ವಿಷಯಕ್ಕೆ ಹೋಗು

ಡಾರ್ಜಿಲಿಂಗ್ ಚಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox Tea ಭಾರತದ, ಪಶ್ಚಿಮ ಬಂಗಾಳಡಾರ್ಜಿಲಿಂಗ್ ಪ್ರದೇಶದಲ್ಲಿ ಬೆಳೆಯಲಾಗುವ ಡಾರ್ಜಿಲಿಂಗ್ ಚಹಾ , ಸಾಂಪ್ರದಾಯಿಕವಾಗಿ ಇತರ ಎಲ್ಲ ಕಪ್ಪು ಚಹಾಗಳಿಗಿಂತ ಅತ್ಯುತ್ಕೃಷ್ಟವಾದುದೆಂದು ಗುರುತಿಸಲ್ಪಟ್ಟಿದ್ದು, ವಿಶೇಷವಾಗಿ ಯುನೈಟೆಡ್ ಕಿಂಗ್ಡಮ್ ಹಾಗು ಹಿಂದಿನ ಬ್ರಿಟಿಷ್ ಸಾಮ್ರಾಜ್ಯವು ಒಳಗೊಂಡಿದ್ದ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಸರಿಯಾದ ವಿಧಾನದಲ್ಲಿ ಇದನ್ನು ತಯಾರಿಸಿದಾಗ ಇದು ಒಂದು ಪುಷ್ಪದ ಸುಗಂಧದೊಂದಿಗೆ ತೆಳುವಾದ, ನಸು-ಬಣ್ಣದ ಮದ್ಯವನ್ನು ಉತ್ಪಾದಿಸುತ್ತದೆ. ಅದರ ಕಂಪು ಒಗುರಾದ ತೊಗಟೆಯ ಒಂದು ವೈಶಿಷ್ಟ್ಯವನ್ನು ಪ್ರದರ್ಶಿಸುತ್ತದೆ, ಜೊತೆಗೆ ಇದರ ಒಂದು ಕಸ್ತೂರಿಯಂತಹ ಸುಗಂಧವನ್ನು ಚಹಾ ರಸಜ್ಞರು ಸಾಮಾನ್ಯವಾಗಿ "ಮಸ್ಕಟೆಲ್"(ಕಸ್ತೂರಿ ದ್ರಾಕ್ಷಿಯನ್ನು ಒಣಗಿಸಿ ಮಾಡಿದ ಒಣದ್ರಾಕ್ಷಿ) ಎಂದು ಕರೆಯುತ್ತಾರೆ.

ಡಾರ್ಜಿಲಿಂಗ್ ಕಪ್ಪು ಚಹಾವನ್ನು "ಕಪ್ಪು ಚಹಾ"ವೆಂದು ವಾಣಿಜ್ಯ ರೀತಿಯಲ್ಲಿ ವ್ಯಾಪಾರ ಮಾಡಿದರೂ ಸಹ, ಬಹುತೇಕವಾಗಿ ಅವುಗಳಲ್ಲಿ ಎಲ್ಲವೂ ಅಸಂಪೂರ್ಣವಾಗಿ ಆಕ್ಸಿಡೇಷನ್ ನ್ನು ಹೊಂದಿರುತ್ತವೆ (<90%), ಈ ರೀತಿಯಾಗಿ ಇವುಗಳು ತಾಂತ್ರಿಕವಾಗಿ ಕಪ್ಪು ಚಹಾಕ್ಕಿಂತ ಹೆಚ್ಚು ಊಲಾಂಗ್ ಚಹಾ (ಒಂದು ಬಗೆ ಪರಿಷ್ಕರಿಸಿದ ಕಪ್ಪು ಚಹಾ) ಆಗಿರುತ್ತವೆ.

