೦೮ - ಇನ್ವೆಸ್ಟಿಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಎಸ್.ಪಿ.ಎ.
- ೨೦೦೮–೨೦೧೨ - ಪರ್ಫಾರ್ಮೆನ್ಸ್ ಮೋಟರ್ ಸೈಕಲ್ಸ್ ಎಸ್.ಪಿ.ಎ.[೯]
- ಇನ್ವೆಸ್ಟಿಂಡಸ್ಟ್ರಿಯಲ್ ಹೋಲ್ಡಿಂಗ್ಸ್, ಬಿಎಸ್ ಇನ್ವೆಸ್ಟಿಮೆಂಟಿ ಮತ್ತು ಒಂಟಾರಿಯೊ ಪಿಂಚಣಿ ಯೋಜನೆಯ ಆಸ್ಪತ್ರೆಗಳು ರಚಿಸಿದ ಹೂಡಿಕೆ ವಾಹನ
- ೧೯ ಜುಲೈ ೨೦೧೨ - ಪ್ರಸ್ತುತ - ಆಟೊಮೊಬಿಲಿ ಲಂಬೋರ್ಘಿನಿ ಎಸ್.ಪಿ.ಎ.
- ಆಡಿಯ ಆಟೋಮೊಬಿಲಿ ಲಂಬೋರ್ಘಿನಿ ಎಸ್.ಪಿ.ಎ. ಅಂಗಸಂಸ್ಥೆಯ ಮೂಲಕ ಆಡಿ ಎಜಿ ಡುಕಾಟಿ ಮೋಟಾರ್ ಹೋಲ್ಡಿಂಗ್ ಎಸ್.ಪಿ.ಎ. ನ ೧೦೦% ಮತದಾನದ ಹಕ್ಕುಗಳನ್ನು ಪಡೆದುಕೊಂಡಿದೆ.
೧೯೬೦ ರಿಂದ ೧೯೯೦ ರವರೆಗೆ, ಸ್ಪ್ಯಾನಿಷ್ ಕಂಪನಿ ಮೋಟೋಟ್ರಾನ್ಸ್ ಡುಕಾಟಿ ಎಂಜಿನ್‌ಗಳಿಗೆ ಪರವಾನಗಿ ನೀಡಿತು ಮತ್ತು ಮೋಟಾರು ಸೈಕಲ್‌ಗಳನ್ನು ಉತ್ಪಾದಿಸಿತು. ಮೋಟೋಟ್ರಾನ್ಸ್‌ನ ಗಮನಾರ್ಹ ಯಂತ್ರವೆಂದರೆ ೨೫೦ ಸಿಸಿ(cc) ೨೪ ಹೊರಾಸ್.
ಮೋಟಾರ್ಸೈಕಲ್ ವಿನ್ಯಾಸಗಳು
[ಬದಲಾಯಿಸಿ]ಡುಕಾಟಿಯು ಹೆಚ್ಚು-ಕಾರ್ಯಕ್ಷಮತೆಯ ಮೋಟಾರು ಸೈಕಲ್‌ಗಳಿಗೆ ಹೆಸರುವಾಸಿಯಾಗಿದೆ. ಇದು ದೊಡ್ಡ ಸಾಮರ್ಥ್ಯದ ನಾಲ್ಕು-ಸ್ಟ್ರೋಕ್, ೯೦° V-ಟ್ವಿನ್ ಎಂಜಿನ್‌ಗಳು, ಡೆಸ್ಮೋಡ್ರೊಮಿಕ್ ವಾಲ್ವ್ ವಿನ್ಯಾಸವನ್ನು ಹೊಂದಿದೆ.[೧೧][೧೨] ಡುಕಾಟಿ ತನ್ನ ಸಂರಚನೆಯನ್ನು L-ಟ್ವಿನ್ ಎಂದು ಬ್ರಾಂಡ್ ಮಾಡಿದೆ ಏಕೆಂದರೆ ಒಂದು ಸಿಲಿಂಡರ್ ಲಂಬವಾಗಿದ್ದರೆ ಇನ್ನೊಂದು ಅಡ್ಡಲಾಗಿ. ಅದು "L" ಅಕ್ಷರದಂತೆ ಕಾಣುತ್ತದೆ.
ಡುಕಾಟಿ ಈ ಹಿಂದೆ ತಮ್ಮ ಅನೇಕ ಮೋಟಾರ್‌ಸೈಕಲ್‌ಗಳಲ್ಲಿ ಮಲ್ಟಿಪ್ಲೇಟ್ ಡ್ರೈ ಕ್ಲಚ್‌ಗಳನ್ನು ಬಳಸುತ್ತಿದ್ದರು. ಡುಕಾಟಿಯು ಟ್ರೆಲ್ಲಿಸ್ ಚೌಕಟ್ಟನ್ನು ಸಹ ವ್ಯಾಪಕವಾಗಿ ಬಳಸುತ್ತದೆ.
