ಟ್ರಾವಿಸ್ ಹೆಡ್
ಟ್ರಾವಿಸ್ ಮಕೇಲ್ ಹೆಡ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಎಡಗೈ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬೌಲರ್. ದೇಶೀಯ ಕ್ರಿಕೆಟ್ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸೌತ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ೨೦೧೬ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಪದಾರ್ಪಣೆ ಮಾಡಿದ್ದು, ಕೊನೆಯ ಬಾರಿ ೨೦೧೭ರ ಆವೃತ್ತಿಯಲ್ಲಿ ಆಡಿದ್ದರು.[೧][೨][೩]
ಆರಂಭಿಕ ಜೀವನ
[ಬದಲಾಯಿಸಿ]ಟ್ರಾವಿಸ್ ರವರು ಡಿಸೆಂಬರ್ ೨೯, ೧೯೯೩ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಜನಿಸಿದರು. ಟ್ರಾವಿಸ್ ತಮ್ಮ ಬಾಲ್ಯದಲ್ಲಿ ಅಡಿಲೇಡ್ ನ ಕ್ರೈಗ್ ಕ್ರಿಕೆಟ್ ಕ್ಲಬ್ ನಲ್ಲಿ ಆಡಲು ಪ್ರಾರಂಭಿಸಿದರು. ನಂತರ ಸೌತ್ ಆಸ್ಟ್ರೇಲಿಯಾದ ೧೫ರ ವಯೋಮಿತಿ ಹಾಗೂ ೧೯ ವಯೋಮಿತಿ ತಂಡದಲ್ಲಿ ಸ್ಥಾನ ಪಡೆದರು. ತಮ್ಮ ೧೭ ವಯಸ್ಸಿನಲ್ಲಿ ಇವರು ಆಸ್ಟ್ರೇಲಿಯಾದ ೧೯ರ ವಯೋಮಿತಿಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಇದರಲ್ಲಿ ೨೦೧೨ ಇಸವಿಯಲ್ಲಿ ನಡೆದ ೧೯ರ ವಯೋಮಿತಿ ವಿಶ್ವಕಪ್ ಸೇರಿದಂತೆ ಒಟ್ಟು ೧೯ ಪಂದ್ಯವನ್ನು ಆಡಿದ್ದರು.[೪][೫][೬][೭]
ವೃತ್ತಿ ಜೀವನ
[ಬದಲಾಯಿಸಿ]ಟ್ರಾವಿಸ್ ಫೆಬ್ರವರಿ ೦೨, ೨೦೧೨ರಲ್ಲಿ ಅಡಿಲೇಡ್ ನಲ್ಲಿ ಸೌತ್ ಆಸ್ಟ್ರೇಲಿಯಾ ಹಾಗೂ ವಿಕ್ಟೋರಿಯಾ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[೮]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಟ್ರಾವಿಸ್ ರವರು ಜೂನ್ ೧೩, ೨೦೧೬ ರಂದು ಬಿಸೆಟ್ಟೇರ್ ನಲ್ಲಿ ವೆಸ್ಟ್ ಇಂಡೀಸ್ ವಿರುಧ್ಧ ನಡೆದ ಐದನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೯] ಜನವರಿ ೨೬, ೨೦೧೬ ರಂದು ಅಡಿಲೇಡ್ ನಲ್ಲಿ ಭಾರತದ ವಿರುಧ್ಧ ನಡೆದ ಮೊದಲ ಟಿ೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೦] ಅಕ್ತೋಬರ್ ೦೭, ೨೦೧೮ ರಂದು ದುಬೈನಲ್ಲಿ ಪಾಕಿಸ್ತಾನದ ವಿರುಧ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಜನವರಿ ೨೬, ೨೦೧೬ ರಂದು ಅಡಿಲೇಡ್ ನಲ್ಲಿ ಭಾರತದ ವಿರುಧ್ಧ ನಡೆದ ಮೊದಲ ಟಿ೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೧]
ಪಂದ್ಯಗಳು
[ಬದಲಾಯಿಸಿ]- ಏಕದಿನ ಕ್ರಿಕೆಟ್ : ೪೨ ಪಂದ್ಯಗಳು[೧೨]
- ಟಿ-೨೦ ಕ್ರಿಕೆಟ್ : ೧೬ ಪಂದ್ಯಗಳು
- ಟೆಸ್ಟ್ ಕ್ರಿಕೆಟ್ : ೧೨ ಪಂದ್ಯಗಳು
ಶತಕಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೦೧
- ಟೆಸ್ಟ್ ಪಂದ್ಯಗಳಲ್ಲಿ : ೦೧
ಅರ್ಧ ಶತಕಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೧೦
- ಟೆಸ್ಟ್ ಪಂದ್ಯಗಳಲ್ಲಿ : ೦೬
ವಿಕೆಟ್ಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ: ೧೨
- ಟಿ-೨೦ ಪಂದ್ಯಗಳಲ್ಲಿ: ೦೧
ಉಲ್ಲೇಖಗಳು
[ಬದಲಾಯಿಸಿ]- ↑ https://www.cricbuzz.com/live-cricket-scorecard/16402/mumbai-indians-vs-royal-challengers-bangalore-14th-match-indian-premier-league-2016
- ↑ https://www.cricbuzz.com/live-cricket-scorecard/18176/delhi-capitals-vs-royal-challengers-bangalore-56th-match-indian-premier-league-2017
- ↑ https://www.cricbuzz.com/profiles/8497/travis-head
- ↑ https://web.archive.org/web/20130820000540/http://craigmorecc.com.au/
- ↑ https://cricketarchive.com/Archive/Players/1061/1061501/Miscellaneous_Matches.html
- ↑ https://cricketarchive.com/Archive/Players/1061/1061501/Under-19_ODI_Matches.html
- ↑ https://www.espncricinfo.com/story/_/id/22255356/icc-19-world-cup-2012-australia-name-19-world-cup-squad
- ↑ https://www.espncricinfo.com/series/8043/scorecard/527840/south-australia-vs-victoria-19th-match-sheffield-shield-2011-12
- ↑ https://www.espncricinfo.com/series/8663/scorecard/932857/west-indies-vs-australia-5th-match-west-indies-tri-nation-series-2016
- ↑ https://www.espncricinfo.com/series/11188/scorecard/895817/australia-vs-india-1st-t20i-india-tour-of-australia-2015-16
- ↑ https://www.espncricinfo.com/series/18886/scorecard/1157370/australia-vs-pakistan-1st-test-australia-in-uae-2018-19
- ↑ http://www.espncricinfo.com/australia/content/player/530011.html