ಭಾರತದ ಹೆಚ್ಚಿನ ಚಹಾಗಳ ಮಾದರಿಯಲ್ಲಿ, ಡಾರ್ಜಿಲಿಂಗ್ ಚಹಾವು ಸಾಧಾರಣವಾಗಿ ಅಸ್ಸಾಮಿನ ದೊಡ್ಡ-ಎಲೆಗಳಿಗಿಂತ ಹೆಚ್ಚಾಗಿ (C. ಸಿನೆನ್ಸಿಸ್ ವರ್. ಅಸ್ಸಾಮಿಕ ) ಸಣ್ಣ-ಎಲೆಗಳ ಚೈನೀಸ್ ಮಾದರಿಯಾದ ಕ್ಯಾಮೆಲ್ಲಿಯ ಸಿನೆನ್ಸಿಸ್ ವರ್. ಸಿನೆನ್ಸಿಸ್ ನನ್ನು ಹೋಲುತ್ತದೆ. ಸಾಂಪ್ರದಾಯಿಕವಾಗಿ ಡಾರ್ಜಿಲಿಂಗ್ ಚಹಾವನ್ನು ಕಪ್ಪು ಚಹಾವನ್ನಾಗಿ ತಯಾರಿಸಲಾಗುತ್ತದೆ; ಆದಾಗ್ಯೂ, ಡಾರ್ಜಿಲಿಂಗ್ ಊಲಾಂಗ್ ಹಾಗು ಹಸಿರು ಚಹಾಗಳ ತಯಾರಿಕೆಯು ಸಾಮಾನ್ಯವಾಗಿ ಕಂಡುಬರುವುದರ ಜೊತೆಗೆ ಸುಲಭವಾಗಿ ದೊರಕುತ್ತವೆ, ಇದಲ್ಲದೆ ಹೆಚ್ಚುತ್ತಿರುವ ಚಹಾ ತೋಟಗಳೂ ಸಹ ಬಿಳಿ ಚಹಾಗಳನ್ನು ಬೆಳೆಯುತ್ತಿವೆ.

ಇತಿಹಾಸ

[ಬದಲಾಯಿಸಿ]

ಭಾರತದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಚಹಾವನ್ನು 1841ರ ಸುಮಾರಿಗೆ Dr. ಕ್ಯಾಂಪ್ಬೆಲ್ ಬೆಳೆಯಲು ಪ್ರಾರಂಭಿಸಿದರು. ಈತ ಇಂಡಿಯಾ ಾ ನ್ ಮೆಡಿಕಲ್ ಸರ್ವೀಸ್ ನಲ್ಲಿ ಒಬ್ಬ ಸಿವಿಲ್ ಸರ್ಜನ್ ಆಗಿದ್ದರು. ಕ್ಯಾಂಪ್ಬೆಲ್ ರನ್ನು 1839ರಲ್ಲಿ ಡಾರ್ಜಿಲಿಂಗ್ ಗೆ ವರ್ಗಾವಣೆ ಮಾಡಲಾಗಿತ್ತು ಜೊತೆಗೆ ಇವರು ಚೀನಾದಿಂದ ತಂದಂತಹ ಬೀಜಗಳನ್ನು ನೆಡುವುದರೊಂದಿಗೆ ಪ್ರಯೋಗವನ್ನು ನಡೆಸಿದರು, ಕ್ಯಾಂಪ್ಬೆಲ್ ರನ್ನು ಒಳಗೊಂಡಂತೆ ಇತರರು 1840ರ ಸುಮಾರಿಗೆ ಈ ರೂಢಿಯನ್ನು ಮುಂದುವರೆಸಿದರು. ಆ ಅವಧಿಯಲ್ಲಿ ಸರಕಾರವು ಚಹಾ ಸಸಿತೋಟವನ್ನೂ ಸಹ ಸ್ಥಾಪಿಸಿತು. ಇಸವಿ 1850ರ ಸುಮಾರಿಗೆ ವ್ಯಾಪಾರಿ ಶೋಷಣೆಯು ಪ್ರಾರಂಭವಾಯಿತು.

ಹೆಸರು

[ಬದಲಾಯಿಸಿ]
ಚಿತ್ರ:Darjeeling tea Logo.gif
ಡಾರ್ಜಿಲಿಂಗ್ ಟೀ ಅಸೋಸಿಯೇಶನ್ ನ ಲಾಂಛನ.ಮಧ್ಯ ಭಾಗವು ವಾಸ್ತವವಾಗಿ ಪ್ರಮಾಣೀಕರಣ ಚಿಹ್ನೆ.