ಉತ್ಪನ್ನ ಇತಿಹಾಸ
[ಬದಲಾಯಿಸಿ]೧೯೫೦ ರ ದಶಕದಲ್ಲಿ ಹೆಚ್ಚಿನ ಡುಕಾಟಿ ಮೋಟಾರ್‌ಸೈಕಲ್‌ಗಳ ಮುಖ್ಯ ವಿನ್ಯಾಸಕ ಫ್ಯಾಬಿಯೊ ಟ್ಯಾಗ್ಲಿಯೋನಿ (೧೯೨೦-೨೦೦೧). ಡುಕಾಟಿ ೧೯೭೯ ರಲ್ಲಿ ಪಂತಾಹ್‌ವನ್ನು ಪರಿಚಯಿಸಿದರು. ೧೯೯೦ ರ ದಶಕದಲ್ಲಿ ಅದರ ಎಂಜಿನ್ ಅನ್ನು ಡುಕಾಟಿ ಸೂಪರ್‌ಸ್ಪೋರ್ಟ್ (SS) ಸರಣಿಯಲ್ಲಿ ನವೀಕರಿಸಲಾಯಿತು. ಎಲ್ಲಾ ಆಧುನಿಕ ಡುಕಾಟಿ ಎಂಜಿನ್‌ಗಳು ಪಂತಾಹ್‌ನ ಉತ್ಪನ್ನಗಳಾಗಿವೆ. ಇದು ಎಂಜಿನ್‌ನ ಕವಾಟಗಳನ್ನು ಸಕ್ರಿಯಗೊಳಿಸಲು ಹಲ್ಲಿನ ಬೆಲ್ಟ್ ಅನ್ನು ಬಳಸುತ್ತದೆ. ಟ್ಯಾಗ್ಲಿಯೊನಿ ತನ್ನ ಡುಕಾಟಿ ಮೋಟಾರ್‌ಬೈಕ್‌ಗಳಲ್ಲಿ ಕವಾಲಿನೊ ರಾಂಪಂಟೆಯನ್ನು (ಫೆರಾರಿ ಬ್ರಾಂಡ್‌ನೊಂದಿಗೆ ಗುರುತಿಸಲಾಗಿದೆ) ಬಳಸಿದರು.
೧೯೭೦ ರ ದಶಕ
[ಬದಲಾಯಿಸಿ]೧೯೭೩ ರಲ್ಲಿ, ಡುಕಾಟಿಯು ತನ್ನ ೧೯೭೨ ರ ವಿಜಯವನ್ನು ಇಮೋಲಾ ೨೦೦ ನಲ್ಲಿ ಉತ್ಪಾದನಾ ಮಾದರಿ ಹಸಿರು ಚೌಕಟ್ಟಿನ ಡುಕಾಟಿ ೭೫೦ ಸೂಪರ್‌ಸ್ಪೋರ್ಟ್‌ನೊಂದಿಗೆ ಸ್ಮರಿಸಿತು.
೧೯೭೫ ರಲ್ಲಿ, ಕಂಪನಿಯು ೮೬೦ ಜಿಟಿ(GT) ಅನ್ನು ಪರಿಚಯಿಸಿತು. ಇದನ್ನು ಕಾರ್ ಸ್ಟೈಲಿಸ್ಟ್ ಜಾರ್ಗೆಟ್ಟೊ ಗಿಯುಗಿಯಾರೊ ವಿನ್ಯಾಸಗೊಳಿಸಿದರು.[೧೩] ೧೯೭೬ ರ ಋತುವಿನಲ್ಲಿ ಹೆಚ್ಚು ದುಂಡಗಿನ ಇಂಧನ ಟ್ಯಾಂಕ್‌ನೊಂದಿಗೆ ಅದನ್ನು ಮರು-ವಿನ್ಯಾಸಗೊಳಿಸಲಾಯಿತು.[೧೪]
೧೯೮೦ ರ ದಶಕ
[ಬದಲಾಯಿಸಿ]೧೯೮೬ ರಲ್ಲಿ ಡುಕಾಟಿ ಪಾಸೊವನ್ನು ಪಾಸೊ ೭೫೦ ನೊಂದಿಗೆ ಪರಿಚಯಿಸಲಾಯಿತು. ನಂತರ ೧೯೮೯ ರಲ್ಲಿ ಪಾಸೊ ೯೦೬ ನೊಂದಿಗೆ ಪರಿಚಯಿಸಲಾಯಿತು. ಮಾಸ್ಸಿಮೊ ತಂಬೂರಿನಿಯವರು ಡುಕಾಟಿ ೯೧೬ ಮತ್ತು ಎಮ್‌ವಿ(MV) ಅಗಸ್ಟಾ ಎಫ಼್‌೪(F4) ಅನ್ನು ವಿನ್ಯಾಸಗೊಳಿಸಿದರು.
೧೯೯೦ ರ ದಶಕ
[ಬದಲಾಯಿಸಿ]೧೯೯೩ ರಲ್ಲಿ ಮಿಗುಯೆಲ್ ಏಂಜೆಲ್ ಗಲ್ಲುಝಿ ಡ್ಯುಕಾಟಿ ಮಾನ್ಸ್ಟರ್ ಅನ್ನು ಪರಿಚಯಿಸಿದರು.[೧೫]
೧೯೯೩ ರಲ್ಲಿ ಪಿಯರೆ ಟೆರ್ಬ್ಲಾಂಚೆ, ಮಾಸ್ಸಿಮೊ ಬೋರ್ಡಿ ಮತ್ತು ಕ್ಲಾಡಿಯೊ ಡೊಮೆನಿಕಾಲಿ ಡುಕಾಟಿ ಸೂಪರ್ಮೊನೊವನ್ನು ವಿನ್ಯಾಸಗೊಳಿಸಿದರು
೧೯೯೪ ರಲ್ಲಿ ಕಂಪನಿಯು ಮಾಸ್ಸಿಮೊ ತಂಬೂರಿನಿ ವಿನ್ಯಾಸಗೊಳಿಸಿದ ಡುಕಾಟಿ ೯೧೬ ಮಾಡೆಲ್ ಅನ್ನು ಪರಿಚಯಿಸಿತು.[೧೬]
೨೦೦೦ ರ ದಶಕ
[ಬದಲಾಯಿಸಿ]೨೦೦೬ ರಲ್ಲಿ, ರೆಟ್ರೊ-ಶೈಲಿಯ ಡುಕಾಟಿ ಪೌಲ್‌ಸ್ಮಾರ್ಟ್ ೧೦೦೦ ಎಲ್‌ಇ(LE) ಬಿಡುಗಡೆಯಾಯಿತು.
