ಕೆ. ರಾಧಾಕೃಷ್ಣನ್

ವಿಕಿಪೀಡಿಯ ಇಂದ
(ಡಾ. ಕೆ. ರಾಧಾಕೃಷ್ಣನ್ ಇಂದ ಪುನರ್ನಿರ್ದೇಶಿತ)
Jump to navigation Jump to search
Koppillil Radhakrishnan
K Radhakrishnan 2013 2.JPG
2013 ರಲ್ಲಿ ರಾಧಾಕೃಷ್ಣನ್
ಜನನ (1949-08-29) 29 August 1949 (age 69)
ಇರಿಂಜಲಕುಡಾ,
ಟ್ರಾವಂಕೂರ್-ಕೊಚ್ಚಿನ್,
ಡೊಮಿನಿಯನ್ ಆಫ್ ಇಂಡಿಯಾ
ಕಾರ್ಯಕ್ಷೇತ್ರಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ಸಂಶೋಧನೆ
ಸಂಸ್ಥೆಗಳುವಿಎಸ್ಎಸ್ಸಿ, ಇಸ್ರೋ
ಅಭ್ಯಸಿಸಿದ ವಿದ್ಯಾಪೀಠಐಐಟಿ ಖರಗ್ಪುರ್ (ಪಿಎಚ್ಡಿ, 2000)
ಐಐಎಂ ಬೆಂಗಳೂರು (ಪಿಜಿಡಿಎಂ, 1976)
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು , ತ್ರಿಶೂರ್ | ಸರ್ಕಾರಿ ಎಂಜಿನ್ ಕಾಲೇಜ್ ತ್ರಿಶ್ಶುರ್]] (ಬಿಎಸ್ಸಿ ಎಂಜಿನ್, 1970)
ಪ್ರಸಿದ್ಧಿಗೆ ಕಾರಣಚಂದ್ರಯಾನ, MOM
ಗಮನಾರ್ಹ ಪ್ರಶಸ್ತಿಗಳುಪದ್ಮಭೂಷಣ (2014)[೧]

ಡಾ. ಕೊಪ್ಪಳ್ಳಿಲ್ ರಾಧಾಕೃಷ್ಣನ್ ಒಬ್ಬ ಸರ್ವಶ್ರೇಷ್ಠ ತಂತ್ರಪ್ರವೀಣರಾಗಿದ್ದಾರೆ; ಸಕಾರಾತ್ಮಕ ಮನೋಭಾವದ ಸಮರ್ಥ ಮತ್ತು ದಕ್ಷ ನಿರ್ವಾಹಕ; ಮತ್ತು ಅಪರೂಪದ ಕೌಶಲ್ಯದ ಸ್ಪೂರ್ತಿದಾಯಕ ನಾಯಕರು.[೨][೩][೪][೫]

ಜೀವನ[ಬದಲಾಯಿಸಿ]

ಡಾ ರಾಧಾಕೃಷ್ಣನ್ ಕೇರಳದಲ್ಲಿರುವ ಇರಿಂಜಲಕುಡ ಎಂಬ ಊರಲ್ಲಿ, ಆಗಸ್ಟ್ ೨೯, ೧೯೪೯ ರಂದು ಜನಿಸಿದರು. ಅವರು ಕೇರಳ ವಿಶ್ವವಿದ್ಯಾನಿಲಯದಿಂದ (೧೯೭೦) ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ, ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆ, ಬೆಂಗಳೂರಿನಿಂದ (೧೯೭೬) ತಮ್ಮ ಪಿಜಿಡಿಎಮಎಂ ಪೂರ್ಣಗೊಳಿಸಿದರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರದಿಂದ "ಭಾರತೀಯ ಭೂ ವೀಕ್ಷಣೆಯ ವ್ಯವಸ್ಥೆ ಕೆಲವು ಸ್ಟ್ರಾಟಜೀಸ್" ಶಿರೋನಾಮೆಯ ಜೀವನ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದರು.

ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಏವಿಯಾನಿಕ್ಸ್ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು, ಅವರು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಗಳ ಅನ್ವಯಗಳು ಮತ್ತು ಬಾಹ್ಯಾಕಾಶ ಕಾರ್ಯಕ್ರಮ ನಿರ್ವಹಣೆಯ ಕ್ಷೇತ್ರಗಳಲ್ಲಿ ಇಸ್ರೋದಲ್ಲಿ ಹಲವು ನಿರ್ಧಾರಕ ಸ್ಥಾನಮಾನಗಳನ್ನು ಹೊಂದಿದ್ದರು. ಅವರು ಭಾರತೀಯ ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದರು. ಅವರು ಇಂಟರ್ಗವರ್ನಮೆಂಟಲ್ ಓಷನೋಗ್ರಫಿಕ್ ಕಮಿಷನ್‍ನ ಉಪಾಧ್ಯಕ್ಷರಾಗಿದ್ದರು. ಹಿಂದೂ ಮಹಾಸಾಗರದ ಜಾಗತಿಕ ಸಾಗರ ವೀಕ್ಷಣಾ ವ್ಯವಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 2006 ರಿಂದ ಅವರು ಬಾಹ್ಯಾಕಾಶದ ಶಾಂತಿಯುತ ಬಳಕೆ ಕುರಿತ ವಿಶ್ವಸಂಸ್ಥೆ ಸಮಿತಿಯ ಭಾರತೀಯ ನಿಯೋಗದ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ೨೦೦೧-೨೦೦೫ ರಿಂದ ಯುನೆಸ್ಕೋದ ಅಂತರ ಸರ್ಕಾರಿ ಸಮುದ್ರಶಾಸ್ತ್ರೀಯ ಆಯೋಗದ ಉಪಾಧ್ಯಕ್ಷರಾಗಿದ್ದರು. ಜೊತೆಗೆ ಅವರು ಕರ್ನಾಟಕ ಸಂಗೀತದಲ್ಲಿ ನಿಪುಣ ಗಾಯಕ ಮತ್ತು ಕಥಕ್ಕಳಿ ಉತ್ಸಾಹಿ. ೨೦೧೪ ರಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಪ್ರಚಂಡ ಕೊಡುಗೆಗಾಗಿ ಪದ್ಮ ಭೂಷಣ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಡಾ ರಾಧಾಕೃಷ್ಣನ್ ಚಂದ್ರಯಾನ ಕಾರ್ಯಾಚರಣೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.[೬]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

Media related to K. Radhakrishnan at Wikimedia Commons

Government offices
ಪೂರ್ವಾಧಿಕಾರಿ
ಜಿ. ಮಾಧವನ್ ನಾಯರ್
ಇಸ್ರೋ ಅಧ್ಯಕ್ಷ
2009–2014
ಉತ್ತರಾಧಿಕಾರಿ
ಶೈಲೇಶ್ ನಾಯಕ್