ಟೀ ಬೋರ್ಡ್ ಆಫ್ ಇಂಡಿಯಾದ ಪ್ರಕಾರ - "ಡಾರ್ಜಿಲಿಂಗ್ ಚಹಾ" ಎಂದರೆ: ಚಹಾಗಳನ್ನು ಕೃಷಿಮಾಡಿ, ಬೆಳೆಸಿ, ಉತ್ಪನ್ನ ಮಾಡಿ, ತಯಾರಿಸಿ ಹಾಗು ಚಹಾ ತೋಟಗಳಲ್ಲಿ ಸಂಸ್ಕರಿಸುವುದೇ ಆಗಿದೆ (ಕೆಳಗೆ ನೀಡಲಾಗಿರುವ 'ಎಸ್ಟೇಟ್ಸ್' ವಿಭಾಗವನ್ನು ನೋಡಿ) ಸದರ್ ಸಬ್-ಡಿವಿಷನ್ ನ ಗುಡ್ಡಗಾಡಿನ ಪ್ರದೇಶಗಳು, ಸಮಬೇಯೊಂಗ್ ಚಹಾ ಎಸ್ಟೇಟ್ ನ್ನು ಒಳಗೊಂಡ ಕ್ಯಾಲಿಮ್ಪಾಂಗ್ ಸಬ್-ಡಿವಿಷನ್ ನ ಕೇವಲ ಗುಡ್ಡಗಾಡಿನ ಪ್ರದೇಶಗಳು, ಅಂಬಿಯೋಕ್ ಚಹಾ ಎಸ್ಟೇಟ್, ಮಿಷನ್ ಹಿಲ್ ಚಹಾ ಎಸ್ಟೇಟ್ ಹಾಗು ಕುಮೈ ಚಹಾ ಎಸ್ಟೇಟ್ ಹಾಗು ಕುರ್ಸೆಯೊಂಗ್ ಸಬ್-ಡಿವಿಷನ್ ನ 20,21,23,24,29,31 ಹಾಗು 33 ನೇ ಆಡಳಿತ ಕ್ಷೇತ್ರದಲ್ಲಿನ ಪ್ರದೇಶಗಳನ್ನು ಹೊರತುಪಡಿಸಿ, ನ್ಯೂ ಚುಮ್ಟ ಚಹಾ ಎಸ್ಟೇಟ್ ನ ಸಿಲಿಗುರಿ ಸಬ್ ಡಿವಿಷನ್ ನ್ನು ಒಳಗೊಂಡಂತೆ, ಭಾರತದ ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ಕುರ್ಸೆಯೊಂಗ್ ಸಬ್ ಡಿವಿಷನ್ ನ ಕುರ್ಸೆಯೊಂಗ್ ಪೋಲಿಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಬರುವ ಸಿಮುಲ್ಬರಿ ಹಾಗು ಮರಿಯೋನ್ಬರಿ ಚಹಾ ಎಸ್ಟೇಟ್ ಗಳಲ್ಲಿ ಚಹಾವನ್ನು 4000 ft ಚಿತ್ರಸದೃಶವಾದ ಕಡಿದಾದ ಇಳಿಜಾರುಗಳಲ್ಲಿ ಬೆಳೆಯಲಾಗುತ್ತದೆ.[] ಮೇಲೆ ಹೇಳಲಾದಂತಹ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಕಾರ್ಖಾನೆಯಲ್ಲಿ ಚಹಾವನ್ನು ಸಂಸ್ಕರಿಸಿ ತಯಾರಿಸಲಾಗುತ್ತದೆ. ಇದರಿಂದ ತೆಗೆದ ಕಷಾಯವು ಬಹಳ ವಿಶಿಷ್ಟವಾಗಿರುತ್ತದೆ, ಅಲ್ಲದೆ ಸ್ವಾಭಾವಿಕವಾಗಿ ನಸು ಚಹಾ ಮದ್ಯದ ಪರಿಮಳ ಹಾಗು ಸ್ವಾದವನ್ನು ಹೊಂದಿರುತ್ತದೆ ಜೊತೆಗೆ ದ್ರವದಲ್ಲಿ ನೆನೆಸಲ್ಪಟ್ಟ ಎಲೆಯು ಒಂದು ವಿಶಿಷ್ಟವಾದ ಪರಿಮಳವನ್ನು ಹೊಂದಿರುತ್ತದೆ.