- ಮಾನ್ಸ್ಟರ್: ೬೨೦, ೬೯೫, ೬೯೬, ೭೫೦, ೭೯೬, ೯೦೦, ಎಸ್‌೨ಆರ್(S2R), ಎಸ್‌೪ಆರ್(S4R)[೧೭]
- ಸ್ಟ್ರೀಟ್‌ಫೈಟರ್ ಎಸ್ [೧೭]
- ಎಸ್‌ಟಿ೨(ST2), ಎಸ್‌ಟಿ೩(ST3), ಎಸ್‌ಟಿ೪(ST4)[೧೭]
- ಪಾಲ್ ಸ್ಮಾರ್ಟ್ ೧೦೦೦ಎಲ್‌ಇ(1000LE) ಮತ್ತು ಸ್ಪೋರ್ಟ್ ಕ್ಲಾಸಿಕ್ ರೂಪಾಂತರಗಳು
- ಸೂಪರ್‌ಸ್ಪೋರ್ಟ್ ೭೫೦, ೯೦೦, ೧೦೦೦
- ೭೪೮, ೭೪೯,೮೪೮
- ೯೯೬, ೯೯೮, ೯೯೯, ೧೦೯೮, ೧೦೯೮೫, ೧೦೯೮ಆರ್, ೧೧೯೮
- ಡೆಸ್ಮೊಸೆಡಿಸಿ ಆರ್‌ಆರ್(RR)
ಪ್ರಸ್ತುತ ಶ್ರೇಣಿ
[ಬದಲಾಯಿಸಿ]- ಮಾನ್ಸ್ಟರ್
- ಮಾನ್ಸ್ಟರ್ +
- ಮಾನ್ಸ್ಟರ್ ೮೨೧
- ಮಾನ್ಸ್ಟರ್ ೮೨೧ ಸ್ಟೆಲ್ತ್
- ಮಾನ್ಸ್ಟರ್ ೧೨೦೦
- ಮಾನ್ಸ್ಟರ್ ೧೨೦೦ ಎಸ್
- ಮಲ್ಟಿಸ್ಟ್ರಾಡಾ[೨೦]
- ಮಲ್ಟಿಸ್ಟ್ರಾಡಾ ೯೫೦
- ಮಲ್ಟಿಸ್ಟ್ರಾಡಾ ೯೫೦ಎಸ್
- ಮಲ್ಟಿಸ್ಟ್ರಾಡಾ ವಿ೪(V4)
- ಮಲ್ಟಿಸ್ಟ್ರಾಡಾ ವಿ೪ ಎಸ್
- ಮಲ್ಟಿಸ್ಟ್ರಾಡಾ ವಿ೪ ಎಸ್ ಸ್ಪೋರ್ಟ್
- ಮಲ್ಟಿಸ್ಟ್ರಾಡಾ ೧೨೬೦ ಎಂಡ್ಯೂರೋ
- ಡಿಯಾವೆಲ್[೨೧]
- ಡಿಯಾವೆಲ್ ೧೨೬೦
- ಡಿಯಾವೆಲ್ ೧೨೬೦ ಎಸ್
- ಡಿಯಾವೆಲ್ ೧೨೬೦ ಲಂಬೋರ್ಘಿನಿ
- ಎಕ್ಸ್‌ಡಿಯಾವೆಲ್
- ಎಕ್ಸ್‌ಡಿಯಾವೆಲ್ ಎಸ್
- ಎಕ್ಸ್‌ಡಿಯಾವೆಲ್ ಬ್ಲ್ಯಾಕ್ ಸ್ಟಾರ್
- ಪಾನಿಗಾಲೆ[೨೨]
- ಪಾನಿಗಾಲೆ ೮೯೯
- ಪಾನಿಗಾಲೆ೯೫೯
- ಪಾನಿಗಾಲೆ ೧೧೯೯
- ಪಾನಿಗಾಲೆ ೧೨೯೯
- ಪಾನಿಗಾಲೆ ವಿ೨(V4)
- ಪಾನಿಗಾಲೆ ವಿ೪(V4)
- ಪಾನಿಗಾಲೆ ವಿ4 ಎಸ್
- ಪಾನಿಗಾಲೆ ವಿ೪(V4)ಎಸ್ಪಿ
- ಪಾನಿಗಾಲೆ ವಿ4 ಆರ್
- ಸೂಪರ್ಲೆಗ್ಗೆರಾ ವಿ೪
- ಸ್ಟ್ರೀಟ್‌ಫೈಟರ್[೨೩]
- ಸ್ಟ್ರೀಟ್‌ಫೈಟರ್ ವಿ೪(V4)
- ಸ್ಟ್ರೀಟ್‌ಫೈಟರ್ ವಿ೪(V4) ಎಸ್
- ಸ್ಟ್ರೀಟ್‌ಫೈಟರ್ ವಿ೨(V2)
- ಸೂಪರ್‌ಸ್ಪೋರ್ಟ್[೨೪]
- ಸೂಪರ್‌ಸ್ಪೋರ್ಟ್
- ಸೂಪರ್‌ಸ್ಪೋರ್ಟ್ ಎಸ್