ಕಲಬೆರಕೆ ಹಾಗು ನಕಲಿ ತಯಾರಿಕೆಯು ವಿಶ್ವವ್ಯಾಪಿ ಚಹಾ ವ್ಯಾಪಾರಕ್ಕೆ ಎದುರಾಗುವ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ; ಡಾರ್ಜಿಲಿಂಗ್ ಚಹಾವೆಂದು ವಿಶ್ವವ್ಯಾಪಿಯಾಗಿ ಪ್ರತಿ ವರ್ಷವೂ ಮಾರಾಟವಾಗುವ ಚಹಾ 40,000 ಟನ್ ಗಳಷ್ಟಿದೆ, ಆದರೆ ವಾರ್ಷಿಕವಾಗಿ ಸ್ವತಃ ಡಾರ್ಜಿಲಿಂಗ್ ಚಹಾ ತಯಾರಿಕೆಯು, ಸ್ಥಳೀಯ ಬಳಕೆಯನ್ನು ಒಳಗೊಂಡು ಕೇವಲ 10,000 ಟನ್ ಗಳೆಂದು ಅಂದಾಜಿಸಲಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ಟೀ ಬೋರ್ಡ್ ಆಫ್ ಇಂಡಿಯಾ ಡಾರ್ಜಿಲಿಂಗ್ ಪ್ರಮಾಣೀಕೃತ ಚಿಹ್ನೆ ಹಾಗು ಲಾಂಛನವನ್ನು ಜಾರಿಗೆ ತಂದಿದೆ.[] ಈ ಚಹಾ ಹೆಸರಿನ ಸುರಕ್ಷತೆಯು, ಹಲವು ಯುರೋಪಿಯನ್ ಚೀಸ್ ಗಳಿಗೆ EU ಬಳಸುವ ಮೂಲ ಹೆಸರಿನ ಸುರಕ್ಷತೆಗೆ ಸದೃಶವಾಗಿದೆ.

ಫ್ರಾನ್ಸ್ ನಲ್ಲಿ ತಯಾರಾಗುವ ಷ್ಯಾಂಪೇನ್ ಇತರ ಕಡೆಗಳಲ್ಲಿ ಹೇಗೆ ತಯಾರಿಕೆಯಾಗುವುದಿಲ್ಲವೋ ಅದೇ ರೀತಿ ಡಾರ್ಜಿಲಿಂಗ್ ಚಹಾವನ್ನು ವಿಶ್ವದ ಬೇರೆಡೆಗಳಲ್ಲಿ ಬೆಳೆಯಲು ಅಥವಾ ತಯಾರಿಸಲು ಸಾಧ್ಯವಿಲ್ಲ.

ವೈವಿಧ್ಯತೆಗಳು

[ಬದಲಾಯಿಸಿ]
ಡಾರ್ಜಿಲಿಂಗ್ ಚಹಾದ ಮೊದಲ ಚಿಗುರು
ನೆನೆಸಿದ ನಂತರ

ಸಾಂಪ್ರದಾಯಿಕವಾಗಿ, ಡಾರ್ಜಿಲಿಂಗ್ ಚಹಾಗಳನ್ನು ಕಪ್ಪು ಚಹಾದ ಒಂದು ಮಾದರಿಯೆಂದು ವಿಂಗಡಣೆ ಮಾಡಲಾಗಿದೆ. ಆದಾಗ್ಯೂ, ನೂತನ ಡಾರ್ಜಿಲಿಂಗ್ ಶೈಲಿಯು ಒಂದು ತೀರ ಸುರುಟಿಕೊಂಡ ಎಲೆಗಳನ್ನು ಬಳಸಿಕೊಳ್ಳುತ್ತವೆ(ಕಳೆಗುಂದಿದ ನಂತರ 35–40 %ನಷ್ಟು ತೂಕದ ಎಲೆಯು ಉಳಿಯುತ್ತದೆ), ಇದರ ಪರಿಣಾಮವಾಗಿ ಈ ಹೆಸರಿನ ಹಲವು ಉತ್ತಮ ಚಹಾಗಳಿಗೆ ಅಸಂಪೂರ್ಣವಾದ ಆಕ್ಸಿಡೇಷನ್ ಉಂಟಾಗುತ್ತದೆ, ಇದು ತಾಂತ್ರಿಕವಾಗಿ ಅವುಗಳಿಗೆ ಊಲೊಂಗ್ ನ ಒಂದು ಬಗೆಯ ಮಾದರಿಗೆ ಕಾರಣವಾಗುತ್ತದೆ. ಹಲವು ಡಾರ್ಜಿಲಿಂಗ್ ಚಹಾಗಳೂ ಸಹ ಹಸಿರು, ಊಲೊಂಗ್, ಹಾಗು ಕಪ್ಪು ಮಟ್ಟಗಳಿಂದ ಆಕ್ಸಿಡೀಕರಣಗೊಂಡ ಚಹಾಗಳ ಒಂದು ಸಂಮಿಶ್ರಣವಾಗಿದೆ.