- ಹೈಪರ್‌ಮೋಟಾರ್ಡ್[೨೫]
- ಹೈಪರ್ಮೋಟಾರ್ಡ್ ೯೫೦
- ಹೈಪರ್ಮೋಟಾರ್ಡ್ ೯೫೦ ಎಸ್ಪಿ
- ಹೈಪರ್ಮೋಟಾರ್ಡ್ ೯೫೦ ಆರ್‌ವಿಇ(RVE)
- ಸ್ಕ್ರ್ಯಾಂಬ್ಲರ್[೨೬]
- ಸ್ಕ್ರ್ಯಾಂಬ್ಲರ್ ೧೧೦೦ ಪ್ರೊ
- ಸ್ಕ್ರ್ಯಾಂಬ್ಲರ್ ೧೧೦೦ ಸ್ಪೋರ್ಟ್ ಪ್ರೊ
- ಸ್ಕ್ರ್ಯಾಂಬ್ಲರ್ ೧೧೦೦ ಡಾರ್ಕ್ ಪ್ರೊ
- ಸ್ಕ್ರಾಂಬ್ಲರ್ ನೈಟ್‌ಶಿಫ್ಟ್
- ಸ್ಕ್ರ್ಯಾಂಬ್ಲರ್ ಫುಲ್ ಥ್ರೊಟಲ್
- ಸ್ಕ್ರ್ಯಾಂಬ್ಲರ್ ಕೆಫೆ ರೇಸರ್
- ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್
- ಸ್ಕ್ರ್ಯಾಂಬ್ಲರ್ ಐಕಾನ್
- ಸ್ಕ್ರ್ಯಾಂಬ್ಲರ್ ಐಕಾನ್ ಡಾರ್ಕ್
- ಸ್ಕ್ರ್ಯಾಂಬ್ಲರ್ ಸಿಕ್ಸ್ಟಿ೨
ಮೋಟಾರ್ಸೈಕಲ್ ವಿನ್ಯಾಸದ ಇತಿಹಾಸ
[ಬದಲಾಯಿಸಿ]೧೯೭೦ ರಿಂದ ೯೦° ವಿ-ಟ್ವಿನ್ ಎಂಜಿನ್ ಅನ್ನು ಎಲ್ಲಾ ಡುಕಾಟಿಗಳಲ್ಲಿ ಬಳಸಲಾಗಿದೆ. ಡುಕಾಟಿಯು ೧೯೭೦ ರ ದಶಕದ ಮೊದಲು ಒಂದು, ಎರಡು, ಮೂರು ಅಥವಾ ನಾಲ್ಕು ಸಿಲಿಂಡರ್‌ಗಳೊಂದಿಗೆ ಇತರ ಎಂಜಿನ್ ಪ್ರಕಾರಗಳನ್ನು ಸಹ ತಯಾರಿಸಿದೆ. ಏಕ, ಡಬಲ್ ಮತ್ತು ಟ್ರಿಪಲ್ ಓವರ್ಹೆಡ್ ಕ್ಯಾಮ್ಶಾಫ್ಟ್ಗಳು, ಎರಡು-ಸ್ಟ್ರೋಕ್ ಮತ್ತು ಸಣ್ಣ ಡೀಸೆಲ್ ಎಂಜಿನ್‌ಗಳನ್ನು ತಯಾರಿಸಲಾಯಿತು. ಡೆಸ್ಮೊಸೆಡಿಸಿ ಮತ್ತು ೧೧೯೯ ಪ್ಯಾನಿಗಾಲ್ ಹೊರತುಪಡಿಸಿ ಪ್ರಸ್ತುತ ಡುಕಾಟಿ ಮೋಟಾರ್‌ಗಳಲ್ಲಿ ವಾಲ್ವ್‌ಗಳನ್ನು ಸ್ಟ್ಯಾಂಡರ್ಡ್ ವಾಲ್ವ್ ಕ್ಯಾಮ್ ಶಾಫ್ಟ್‌ನಿಂದ ಸಕ್ರಿಯಗೊಳಿಸಲಾಗುತ್ತದೆ. ಇದನ್ನು ನೇರವಾಗಿ ಮೋಟಾರ್‌ನಿಂದ ಚಾಲಿತ ಟೈಮಿಂಗ್ ಬೆಲ್ಟ್‌ನಿಂದ ತಿರುಗಿಸಲಾಗುತ್ತದೆ.
೧೯೬೦ ಮತ್ತು ೧೯೭೦ ರ ದಶಕಗಳಲ್ಲಿ, ಡುಕಾಟಿಯು ವ್ಯಾಪಕ ಶ್ರೇಣಿಯ ಸಣ್ಣ ಎರಡು-ಸ್ಟ್ರೋಕ್ ಬೈಕುಗಳನ್ನು ಉತ್ಪಾದಿಸಿತು. ಹೆಚ್ಚಿನ ಪ್ರಮಾಣದ ಕೆಲವು ಮಾದರಿಗಳನ್ನು ಯುನೈಟೆಡ್ ಸ್ಟೇಟ್ಸ್‌ಗೆ ರಫ್ತು ಮಾಡಲಾಯಿತು.
ಡುಕಾಟಿಯು ಈ ಕೆಳಗಿನ ಮೋಟಾರ್‌ಸೈಕಲ್ ಎಂಜಿನ್ ಪ್ರಕಾರಗಳನ್ನು ಉತ್ಪಾದಿಸಿದೆ:
- ಏಕ-ಸಿಲಿಂಡರ್
- ಪುಲ್ರೋಡ್ ಚಾಲಿತ, ೪೮ ಸಿಸಿ(cc) ಮತ್ತು ೬೫ ಸಿಸಿ(cc) (ಕುಸಿಯೊಲೊ)
- ಪುಶ್ರೋಡ್ ಚಾಲಿತ, ೯೮ ಮತ್ತು ೧೨೫ ಸಿಸಿ
- ಎರಡು-ಸ್ಟ್ರೋಕ್, ೫೦, ೫೦, ೯೦, ೧೦೦, ೧೨೫ ಸಿಸಿ
- ಬೆವೆಲ್ ಚಾಲಿತ, ಸ್ಪ್ರಿಂಗ್ ಕವಾಟ: ೯೮ ಸಿಸಿ, ೧೦೦ ಸಿಸಿ, ೧೨೫ ಸಿಸಿ, ೧೬೦ ಸಿಸಿ, ೧೭೫ ಸಿಸಿ, ೨೦೦ ಸಿಸಿ, ೨೩೯ ಸಿಸಿ, ೨೫೦ ಸಿಸಿ, ೩೫೦ ಸಿಸಿ, ೪೫೦ ಸಿಸಿ
- ಬೆವೆಲ್ ಚಾಲಿತ, ಡೆಸ್ಮೋಡ್ರೊಮಿಕ್ ಕವಾಟ: ೧೨೫ ಸಿಸಿ, ೨೩೯ ಸಿಸಿ, ೨೫೦ ಸಿಸಿ, ೩೫೦ ಸಿಸಿ ಮತ್ತು ೪೫೦ ಸಿಸಿ
- ಬೆಲ್ಟ್ ಚಾಲಿತ, ಡೆಸ್ಮೋಡ್ರೊಮಿಕ್ ಕವಾಟ: ೫೪೯/೫೭೨ ಸಿಸಿ ಸೂಪರ್ಮೊನೊ, ಕೇವಲ ೬೫ ಮಾಡಲ್ಪಟ್ಟಿದೆ.
- ಎರಡು- ಸಿಲಿಂಡರ್
- ಬೆವೆಲ್ ಆಕ್ಚುಯೇಟೆಡ್, ಸ್ಪ್ರಿಂಗ್ ವಾಲ್ವ್ ೯೦ ° ವಿ-ಟ್ವಿನ್: ೭೫೦ ಸಿಸಿ, ೮೬೦ ಸಿಸಿ
- ಬೆವೆಲ್ ಆಕ್ಚುಯೇಟೆಡ್, ಡೆಸ್ಮೊ ವಾಲ್ವ್ಡ್ ೯೦ ° ವಿ-ಟ್ವಿನ್: ೭೫೦ ಸಿಸಿ, ೮೬೦ ಸಿಸಿ, ೯೦೦ ಸಿಸಿ, ೯೭೩ ಸಿಸಿ(ಮಿಲ್ಲೆ)
- ಬೆವೆಲ್ ಚಾಲಿತ, ಡೆಸ್ಮೊ ಕವಾಟದ ಸಮಾನಾಂತರ ಅವಳಿ: ೧೨೫ ಸಿಸಿ
- ಚೈನ್ ಚಾಲಿತ, ಸ್ಪ್ರಿಂಗ್ ಕವಾಟದ ಸಮಾನಾಂತರ ಅವಳಿ: ೩೫೦ ಸಿಸಿ, ೫೦೦ ಸಿಸಿ(GTL)
- ಚೈನ್ ಚಾಲಿತ, ಡೆಸ್ಮೊ ಕವಾಟದ ಸಮಾನಾಂತರ ಅವಳಿ: ೫೦೦ ಸಿಸಿ(500SD)
- ಬೆಲ್ಟ್ ಚಾಲಿತ, ಡೆಸ್ಮೊ ವಾಲ್ವ್ಡ್ ೯೦ ° ವಿ-ಟ್ವಿನ್: ೧೯೮೬ ರಿಂದ ಬಹುತೇಕ ಎಲ್ಲಾ ಎಂಜಿನ್‌ಗಳು.
- ನಾಲ್ಕು- ಸಿಲಿಂಡರ್
- ಗೇರ್ ಚಾಲಿತ, ಡೆಸ್ಮೊ ವಾಲ್ವ್ಡ್ (ವಿ೪): ಮೂಲಮಾದರಿ ಡೆಸ್ಮೊಸೆಡಿಸಿ, ಮತ್ತು ಕಡಿಮೆ ಪ್ರಮಾಣದ ಉತ್ಪಾದನೆ ಡೆಸ್ಮೊಸೆಡಿಸಿ ಆರ್‌ಆರ್(RR), ೧,೫೦೦ ಮಾಡಲ್ಪಟ್ಟಿದೆ
- ಪುಶ್ರೋಡ್ ಚಾಲಿತ, ಸ್ಪ್ರಿಂಗ್ ವಾಲ್ವ್ಡ್ (ವಿ೪): ಅಪೊಲೊ ಮೂಲಮಾದರಿ, ಎರಡು ಮಾತ್ರ ಮಾಡಲ್ಪಟ್ಟಿದೆ.
ವ್ಯಾಪಾರೀಕರಣ
[ಬದಲಾಯಿಸಿ]ಡುಕಾಟಿಯು ವ್ಯಾಪಕ ಶ್ರೇಣಿಯ ಪರಿಕರಗಳು, ಜೀವನಶೈಲಿ ಉತ್ಪನ್ನಗಳು ಮತ್ತು ಸಹ-ಬ್ರಾಂಡೆಡ್ ಸರಕುಗಳನ್ನು ತಮ್ಮ ಲೋಗೋಗಳು ಮತ್ತು ವಿನ್ಯಾಸಗಳನ್ನು ಹೊಂದಿದೆ. ಕಂಪನಿಯು Tumi Inc. ನೊಂದಿಗೆ ಪರವಾನಗಿ ಒಪ್ಪಂದವನ್ನು ಹೊಂದಿದೆ. ೨೦೦೬ ರಲ್ಲಿ ಎಂಟು ಸಹ-ಬ್ರಾಂಡ್ ಲಗೇಜ್ ತುಣುಕುಗಳ ಸಂಗ್ರಹವನ್ನು ಪ್ರಾರಂಭಿಸಿತು.[೨೭]
ರೇಸಿಂಗ್ ಇತಿಹಾಸ
[ಬದಲಾಯಿಸಿ]೧೯೫೧ ರಲ್ಲಿ ಕ್ಯುಸಿಯೊಲೊ ಮೋಟಾರೀಕೃತ ಬೈಸಿಕಲ್ ಫ್ಯಾಕ್ಟರಿ ರೇಸರ್‌ಗಳ ವೇಗದ ದಾಖಲೆಗಳೊಂದಿಗೆ ಮೋಟಾರ್‌ಸ್ಪೋರ್ಟ್‌ನೊಂದಿಗಿನ ಡುಕಾಟಿಯ ಇತಿಹಾಸವು ಪ್ರಾರಂಭವಾಯಿತು.