  • ಮೊದಲ ಚಿಗುರು ವಸಂತ ಕಾಲದ ಮಳೆಯ ಅನಂತರ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಸಂಗ್ರಹಿಸಲಾಗುತ್ತದೆ, ಜೊತೆಗೆ ಇವುಗಳು ಒಂದು ಸೌಮ್ಯವಾದ, ಬಹಳ ನಸು ಬಣ್ಣ, ಪರಿಮಳ, ಹಾಗು ತೀಕ್ಷ್ಣವಲ್ಲದ ಒಗರನ್ನು ಹೊಂದಿರುತ್ತದೆ.
  • ಇನ್ ಬಿಟ್ವೀನ್ ಎಂದು ಕರೆಯಲ್ಪಡುವ ಚಿಗುರನ್ನು, ಎರಡು "ಚಿಗುರು" ಅವಧಿಗಳ ನಡುವಿನಲ್ಲಿ ಸಂಗ್ರಹಿಸಲಾಗುತ್ತದೆ.
  • ಎರಡನೇ ಚಿಗುರು ನ್ನು ಜೂನ್ ತಿಂಗಳಲ್ಲಿ ಸಂಗ್ರಹಿಸಲಾಗುತ್ತದೆ ಹಾಗು ಇದು ಒಂದು ಅಂಬರಿನಂತಹ, ಬಹಳ ಸಾರವತ್ತಾದ, ಮಸ್ಕಟೆಲ್-ಸ್ವಾದದ ಪೇಯ.
  • ಮಾನ್ಸೂನ್ ಅಥವಾ ಮಳೆ ಗಾಲದ ಚಹಾಗಳನ್ನು ಮಾನ್ಸೂನ್ ನಲ್ಲಿ (ಅಥವಾ ಮಳೆಗಾಲದಲ್ಲಿ) ಎರಡನೇ ಚಿಗುರಿನ ಅವಧಿಯಲ್ಲಿ ಹಾಗು ಶರತ್ಕಾಲದ ನಡುವೆ ಸಂಗ್ರಹಿಸಲಾಗುತ್ತದೆ, ಇದು ಕಡಿಮೆ ಕಳೆಗುಂದಿದ ಎಲೆಗಳನ್ನು ಹೊಂದಿರುವುದರ ಪರಿಣಾಮವಾಗಿ ಹೆಚ್ಚು ಆಕ್ಸಿಡೀಕರಣಗೊಂಡಿರುತ್ತದೆ, ಜೊತೆಗೆ ಸಾಮಾನ್ಯವಾಗಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ವಿರಳವಾಗಿ ರಫ್ತು ಮಾಡಲಾಗುತ್ತದೆ, ಹಾಗು ಸಾಮಾನ್ಯವಾಗಿ ಮಸಾಲ ಚಾಯ್ ನಲ್ಲಿ ಬಳಸಲಾಗುತ್ತದೆ.
  • ಶರತ್ಕಾಲದ ಚಿಗುರುನ್ನು ಮಳೆಗಾಲದ ನಂತರ ಶರತ್ಕಾಲದಲ್ಲಿ ಸಂಗ್ರಹಿಸಲಾಗುತ್ತದೆ, ಜೊತೆಗೆ ಇದು ಸ್ವಲ್ಪಮಟ್ಟಿಗೆ ಕಡಿಮೆ ರುಚಿಯ ಜೊತೆಗೆ ಕಡಿಮೆ ತೀಕ್ಷ್ಣತೆಯನ್ನು ಪಡೆದಿರುತ್ತದೆ, ಆದರೆ ಬಹಳ ಸಾರವತ್ತತೆಯನ್ನು ಹಾಗು ಗಾಢ ಬಣ್ಣವನ್ನು ಹೊಂದಿರುತ್ತದೆ.