ಮೋಟೋಜಿಪಿ(MotoGP) ವಿಶ್ವ ಚಾಂಪಿಯನ್‌ಶಿಪ್
[ಬದಲಾಯಿಸಿ]೨೦೦೩ ರಲ್ಲಿ ಡುಕಾಟಿ ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್‌ಸೈಕಲ್ ರೇಸಿಂಗ್‌ಗೆ ಮರುಸೇರ್ಪಡೆಗೊಂಡಿತು. ೨೩ ಸೆಪ್ಟೆಂಬರ್ ೨೦೦೭ ರಂದು, ಕೇಸಿ ಸ್ಟೋನರ್ ಗ್ರ್ಯಾಂಡ್ ಪ್ರಿಕ್ಸ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ಗೆದ್ದನು. ಇದು ಡುಕಾಟಿಯ ಮೊದಲ ಗ್ರ್ಯಾಂಡ್ ಪ್ರಿಕ್ಸ್ ವಿಶ್ವ ಚಾಂಪಿಯನ್‌ಶಿಪ್ ಆಗಿತ್ತು. ೨೦೦೭ ರಲ್ಲಿ, ಮೋಟೋಜಿಪಿ(MotoGP) ಇಂಜಿನ್ ಗಾತ್ರವನ್ನು ೮೦೦ ಸಿಸಿ (೪೯ cu in) ಗೆ ಇಳಿಸಿತು.
೨೦೦೯ ರಲ್ಲಿ, ಡುಕಾಟಿ ಮಾರ್ಲ್‌ಬೊರೊ ತಂಡವು ತಮ್ಮ ಡೆಸ್ಮೊಸೆಡಿಸಿ ಜಿಪಿ೯(GP9) ಅನ್ನು ಮಾಜಿ ವಿಶ್ವ ಚಾಂಪಿಯನ್‌ಗಳಾದ ಕೇಸಿ ಸ್ಟೋನರ್ ಮತ್ತು ನಿಕಿ ಹೇಡನ್ ಅವರೊಂದಿಗೆ ಪ್ರಚಾರ ಮಾಡಿತು.[೨೮] ೨೦೦೯ ರಲ್ಲಿ ತಂಡಕ್ಕಾಗಿ ಮಿಕಾ ಕಲ್ಲಿಯೊ ಮತ್ತು ನಿಕೊಲೊ ಕನೆಪಾ ಸವಾರಿ ಮಾಡುವುದರೊಂದಿಗೆ ಡುಕಾಟಿಯು ಪ್ರಮಾಕ್ ರೇಸಿಂಗ್‌ಗೆ ಗ್ರಾಹಕ ಬೈಕುಗಳನ್ನು ಸಹ ಸರಬರಾಜು ಮಾಡಿತು.[೨೯]
೨೦೧೩ ರಲ್ಲಿ, ಡುಕಾಟಿ ತಂಡವು ನಿಕಿ ಹೇಡನ್ ಮತ್ತು ಇಟಾಲಿಯನ್ ರೈಡರ್ ಆಂಡ್ರಿಯಾ ಡೊವಿಜಿಯೊಸೊ ಅವರೊಂದಿಗೆ ಸ್ಪರ್ಧಿಸಿತು.
೨೦೧೫ ರಲ್ಲಿ, ಡುಕಾಟಿ ತಂಡವು ಹೊಸ ರೇಸ್ ತಂಡದ ನಿರ್ದೇಶಕ ಗಿಗಿ ಡಾಲ್ ಇಗ್ನಾ ಮತ್ತು ಡೆಸ್ಮೊಸೆಡಿಸಿ ಜಿಪಿ೧೫(GP15) ರ ನಿಯಂತ್ರಣದಲ್ಲಿ ಇಬ್ಬರು ಇಟಾಲಿಯನ್ ರೈಡರ್‌ಗಳಾದ ಆಂಡ್ರಿಯಾ ಡೊವಿಜಿಯೊಸೊ ಮತ್ತು ಆಂಡ್ರಿಯಾ ಇಯಾನೋನ್ ಅವರೊಂದಿಗೆ ರೇಸ್ ಮಾಡಿತು.[೩೦] ೨೦೧೭ ಮತ್ತು ೨೦೧೮ ರಲ್ಲಿ, ಡುಕಾಟಿ ತಂಡದ ರೈಡರ್ ಆಂಡ್ರಿಯಾ ಡೊವಿಜಿಯೊಸೊ ತನ್ನ ಹೊಸ ಸಹ ಆಟಗಾರ ಜಾರ್ಜ್ ಲೊರೆಂಜೊ ಅವರೊಂದಿಗೆ ಸ್ಪರ್ಧಿಸಿದರು.[೩೧]
ವರ್ಷ | ಚಾಂಪಿಯನ್ | ಮೋಟಾರ್ ಸೈಕಲ್ |
---|---|---|
೨೦೦೭ | ಕೇಸಿ ಸ್ಟೋನರ್ | ಡುಕಾಟಿ ಡೆಸ್ಮೊಸೆಡಿಸಿ ಜಿಪಿ೭(GP7) |
೨೦೨೨ | ಫ್ರಾನ್ಸೆಸ್ಕೊ ಬಾಗ್ನಾಯಾ | ಡುಕಾಟಿ ಡೆಸ್ಮೊಸೆಡಿಸಿ ಜಿಪಿ೨೨(GP೨೨) |
೨೦೨೩ | ಫ್ರಾನ್ಸೆಸ್ಕೊ ಬಾಗ್ನಾಯಾ | ಡುಕಾಟಿ ಡೆಸ್ಮೊಸೆಡಿಸಿ ಜಿಪಿ೨೩(GP೨೩) |
ಸೂಪರ್ ಬೈಕ್ ವಿಶ್ವ ಚಾಂಪಿಯನ್‌ಶಿಪ್ (SBK)
[ಬದಲಾಯಿಸಿ]ಕಂಪನಿಯು ೧೬ ರೈಡರ್ಸ್ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದೆ. ೧೯ ತಯಾರಕರ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದೆ.
ಸೂಪರ್‌ಸ್ಪೋರ್ಟ್ ವಿಶ್ವ ಚಾಂಪಿಯನ್‌ಶಿಪ್
[ಬದಲಾಯಿಸಿ]ವರ್ಷ | ಚಾಂಪಿಯನ್ | ಮೋಟಾರ್ ಸೈಕಲ್ |
---|---|---|
೧೯೯೭ | ಪಾಲೊ ಕ್ಯಾಸೋಲಿ | ಡುಕಾಟಿ ೭೪೮ |
೨೦೨೩ | ನಿಕೊಲೊ ಬುಲೆಗಾ | ಪಾನಿಗಾಲೆ ವಿ೨(V2) |
ಎಫ್‌ಐಎಮ್(FIM) ಸೂಪರ್ಸ್ಟಾಕ್ ೧೦೦೦ ಕಪ್
[ಬದಲಾಯಿಸಿ]೨೦೦೮–೨೦೦೯, ೨೦೧೧ ಮತ್ತು ೨೦೧೬ ರ ತಯಾರಕರ ಚಾಂಪಿಯನ್‌ಶಿಪ್ ಅನ್ನು ಡುಕಾಟಿ ಗೆದ್ದಿದೆ.
ಬ್ರಿಟಿಷ್ ಸೂಪರ್ ಬೈಕ್ ಚಾಂಪಿಯನ್‌ಶಿಪ್
[ಬದಲಾಯಿಸಿ]ಡುಕಾಟಿಯು ಹನ್ನೆರಡು ಬಾರಿ ಬ್ರಿಟಿಷ್ ಸೂಪರ್ ಬೈಕ್ ಚಾಂಪಿಯನ್‌ಶಿಪ್ ಗೆದ್ದಿದೆ.
ಎಎಮ್‌ಎ(AMA) ಸೂಪರ್‌ಬೈಕ್ ಚಾಂಪಿಯನ್‌ಶಿಪ್
[ಬದಲಾಯಿಸಿ]೧೯೯೩ ರಲ್ಲಿ ಡೌಗ್ ಪೋಲೆನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ೧೯೯೪ ರಲ್ಲಿ ಟ್ರಾಯ್ ಕೋರ್ಸರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ವರ್ಷ | ಚಾಂಪಿಯನ್ | ಮೋಟಾರ್ ಸೈಕಲ್ |
---|---|---|
೧೯೯೩ | ಅಮೇರಿಕ ಸಂಯುಕ್ತ ಸಂಸ್ಥಾನ ಡೌಗ್ ಪೋಲೆನ್ | ಡುಕಾಟಿ ೮೮೮ |
1994 | ಟ್ರಾಯ್ ಕೋರ್ಸರ್ | ಡುಕಾಟಿ ೮೮೮ |
ಆಸ್ಟ್ರೇಲಿಯನ್ ಸೂಪರ್‌ಬೈಕ್ ಚಾಂಪಿಯನ್‌ಶಿಪ್
[ಬದಲಾಯಿಸಿ]ಫಾರ್ಮುಲಾ ಟಿಟಿ
[ಬದಲಾಯಿಸಿ]ಡುಕಾಟಿಯ ಮೊದಲ ವಿಶ್ವ ಪ್ರಶಸ್ತಿಯು ೧೯೭೮ ರ ಟಿಟಿ ಫಾರ್ಮುಲಾ ೧ ವಿಶ್ವ ಚಾಂಪಿಯನ್‌ಶಿಪ್ ಆಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ "Ducati Group: nel 2015 vendite, fatturato e risultato in crescita" [Ducati Group: sales in 2015, sales and earnings growth] (in ಇಟಾಲಿಯನ್). Ducati Motor Holding S.p.A. 3 ಮಾರ್ಚ್ 2016. Archived from the original on 18 ಮಾರ್ಚ್ 2017. Retrieved 9 ಆಗಸ್ಟ್ 2016.
- ↑ ೨.೦ ೨.೧ "Audi Interim Financial Report 2012" (PDF). AUDI AG. 23 ಜುಲೈ 2012. Archived from the original (PDF) on 3 ಆಗಸ್ಟ್ 2012. Retrieved 2 ಆಗಸ್ಟ್ 2012.
Effective July 19, 2012, the Audi Group acquired 100 percent of the voting rights in the motorcycle manufacturer Ducati Motor Holding S.p.A., Bologna (Italy) via Automobili Lamborghini S.p.A., Sant'Agata Bolognese (Italy), a subsidiary of AUDI AG for a purchase price of EUR 747 million.
- ↑ "1968 Ducati Brio 100". Classic Motorcycles by Sheldon's Emu. Archived from the original on 13 ನವೆಂಬರ್ 2021. Retrieved 22 ಮೇ 2020.