ಶ್ರೇಣಿಗಳು

[ಬದಲಾಯಿಸಿ]

ಡಾರ್ಜಿಲಿಂಗ್ ಚಹಾಗಳು ಮಾರಾಟವಾದಾಗ, ಅವುಗಳನ್ನು ಅವುಗಳ ಆಕಾರ ಹಾಗು ಗುಣಮಟ್ಟದ ಮೇಲೆ ಅವುಗಳ ಮಟ್ಟವನ್ನು ನಿರ್ಧರಿಸಲಾಗುತ್ತದೆ. ಈ ಶ್ರೇಣಿಗಳನ್ನು ನಾಲ್ಕು ಮೂಲಭೂತ ಗುಂಪುಗಳಾಗಿ ವಿಂಗಡಿಸಲಾಗಿದೆ: ಸಂಪೂರ್ಣ ಎಲೆ, ತುಂಡಾದ ಎಲೆ, ಫಾನ್ನಿಂಗ್ಸ್, ಹಾಗು ಪುಡಿ.

ಸಂಪೂರ್ಣ ಎಲೆ

  • SFTGFOP : ಸೂಪರ್ ಫೈನ್ ಟಿಪ್ಪಿ ಗೋಲ್ಡನ್ ಫ್ಲವರಿ ಆರೆಂಜ್ ಪೆಕೊಯೆ, ಇದು ನೋಡಲು ಉದ್ದವಾದ ಹಾಗು ತಂತಿಯಂತಿರುವ ಹಲವು ಎಲೆಮೊಗ್ಗುಗಳನ್ನು ಒಳಗೊಂಡಿರುವುದಕ್ಕೆ ಸೂಚಿತವಾಗಿದೆ. ಮದ್ಯವು ನಸು ಬಣ್ಣವನ್ನು ಹೊಂದಿರುತ್ತದೆ.
  • FTGFOP : ಫೈನ್ ಟಿಪ್ಪಿ ಗೋಲ್ಡನ್ ಫ್ಲವರಿ ಆರೆಂಜ್ ಪೆಕೊಯೆ.
  • TGFOP : ಟಿಪ್ಪಿ ಗೋಲ್ಡನ್ ಫ್ಲವರಿ ಆರೆಂಜ್ ಪೆಕೊಯೆ

ತುಂಡಾದ ಎಲೆಯು ಸಣ್ಣ ಚಹಾ ಎಲೆಗಳನ್ನು ಅಥವಾ ದೊಡ್ಡ ಎಲೆಗಳ ತುಂಡುಗಳನ್ನು ಒಳಗೊಂಡಿರುತ್ತವೆ.

  • FTGBOP : ಫೈನ್ ಟಿಪ್ಪಿ ಗೋಲ್ಡನ್ ಬ್ರೋಕನ್ ಆರೆಂಜ್ ಪೆಕೊಯೆ.
  • TGBOP : ಟಿಪ್ಪಿ ಗೋಲ್ಡನ್ ಬ್ರೋಕನ್ ಆರೆಂಜ್ ಪೆಕೊಯೆ
  • FBOP : ಫ್ಲವರಿ ಬ್ರೋಕನ್ ಆರೆಂಜ್ ಪೆಕೊಯೆ
  • BOP : ಬ್ರೋಕನ್ ಆರೆಂಜ್ ಪೆಕೊಯೆ.

ಫಾನ್ನಿಂಗ್ ಗಳು ತುಂಡಾದ ಎಲೆಗಳಿಗಿಂತ ಇನ್ನೂ ಸಣ್ಣ ಗಾತ್ರದ ಎಲೆಗಳನ್ನು ಹೊಂದಿರುತ್ತದೆ.

  • GFOF : ಗೋಲ್ಡನ್ ಫ್ಲವರಿ ಆರೆಂಜ್ ಫಾನ್ನಿಂಗ್ಸ್.
  • GOF : ಗೋಲ್ಡನ್ ಆರೆಂಜ್ ಫಾನ್ನಿಂಗ್ಸ್.