- ↑ "Mach 1". ducati.com. Archived from the original on 19 ಸೆಪ್ಟೆಂಬರ್ 2009. Retrieved 25 ಜನವರಿ 2007.
- ↑ "DUCATI MOTOR HOLDING SPA, Form 20-F, Annual and Transition Report (foreign private issuer), Filing Date Jun 30, 2004". secdatabase.com. Archived from the original on 15 ಮೇ 2018. Retrieved 14 ಮೇ 2018.
- ↑ "History of the Motorcycle". mecossemi.com. Archived from the original on 18 ಮಾರ್ಚ್ 2007. Retrieved 25 ಜನವರಿ 2007.
- ↑ Ian Falloon (10 ಆಗಸ್ಟ್ 2006). The Ducati Bible. Veloce Publishing. ISBN 978-1-84584-012-9. Archived from the original on 22 ಏಪ್ರಿಲ್ 2014. Retrieved 15 ಅಕ್ಟೋಬರ್ 2010.
- ↑ The Ducati Bible: 860, 900 & Mille, Ian Falloon Archived 22 April 2014 ವೇಬ್ಯಾಕ್ ಮೆಷಿನ್ ನಲ್ಲಿ.. Retrieved 21 January 2010.
- ↑ Chili sv (8 ಆಗಸ್ಟ್ 2008). "Ducati to be sold to Performance Motorcycles SpA, taken private – Hell For Leather". HellforLeathermagazine.com. Archived from the original on 16 ಜನವರಿ 2009. Retrieved 14 ಜೂನ್ 2009.
- ↑ Chili sv (8 ಆಗಸ್ಟ್ 2008). "Ducati to be sold to Performance Motorcycles SpA, taken private – Hell For Leather". HellforLeathermagazine.com. Archived from the original on 16 ಜನವರಿ 2009. Retrieved 14 ಜೂನ್ 2009.
- ↑ "History of the Two-Valve Twin". Ducati.com. Archived from the original on 2 ಡಿಸೆಂಬರ್ 2009. Retrieved 25 ಜನವರಿ 2008.
- ↑ "Desmo for Dummies". Ducati.com. Archived from the original on 24 ಜೂನ್ 2009. Retrieved 25 ಜನವರಿ 2008.
- ↑ Roland Brown (ಜುಲೈ–ಆಗಸ್ಟ್ 2011). "1975 Ducati 860GT". Motorcycle Classics. Archived from the original on 16 ಜುಲೈ 2011. Retrieved 18 ಜುಲೈ 2011.
- ↑ Salvadori, Clement (7 ಜನವರಿ 2016). "Retrospective: Ducati 860 GT and GTE: 1974–1975 | Rider Magazine". Archived from the original on 13 ನವೆಂಬರ್ 2021. Retrieved 22 ಮೇ 2020.
- ↑ "Desmo 2 Valve History". monsta.at. Archived from the original on 17 ಫೆಬ್ರವರಿ 2005. Retrieved 25 ಜನವರಿ 2008.
- ↑ "Ducati Official History (The 916)". Ducati Motor Holdings. Archived from the original on 16 ಮೇ 2008. Retrieved 22 ಜೂನ್ 2008.
- ↑ ೧೭.೦ ೧೭.೧ ೧೭.೨ "Previous Model Years". Ducati Motor Holding SpA. 2009. Archived from the original on 19 ಸೆಪ್ಟೆಂಬರ್ 2009. Retrieved 26 ಜೂನ್ 2009.
- ↑ "Monster". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Monster". Ducati Motor USA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Multistrada". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Diavel". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Panigale". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Streetfighter". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "SuperSport". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Hypermotard". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Scrambler". Ducati Motor Holding SpA. 2021. Archived from the original on 9 ಮಾರ್ಚ್ 2021. Retrieved 8 ಮಾರ್ಚ್ 2021.
- ↑ "Tumi Time: Tumi+Ducati Collection". Business Week. 24 ಜನವರಿ 2007. Archived from the original on 8 ಮಾರ್ಚ್ 2012. Retrieved 28 ಮಾರ್ಚ್ 2009.
- ↑ "Nicky Hayden joins Ducati". Crash.net. Crash Media Group. 15 ಸೆಪ್ಟೆಂಬರ್ 2008. Archived from the original on 19 ಆಗಸ್ಟ್ 2016. Retrieved 9 ಆಗಸ್ಟ್ 2016.
Hayden's Ducati move, which will see the 27-year-old line-up alongside 2007 world champion Casey Stoner, has been considered a done deal for months.
- ↑ "Pramac Racing announce Kallio and Canepa signings for 2009". MotoGP.com. Dorna Sports. 19 ಅಕ್ಟೋಬರ್ 2008. Archived from the original on 12 ಫೆಬ್ರವರಿ 2019. Retrieved 9 ಆಗಸ್ಟ್ 2016.
- ↑ McLaren, Peter (26 ಮಾರ್ಚ್ 2016). "Casey Stoner: 'We can tick the engine off our list...'". Crash.net. Crash Media Group. Archived from the original on 28 ಮಾರ್ಚ್ 2016. Retrieved 28 ಮಾರ್ಚ್ 2016.
"It's very, very quick!" Stoner said during his private test at the same Losail circuit on Monday.
- ↑ "Danilo Petrucci to team up with Andrea Dovizioso in the 2019 Ducati Team". www.ducati.com. Archived from the original on 7 ಆಗಸ್ಟ್ 2020. Retrieved 22 ಮೇ 2020.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 ಇಟಾಲಿಯನ್-language sources (it)
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Short description is different from Wikidata
- Use dmy dates from November 2021
- Articles with invalid date parameter in template
- Commons category link is on Wikidata
- Official website different in Wikidata and Wikipedia
- Articles with Curlie links
- ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