ಡಸ್ಟ್ ಟೀಗಳು ವರ್ಗಾವಣೆಯಲ್ಲಿ ಕಡಿಮೆ ದರ್ಜೆಯನ್ನು ಹೊಂದಿರುತ್ತವೆ, ಇವು ಚಹಾ ಎಲೆಗಳ ಸಣ್ಣ ತುಂಡುಗಳು ಹಾಗು ಚಹಾ ಪುಡಿಯನ್ನು ಒಳಗೊಂಡಿರುತ್ತವೆ.

  • D : ಡಸ್ಟ್

ಚಹಾ ತೋಟಗಳು

[ಬದಲಾಯಿಸಿ]
ಮೌಂಟ್ ಕಾಂಚನ್ಜುಂಗಾ,3° ಎಂಟು-ಸಾವಿರ ಅಡಿ ಎತ್ತರದಲ್ಲಿದೆ ಹಾಗು ಡಾರ್ಜಿಲಿಂಗ್ ನಗರವು ಟೈಗರ್ ಹಿಲ್ ನಿಂದ ಕಂಡುಬರುತ್ತದೆ
ಡಾರ್ಜಿಲಿಂಗ್ ಚಹಾ ತೋಟ
ರಾಕ್ ಗಾರ್ಡನ್ ಮಾರ್ಗ ಮಧ್ಯದಲ್ಲಿ ಸಿಗುವ ಚಹಾ ತೋಟ, ಡಾರ್ಜಿಲಿಂಗ್
ಚಹಾ ತೋಟದಲ್ಲಿ ಕಂಡು ಬಂದ ಒಂದು ತಾಜಾ ಚಿಗುರು

ಡಾರ್ಜಿಲಿಂಗ್ ನಲ್ಲಿ ಹಲವಾರು ಚಹಾ ತೋಟಗಳಿವೆ("ಚಹಾ ಉದ್ಯಾನ" ವೆಂದೂ ಕರೆಯಲಾಗುತ್ತದೆ), ಇವುಗಳಲ್ಲಿ ಪ್ರತಿಯೊಂದು ತೋಟವು ಸ್ವಾದ ಹಾಗು ಪರಿಮಳದಲ್ಲಿ ಭಿನ್ನತೆಯನ್ನು ಹೊಂದಿರುವ ಚಹಾಗಳನ್ನು ಬೆಳೆಯುತ್ತವೆ. ಕೆಲವು ಜನಪ್ರಿಯ ಚಹಾ ತೋಟಗಳಲ್ಲಿ ಆರ್ಯ, ಚಮೊಂಗ್, ಗ್ಲೆನ್ಬರ್ನ್, ಲಿಂಗಿಯ, ಕ್ಯಾಸಲ್ಟನ್, ಜುಂಗ್ಪನ, ಮಕೈಬರಿ, ಮಾರ್ಗರೆಟ್'ಸ್ ಹೋಪ್, ಹಾಗು ರಿಶೀಹತ್ ತೋಟಗಳೂ ಸೇರಿವೆ. ಕೆಳಗೆ ನೀಡಿರುವುದು ಒಂದು ಅಸಮಗ್ರ ಪಟ್ಟಿ:

  • ಅಂಬೂಟಿಯ
  • ಆರ್ಯ
  • ಅವೊನ್ ಗ್ರೋವ್
  • ಬದಾಮ್ಟಮ್
  • ಬಾಲಸುನ್
  • ಬನೋಕ್ ಬರ್ನ್
  • ಬರ್ನೆಸ್ ಬೆಗ್
  • ಕ್ಯಾಸಲ್ಟನ್
  • ಚಮೊಂಗ್
  • ಚಾಂಗ್ಟೋಂಗ್
  • ಡಿ'ಅಲ್ರುಸ್
  • ಗಿಯೆಲ್ಲೆ
  • ಗಿಡ್ಡಪಹರ್
  • ಗಿಂಗ್
  • ಗ್ಲೆನ್ ಬರ್ನ್
  • ಗೋಮತೀ
  • ಗೋಪಾಲ್ ಧಾರ
  • ಗ್ಲೆನ್ ಬರ್ನ್
  • ಹ್ಯಾಪಿ ವ್ಯಾಲಿ
  • ಹಿಲ್ಟನ್
  • ಜೋಗ್ಮಯ
  • ಜುಂಗ್ಪನ
  • ಕಲೆಯ್ ವ್ಯಾಲಿ
  • ಕಾಂಚನ್ ವ್ಯೂ
  • ಲಿಂಗಿಯ
  • ಲಾಂಗ್ ವ್ಯೂ
  • ಮಕೈಬರಿ
  • ಮಾರ್ಗರೆಟ್'ಸ್ ಹೋಪ್
  • ಮಿಮ್
  • ಮೂಂಡಕೊಟೀ
  • ಮಿಷನ್ ಹಿಲ್
  • ನಗ್ರಿ
  • ನಾಮ್ರಿಂಗ್
  • ಆರೆಂಜ್ ವ್ಯಾಲಿ
  • ಪುಟ್ಟಬಾಂಗ್
  • ಪೆಶೋಕೆ
  • ಫೂಬ್ಸೆರಿಂಗ್
  • ಫುಗುರಿ
  • ಪೂಬೋಂಗ್
  • ಪೊಟೊಂಗ್
  • ಪ್ರಿನ್ಸ್ಟನ್
  • ಪುಸ್ಸಿಂಬಿಂಗ್
  • ರಿಂಗ್ಟೋಂಗ್
  • ರಿಶೀಹತ್
  • ರೋಹಿಣಿ
  • ರಂಗ್ಲೀ ರಂಗ್ಲಿಯೋಟ್
  • ಸಮಬೇಯೊಂಗ್
  • ಸೀಯೋಕ್
  • ಸೇಲಿಂಬಾಂಗ್
  • ಸಿಂಗ್ಬುಲ್ಲಿ
  • ಸಿನ್ಗೆಲ್
  • ಸಿಂಗ್ಲ ಚಹಾ ತೋಟ
  • ಸೂಮ್
  • ಸೌರೇನಿ
  • ಸ್ನೌವ್ಯೂ
  • ಸ್ಟೇಯಿನ್ತಾಲ್
  • ಸುಂಗ್ಮ
  • ತಕಡ
  • ತೀಸ್ತಾ ವ್ಯಾಲಿ
  • ತುರ್ಬೋ
  • ತಿಂಧಾರಿಯ
  • ಟಾಂಗ್ಸಾಂಗ್ Dಟ್ರಿಯ
  • ತುಮ್ಸಾಂಗ್
  • ಅಪ್ಪರ್ ಫಾಗು
  • ವಾಹ್ ತುಕ್ವರ್

ಇವನ್ನೂ ನೋಡಿ

[ಬದಲಾಯಿಸಿ]
  • ನೇಪಾಳ ಚಹಾ - ಡಾರ್ಜಿಲಿಂಗ್ ಚಹಾಕ್ಕೆ ಸದೃಶವಾದ ವೈಶಿಷ್ಟ್ಯತೆಗಳನ್ನು ಹೊಂದಿದೆ

ಟೀಕಂಪಜ್ಞೆ - ಡಾರ್ಜಿಲಿಂಗ್ ಬಿಡಿ ಚಹಾದ ಅತ್ಯಂತ ದೊಡ್ಡ ರಫ್ತುದಾರ

ಆಕರಗಳು

[ಬದಲಾಯಿಸಿ]
  1. ಆರ್ಟ್ ಆಫ್ ಟೀ, ಸ್ಪಾಟ್ ಲೈಟ್ ಆನ್ ಡಾರ್ಜಿಲಿಂಗ್ ಫಾರ್ಸ್ಟ್ ಫ್ಲಶ್ . ([೧] Archived 2010-09-20 ವೇಬ್ಯಾಕ್ ಮೆಷಿನ್ ನಲ್ಲಿ. 2007-03-14ರಂದು ಸಂಕಲನಗೊಂಡಿದೆ)
  2. ಗಾಡಿ ಕೆನ್ನಿ, ಟ್ರೇಡ್ & ಇನ್ವೈಅರನ್ಮೆಂಟ್ ಡಾಟಾಬೇಸ್(TED)ಜರ್ನಲ್ , ಸಂಖ್ಯೆ 752, ಜುಲೈ 2004, ಅಮೆರಿಕನ್ ಯುನಿವರ್ಸಿಟಿ. ([೨] 2007-03-14ರಂದು ಸಂಕಲನಗೊಂಡಿದೆ)

ಬಾಹ್ಯಕೊಂಡಿಗಳು

[ಬದಲಾಯಿಸಿ]